ಭಾರತದಲ್ಲಿ TCL ಸಂಸ್ಥೆಯಿಂದ ನಾಲ್ಕು ಹೊಸ ಸ್ಮಾರ್ಟ್‌ಟಿವಿ ಬಿಡುಗಡೆ!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಟಿವಿ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿ ಬೆಳೆಯುತ್ತಿದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸುತ್ತಿವೆ. ಇದರಲ್ಲಿ ಟಿಸಿಎಲ್‌ ಕಂಪೆನಿ ಕೂಡ ಒಂದಾಗಿದ್ದು, ಕೈಗೆಟಕುವ ಬೆಲೆಯ ಸ್ಮಾರ್ಟ್‌ಟಿವಿಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಇದೀಗ TCL ಸಂಸ್ಥೆ ಹೊಸ TCL P725 4K HDR LED TV ಸರಣಿಯನ್ನು ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ ಟಿವಿ 11 ಚಾಲನೆಯಲ್ಲಿರುವ ಮೊದಲ ಟೆಲಿವಿಷನ್ ಎಂದು ಟಿಸಿಎಲ್‌ ಕಂಪೆನಿ ಹೇಳಿಕೊಂಡಿದೆ. ಇದರ ಜೊತೆಗೆ ಒಕರಿನಾ ಸ್ಮಾರ್ಟ್ ಎಸಿ ಸರಣಿಯನ್ನು ದೇಶದಲ್ಲಿ ಬಿಡುಗಡೆ ಮಾಡಿದೆ.

 TCLP725 4K HDR LED TV

ಹೌದು, TCL ಸಂಸ್ಥೆ TCLP725 4K HDR LED TV ಸರಣಿಯನ್ನು ಬಾರತದಲ್ಲಿ ಲಾಂಚ್‌ ಮಾಡಿದೆ. ಈ ಸರಣಿಯು 43 ಇಂಚು, 50 ಇಂಚು, 55 ಇಂಚು ಮತ್ತು 65 ಇಂಚಿನ ನಾಲ್ಕು ಗಾತ್ರಗಳಲ್ಲಿ ಲಭ್ಯವಿರುತ್ತದೆ. ಇದರ ಬೆಲೆ ರೂ. 43 ಇಂಚಿನ ರೂಪಾಂತರಕ್ಕೆ 41,990 ರೂ. ಆಗಿದ್ದು, ಸರಣಿಯ ಎಲ್ಲಾ ಟೆಲಿವಿಷನ್‌ಗಳು 4K HDR LED TVಗಳು, ಡಾಲ್ಬಿ ವಿಷನ್ HDR ಮತ್ತು ಡಾಲ್ಬಿ ಅಟ್ಮೋಸ್ ಆಡಿಯೊ ತಂತ್ರಜ್ಞಾನಗಳಿಗೆ ಬೆಂಬಲವನ್ನು ಹೊಂದಿವೆ. ಜೊತೆಗೆ ಒಕರಿನಾ ಸ್ಮಾರ್ಟ್ ಎಸಿ ಸರಣಿ ಕೂಡ ಲಾಂಚ್‌ ಆಗಿದ್ದು, ಇದರ ಬೆಲೆ 33,990 ರೂ.ಆಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

TCL P725 4K HDR LED TV ವಿಶೇಷತೆ

TCL P725 4K HDR LED TV ವಿಶೇಷತೆ

TCLP725 4K HDR LED TV ಆಂಡ್ರಾಯ್ಡ್ ಟಿವಿ 11 ಅನ್ನು ಚಲಾಯಿಸಿದ ಭಾರತದ ಮೊದಲ ಸ್ಮಾರ್ಟ್ ಟಿವಿ ಎಂದು ಟಿಸಿಎಲ್‌ ಕಂಪನಿಯು ಹೇಳಿಕೊಂಡಿದೆ. TCL P725 ಸ್ಟಾಕ್ ಆಂಡ್ರಾಯ್ಡ್ ಟಿವಿ ಇಂಟರ್ಫೇಸ್ ಮತ್ತು ಕಂಪನಿಯ ಚಾನೆಲ್ 3.0 ಕಸ್ಟಮ್ ಲಾಂಚರ್ ಎರಡನ್ನೂ ನಡೆಸುತ್ತದೆ. ಜನಪ್ರಿಯ ಸ್ಟ್ರೀಮಿಂಗ್ ಸೇವೆಗಳಾದ ನೆಟ್‌ಫ್ಲಿಕ್ಸ್ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಸೇರಿದಂತೆ ಆಂಡ್ರಾಯ್ಡ್ ಟಿವಿಗಾಗಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಟಿವಿ 7,000 ಕ್ಕೂ ಹೆಚ್ಚು ಅಪ್ಲಿಕೇಶನ್‌ಗಳು ಮತ್ತು ಗೇಮ್‌ಗಳಿಗೆ ಪ್ರವೇಶವನ್ನು ನೀಡುತ್ತದೆ. ಇನ್ನು ಈ ಸ್ಮಾರ್ಟ್‌ಟವಿ ಸರಣಿಯಲ್ಲಿ ಇಂಟರ್‌ಬಿಲ್ಟ್‌ Chromecast ಸಹ ಹೊಂದಿದೆ.

TCL P725 ಸರಣಿ

ಇದಲ್ಲದೆ, TCL P725 ಸರಣಿಯು ಡಾಲ್ಬಿ ವಿಷನ್ ಸ್ಟ್ಯಾಂಡರ್ಡ್ ವರೆಗೆ ಎಚ್‌ಡಿಆರ್‌ಗೆ ಬೆಂಬಲವನ್ನು ನೀಡುತ್ತದೆ. ಜೊತೆಗೆ ಡಾಲ್ಬಿ ಅಟ್ಮೋಸ್ ಆಡಿಯೊವನ್ನು ಸಹ ಹೊಂದಿದೆ. ಇನ್ನು ಸ್ಮಾರ್ಟ್‌ಟಿವಿಯ ಸುಗಮ ಚಲನೆಗಾಗಿ ಮೋಷನ್ ಎಸ್ಟಿಮೇಷನ್ ಮತ್ತು ಮೋಷನ್ ಕಾಂಪೆನ್ಸೇಷನ್ ತಂತ್ರಜ್ಞಾನವನ್ನು ಒಳಗೊಂಡಿದೆ. ಅಲ್ಲದೆ ವಿಡಿಯೋ ಕಾಲ್ ಕ್ಯಾಮೆರಾ ಮತ್ತು ಗೂಗಲ್ ಅಸಿಸ್ಟೆಂಟ್‌ಗೆ ಹ್ಯಾಂಡ್ಸ್-ಫ್ರೀ ಪ್ರವೇಶವನ್ನು ಹೊಂದಿರುವುದು ಸಹ TCL P 725 ಟೆಲಿವಿಷನ್‌ನ ಪ್ರಮುಖ ಲಕ್ಷಣಗಳಾಗಿವೆ.

TCL ಒಕರಿನಾ ಸ್ಮಾರ್ಟ್ AC ವಿಶೇಷತೆಗಳು

TCL ಒಕರಿನಾ ಸ್ಮಾರ್ಟ್ AC ವಿಶೇಷತೆಗಳು

ಟಿಸಿಎಲ್ ಒಕರಿನಾ ಸ್ಮಾರ್ಟ್ ಎಸಿ ಸರಣಿಯನ್ನು ಸಹ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಟಿಸಿಎಲ್ ಹೋಮ್ ಆಪ್ ಮೂಲಕ ರಿಮೋಟ್ ಕಂಟ್ರೋಲ್‌ಗಾಗಿ ಸ್ಮಾರ್ಟ್ ಸಂಪರ್ಕವನ್ನು ಹೊಂದಿದೆ. ಗೂಗಲ್ ಅಸಿಸ್ಟೆಂಟ್ ಮತ್ತು ಅಮೆಜಾನ್ ಅಲೆಕ್ಸಾ ಸೇರಿದಂತೆ ಧ್ವನಿ ಸಹಾಯಕರ ಮೂಲಕವೂ ಹವಾನಿಯಂತ್ರಣವನ್ನು ನಿಯಂತ್ರಿಸಬಹುದು. ಇದರಲ್ಲಿ ಸೌಮ್ಯವಾದ ತಂಗಾಳಿ ಮೋಡ್ ಸಹ ಇದೆ, ಮತ್ತು ಗಾಳಿಯಲ್ಲಿ ಬ್ಯಾಕ್ಟೀರಿಯಾವನ್ನು ನಿರ್ಮೂಲನೆ ಮಾಡಲು ಯುವಿಸಿ ಕ್ರಿಮಿನಾಶಕವನ್ನು ಸಹ ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

TCL P725 ಸರಣಿಯು ನಾಲ್ಕು ಗಾತ್ರಗಳಲ್ಲಿ ಲಭ್ಯವಿದೆ. ಇದರಲ್ಲಿ 43 ಇಂಚಿನ ರೂಪಾಂತರಕ್ಕೆ ಬೆಲೆ 41,990. ರೂ.ಆಗಿದೆ. ಇನ್ನು 50 ಇಂಚಿನ ಆಯ್ಕೆಯ ಬೆಲೆ 56,990 ರೂ. 55 ಇಂಚಿನ ಆಯ್ಕೆಗೆ 62,990 ರೂ ಮತ್ತು 65 ಇಂಚಿನ ರೂಪಾಂತರಕ್ಕೆ 89,990 ರೂ.ಬೆಲೆಯನ್ನು ಹೊಂದಿದೆ. ಮುಂಬರುವ ವಾರಗಳಲ್ಲಿ ಟಿಸಿಎಲ್ ಎಲ್ಲಾ ನಾಲ್ಕು ಗಾತ್ರದ ರೂಪಾಂತರಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿದೆ. ಸದ್ಯ 65 ಇಂಚಿನ ಟಿವಿ ಮಾತ್ರ ಭಾರತದಲ್ಲಿ ಅಮೆಜಾನ್‌ನಲ್ಲಿ ಪ್ರಾರಂಭವಾಗಲಿದೆ.

ಒಕರಿನಾ ಸ್ಮಾರ್ಟ್ ಎಸಿ

ಇನ್ನು ಒಕರಿನಾ ಸ್ಮಾರ್ಟ್ ಎಸಿ ಸರಣಿಯು ಟಿಸಿಎಲ್ ಇಂಡಿಯಾ ಆನ್‌ಲೈನ್ ಸ್ಟೋರ್‌ನಲ್ಲಿ ಪ್ರತ್ಯೇಕವಾಗಿ ಮಾರಾಟವಾಗಲಿದ್ದು, 1-ಟನ್, 1.5-ಟನ್ ಮತ್ತು 2-ಟನ್ ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದರ ಬೆಲೆ 33,990 ರೂ. ಆಗಿದೆ. ಸ್ಮಾರ್ಟ್ ಎಸಿ ಸರಣಿಯು ಮಾರ್ಚ್ 20 ರಿಂದ ಪ್ರೀ-ಆರ್ಡರ್‌ಗೆ ಸಿದ್ಧವಾಗಲಿದೆ. ಆದರೂ ಪ್ರಸ್ತುತ 1-ಟನ್ ಆಯ್ಕೆಯನ್ನು ಮಾತ್ರ ಕಂಪನಿಯ ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ.

Most Read Articles
Best Mobiles in India

English summary
TCL P725 4K HDR LED TV series has been launched in India at affordable prices, and is claimed by the company to be the first television running Android TV 11 in the country.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X