TCL ಅಮೆಜಾನ್ ಇಂಡಿಯಾ ಟಿವಿ ಡೇಸ್ ಸೇಲ್‌! ಸ್ಮಾರ್ಟ್‌ಟಿವಿಗಳಿಗೆ ವಿಶೇಷ ರಿಯಾಯಿತಿ!

|

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಟಿಸಿಎಲ್‌ ಸಂಸ್ಥೆ ಇ-ಕಾಮರ್ಸ್‌ ದೈತ್ಯ ಅಮೆಜಾನ್ ಇಂಡಿಯಾದಲ್ಲಿ ಟಿವಿ ಡೇಸ್ ಸೇಲ್‌ ಅನ್ನು ಆಯೋಜಿಸಿದೆ. ಇನ್ನು ಈ ಸೇಲ್‌ ಏಪ್ರಿಲ್ 9ರಿಂದ ಪ್ರಾರಂಭವಾಗಿದ್ದು, ಇದು ಏಪ್ರಿಲ್ 12 ರವರೆಗೆ ನಡೆಯಲಿದೆ. ಈ ಸೇಲ್‌ ಅವಧಿಯಲ್ಲಿ, ಟಿಸಿಎಲ್ ಅಮೆಜಾನ್ ಇಂಡಿಯಾದಿಂದ ವಿವಿಧ ಟಿವಿಗಳನ್ನು ಖರೀದಿಸುವಾಗ 50% ವರೆಗೆ ರಿಯಾಯಿತಿ ನೀಡುತ್ತಿದೆ.

ಸ್ಮಾರ್ಟ್‌ಟಿವಿ

ಹೌದು, ಜನಪ್ರಿಯ ಸ್ಮಾರ್ಟ್‌ಟಿವಿ ತಯಾರಕ ಟಿಸಿಎಲ್‌ ಕಂಪೆನಿ ಅಮೆಜಾನ್‌ನಲ್ಲಿ ಟಿವಿ ಡೇಸ್‌ ಸೇಲ್‌ ನಡೆಸುತ್ತಿದೆ. ಈ ಸೇಲ್‌ನಲ್ಲಿ ಕಂಪನಿಯು ಎಕ್ಸಚೇಂಜ್‌ ಆಫರ್‌, ನೋ ಕಾಸ್ಟ್‌ ಇಎಂಐ ಜೊತೆಗೆ ಆಯ್ದ ಕ್ರೆಡಿಟ್ ಕಾರ್ಡ್‌ಗಳಿಗೆ 10% ತ್ವರಿತ ರಿಯಾಯಿತಿ ನೀಡುತ್ತಿದೆ. ಅಲ್ಲದೆ ಅಮೆಜಾನ್ ಇಂಡಿಯಾದಿಂದ ತನ್ನ ಟಿವಿಗಳನ್ನು ಖರೀದಿಸುವಾಗ ಕ್ರೆಡಿಟ್ ಕಾರ್ಡ್‌ಗಳ ಇಎಂಐ ಅನ್ನು ಸಹ ನೀಡುತ್ತಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುವ ಸ್ಮಾರ್ಟ್‌ಟಿವಿಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

4K P615 ಸ್ಮಾರ್ಟ್ ಟಿವಿ ಸರಣಿ

4K P615 ಸ್ಮಾರ್ಟ್ ಟಿವಿ ಸರಣಿ

ಈ ಸರಣಿಯ ಸ್ಮಾರ್ಟ್ ಟಿವಿಗಳು ಸ್ಮಾರ್ಟ್ ಎಚ್‌ಡಿಆರ್, ಡಾಲ್ಬಿ ಆಡಿಯೊ ಜೊತೆಗೆ ಮೈಕ್ರೋ ಡಿಮ್ಮಿಂಗ್ ಕ್ರಿಯಾತ್ಮಕತೆಯಂತಹ ಫೀಚರ್ಸ್‌ಗಳನ್ನು ಹೊಂದಿವೆ. ಇನ್ನು ಈ ಸ್ಮಾರ್ಟ್‌ಟಿವಿ 4ಕೆ ರೆಸಲ್ಯೂಶನ್‌ ಹೊಂದಿದ್ದು, 3860 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿ 60 ಹರ್ಟ್ಜ್ ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಇಂಟರ್‌ಬಿಲ್ಟ್‌ ವೈಫೈ, ಅಮೆಜಾನ್‌ ಪ್ರೈಮ್‌ ವೀಡಿಯೊ, ಹ್ಯಾಂಡ್ಸ್‌ ಫ್ರೀ ವಾಯ್ಸ್‌ ಕಂಟ್ರೋಲ್‌, ಅನ್ನು ಪಡೆದುಕೊಂಡಿದೆ. ಸದ್ಯ ಇದು ಮೂರು ರೂಪಾಂತರಗಳಲ್ಲಿ ಲಭ್ಯವಿದೆ. 43 ಇಂಚಿನ ರೂಪಾಂತರದ ಬೆಲೆ ರೂ.29,999, 50 ಇಂಚಿನ ರೂಪಾಂತರದ ಬೆಲೆ 38,999 ರೂ. ಮತ್ತು 55 ಇಂಚಿನ ರೂಪಾಂತರವು 43,999 ರೂ. ಆಗಿದೆ.

4K UHD P715 ಸ್ಮಾರ್ಟ್ ಟಿವಿ ಸರಣಿ

4K UHD P715 ಸ್ಮಾರ್ಟ್ ಟಿವಿ ಸರಣಿ

ಈ ಸರಣಿಯ ಸ್ಮಾರ್ಟ್‌ಟಿವಿ ಹೊಸ ಮಾದರಿಯ ವಿನ್ಯಾಸವನ್ನು ಹೊಂದಿದ್ದು, ಫುಲ್‌ ಡಿಸ್‌ಪ್ಲೇ ವಿನ್ಯಾಸವನ್ನು ಪಡೆದುಕೊಂಡಿವೆ. ಇನ್ನು ಈ ಸ್ಮಾರ್ಟ್‌ಟಿವಿ 43,ಇಂಚು 50ಇಂಚು, 55ಇಂಚು, 65ಇಂಚು, 75ಇಂಚಿನ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಈ ಸರಣಿಯ ಸ್ಮಾರ್ಟ್‌ಟಿವಿಗಳು ಹ್ಯಾಂಡ್ಸ್‌ ಫ್ರೀ ವಾಯ್ಸ್‌ ಕಂಟ್ರೋಲ್‌, ಡೈನಾಮಿಕ್ ಬಣ್ಣ ವರ್ಧನೆ ಮತ್ತು ಮೈಕ್ರೋ ಡಿಮ್ಮಿಂಗ್ ಕ್ರಿಯಾತ್ಮಕತೆಯೊಂದಿಗೆ ಬರುತ್ತದೆ. ಇದರ ಜೊತೆಗೆ, ಡಾಲ್ಬಿ ಆಡಿಯೊ ಜೊತೆಗೆ 4 ಕೆ ರೆಸಲ್ಯೂಶನ್ ನೀಡುತ್ತದೆ. ಸದ್ಯ ಅಮೆಜಾನ್‌ ಇಂಡಿಯಾ ಟಿವಿ ಸೇಲ್‌ನಲ್ಲಿ 43 ಇಂಚಿನ ರೂಪಾಂತರದ ಬೆಲೆ, 32,990ರೂ, 50 ಇಂಚಿನ ರೂಪಾಂತರದ ಬೆಲೆ ರೂ.43,999 ಮತ್ತು 55-ಇಂಚಿನ ರೂಪಾಂತರದ ಬೆಲೆ 45,999.ರೂ,ಆಗಿದೆ.

4K QLED C715 ಸ್ಮಾರ್ಟ್ ಟಿವಿ ಸರಣಿ

4K QLED C715 ಸ್ಮಾರ್ಟ್ ಟಿವಿ ಸರಣಿ

ಈ ಸರಣಿಯು ಕಂಪನಿಯ ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿಗಳು 3860 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 4ಕೆ ಅಲ್ಟ್ರಾ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಇದು60 ಹರ್ಟ್ಜ್ ರಿಫ್ರೆಶ್‌ ರೇಟ್‌ ಅನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ ಸೆಟ್ ಟಾಪ್ ಬಾಕ್ಸ್, ಲ್ಯಾಪ್‌ಟಾಪ್, ಪ್ರೊಜೆಕ್ಟರ್ ಅನ್ನು ಸಂಪರ್ಕಿಸಲು 3 ಹೆಚ್‌ಡಿಎಂಐ ಪೋರ್ಟ್‌ಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಇಂಟರ್‌ಬಿಲ್ಟ್‌ ವೈಫೈ, ಅಮೆಜಾನ್ ಪ್ರೈಮ್ ವಿಡಿಯೋ, ಹ್ಯಾಂಡ್ಸ್ ಫ್ರೀ ವಾಯ್ಸ್ ಕಂಟ್ರೋಲ್, ಎಐ-ಗೂಗಲ್ ಅಸಿಸ್ಟೆಂಟ್, ಅನ್ನು ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ ಡಾಲ್ಬಿ ವಿಷನ್ ತಂತ್ರಜ್ಞಾನದ ಜೊತೆಗೆ ಎಚ್‌ಡಿಆರ್ 10+, ಡಾಲ್ಬಿ ಅಟ್ಮೋಸ್ ಮತ್ತು ಡಿಟಿಎಸ್ ಸ್ಮಾರ್ಟ್ ಆಡಿಯೋ ಸಂಸ್ಕರಣಾ ಫೀಚರ್ಸ್‌ಗಳನ್ನು ಸಹ ಒಳಗೊಂಡಿದೆ. ಇದು ಮೂರು ರೂಪಾಂತರಗಳಲ್ಲಿ ಲಭ್ಯವಿದೆ. 50 ಇಂಚಿನ ರೂಪಾಂತರದ ಬೆಲೆ 51,999ರೂ, 55-ಇಂಚಿನ ರೂಪಾಂತರದ ಬೆಲೆ 57,999ರೂ, ಮತ್ತು 65-ಇಂಚಿನ ರೂಪಾಂತರದ ಬೆಲೆ 89,999.ರೂ.ಆಗಿದೆ.

Most Read Articles
Best Mobiles in India

English summary
TCL on Friday announced the TV Days sale on Amazon India. The sale began on April 9 and it will go on until April 12.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X