ಹದಿಹರೆಯದ ಹುಡುಗಿಯನ್ನು ಬಲಿತೆಗೆದುಕೊಂಡ ವೈಫೈ

By Shwetha
|

ಇಲೆಕ್ಟ್ರೊ ಮ್ಯಾಗ್ನಟಿಕ್ ಹೈಪರ್ ಸೆನ್ಸಿಟಿವಿಟಿ (ಇಎಚ್‌ಎಸ್) ನಿಂದ ವೈಫೈ ಬಳಕೆದಾರರು ಬಳಲುತ್ತಿದ್ದಾರೆ ಎಂಬುದಾಗಿ ಹೊಸ ಅಧ್ಯಯನವೊಂದು ಪತ್ತೆಹಚ್ಚಿದೆ. ಕಡಿಮೆಯಾಗದ ತಲೆನೋವು ಮತ್ತು ಚರ್ಮ ಸಮಸ್ಯೆಗಳು ಇಲೆಕ್ಟ್ರೊ ಮ್ಯಾಗ್ನಿಟಿಕ್ ಅಂಶಗಳಿಂದ ತಲೆದೋರುತ್ತಿದ್ದು ವೈಫೈ ನಿರಂತರ ಬಳಕೆ ಈ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.

ಓದಿರಿ: ವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳು

ಇತ್ತೀಚೆಗೆ ತಾನೇ 15 ವರ್ಷದ ರಷ್ಯಾದ ಹುಡುಗಿಯೊಬ್ಬಳು ಆತ್ಮಹತ್ಯಗೆ ಶರಣಾಗಿರುವ ಪ್ರಕರಣ ಪತ್ತೆಯಾಗಿದ್ದು ವೈಫೈ ಸಿಗ್ನಲ್‌ಗಳು ಉಂಟುಮಾಡಿರುವ ಅಲರ್ಜಿಗಳಿಂದ ಆಕೆ ಬಳಲುತ್ತಿದ್ದಳಂತೆ. ಶಾಲೆಯಲ್ಲಿದ್ದ ವೈಫೈಯು ಆಕೆಯನ್ನು ರೋಗಕ್ಕೆ ತುತ್ತಾಗುವಂತೆ ಮಾಡಿತ್ತು. ನಿವಾರಣೆಯಾಗದ ತಲೆನೋವು ಮತ್ತು ಚರ್ಮ ಸೋಂಕನ್ನು ಆಕೆಗೆ ಬಳುವಳಿಯಾಗಿ ನೀಡಿತ್ತು ಎನ್ನಲಾಗಿದೆ. ಇಂದಿನ ಲೇಖನದಲ್ಲಿ ವೈಫೈಗಳು ಬೀರುವ ಇಲೆಕ್ಟ್ರೊ ಮ್ಯಾಗ್ನಟಿಕ್ ಅಂಶಗಳನ್ನು ಕುರಿತು ಒಂದಿಷ್ಟು ತಿಳಿದುಕೊಳ್ಳೋಣ.

ವೈಫೈ ಸ್ಟೇಶನ್‌

ವೈಫೈ ಸ್ಟೇಶನ್‌

ವೈಫೈ ಸ್ಟೇಶನ್‌ಗಳಂತಹ ಇಲೆಕ್ಟ್ರೊ ಮ್ಯಾಗ್ನಟಿಕ್ ಸಿಗ್ನಲ್‌ಗಳನ್ನು ಉಂಟುಮಾಡುವ ಡಿವೈಸ್‌ಗಳ ಸನಿಹ ಇರುವವರಲ್ಲಿ ತಲೆನೋವು ಚರ್ಮ ಸೋಂಕು ಮೊದಲಾದ ಸಮಸ್ಯೆಗಳು ತಲೆದೋರಿವೆ ಎಂಬುದಾಗಿ ಅಧ್ಯಯನ ತಿಳಿಸಿದೆ.

ಸೆಲ್‌ಫೋನ್‌ಗಳು ಮತ್ತು ಕಂಪ್ಯೂಟರ್ ಸ್ಕ್ರೀನ್‌

ಸೆಲ್‌ಫೋನ್‌ಗಳು ಮತ್ತು ಕಂಪ್ಯೂಟರ್ ಸ್ಕ್ರೀನ್‌

ಸೆಲ್‌ಫೋನ್‌ಗಳು ಮತ್ತು ಕಂಪ್ಯೂಟರ್ ಸ್ಕ್ರೀನ್‌ಗಳು ತಲೆನೋವಿಗೆ ಮುಖ್ಯ ಕಾರಣಗಳು ಎಂದೆನಿಸಿವೆ.

ಕಾಯಿಲೆ

ಕಾಯಿಲೆ

ಈ ಸಿಗ್ನಲ್‌ಗಳು ಅವರಲ್ಲಿ ಕೀಳರಿಮೆ, ಮನೋವ್ಯಾಧಿ ಮೊದಲಾದ ಕಾಯಿಲೆಗಳಿಗೆ ಕಾರಣವಾಗಿದೆ ಎಂಬುದಾಗಿ ತಿಳಿದು ಬಂದಿದೆ.

ಅಲರ್ಜಿ ಪ್ರತಿರೋಧ

ಅಲರ್ಜಿ ಪ್ರತಿರೋಧ

ಇಲೆಕ್ಟ್ರೊ ಮ್ಯಾಗ್ನಟಿಕ್ ಕಿರಣಗಳು ಉಂಟುಮಾಡುವ ಈ ವ್ಯಾಧಿಗೆ ಇಲೆಕ್ಟ್ರೊಸೆನ್ಸಿಟೀವ್ಸ್ ಎಂದು ಕರೆಯಲಾಗಿದೆ. ವೈಫೈನಿಂದ ಉಂಟಾಗಿರುವ ಅಲರ್ಜಿ ಪ್ರತಿರೋಧಗಳಿಂದ ಮರಣ ಹೊಂದಿರುವ ಜೆನ್ನಿ ಫ್ರೈ ಹಲವಾರು ರೋಗಗಳಿಂದ ಬಳಲುತ್ತಿದ್ದರು ಎಂಬುದಾಗಿ ಪತ್ತೆಹಚ್ಚಲಾಗಿದೆ.

ವೈಫೈ ಇನ್‌ಸ್ಟಾಲೇಶನ್

ವೈಫೈ ಇನ್‌ಸ್ಟಾಲೇಶನ್

ತಮ್ಮ ಮನೆಯಲ್ಲಿ ವೈಫೈ ಇನ್‌ಸ್ಟಾಲೇಶನ್ ಅನ್ನು ಮಾಡಿದಂದಿನಿಂದ ಈ ಎಲ್ಲಾ ಸಮಸ್ಯೆಗಳೂ ಆರಂಭವಾಗಿವೆ ಎಂದು ಜೆನ್ನಿ ತಾಯಿ ವರದಿಗಾರರಿಗೆ ತಿಳಿಸಿದ್ದಾರೆ.

ಸಮಸ್ಯೆಗಳಿಂದ ಬಳಲುತ್ತಿದ್ದಳು

ಸಮಸ್ಯೆಗಳಿಂದ ಬಳಲುತ್ತಿದ್ದಳು

ವೈಫೈಯನ್ನು ಸ್ಥಾಪಿಸಿದ ವಾರಗಳ ನಂತರ ಜೆನ್ನಿಯ ವರ್ತನೆಯಲ್ಲಿ ನಾವು ಬದಲಾವಣೆಗಳನ್ನು ಕಂಡಿರುವೆವು. ಅಂತೆಯೇ ಹಲವಾರು ದೈಹಿಕ ವ್ಯಾಧಿಗಳಿಂದ ಆಕೆ ಬಳಲುತ್ತಿದ್ದಳು. ಕಾಲುಗಳಲ್ಲಿ ನೋವು, ತಲೆನೋವು, ಒತ್ತಡ, ಸ್ನಾಯು ಸೆಳೆತ ಹೀಗೆ ಜೆನ್ನಿ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುತ್ತಿದ್ದಳು.

ಕಾಯಿಲೆಗಳನ್ನು ಹೆಚ್ಚಿಸುವಲ್ಲಿ ಕಾರಣ

ಕಾಯಿಲೆಗಳನ್ನು ಹೆಚ್ಚಿಸುವಲ್ಲಿ ಕಾರಣ

ಶಾಲೆಗಳಲ್ಲಿ ಅನಿಯಮಿತವಾಗಿ ಬಳಸುತ್ತಿದ್ದ ವೈಫೈ ಕೂಡ ಜೆನ್ನಿಗೆ ಈ ಕಾಯಿಲೆಗಳನ್ನು ಹೆಚ್ಚಿಸುವಲ್ಲಿ ಕಾರಣವಾಗಿದೆ. ವೈರ್‌ಲೆಸ್ ಸೋಂಕು ನಮ್ಮ ಮಗಳನ್ನು ಬಲಿತೆಗೆದುಕೊಳ್ಳುವಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿತ್ತು ಎಂಬುದು ಜೆನ್ನಿಯ ತಾಯಿಯ ಮಾತಾಗಿದೆ.

ಮಗಳ ಪರಿಸ್ಥಿತಿ

ಮಗಳ ಪರಿಸ್ಥಿತಿ

ಶಾಲೆಯಲ್ಲಿ ಜೆನ್ನಿಯ ತಾಯಿ ಮಗಳ ಪರಿಸ್ಥಿತಿಯನ್ನು ಶಾಲಾ ಸಿಬ್ಬಂದಿಗಳ ಬಳಿ ತಿಳಿಸಿದ್ದು ಶಾಲೆಯ ವೈಫೈ ಉತ್ತಮವಾಗಿದೆ ಎಂಬುದಾಗಿ ಅವರು ತಿಳಿಸಿದ್ದಾರೆ ಎನ್ನಲಾಗಿದೆ. ವೈಫೈಯಿಂದ ಉಂಟಾಗುತ್ತಿರುವ ಅಲರ್ಜಿಗಳಿಂದ ತಾನು ತೀವ್ರವಾಗಿ ಬಳಲುತ್ತಿದ್ದೇನೆ ಎಂಬುದಾಗಿ ಜೆನ್ನಿ ಪತ್ರದಲ್ಲಿ ಬರೆದಿದ್ದಾಳೆ ಎನ್ನಲಾಗಿದೆ.

Most Read Articles
Best Mobiles in India

English summary
In a rare incident, a teenage girl, Jenny Fry, killed herself after allegedly being traumatised by allergic reactions to WiFi. The exposure to wireless internet signals at home and school resulted in her death, Jenny’s mother Debra, claimed.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more