ದೇಶದಲ್ಲಿರುವ ಟೆಲಿಕಾಂ ಟವರ್‌ ಸಂಖ್ಯೆ ಎಷ್ಟು?.ಕರ್ನಾಟಕದ ಅಂಕಿ ಅಂಶ ಏನು?

|

ಭಾರತೀಯ ಟೆಲಿಕಾಂ ಕ್ಷೇತ್ರ ತುಂಬಾ ವಿಶಾಲವಾಗಿ ಬೆಳೆಯುತ್ತಿದ್ದು, ಟೆಲಿಕಾಂ ಸಂಸ್ಥೆಗಳು 5G ನೆಟ್‌ವರ್ಕ್‌ ನೀಡುವ ಸಿದ್ಧತೆಯಲ್ಲಿದೆ. ಈ ನಡುವೆ ಬಳಕೆದಾರರು 4G ನೆಟವರ್ಕ್ಗಿಂತಲೂ 10ಪಟ್ಟು ವೇಗವಾಗಿರುವ 5G ನೆಟ್‌ವರ್ಕ್‌ನ ಬಳಕೆಯ ಮಾಡಲು ಉತ್ಸುಕರಾಗಿದ್ದಾರೆ. ನೆಟವರ್ಕ್‌ಗಳನ್ನು ಹೆಚ್ಚಾದಂತೆ ಟೆಲಿಕಾಂ ಕಂಪನಿಗಳ ಟವರ್‌ಗಳ (Base Transceiver Stations-BTS) ಸಂಖ್ಯೆಯು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಟ್ರಾಯ್‌ ವರದಿ ಪ್ರಕಾರ ಕರ್ನಾಟಕ ಹೆಚ್ಚು ಟವರ್ ಹೊಂದಿರುವ ಮೂರನೇ ರಾಜ್ಯವಾಗಿದೆ.

ದೇಶದಲ್ಲಿರುವ ಟೆಲಿಕಾಂ ಟವರ್‌ ಸಂಖ್ಯೆ ಎಷ್ಟು?.ಕರ್ನಾಟಕದ ಅಂಕಿ ಅಂಶ ಏನು?

ಹೌದು, ದೇಶದಲ್ಲಿ ಅತೀ ಹೆಚ್ಚು ಟೆಲಿಕಾಂ ನೆಟವರ್ಕ್‌ ಟವರ್‌ಗಳನ್ನು (BTS) ಹೊಂದಿರುವ ಮೊದಲ ಮೂರು ರಾಜ್ಯಗಳಲ್ಲಿ ಕರ್ನಾಟಕವು ಸೇರಿದ್ದು, ವಿವಿಧ ಟೆಲಿಕಾಂ ಸಂಸ್ಥೆಗಳಿಗೆ ಸೇರಿದ ಒಟ್ಟು 124109 ಟವರ್‌ಗಳು ಕರ್ನಾಟಕದಲ್ಲಿವೆ. ನೆರೆಯ ರಾಜ್ಯ ಮಹಾರಾಷ್ಟ್ರ 149534 ಟವರ್‌ಗಳನ್ನು ಹೊಂದಿದ್ದು, ಮೊದಲ ಸ್ಥಾನದಲ್ಲಿದ್ದರೆ, 137688 ನಷ್ಟು ಟವರ್‌ಗಳನ್ನು ಹೊಂದಿರುವ ಆಂಧ್ರಪ್ರದೇಶ ಎರಡನೇ ಸ್ಥಾನದಲ್ಲಿದೆ. ಈ ಅಂಕಿ ಅಂಶಗಳು 1 ಜುಲೈ 2018ರವರೆಗೆ ದಾಖಲಾಗಿರುವುದು.

ದೇಶದಲ್ಲಿರುವ ಟೆಲಿಕಾಂ ಟವರ್‌ ಸಂಖ್ಯೆ ಎಷ್ಟು?.ಕರ್ನಾಟಕದ ಅಂಕಿ ಅಂಶ ಏನು?

ಮೊಬೈಲ್ ಬಂದ ಮೇಲೆ ಆರಂಭದಲ್ಲಿ ಜಿಎಸ್‌ಎಮ್‌ ನೆಟವರ್ಕ್‌ ಟವರ್‌ಗಳು ಸ್ಥಾಪನೆ ಆದವು, ನಂತರ 2G, 3G ನೆಟವರ್ಕ್‌ಗಳು ಬಂದು ಹೊಸ ಟವರ್‌ಗಳ ಅಳವಡಿಕೆ ಶುರು ಆಗಿ ಟವರ್‌ಗಳ ಸಂಖ್ಯೆ ಹೆಚ್ಚುತ್ತಾ ಸಾಗಿತು. ಸದ್ಯ 4G ನೆಟವರ್ಕ ಬಳಸಲಾಗುತ್ತಿದ್ದು, ಟವರ್‌ಗಳ ಸಂಖ್ಯೆ ಮಾತ್ರ ಏರುಗತಿಯಲ್ಲಿದೆ. ಹಾಗಾದರೇ ಈ ಲೇಖನದಲ್ಲಿ GSM, 3G ಮತ್ತು 4G ಟವರ್‌ಗಳ ಅಂಕಿ ಅಂಶಗಳ ಬಗ್ಗೆ ಮಾಹಿತಿ ನೋಡೋಣ ಬನ್ನಿರಿ.

ಮಹರಾಷ್ಟ್ರ ರಾಜ್ಯದಲ್ಲಿವೆ ಅತೀ ಹೆಚ್ಚು ಟವರ್‌ಗಳು

ಮಹರಾಷ್ಟ್ರ ರಾಜ್ಯದಲ್ಲಿವೆ ಅತೀ ಹೆಚ್ಚು ಟವರ್‌ಗಳು

ಮಹರಾಷ್ಟ್ರ ರಾಜ್ಯದಲ್ಲಿ ದೇಶದಲ್ಲಿ ಅತೀ ಹೆಚ್ಚು ಟೆಲಿಕಾಂ ಟವರ್‌ಗಳ ಇದ್ದು, ಹೆಚ್ಚು ಟವರ್‌ಗಳನ್ನು ಹೊಂದಿರುವ ಮೊದಲ ರಾಜ್ಯವೆಂದೆನಿಸಿಕೊಂಡಿದೆ. GSM ನೆಟವರ್ಕ್‌ ಟವರ್‌ಗಳ ಸಂಖ್ಯೆಯು 47013 ಆಗಿದೆ. 3G ನೆಟವರ್ಕ್‌ನ ಟವರ್‌ಗಳು ಸಂಖ್ಯೆ 30225 ಆಗಿದೆ. ಇತ್ತೀಚಿಗೆ ಟೆಲಿಕಾಂ ಕ್ಷೇತ್ರದಲ್ಲಿ ಸದ್ಯ ಚಾಲ್ತಿ ಇರುವ 4G-LTE ನೆಟವರ್ಕ್‌ ಸಂಖ್ಯೆ 72296 ಆಗಿದ್ದು, ಒಟ್ಟು ಟವರ್‌ಗಳ ಸಂಖ್ಯೆಯು 149534 ಆಗಿದೆ.

ಆಂಧ್ರಪ್ರದೇಶದಲ್ಲಿರುವ ಟವರ್‌ಗಳೆಷ್ಟು

ಆಂಧ್ರಪ್ರದೇಶದಲ್ಲಿರುವ ಟವರ್‌ಗಳೆಷ್ಟು

ಆಂಧ್ರಪ್ರದೇಶ ರಾಜ್ಯದಲ್ಲಿಯೂ ಟೆಲಿಕಾಂ ಟವರ್‌ಗಳ ಸಂಖ್ಯೆ ಏರುಗತಿಯಲ್ಲಿದ್ದು, ಹೆಚ್ಚು ಟವರ್‌ ಹೊಂದಿರುವ ಎರಡನೇ ರಾಜ್ಯವಾಗಿ ಗುರುತಿಸಿಕೊಂಡಿದೆ. ಇಲ್ಲಿರುವ ಒಟ್ಟು ಟವರ್‌ಗಳ ಸಂಖ್ಯೆಯು 137688 ಆಗಿದ್ದು, ಅದರಲ್ಲಿ GSM ನೆಟವರ್ಕ್‌ ಟವರ್‌ಗಳ ಸಂಖ್ಯೆಯು 44011 ಆಗಿದೆ. ಹಾಗೇ 3G ನೆಟವರ್ಕ್‌ನ ಟವರ್‌ಗಳು ಸಂಖ್ಯೆ 23405 ಯನ್ನು ಹೊಂದಿದ್ದು, ಟೆಲಿಕಾಂ ಕ್ಷೇತ್ರದಲ್ಲಿ ಸದ್ಯ ಬಳಕೆಯಲ್ಲಿರುವ 4G-LTE ನೆಟವರ್ಕ್‌ ಸಂಖ್ಯೆ 70272 ಆಗಿದೆ.

ಕರ್ನಾಟಕದಲ್ಲಿರುವ ಟವರ್‌ಗಳ ಅಂಕಿ ಅಂಶ

ಕರ್ನಾಟಕದಲ್ಲಿರುವ ಟವರ್‌ಗಳ ಅಂಕಿ ಅಂಶ

ಕರ್ನಾಟಕದಲ್ಲಿ ಟೆಲಿಕಾಂ ನೆಟವರ್ಕ್‌ ಟವರ್‌ಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಾ ಸಾಗಿದ್ದು, ಹೆಚ್ಚು ಟವರ್‌ ಹೊಂದಿರುವ ಮೂರನೇ ರಾಜ್ಯವಾಗಿದೆ. GSM ನೆಟವರ್ಕ್‌ ಟವರ್‌ಗಳ ಸಂಖ್ಯೆ ಸುಮಾರು 37499 ಆಗಿದೆ. ಹಾಗೇ 3G ನೆಟವರ್ಕ್‌ನ ಟವರ್‌ಗಳು ಸಂಖ್ಯೆ 21645 ಆಗಿದೆ. ಇತ್ತೀಚಿಗೆ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಅಲೆ ಹುಟ್ಟಿಸಿದ್ದ 4G-LTE ನೆಟವರ್ಕ್‌ ಸಂಖ್ಯೆ 64965 ಆಗಿದ್ದು, ಒಟ್ಟು ಟವರ್‌ಗಳ ಸಂಖ್ಯೆಯು 124109 ಆಗಿದೆ.

ಹಿಮಾಚಲ ಪ್ರದೇಶದಲ್ಲಿ ಟವರ್‌ ಸಂಖ್ಯೆ ಕಡಿಮೆ

ಹಿಮಾಚಲ ಪ್ರದೇಶದಲ್ಲಿ ಟವರ್‌ ಸಂಖ್ಯೆ ಕಡಿಮೆ

ದೇಶದಲ್ಲಿನ ಇತರೆ ರಾಜ್ಯಗಳಿಗೆ ಹೋಲಿಸಿದರೇ ಹಿಮಾಚಲ ಪ್ರದೇಶದಲ್ಲಿ ಅತಿ ಕಡಿಮೆ ಟೆಲಿಕಾಂ ಟವರ್‌ಗಳನ್ನು ಹೊಂದಿದೆ. ಇಲ್ಲಿರುವ ಒಟ್ಟು ಟವರ್‌ಗಳ ಸಂಖ್ಯೆಯು 17357 ಮಾತ್ರ. ಅವುಗಳಲ್ಲಿ GSM ನೆಟವರ್ಕ್ ಡವರ್‌ಗಳ ಸಂಖ್ಯೆಯು 5137 ಆಗಿದೆ. 3G ನೆಟವರ್ಕ್‌ಗಳ ಸಂಖ್ಯೆಯು 3314 ಆಗಿದೆ ಮತ್ತು ಸದ್ಯ ಬಳಕೆಯಲ್ಲಿರುವ 4G LET ನೆಟವರ್ಕ್‌ಗಳ ಸಂಖ್ಯೆಯು 8906 ಆಗಿದೆ.

ದೇಶದಲ್ಲಿರುವ ಒಟ್ಟು ಟವರ್‌ಗಳ ಸಂಖ್ಯೆ

ದೇಶದಲ್ಲಿರುವ ಒಟ್ಟು ಟವರ್‌ಗಳ ಸಂಖ್ಯೆ

ಟ್ರಾಯ್‌ನ ವರದಿಯಂತೆ 1 ಜುಲೈ 2018ರ ವರೆಗೆ ದೇಶದಲ್ಲಿ ವಿವಿಧ ಟೆಲಿಕಾಂ ಕಂಪನಿಗಳಿಗೆ ಸೇರಿದ ಒಟ್ಟು 1833842 ಟೆಲಿಕಾಂ ಟವರ್‌ಗಳು ಇರುವುದು ದಾಖಲಾಗಿವೆ. ಅವುಗಳಲ್ಲಿ GSM ನೆಟವರ್ಕ್ ಟವರ್‌ಗಳ ಸಂಖ್ಯೆಯು 581640 ಆಗಿದೆ. 3G ಟವರ್‌ಗಳ ಸಂಖ್ಯೆ 346787 ಆಗಿದೆ ಮತ್ತು 4G ನೆಟವರ್ಕ್‌ ಟವರ್‌ಗಳ ಸಂಖ್ಯೆಯು 905415 ಆಗಿದೆ. ಈ ಅಂಕಿ ಅಂಶಗಳನ್ನು ಗಮನಿಸಿದಾಗ ಟವರ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡು ಬರುತ್ತದೆ.

ಓದಿರಿ : ಎಚ್ಚರಿಕೆ!.ನಿಮ್ಮ ಚಲನವಲನಗಳ ಮೇಲೆ ನಿಗಾ ಇಡಬಹುದು 'ಸ್ಪೈ ಆಪ್‌ಗಳು'!

Most Read Articles
Best Mobiles in India

English summary
Telecom Tower Count for the country.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more