ಟೆಲಿಗ್ರಾಮ್‌ನಲ್ಲಿ ಅಚ್ಚರಿಯ ಫೀಚರ್ ಸೇರ್ಪಡೆ; ಮೆಸೆಜ್‌ಗಳು ತಾನೇ ಡಿಲೀಟ್ ಆಗುತ್ತವೆ!

|

ಫೇಸ್‌ಬುಕ್ ಮಾಲೀಕತ್ವದ ಇನ್‌ಸ್ಟಂಟ್ ಮೆಸೆಜ್ ಆಪ್‌ ವಾಟ್ಸಾಪ್ ತನ್ನ ಹೊಸ ಗೌಪ್ಯತೆ ನೀತಿಯಿಂದ ಜನಪ್ರಿಯತೆ ಕಳೆದುಕೊಳ್ಳುತ್ತಲಿದೆ. ಈ ನಿಟ್ಟಿನಲ್ಲಿ ವಾಟ್ಸಾಪ್‌ಗೆ ಪರ್ಯಾಯ ಆಪ್‌ಗಳು ಮುನ್ನೆಲೆಗೆ ಬಂದಿದ್ದು, ಆ ಪೈಕಿ ಭಾರತದಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ವೇಗವಾಗಿ ಬಳಕೆದಾರರನ್ನು ಗಳಿಸಿಕೊಳ್ಳುತ್ತಲಿದೆ. ಇದೀಗ ಟೆಲಿಗ್ರಾಮ್ ಗ್ರೂಪ್ ಚಾಟ್‌ ಹಾಗೂ ವೈಯಕ್ತಿಕ ಚಾಟ್‌ನಲ್ಲಿ ಹೊಸದೊಂದು ಫೀಚರ್ ಅಳವಡಿಸಿದ್ದು, ಗ್ರಾಹಕರಿಗೆ ಉಪಯುಕ್ತ ಅನಿಸಿದೆ.

ಅಪ್ಲಿಕೇಶನ್

ಹೌದು, ಟೆಲಿಗ್ರಾಮ್ ‌ಮೆಸೆಜ್ ಅಪ್ಲಿಕೇಶನ್ ವೈಯಕ್ತಿಕ ಚಾಟ್‌ಗಳು, ಗುಂಪುಗಳು ಮತ್ತು ಚಾನೆಲ್‌ಗಳಿಗಾಗಿ ಸ್ವಯಂ-ಅಳಿಸುವ ಮೆಸೆಜ್‌(auto-delete messages) ಫೀಚರ್‌ ಅನ್ನು ಪರಿಚಯಿಸಿದೆ. ಈ ಮೊದಲು, ಈ ಫೀಚರ್ ಸೀಕ್ರೆಟ್ ಚಾಟ್‌ಗಳಿಗೆ ಮಾತ್ರ ಲಭ್ಯವಿತ್ತು. ಈಗ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನ ಬಳಕೆದಾರರು ಸಂದೇಶಗಳನ್ನು ಕಳುಹಿಸುವ ಮೊದಲು ಯಾವುದೇ ಚಾಟ್‌ಗಳಲ್ಲಿ 24 ಗಂಟೆಗಳ ಅಥವಾ 7 ದಿನಗಳ ಟೈಮರ್ ಅನ್ನು ಹೊಂದಿಸಲು ಸಾಧ್ಯವಾಗುತ್ತದೆ.

ಕಾಲಮಿತಿಯ

ಟೆಲಿಗ್ರಾಮ್‌ನಲ್ಲಿ ಈ ಫೀಚರ್‌ನ ಆಯ್ದ ಕಾಲಮಿತಿಯ ನಂತರ, ಗುಂಪು ಅಥವಾ ಚಾನಲ್‌ನಲ್ಲಿರುವ ಎಲ್ಲಾ ಬಳಕೆದಾರರಿಗೆ ಅಥವಾ ವೈಯಕ್ತಿಕ ಚಾಟ್‌ನಲ್ಲಿ ಸಿಂಗಲ್ ರೀಸಿಪೆಂಟ್-recipient ಮೆಸೆಜ್‌ಗಳು ಕಣ್ಮರೆಯಾಗುತ್ತವೆ. ಗುಂಪು ಮತ್ತು ಚಾನಲ್‌ಗಳಲ್ಲಿ ಅಡ್ಮಿನ್ ಮಾತ್ರ ಈ ಫೀಚರ್‌ ಅನ್ನು ಸಕ್ರಿಯಗೊಳಿಸಲು ಅಥವಾ ಎಡಿಟ್ ಮಾಡಲು ಅವಕಾಶ ಇರಲಿದೆ.

ಮೆಸೆಜ್

ಎಲ್ಲಾ ಮೆಸೆಜ್‌ಗಳು ಆಟೋ ಡಿಲೀಟ್ ಆಗುವ ಸಮಯಕ್ಕೆ ಕ್ಷಣಗಣನೆ ತೋರಿಸುತ್ತವೆ ಎನ್ನುವುದು ವಿಶೇಷ ಆಗಿದೆ. ಬಳಕೆದಾರರು ಆಂಡ್ರಾಯ್ಡ್ ಅನ್ನು ಟ್ಯಾಪ್ ಮಾಡುವ ಮೂಲಕ ನಿರ್ದಿಷ್ಟ ಮೆಸೆಜ್‌ಗಳಿಗೆ ಸಮಯವನ್ನು ಟ್ರ್ಯಾಕ್ ಮಾಡಬಹುದು. ಇನ್ನು ಐಒಎಸ್ ಆವೃತ್ತಿಯಲ್ಲಿ ನಿರ್ದಿಷ್ಟ ಮೆಸೆಜ್ ಟ್ರ್ಯಾಕ್ ಮಾಡಲು ಮೆಸೆಜ್‌ ಅನ್ನು ಒತ್ತಿ ಹಿಡಿಯಬೇಕು. ಆಟೋ ಡಿಲೀಟ್ ಟೈಮರ್ ಸೆಟ್ ಮಾಡಿದ ನಂತರ ಇದು ಕಳುಹಿಸಿದ ಮೆಸೆಜ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಹಿಂದಿನ ಮೆಸೆಜ್‌ಗಳು ಚಾಟ್ ಹಿಸ್ಟರಿ ಉಳಿಯುತ್ತವೆ ಎಂದು ಟೆಲಿಗ್ರಾಮ್ ಹೇಳಿದೆ.

ಟೆಲಿಗ್ರಾಮ್

ಹೆಚ್ಚಿನ ಗೌಪ್ಯತೆ ಮತ್ತು ಉತ್ತಮ ಸುರಕ್ಷತೆಯೊಂದಿಗೆ ಬಳಕೆದಾರರ ಚಾಟ್ ಅನುಭವವನ್ನು ಹೆಚ್ಚಿಸಲು, ಟೆಲಿಗ್ರಾಮ್ ಇತರ ಹೊಸ ಫೀಚರ್‌ಗಳನ್ನು ಸಹ ಮುಕ್ತಾಯಗೊಳಿಸಿದೆ. ಅವಧಿ ಮುಗಿದ ಆಹ್ವಾನ ಲಿಂಕ್‌ಗಳು, ಆಮಂತ್ರಣಗಳನ್ನು ಸೇರುವಂತೆ ಸ್ಕ್ಯಾನ್ ಮಾಡಬಹುದಾದ ಕ್ಯೂಆರ್ ಕೋಡ್‌ಗಳು, ಆಂಡ್ರಾಯ್ಡ್ ಮತ್ತು ಐಒಎಸ್‌ಗಾಗಿ ಹೋಮ್ ಸ್ಕ್ರೀನ್ ವಿಜೆಟ್‌ಗಳು, ಇತರವುಗಳಲ್ಲಿ ಸೇರಿವೆ.

ಚಾಟ್‌ನೊಂದಿಗೆ

ಹಾಗೆಯೇ ಭಾಗವಹಿಸುವವರಿಗೆ ಲೈವ್ ಧ್ವನಿ ಚಾಟ್‌ನೊಂದಿಗೆ ಸಂಪರ್ಕ ಸಾಧಿಸಲು ಬ್ರಾಡ್‌ಕಾಸ್ಟ್ ಗ್ರೂಪ್ಸ್ ಎಂಬ ಹೊಸ ರೂಪದ ಟೆಲಿಗ್ರಾಮ್ ಗುಂಪನ್ನು ಪರಿಚಯಿಸಲಾಗಿದೆ. ಯಾವುದೇ ಸ್ಪ್ಯಾಮ್ ವಿಷಯ ಅಥವಾ ನಕಲಿ ಖಾತೆಗಳು, ಹಿಂಸಾಚಾರ, ಮಕ್ಕಳ ಮೇಲಿನ ದೌರ್ಜನ್ಯ, ಅಶ್ಲೀಲತೆ ಇತ್ಯಾದಿಗಳಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ವರದಿ ಮಾಡಲು ಬಳಕೆದಾರರಿಗೆ ಇದು ತ್ವರಿತ ಮತ್ತು ಸುಲಭವಾಗಿದೆ ಎಂದು ಟೆಲಿಗ್ರಾಮ್ ಹೇಳಿದೆ.

Most Read Articles
Best Mobiles in India

English summary
Telegram on Wednesday said it has introduced an auto-delete messages feature for individual chats, groups and channels.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X