ವೀಡಿಯೊ ಕಾಲ್‌ನಲ್ಲಿ ಹೊಸ ಫೀಚರ್ಸ್‌ ಪರಿಚಯಿಸಿದ ಟೆಲಿಗ್ರಾಮ್‌!

|

ಜನಪ್ರಿಯ ಮೆಸೇಜಿಂಗ್ ಆಪ್ಲಿಕೇಶನ್‌ಗಳಲ್ಲಿ ಟೆಲಿಗ್ರಾಮ್‌ ಕೂಡ ಒಂದು. ಬಳಕೆದಾರರಿಗೆ ಈಗಾಗಲೇ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಸದ್ಯ ಇದೀಗ ಹೊಸ ಫೀಚರ್ಸ್‌ಗಳನ್ನು ಘೋಷಿಸಿದೆ. ಅದರಂತೆ ಟೆಲಿಗ್ರಾಮ್ ಈಗ 1000 ಜನರಿಗೆ ಗ್ರೂಪ್‌ ವೀಡಿಯೊ ಕಾಲ್‌ಗೆ ಸೇರಲು ಅವಕಾಶ ನೀಡುತ್ತದೆ. ಜೊತೆಗೆ ಬಳಕೆದಾರರಿಗೆ ವೀಡಿಯೊ ಸಂದೇಶಗಳನ್ನು ಕಳುಹಿಸಲು ಸಹ ಅನುಮತಿಸುತ್ತದೆ.

ಟೆಲಿಗ್ರಾಮ್‌

ಹೌದು, ಟೆಲಿಗ್ರಾಮ್‌ ಅಪ್ಲಿಕೇಶನ್‌ ಹೊಸದಾಗಿ ಹಲವು ಫೀಚರ್ಸ್‌ಗಳನ್ನು ಘೋಷಿಸಿದೆ. ಅದರಂತೆ ವಿಡಿಯೋ ಕರೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಹೆಚ್ಚಿಸಿದೆ. ಅಲ್ಲದೆ, ಟೆಲಿಗ್ರಾಮ್ ಈಗ ಒನ್-ಒನ್ ಕರೆಗಳನ್ನು ಒಳಗೊಂಡಂತೆ ಎಲ್ಲಾ ವೀಡಿಯೊ ಕರೆಗಳಿಗೆ ವಾಯ್ಸ್‌ ಜೊತೆಗೆ ಸ್ಕ್ರೀನ್ ಶೇರ್‌ ಅನ್ನು ಸಕ್ರಿಯಗೊಳಿಸಿದೆ. ಈ ಮೂಲಕ ತನ್ನ ವಿಡಿಯೋ ಸಂದೇಶಗಳ ಫೀಚರ್ಸ್‌ ಅನ್ನು ಅಪ್ಡೇಟ್‌ ಮಾಡಿದೆ. ಇನ್ನುಳಿದಂತೆ ಟೆಲಿಗ್ರಾಮ್‌ ಪರಿಚಯಿಸಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವೀಡಿಯೊ ಸಂದೇಶಗಳು

ವೀಡಿಯೊ ಸಂದೇಶಗಳು

ಟೆಲಿಗ್ರಾಮ್‌ ತನ್ನ ವಿಡಿಯೋ ಸಂದೇಶಗಳ ವೈಶಿಷ್ಟ್ಯವನ್ನು ನವೀಕರಿಸಿದೆ. ನಿಮ್ಮ ಗ್ಯಾಲರಿಗೆ ಇನ್ನೊಂದು ವೀಡಿಯೊವನ್ನು ಸೇರಿಸದೆಯೇ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲಿಸಲು ಅಥವಾ ಹಂಚಿಕೊಳ್ಳಲು ವೀಡಿಯೊ ಸಂದೇಶಗಳು ತ್ವರಿತ ಮಾರ್ಗವಾಗಿದೆ ಎಂದು ಟೆಲಿಗ್ರಾಮ್ ಹೇಳಿದೆ. ಅಲ್ಲದೆ ನಿಮ್ಮ ಚಾಟ್ ಬಾಕ್ಸ್‌ನಲ್ಲಿರುವ ರೆಕಾರ್ಡಿಂಗ್ ಬಟನ್ ಅನ್ನು ನೀವು ಸರಳವಾಗಿ ಟ್ಯಾಪ್ ಮಾಡಿ ಮತ್ತು ಅದನ್ನು ನಿಮ್ಮ ಸಂಪರ್ಕಗಳಿಗೆ ಕಳುಹಿಸಬಹುದು. ಆದರೆ ವೀಡಿಯೊವನ್ನು ನಿಮ್ಮ ಗ್ಯಾಲರಿಯಲ್ಲಿ ಸೇವ್‌ ಮಾಡುವುದಕ್ಕೆ ಆಗುವುದಿಲ್ಲ.

ಟೆಲಿಗ್ರಾಮ್‌

ಇನ್ನು ನೀವು ಟೆಲಿಗ್ರಾಮ್‌ನಲ್ಲಿ ವೀಡಿಯೊ ಸಂದೇಶವನ್ನು ರೆಕಾರ್ಡ್ ಮಾಡಲು, ಧ್ವನಿ ಸಂದೇಶ ರೆಕಾರ್ಡಿಂಗ್‌ನಿಂದ ವೀಡಿಯೊಗೆ ಬದಲಾಯಿಸಲು ಸಂದೇಶ ಪಟ್ಟಿಯಲ್ಲಿರುವ ಮೈಕ್ರೊಫೋನ್ ಐಕಾನ್ ಅನ್ನು ಟ್ಯಾಪ್ ಮಾಡಿ. ರೆಕಾರ್ಡ್ ಮಾಡಲು ಒತ್ತಿ ಹಿಡಿದುಕೊಳ್ಳಿ, ನಂತರ ಹಿಂತಿರುಗಲು ಕ್ಯಾಮರಾ ಐಕಾನ್ ಟ್ಯಾಪ್ ಮಾಡಿ. ನೀವು ರೆಕಾರ್ಡ್ ಮಾಡಿದಂತೆ ನಿಮ್ಮ ಸಾಧನದಿಂದ ಆಡಿಯೋ ಪ್ಲೇ ಆಗುತ್ತಲೇ ಇರುತ್ತದೆ, ಆದ್ದರಿಂದ ನೀವು ಈಗ ನಿಮ್ಮ ಮೆಚ್ಚಿನ ಹಾಡುಗಳನ್ನು ಹಾಡಬಹುದು ಅಥವಾ ನಿಮ್ಮ ಪಾಡ್‌ಕಾಸ್ಟ್ ಅನ್ನು ವಿರಾಮಗೊಳಿಸದೆ ಉತ್ತರಿಸಬಹುದಾಗಿದೆ.

ವೀಡಿಯೊ ಪ್ಲೇಬ್ಯಾಕ್ ಸ್ಪೀಡ್‌

ವೀಡಿಯೊ ಪ್ಲೇಬ್ಯಾಕ್ ಸ್ಪೀಡ್‌

xಟೆಲಿಗ್ರಾಂ ಮೂಲಕ ನಿಮಗೆ ಕಳುಹಿಸಿದ ವೀಡಿಯೊಗಳ ಪ್ಲೇಬ್ಯಾಕ್ ವೇಗವನ್ನು ನೀವು ಈಗ ಬದಲಾಯಿಸಬಹುದು. ಆಪ್‌ನಲ್ಲಿರುವ ಮೀಡಿಯಾ ಪ್ಲೇಯರ್ ಈಗ 0.5x, 1.5x ಮತ್ತು 2x ಪ್ಲೇಬ್ಯಾಕ್ ವೇಗವನ್ನು ಬೆಂಬಲಿಸುತ್ತದೆ. ಆದ್ದರಿಂದ ಇದನ್ನು ಕರೆಗಳನ್ನು ವೇಗವಾಗಿ ಫಾರ್ವರ್ಡ್ ಮಾಡಲು ಅಥವಾ ವೀಡಿಯೊಗಳನ್ನು ನಿಧಾನ ಚಲನೆಯಲ್ಲಿ ವೀಕ್ಷಿಸಲು ಬಳಸಬಹುದು.

ಟೆಲಿಗ್ರಾಮ್‌

ನೀವು ನಿಮ್ಮ ಟೆಲಿಗ್ರಾಮ್‌ ವೀಡಿಯೋ ಪ್ಲೇಬ್ಯಾಕ್ ವೇಗವನ್ನು ಬದಲಾಯಿಸಲು, ಆಂಡ್ರಾಯ್ಡ್‌ನಲ್ಲಿನ ಮೂರು ಚುಕ್ಕೆಗಳು ಅಥವಾ ಐಒಎಸ್‌ನಲ್ಲಿ ಮೂರು ಸಮತಲವಾದ ಚುಕ್ಕೆಗಳನ್ನು ಪೂರ್ಣ ಪರದೆಯಲ್ಲಿ ವೀಕ್ಷಿಸುವಾಗ ಟ್ಯಾಪ್ ಮಾಡಿ. ಆಂಡ್ರಾಯ್ಡ್ ಬಳಕೆದಾರರು 0.5x, 1x, 1.5x ಮತ್ತು 2x ಪ್ಲೇಬ್ಯಾಕ್ ವೇಗದ ನಡುವೆ ಬದಲಾಯಿಸಲು ಧ್ವನಿ ಅಥವಾ ವೀಡಿಯೊ ಸಂದೇಶಗಳನ್ನು ಆಡುವಾಗ 2X ಬಟನ್ ಅನ್ನು ಒತ್ತಿ ಹಿಡಿಯಬಹುದು.

ವಾಯ್ಸ್‌ನೊಂದಿಗೆ ಸ್ಕ್ರೀನ್‌ ಶೇರ್‌ ಮಾಡುವುದು

ವಾಯ್ಸ್‌ನೊಂದಿಗೆ ಸ್ಕ್ರೀನ್‌ ಶೇರ್‌ ಮಾಡುವುದು

ಟೆಲಿಗ್ರಾಮ್ ಈಗ ಬಳಕೆದಾರರಿಗೆ ಯಾವುದೇ ವೀಡಿಯೊ ಕರೆಯಲ್ಲಿ ಲೈವ್‌ ಮಾಡುವಾಗ ತಮ್ಮ ಸಾಧನಗಳಲ್ಲಿ ಒಬ್ಬರಿಗೊಬ್ಬರು ಕರೆಗಳಲ್ಲಿ ಪರದೆಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಹಾಗಾಗಿ ನೀವು ಚಲನಚಿತ್ರವನ್ನು ನೋಡುತ್ತಿದ್ದರೆ, ನಿಮ್ಮ ಪರದೆಯನ್ನು ನೀವು ಹಂಚಿಕೊಳ್ಳಬಹುದು ಮತ್ತು ನಿಮ್ಮ ಸ್ನೇಹಿತನೊಂದಿಗೆ ಚಲನಚಿತ್ರವನ್ನು ವೀಕ್ಷಿಸಬಹುದು.

ಕ್ಯಾಮೆರಾ

ಇದಕ್ಕಾಗಿ ನೀವು ಯಾವುದೇ ಕರೆ ಸಮಯದಲ್ಲಿ ವೀಡಿಯೊವನ್ನು ಆನ್ ಮಾಡುವಾಗ, ನೀವು ಕ್ಯಾಮೆರಾವನ್ನು ಆಯ್ಕೆ ಮಾಡಲು ಅಥವಾ ನಿಮ್ಮ ಪರದೆಯನ್ನು ಹಂಚಿಕೊಳ್ಳಲು ಸ್ವೈಪ್ ಮಾಡಬಹುದು. ಲೈವ್ ಆಗುವ ಮೊದಲು ಎಲ್ಲವೂ ಪರಿಪೂರ್ಣವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ವೀಡಿಯೋ ಪೂರ್ವವೀಕ್ಷಣೆಯನ್ನು ಬಳಸಿ ಎಂದು ಟೆಲಿಗ್ರಾಮ್ ಬ್ಲಾಗ್‌ನಲ್ಲಿ ಹೇಳಿದೆ.

Most Read Articles
Best Mobiles in India

Read more about:
English summary
Telegram has now enabled screen sharing with sound to all video calls, including one-on-one calls.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X