Just In
Don't Miss
- News
ಟ್ರಂಪ್ಗೆ ಮೋಸಗಾರನ ಪಟ್ಟ..? ಗಾಲ್ಫ್ನಲ್ಲಿ ಮೋಸ ಮಾಡಿದ್ರಾ ಮಾಜಿ ಅಧ್ಯಕ್ಷ..?
- Automobiles
ಹೆಲ್ಮೆಟ್'ನಿಂದ ಪ್ರಾಣ ಉಳಿಸಿಕೊಂಡ ಬೈಕ್ ಸವಾರ
- Movies
ದಿವ್ಯಾ ಸುರೇಶ್ ಜೊತೆಗಿನ ಲವ್ ಸ್ಟೋರಿಗೆ ಎಳ್ಳು ನೀರು ಬಿಟ್ಟ ಶಮಂತ್!
- Sports
ಸೌತಾಂಪ್ಟನ್ನಲ್ಲಿ ಭಾರತ-ನ್ಯೂಜಿಲೆಂಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್
- Finance
ಚಿನ್ನದ ಬೆಲೆ ಏರಿಕೆ: ಮಾರ್ಚ್ 08ರ ಬೆಲೆ ಹೀಗಿದೆ
- Lifestyle
ಹೀಗೆ ಆಯ್ಕೆ ಮಾಡಿದರೆ ನೀವು ಬಯಸಿದಂಥ ಸಂಗಾತಿಯೇ ಸಿಗುವರು
- Education
Indian Postal Circle Recruitment 2021: 1421 ಬಿಪಿಎಂ, ಅಬಿಪಿಎಂ ಮತ್ತು ದಖ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಟ್ಸಾಪ್ ಚಾಟ್ Import ಮಾಡುವ ಫೀಚರ್ಸ್ ಪರಿಚಯಿಸಿದ ಟೆಲಿಗ್ರಾಮ್!
ವಾಟ್ಸಾಪ್ನ ಹೊಸ ಸೇವಾನಿಯಮ ವಿವಾದದ ನಂತರ ಇತರೆ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳಾದ ಸಿಗ್ನಲ್ ಮತ್ತು ಟೆಲಿಗ್ರಾಮ್ ಅಪ್ಲಿಕೇಶನ್ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ವಾಟ್ಸಾಪ್ನ ಗೌಪ್ಯತೆ ನೀತಿ ವಿರುದ್ದ ಅಸಮಾಧಾನ ಹೊಂದಿರುವ ಬಳಕೆದಾರರು ಟೆಲಿಗ್ರಾಮ್ನತ್ತ ಮುಖಮಾಡಿದ್ದಾರೆ. ಸದ್ಯ ಟೆಲಿಗ್ರಾಮ್ ಅಪ್ಲಿಕೇಶನ್ ಕೂಡ ಬಳಕೆದಾರರನ್ನು ಆಕರ್ಷಿಸಲು ಅನೇಕ ಫೀಚರ್ಸ್ಗಳನ್ನು ಪರಿಚಯಿಸುತ್ತಿದೆ. ಇದೀಗ ಟೆಲಿಗ್ರಾಮ್ ಮತ್ತೊಂದು ಹೊಸ ಫೀಚರ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಬಳಕೆದಾರರಿಗೆ ವಾಟ್ಸಾಪ್ ಮತ್ತು ಇತರ ಮೆಸೇಜಿಂಗ್ ಅಪ್ಲಿಕೇಶನ್ಗಳಿಂದ ಚಾಟ್ಗಳನ್ನು Import ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಹೌದು, ಟೆಲಿಗ್ರಾಮ್ ಅಪ್ಲಿಕೇಶನ್ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ವಾಟ್ಸಾಪ್ ಬಳಕೆದಾರರು ಟೆಲಿಗ್ರಾಮ್ ಮತ್ತು ಸಿಗ್ನಲ್ನಂತಹ ಪರ್ಯಾಯಗಳಿಗೆ ಬದಲಾಯಿಸುವ ಸಮಯದಲ್ಲಿಯೇ ಈ ಹೊಸ ಫೀಚರ್ಸ್ ಬರುತ್ತಿದೆ. ಹಾಗದ್ರೆ ಟೆಲಿಗ್ರಾಮ್ನ ಈ ಹೊಸ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟೆಲಿಗ್ರಾಮ್ನ ಹೊಸ ಫೀಚರ್ಸ್ ಅನ್ನು ಆಪ್ ಸ್ಟೋರ್ನಲ್ಲಿ ಐಒಎಸ್ ಬಳಕೆದಾರರಿಗೆ ನವೀಕರಣವಾಗಿ ಹೊರತರಲಾಗಿದೆ. ಇದು ಆವೃತ್ತಿ 7.4 ರಲ್ಲಿರುವ ಐಒಎಸ್ನಲ್ಲಿ ಟೆಲಿಗ್ರಾಮ್ ಬಳಕೆದಾರರು ಇದಕ್ಕೆ ಪ್ರವೇಶವನ್ನು ಹೊಂದಬಹುದಾಗಿದೆ. ಇನ್ನು ಟೆಲಿಗ್ರಾಮ್ 7.4 ರ ಬಿಡುಗಡೆ ಟಿಪ್ಪಣಿಗಳು ಬಳಕೆದಾರರು ವಾಟ್ಸಾಪ್, ಲೈನ್, ಕಾಕಾವ್ಟಾಕ್ ಮತ್ತು ಇತರ ಅಪ್ಲಿಕೇಶನ್ಗಳಿಂದ ಚಾಟ್ಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳುತ್ತದೆ.

ಸದ್ಯ ಟೆಲಿಗ್ರಾಮ್ನಲ್ಲಿರುವ ಈ ಹೊಸ ಫೀಚರ್ಸ್ ವಾಟ್ಸಾಪ್ನಲ್ಲಿ, ‘Export ಚಾಟ್' ಕ್ರಿಯಾತ್ಮಕತೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಬಳಕೆದಾರರು ಚಾಟ್ ತೆರೆಯಬಹುದು, ‘ಮೋರ್' ಮೆನು ಆಯ್ಕೆಮಾಡಿ ಮತ್ತು export ಚಾಟ್ ಆಯ್ಕೆ ಮಾಡಬಹುದು. ನಿರ್ದಿಷ್ಟ ಚಾಟ್ನ ಜಿಪ್ ಫೈಲ್ ಅನ್ನು ಐಒಎಸ್ ಶೇರ್ ಶೀಟ್ ಮೂಲಕ ಟೆಲಿಗ್ರಾಮ್ಗೆ Export ಮಾಡಬಹುದಾಗಿದೆ. ಇದನ್ನು ಮಾಡಿದ ನಂತರ, ಟೆಲಿಗ್ರಾಮ್ನಲ್ಲಿ ಯಾವ ವಾಟ್ಸಾಪ್ ಚಾಟ್ ಅನ್ನು export ಮಾಡಲು ನೀವು ಬಯಸುತ್ತೀರಿ ಎಂಬುದನ್ನು ನೀವು ಆಯ್ಕೆ ಮಾಡಬಹುದು.

ಇನ್ನು ನೀವು export ಮಾಡಿದ ಚಾಟ್ನ ಎಲ್ಲಾ ಸಂದೇಶಗಳನ್ನು ನಂತರ ಟೆಲಿಗ್ರಾಮ್ಗೆ ಸೇರಿಸಲಾಗುತ್ತದೆ. ಅಲ್ಲದೆ ನಿರ್ದಿಷ್ಟ ಚಾಟ್ನಲ್ಲಿ ಆಯ್ಕೆ ಮಾಡಲಾಗುತ್ತದೆ. ಟೆಲಿಗ್ರಾಮ್ ಈ ಚಾಟ್ಗಳನ್ನು "Import" ಎಂದು ಹೈಲೈಟ್ ಮಾಡುತ್ತದೆ. ಅಲ್ಲದೆ ಹೊಸ ಫೀಚರ್ಸ್ ಬಳಸಲು ತುಂಬಾ ಸುಲಭ, ಮತ್ತು ವಾಟ್ಸಾಪ್ ಅಥವಾ ಇನ್ನಾವುದೇ ಅಪ್ಲಿಕೇಶನ್ನಿಂದ ಟೆಲಿಗ್ರಾಮ್ಗೆ ಬದಲಾಯಿಸುವವರಿಗೆ ಇದು ಸಹಾಯಕವಾಗಿರುತ್ತದೆ. ಅಪ್ಲಿಕೇಶನ್ನ ಇತ್ತೀಚಿನ ಆವೃತ್ತಿಯಲ್ಲಿ ಕೆಲವು ಐಫೋನ್ ಬಳಕೆದಾರರು ಟೆಲಿಗ್ರಾಮ್ನಲ್ಲಿ ಚಾಟ್ಗಳನ್ನು ಆಮದು ಮಾಡಿಕೊಳ್ಳಬಹುದು ಎಂದು ವರದಿ ಆಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190