ಬಳಕೆದಾರರಿಗೆ ಹೊಸ ಆಪ್ಡೇಟ್‌ ಫೀಚರ್ಸ್‌ ಪರಿಚಯಿಸಿದ ಟೆಲಿಗ್ರಾಮ್‌!

|

ಟೆಲಿಗ್ರಾಮ್‌ ಇನ್ಸಟಂಟ್‌ ಮೆಸೇಜಿಂಗ್‌ ಆಪ್‌ಗಳಲ್ಲಿ ಒಂದಾಗಿದೆ. ವಾಟ್ಸಾಪ್‌ನ ಪ್ರತಿಸ್ಫರ್ಧಿ ಎಂದೇ ಖ್ಯಾತವಾಗಿರುವ ಟೆಲಿಗ್ರಾಮ್‌ ಇತ್ತೀಚಿನ ದಿನಗಳಲ್ಲಿ ತನ್ನ ಬಳಕೆದಾರರಿಗೆ ಸಾಕಷ್ಟು ಹೊಸ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ಬಂದಿದೆ. ಇತ್ತಿಚಿಗಷ್ಟೇ ಶೇರಿಂಗ್‌ ಫೈಲ್‌ ಗಾತ್ರವನ್ನು ಹೆಚ್ಚಿಸಿದ್ದ ಟೆಲಿಗ್ರಾಮ್‌ ಇದೀಗ ಹೊಸ ಆಪ್ಡೇಟ್‌ ಅನ್ನು ಪರಿಚಯಿಸಿದೆ. ಸದ್ಯ ಟೆಲಿಗ್ರಾಮ್‌ನ ಇತ್ತೀಚಿನ ಅಪ್‌ಡೇಟ್‌ನಲ್ಲಿ ಮಲ್ಟಿಪಲ್‌ ಮೆಸೇಜ್‌ಗಳನ್ನು ಪಿನ್‌ ಮಾಡುವ ಫೀಚರ್ಸ್‌, ವರ್ಧಿತ ಲೈವ್ ಲೊಕೇಶನ್‌ ಮತ್ತು ಮ್ಯೂಸಿಕ್‌ ಪ್ಲೇ ಲಿಸ್ಟ್‌ ನಂತಹ ಫೀಚರ್ಸ್‌ಗಳನ್ನ ನೀಡಿದೆ.

ಟೆಲಿಗ್ರಾಮ್‌

ಹೌದು ಟೆಲಿಗ್ರಾಮ್‌ ತನ್ನ ಇತ್ತೀಚಿನ ಆಪ್ಡೇಟ್‌ನಲ್ಲಿ ಬಹು ಸಂದೇಶಗಳನ್ನ ಪಿನ್‌ ಮಾಡುವುದನ್ನು ಇನ್ನಷ್ಟು ಆಪ್ಡೇಟ್‌ ಮಾಡಿದೆ. ಸದ್ಯ ಈ ಹೊಸ ಫೀಚರ್ಸ್‌ಗಳು ಟೆಲಿಗ್ರಾಮ್‌ ಅಪ್ಲಿಕೇಶನ್‌ನ ಆವೃತ್ತಿ 7.2 ರಲ್ಲಿ ಲಭ್ಯವಿದೆ. ಇದು ಈಗ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇನಲ್ಲಿ ಲಭ್ಯವಿದೆ. ಇನ್ನು ಈ ಹೊಸ ಆಪ್ಡೇಟ್‌ನಲ್ಲಿ ಹೊಸ ಆನಿಮೇಟೆಡ್ ಎಮೋಜಿಗಳೊಂದಿಗೆ ಬರುತ್ತದೆ. ಅಲ್ಲದೆ ಚಾನಲ್‌ನಲ್ಲಿನ ಪೋಸ್ಟ್‌ಗಳಿಗೆ ಅಂಕಿಅಂಶಗಳನ್ನು ವೀಕ್ಷಿಸಲು ಆಡ್ಮಿನ್‌ಗಳಿಗೆ ಅವಕಾಶ ನೀಡುತ್ತದೆ. ಇನ್ನು ಈ ಹೊಸ ಆಪ್ಡೇಟ್‌ನಲ್ಲಿ ಲಭ್ಯವಿರುವ ಫೀಚರ್ಸ್‌ಗಳ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟೆಲಿಗ್ರಾಮ್

ಟೆಲಿಗ್ರಾಮ್ ತನ್ನ ಹೊಸ ಆಪ್ಡೇಟ್‌ನಲ್ಲಿ ಪ್ರತಿ ಚಾಟ್‌ನಲ್ಲಿ ಬಳಕೆದಾರರಿಗೆ ಅನೇಕ ಸಂದೇಶಗಳನ್ನು ಪಿನ್ ಮಾಡಲು ಅನುಮತಿಸುತ್ತದೆ. ಪಿನ್ ಮಾಡಿದ ಸಂದೇಶಗಳು ಈ ನವೀಕರಣದವರೆಗೆ ಚಾನಲ್‌ಗಳು ಮತ್ತು ಗುಂಪುಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ. ಟಾಪ್ ಬಾರ್ ಅನ್ನು ಹಲವಾರು ಬಾರಿ ಟ್ಯಾಪ್ ಮಾಡುವುದರಿಂದ ಬಳಕೆದಾರರು ಮಲ್ಟಿ ಪಿನ್ ಮಾಡಿದ ಸಂದೇಶಗಳ ನಡುವೆ ಜಂಪ್‌ ಮಾಡಬಹುದಾಗಿದೆ. ಇನ್ನು ಟೆಲಿಗ್ರಾಮ್‌ನ ಮೇಲಿನ ಬಲಭಾಗದಲ್ಲಿ ಹೊಸ ಬಟನ್ ಸಹ ಇದೆ, ಅದು ಚಾಟ್‌ನ ಎಲ್ಲಾ ಪಿನ್ ಮಾಡಿದ ಸಂದೇಶಗಳನ್ನು ಪ್ರತ್ಯೇಕ ಪೇಜ್‌ನಲ್ಲಿ ತೋರಿಸಲಿದೆ.

ಟೆಲಿಗ್ರಾಮ್

ಇನ್ನು ಟೆಲಿಗ್ರಾಮ್ ಆವೃತ್ತಿ 7.2 ಸುಧಾರಿತ ಲೈವ್ ಲೊಕೇಶನ್ ಫೀಚರ್ಸ್‌ ಅನ್ನು ಸಹ ಹೊಂದಿದೆ, ಇದು ಸ್ನೇಹಿತರ ಲೈವ್ ಲೊಕೇಶನ್‌ ಶೇರ್‌ ಮಾಡಿದ ತಕ್ಷಣ ನಿಮಗೆ ಆಲರ್ಟ್‌ ಅನ್ನು ಮಾಡುತ್ತದೆ. ಅವರು ನಿಮ್ಮ ಸ್ಥಳಕ್ಕೆ ಹತ್ತಿರದಲ್ಲಿದ್ದಾಗ ನಿಮಗೆ ಸೂಚನೆ ನಿಡುತ್ತದೆ. ಅಲ್ಲದೆ ಲೈವ್ ಲೊಕೇಶನ್‌ ಮ್ಯಾಪ್‌ನಲ್ಲಿ ಐಕಾನ್‌ಗಳು ಸಹ ಇದ್ದು, ಇಂದು ನಿಮ್ಮ ಸ್ನೇಹಿತರು ಯಾವ ದಿಕ್ಕನಲ್ಲಿದ್ದಾರೆ ಅನ್ನೊದನ್ನ ಸೂಚಿಸುವುದಕ್ಕೆ ಸಹಾಯ ಮಾಡಲಿದೆ. ಹಾಗೇಯೇ ಮ್ಯೂಸಿಕ್‌ ಶೇರ್‌ ಫೀಚರ್ಸ್‌ ಕೂಡ ಆಪ್ಡೇಟ್‌ ಆಗಿದ್ದು, ಇದರಲ್ಲಿ ಏಕಕಾಲದಲ್ಲಿ ಅನೇಕ ಹಾಡುಗಳನ್ನು ಕಳುಹಿಸಿದಾಗ, ಅವುಗಳನ್ನು ಪ್ಲೇ ಲಿಸ್ಟ್‌ನಲ್ಲಿ ಒಟ್ಟಿಗೆ ಜೋಡಿಸಲಾಗುತ್ತದೆ. ಅವುಗಳನ್ನು ಕೇಳಲು, ಕಾಮೆಂಟ್ ಮಾಡಲು ಮತ್ತು ಫಾರ್ವರ್ಡ್ ಮಾಡಲು ಸುಲಭವಾಗುತ್ತದೆ.

ಟೆಲಿಗ್ರಾಮ್

ಇದಲ್ಲದೆ ಟೆಲಿಗ್ರಾಮ್ ಆವೃತ್ತಿ 7.2 ಚಾನಲ್‌ಗಳಲ್ಲಿನ ವೈಯಕ್ತಿಕ ಪೋಸ್ಟ್‌ಗಳಿಗೆ ಅಂಕಿಅಂಶಗಳನ್ನು ವೀಕ್ಷಿಸಲು ಆಡ್ಮಿನ್‌ಗಳಿಗೆ ಅನುಮತಿಸುತ್ತದೆ. ಇದು ನಿಮ್ಮ ಪೋಸ್ಟ್ ಅನ್ನು ಫಾರ್ವರ್ಡ್ ಮಾಡಲಾದ ಸಾರ್ವಜನಿಕ ಚಾನಲ್‌ಗಳ ಪಟ್ಟಿಯನ್ನು ಸಹ ಒಳಗೊಂಡಿದೆ. ಮ್ಯೂಸಿಕ್ ಪ್ಲೇಯರ್‌ನಲ್ಲಿ ಸಂದೇಶಗಳನ್ನು ಕಳುಹಿಸಲು ಮತ್ತು ಹಾಡುಗಳನ್ನು ಬದಲಾಯಿಸಲು ಹೆಚ್ಚಿನ ಅನಿಮೇಷನ್‌ಗಳನ್ನು ಸಹ ಸೇರಿಸಲಾಗಿದೆ. ಟೆಲಿಗ್ರಾಮ್ ಕೆಲವು ಹ್ಯಾಲೋವೀನ್ ವಿಶೇಷ ಆನಿಮೇಟೆಡ್ ಎಮೋಜಿಗಳನ್ನು ಮತ್ತು ಜಾಕ್‌ಪಾಟ್ ವಿಶೇಷ ಸ್ಲಾಟ್ ಮೆಷಿನ್‌ ಎಮೋಜಿಗಳನ್ನು ಸಹ ಬಿಡುಗಡೆ ಮಾಡಿದೆ.

Most Read Articles
Best Mobiles in India

English summary
The new features are available in version 7.2 of Telegram, available on the App Store and Google Play.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X