Just In
- 7 hrs ago
ಆಂಡ್ರಾಯ್ಡ್ ಗೆ ಬಂದಿದೆ ಅತ್ಯಂತ ಅಪಾಯಕಾರಿ ವೈರಸ್..! ಈ ಬಗ್ಗೆ ಗೂಗಲ್ ಏನೇಳುತ್ತೆ..?
- 11 hrs ago
ಏರ್ಟೆಲ್, ಜಿಯೋದಿಂದ ಮುಂದುವರೆದ ಸ್ಪರ್ಧೆ..! ರಿಟೇಲ್ ವ್ಯಾಪಾರಿಗಳಿಗೆ ಬಂಪರ್..!
- 12 hrs ago
ವಾಟ್ಸಪ್ ಸ್ಟೇಟಸ್ಗಳನ್ನು ಸುಲಭವಾಗಿ ಸೇವ್ ಮಾಡುವುದು ಹೇಗೆ ಗೊತ್ತಾ?
- 13 hrs ago
ಐಫೋನ್ 11 ಪ್ರೊ ಅರ್ಡರ್ ಮಾಡಿದ್ದ ಬೆಂಗಳೂರು ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ?
Don't Miss
- News
ಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್ಗೆ ಐತಿಹಾಸಿಕ ಬಹುಮತ
- Sports
ಐಎಸ್ಎಲ್ 2019: ಕೊಚ್ಚಿಯಲ್ಲಿ ಕೇರಳ ಗೆದ್ದಿಲ್ಲ, ಜೆಮ್ಶೆಡ್ಪುರ ಸೋತಿಲ್ಲ
- Movies
ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
- Automobiles
ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್ಯುವಿ ಬಿಡುಗಡೆ
- Lifestyle
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
ಮಂಗಳನ ಅಂಗಳಕ್ಕೆ ನಿಮ್ಮ ಹೆಸರೂ ಹೋಗಬೇಕಾ? ಹಾಗಾದ್ರೆ ಹೀಗೆ ಮಾಡಿ!
ಮುಂದಿನ ವರ್ಷ ನಾಸಾ ಮತ್ತೊಂದು ರೋವರ್ ನ್ನು ಮಂಗಳನ ಅಂಗಳಕ್ಕೆ ಕಳುಹಿಸಿಕೊಡುತ್ತಿದೆ. ಆದರೆ ಸದ್ಯಕ್ಕೆ ಕಾಲ್ಪನಿಕವಲ್ಲದ ರೀತಿಯಲ್ಲಿ ಅದಕ್ಕೆ ಮಾರ್ಸ್ 2020 ಎಂದು ಹೆಸರಿಸಲಾಗಿದೆ.ಇದರಲ್ಲಿ ನಿಮ್ಮ ಹೆಸರನ್ನೂ ಕೂಡ ಮಂಗಳ ಗ್ರಹಕ್ಕೆ ಕಳುಹಿಸಿಕೊಡುವುದಕ್ಕೆ ನಾಸಾ ಅವಕಾಶ ನೀಡುತ್ತಿದೆ.

ಮನುಷ್ಯನ ಹೆಜ್ಜೆ ಗುರುತು ಮಂಗಳ ನ ಅಂಗಳದಲ್ಲಿ ಊರುವುದಕ್ಕೆ ಇನ್ನು ಕೆಲವು ವರ್ಷಗಳು ಬೇಕಾಗಬಹುದು ಎಂಬುದೇನೋ ನಿಜವೇ . ಆದರೆ ನಮ್ಮ ನೆರೆಹೊರೆ ಗ್ರಹ ಎನ್ನಿಸಿಕೊಂಡಿರುವ ಮಂಗಳನಲ್ಲಿಗೆ ನಿಮ್ಮ ಹೆಸರನ್ನು ಕೂಡ ಕಳುಹಿಸಿಕೊಡುವುದಕ್ಕೆ ನಾಸಾ ಅವಕಾಶ ಕಲ್ಪಿಸಿಕೊಡುತ್ತದೆ.ರೋವರ್ ಜನರ ಹೆಸರಿರುವ ಕೊರೆಯಚ್ಚು ಚಿಪ್(ಸ್ಟೆನ್ಸಿಲ್ಡ್ ಚಿಪ್)ನ್ನು ಮಂಗಳನಲ್ಲಿಗೆ ಹೊತ್ತೊಯ್ಯುತ್ತದೆ(852,409 ಸಂಖ್ಯೆಯ ಜನರ ಹೆಸರು)

ಮಾರ್ಸ್ 2020 ಮಾಡುವುದಾದರೂ ಏನು?
ಮಾರ್ಸ್ 2020 ಈ ಹಿಂದಿನ ಅಧ್ಯಯನಗಳಂತೆಯೇ ಮಂಗಳನಲ್ಲಿನ ಸೂಕ್ಷ್ಮಜೀವಿಗಳ ಜೀವನದ ಬಗ್ಗೆ ಅಧ್ಯಯನ ಮಾಡುತ್ತದೆ.ಗ್ರಹದ ಹವಾಮಾನ,ಭೂವಿಜ್ಞಾನ ಇತ್ಯಾದಿಗಳ ಅಧ್ಯಯನ ಕೈಗೊಳ್ಳುತ್ತದೆ.ಭೂಮಿಗೆ ಮರಳುವಾಗ ಮಂಗಳನ ಮಾದರಿಯನ್ನು ಕೂಡ ಸಂಗ್ರಹಿಸುತ್ತದೆ ಎಂದು ನಾಸಾ ತಿಳಿಸಿದೆ.

ಜಗತ್ತಿನ ಯಾವುದೇ ಮೂಲೆಯ ಅಭ್ಯರ್ಥಿಗೂ ಕೂಡ ಅವಕಾಶ:
ಯಾವ ವ್ಯಕ್ತಿಗಳು ರಿಜಿಸ್ಟ್ರೇಷನ್ ಮಾಡಿಕೊಳ್ಳುತ್ತಾರೋ ಅವರಿಗೆ ಒಂದು ಬೋರ್ಡಿಂಗ್ ಪಾಸ್ ನ್ನು ನೀಡಲಾಗುತ್ತದೆ. ಹೆಚ್ಚುತ್ತಿರುವ ಲಿಸ್ಟ್ ಗೆ ಜಗತ್ತಿನ ಯಾವುದೇ ಮೂಲೆಯ ಜನರು ಕೂಡ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು ಮತ್ತು ಮಂಗಳನ ಅಂಗಳದ ಸ್ಮಾರಕ ಪಾಸ್ ನ್ನು ತೆಗೆದುಕೊಳ್ಳಬಹುದು. ಸದ್ಯಕ್ಕೆ ನಾಸಾ ಎಷ್ಟು ಮಂದಿಯ ಹೆಸರನ್ನು ಕಳುಹಿಸಬೇಕು ಎಂಬ ಬಗ್ಗೆ ಯಾವುದೇ ಸಂಖ್ಯೆಯನ್ನು ನಿರ್ಧರಿಸಿಲ್ಲ.

ನಿಮ್ಮ ಹೆಸರು ಎಷ್ಟು ಸಣ್ಣದಾಗಿರುತ್ತೆ ಗೊತ್ತಾ?
ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿನ ಮೈಕ್ರೊ ಡಿವೈಸಸ್ ಲ್ಯಾಬೊರೇಟರಿ ಎಲೆಕ್ಟ್ರಾನ್ ಕಿರಣವನ್ನು ಬಳಸಿ ಹೆಸರುಗಳನ್ನು ಸಿಲಿಕಾನ್ ಚಿಪ್ನಲ್ಲಿ ಕೊರೆಯುತ್ತದೆ. ಅದರ ಗೆರೆಗಳು ಮನುಷ್ಯನ ಕೂದಲಿನ ಒಂದು ಎಳೆಗಿಂತಲೂ ಒಂದು ಸಾವಿರ ಅಗಲಕ್ಕಿಂತ ಕಡಿಮೆಯದ್ದಾಗಿರುತ್ತದೆ ಅಂದರೆ 75 ನ್ಯಾನೋಮೀಟರ್ ನಷ್ಟು ಸಣ್ಣದಿರುತ್ತದೆ. ಆ ಗಾತ್ರದಲ್ಲಿ ಒಂದು ರುಪಾಯಿ ಕಾಯಿನ್ ನಷ್ಟು ಅಗಲದ ಜಾಗದಲ್ಲಿ ಮಿಲಿಯನ್ ಗೂ ಅಧಿಕ ಹೆಸರನ್ನು ಒಂದೇ ಚಿಪ್ ನಲ್ಲಿ ಬರೆಯುವುದಕ್ಕೆ ಸಾಧ್ಯವಾಗುತ್ತದೆ.ಗ್ಲಾಸ್ ಕವರ್ ನ ಅಡಿಯಲ್ಲಿ ಈ ಚಿಪ್ ನ್ನು ರೋವರ್ ಮೂಲಕ ಮಂಗಳನಲ್ಲಿಗೆ ಕಳುಹಿಸಿಕೊಡಲಾಗುತ್ತದೆ.

ಹೆಸರು ನೊಂದಾಯಿಸುವಿಕೆ ಇದೇ ಮೊದಲೇನಲ್ಲ!
ನಾಸಾದ ಮಿಷನ್ ನಲ್ಲಿ ಜನರು ತಮ್ಮ ಹೆಸರನ್ನು ನೊಂದಾಯಿಸುವುದಕ್ಕೆ ಅವಕಾಶ ಕಲ್ಪಿಸಿಕೊಡುತ್ತಿರುವುದು ಇದೇ ಮೊದಲೇನಲ್ಲ. 2018 ರಲ್ಲಿ ಬಿಡುಗಡೆಯಾಗಿದ್ದ ನಾಸಾದ ಇನ್ಸೈಟ್ ರೋವರ್ ನಲ್ಲೂ ಕೂಡ ಜನರು ತಮ್ಮ ಹೆಸರನ್ನು ನೊಂದಾಯಿಸುವುದಕ್ಕೆ ನಾಸಾ ಅವಕಾಶ ಮಾಡಿಕೊಟ್ಟಿತ್ತು ಮತ್ತು 2014 ರ ಮೊದಲ ಓರಿಯನ್ಸ್ ಟೆಸ್ಟ್ ಸ್ಪೇಸ್ ಫ್ಲೈಟ್ ನಲ್ಲೂ ಕೂಡ ಅವಕಾಶವಿತ್ತು.

ಹೆಸರು ನೊಂದಾಯಿಸಲು ಕೊನೆಯ ದಿನಾಂಕ?
ಮಾರ್ಸ್ 2020 ಮಂಗಳನ ಸುತ್ತಮುತ್ತಲಿನ ಪ್ರದೇಶದ ಅಧ್ಯಯನವನ್ನು ಕೈಗೊಳ್ಳಲಿದೆ.ನೀವಿಲ್ಲಿ ನಿಮ್ಮ ಹೆಸರನ್ನು ನೊಂದಾಯಿಸಬಹುದು. ಸೆಪ್ಟೆಂಬರ್ 30,2019 ರಿಜಿಸ್ಟ್ರೇಷನ್ ಮಾಡುವುದಕ್ಕೆ ಕೊನೆಯ ದಿನಾಂಕವಾಗಿರುತ್ತದೆ.
ಮಾರ್ಸ್ 2020 ರೋವರ್ ಗೆ ನಿಮ್ಮ ಹೆಸರನ್ನು ನೊಂದಾಯಿಸುವುದು ಹೇಗೆ?
ಹಂತ 1: ಸೈಟ್ ಗೆ ತೆರಳಿ ಮತ್ತು ನಿಮ್ಮ ಮೊದಲ ಮತ್ತು ಕೊನೆಯ ಹೆಸರನ್ನು ಟೈಪ್ ಮಾಡಿ.
ಹಂತ 2: ನೀಡಲಾಗಿರುವ ಪಟ್ಟಿಯಲ್ಲಿ ನಿಮ್ಮ ದೇಶವನ್ನು ನೋಡಿ
ಹಂತ 3: ನಿಮ್ಮ ಪೋಸ್ಟಲ್ ಕೋಡ್ ನ್ನು ಟೈಪ್ ಮಾಡಿ.
ಹಂತ 4: ನಿಮ್ಮ ಇಮೇಲ್ ಐಡಿಯನ್ನು ಟೈಪ್ ಮಾಡಿ.
ಹಂತ 5: 'Send my name to Mars' ನ್ನು ಕ್ಲಿಕ್ಕಿಸಿ.
ಇಷ್ಟು ಮಾಡಿದರೆ ಮುಗಿಯಿತು! ನಿಮ್ಮ ಬೋರ್ಡಿಂಗ್ ಪಾಸ್ ಇರುವ ಪೇಜ್ ಗೆ ನಿಮ್ಮನ್ನು ಕೊಂಡೊಯ್ಯಲಾಗುತ್ತದೆ ಮತ್ತು ನೀವದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು, ಪ್ರಿಂಟ್ ಮಾಡಬಹುದು ಅಥವಾ ಎಂಬೆಡ್ ಮಾಡುವುದಕ್ಕೂ ಕೂಡ ಅವಕಾಶವಿರುತ್ತದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790