ಡ್ರೋನ್ ತಯಾರಿಸಿ ಸುದ್ದಿಯಾದ ಪ್ರತಾಪ್ ಇಷ್ಟು ದಿನ ಹೇಳಿದ್ದೆಲ್ಲಾ ಸುಳ್ಳಾ?

|

ಡ್ರೋನ್‌ ಎಂದ ಕೂಡಲೇ ತಕ್ಷಣಕ್ಕೆ ಬಹುತೇಕರಿಗೆ ಮಂಡ್ಯದ ಯುವಕ ಪ್ರತಾಪ್ ಕಣ್ಣಮುಂದೆಯೇ ಕಾಣಿಸಿಕೊಳ್ಳುತ್ತಾನೆ. ಮಂಡ್ಯದ ಡ್ರೋನ್ ಪ್ರತಾಪ್ ಇ-ವೇಸ್ಟ್ ನಿಂದ ಡ್ರೋನ್ ತಯಾರಿಸಿದ್ದಾನೆ. ವಿದೇಶಗಳಲ್ಲಿ ಕೆಲಸದ ಅವಕಾಶಗಳು ಬಂದರೂ ದೇಶ ಬಿಟ್ಟು ಹೋಗಿಲ್ಲ. ಸೋಶಿಯಲ್‌ ಮೀಡಿಯಾಗಳಲ್ಲಿ ಯುವ ವಿಜ್ಞಾನಿ ಹೀಗೆ ನಾನಾ ರೀತಿಯಲ್ಲಿ ಹೆಸರುವಾಸಿಯಾಗಿರುವ ಡ್ರೋನ್ ಪ್ರತಾಪ್ ಅಸಲಿಗೆ ಡ್ರೋನ್ ತಯಾರಿಸಿಯೇ ಇಲ್ಲ. ಅವನು ಹೇಳಿರುವುದೆಲ್ಲ ಸುಳ್ಳ ಕಥೆ ಎಂದು OPIndia Fact check ವರದಿ ನಿಜ ಬಯಲು ಮಾಡಿದೆ.

ಪ್ರತಾಪ್

ಹೌದು, ಡ್ರೋನ್ ಪ್ರತಾಪ್ ಇ-ವೆಸ್ಟ್‌ನಿಂದ ಆತ 600 ಡ್ರೋನ್ ಗಳನ್ನು ತಯಾರಿಸಿಯೇ ಇಲ್ಲ‌. ಹಾಗೆಯೇ ಮಿಕ್ಸಿಯಲ್ಲಿನ ಮೋಟಾರ್ ನಿಂದ ಡ್ರೋನ್ ತಯಾರಿಸಲು ಸಾಧ್ಯವೇ ಇಲ್ಲ. 87 ದೇಶಗಳು ಆತನಿಗೆ ಕೆಲಸದ ಆಫರ್ ಕೊಟ್ಟಿವೆ ಎಂಬ ಸಂಗತಿಯು ಹಸಿ ಸುಳ್ಳು. ಆತನ ಬಳಿ ಡ್ರೋನ್ ತಯಾರಿಸಿದ ಫೋಟೊ, ವಿಡಿಯೊಗಳು ಸಹ ಇಲ್ಲ ಎಂಬ ಮಾಹಿತಿಯನ್ನು OPIndia ವರದಿ ಮಾಡಿದೆ.

ರೋಬೋಟ್

2017 ರಲ್ಲಿ ಜಪಾನ್ ನಲ್ಲಿ ನಡೆದ ಅಂತರಾಷ್ಟ್ರೀಯ ರೋಬೋಟ್ ಎಕ್ಸಿಬ್ಯೂಷನ್ ನಲ್ಲಿ ಆತ ಪಾಲ್ಗೊಂಡಿದ್ದ. ಅಲ್ಲಿ ಜಪಾನ ಕಂಪನಿಯಾದ ACSL ತಯಾರಿಸಿದ ಡ್ರೋನ್‌ಗಳ ಬಳಿ ನಿಂತು ಫೋಟೊ ತೆಗೆಸಿಕೊಂಡಿದ್ದ ಅಷ್ಟೇ. ಅಸಲಿಗೆ ಆ ಡ್ರೋನ್ ಅವನು ತಯಾರಿಸಿದ್ದಲ್ಲ, ಅವನೊಂದಿಗೆ ಫೋಟೊಗಳಲ್ಲಿ ಕಾಣಿಸುವ ಡ್ರೋನ್ ಸರಿಯಾಗಿ ಸಗಮನಿಸಿದಾಗ ಡ್ರೋನ್ ಮೇಲೆ ACSL ಕಂಪನಿಯ ಸ್ಟಿಕ್ಕರ್ ಕಾಣಿಸುತ್ತದೆ. ಹಾಗೆಯೇ ACSL ಹೆಸರಿನ ಟಿ-ಶರ್ಟ್ ಧರಿಸಿರುವ ಕಂಪನಿಯ ವ್ಯಕ್ತಿಗಳು ಕಾಣಿಸುತ್ತಾರೆ.

ವಿಡಿಯೊ ಮತ್ತು ಫೋಟೊ

ಡ್ರೋನ್ ತಯಾರಿಸಿದ್ದಕ್ಕಾಗಿ ಹಲವು ಮೆಡಲ್ ಗಳನ್ನು ಪಡೆದಿರುವುದಾಗಿ ಆತ ಹೇಳಿರುವುದರಲ್ಲಿಯೂ ಸತ್ಯಾಂಶ ಇಲ್ಲ ಎನ್ನಲಾಗಿದೆ. ಮೆಡಲ್ ಪಡೆಯುತ್ತಿರುವ ವಿಡಿಯೊ ಮತ್ತು ಫೋಟೊಗಳು ಕೂಡಾ ಇಲ್ಲ. ಇನ್ನು 2019 ರಲ್ಲಿ‌ ಕರ್ನಾಟಕದಲ್ಲಿ ಪ್ರವಾಹವಾದಾಗ ಪ್ರಾತಾಪ್‌ ತಯಾರಿಸಿದ ಡ್ರೋನ್ ಬಳಸಿ ಅಗತ್ಯ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ನೀಡಲಾಗಿದೆ ಎಂದು ಸುದ್ದಿಯಾಗಿತ್ತು. ಆದರೆ ಇದನ್ನು ಪರಿಶೀಲಿಸಿದಾಗ ತಿಳಿದ ಸಂಗತಿಯೆಂದರೇ ಪ್ರತಾಪ್ ಹಿಡಿದಿರುವ ರಿಮೋಟ್ ಕಂಟ್ರೋಲರ್ ಆತ ತಯಾರಿಸಿದ್ದೇ ಅಲ್ಲ ಮತ್ತು ಇ-ವೇಸ್ಟ್‌ನಿಂದ ಅದನ್ನು ತಯಾರಿಸಲು ಸಾಧ್ಯವೇ ಇಲ್ಲ.

600 ಡ್ರೋನ್

ಮಿಕ್ಸಿ ಹಾಗೂ ಟಿವಿಯ ಕೆಲವು ಬಿಡಿ ಭಾಗಗಳನ್ನು ಬಳಸಿಕೊಂಡು 600 ಡ್ರೋನ್ ಗಳನ್ನು ತಯಾರು ಮಾಡಿದ್ದೇನೆ ಎಂದಿರುವುದರಲ್ಲಿಯೂ ನಿಜಾಂಶ ಇಲ್ಲ ಎನ್ನಲಾಗಿದೆ. ಮಿಕ್ಸಿಯಲ್ಲಿ ಬಳಸುವುದು 500 ರಿಂದ 600 ವ್ಯಾಟ್ ನ ಎಸಿ ಮೋಟಾರ್. ಆದರೆ ಡ್ರೋನ್ ಗಳಲ್ಲಿ ಬಳಸುವುದು ಅತಿ ಕಡಿಮೆ ಪವರ್ ಕನ್ಸಪ್ ಮಾಡುವ ಸಣ್ಣ ಡಿಸಿ ಮೋಟಾರ್ ಅಷ್ಟೇ. ಅದಾಗ್ಯೂ ಇ-ವೆಸ್ಟ್‌ನಿಂದ ಡ್ರೋನ್ ತಯಾರಿಸಿದ್ದರೆ ಅದಕ್ಕೆ ಫೋಟೋ ಅಥವಾ ವೀಡಿಯೋ ಸಾಕ್ಷಿಯಾಗಲಿ ಯಾವುದೂ ಇಲ್ಲ.

ಇಂಜಿನಿಯರ್ಸ್

ಡ್ರೋನ್ ತಯಾರಿಸುವ ಇಂಜಿನಿಯರ್ಸ್ ಗಳು ಹೇಳುವಂತೆ ಒಂದು ಡ್ರೋನ್ ಸಿದ್ಧವಾಗಲು ಅದರ ಹಿಂದೆ ತಿಂಗಳುಗಳ ಶ್ರಮ ಇರುತ್ತದೆ. ವಾರಕ್ಕೆ ಒಂದು ಡ್ರೋನ್ ನಂತೆ ಲೆಕ್ಕಾಚಾರ ಮಾಡಿದರೂ 600 ಡ್ರೋನ್ ರೆಡಿಯಾಗಲು ಸುಮಾರು 10 ವರ್ಷ ಬೇಕಾಗುತ್ತದೆ ಎಂದಿದ್ದಾರೆ. ಹೀಗಾಗಿ ಡ್ರೋನ್ ಪ್ರತಾಪ್ ಸಾಧನೆಯ ಕಥೆ ನಿಜವಲ್ಲ ಎನ್ನುತ್ತಿದೆ OPIndia ವರದಿ. ಆದರೆ ಡ್ರೋನ್ ಪ್ರತಾಪ್‌ ಸಾಕ್ಷಿ ಸಮೇತ ಉತ್ತರ ಕೊಟ್ಟ ನಂತರವೇ ತಿಳಿಯಲಿದೆ ಯಾವುದು ನಿಜ, ಯಾವುದು ಸುಳ್ಳು.

Most Read Articles
Best Mobiles in India

English summary
While 'drone boy' Prathap NM has claimed to have made 600 drones using e-waste, not a single photo or video of them exist, and all photographs show him with commercially produced drones from various companies.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more