ಸಿಲಿಕಾನ್‌ ವ್ಯಾಲಿಯಲ್ಲಿ ಭಾರತದ ಪ್ರಬಲ ಟೆಕ್‌ ತಜ್ಞರು

By Suneel
|

ಸಿಲಿಕಾನ್‌ ವ್ಯಾಲಿ ಅಂದ್ರೆ ಬಹುಸಂಖ್ಯಾತರಿಗೆ ಬಹುಶಃ " ಅಯ್ಯೋ ಅದಾ ಮೊನ್ನೆ ಮೊನ್ನೆ ತಾನೆ ನಮ್‌ ನರೇಂದ್ರ ಮೋದಿಯವರು ಹೋಗಿ ಬಂದ್ರಲಾ ಅದು ತಾನೆ" ಅಂತಾರೆ. ಆದ್ರೆ ಸಿಲಿಕಾನ್‌ ವ್ಯಾಲಿ ನೂರಾರು ಟೆಕ್‌ ಸಂಸ್ಥೆಗಳಿಗೆ ತಾಯಿನಾಡು. ಅಲ್ಲದೇ ಗ್ಲೋಬಲ್‌ ಟೆಕ್ನಾಲಜಿ ಕಂಪನಿಗಳಿಗೂ ಸಹ. ಗೂಗಲ್‌, ಆಪಲ್‌, ಫೇಸ್‌ಬುಕ್ ನಂತಹ ಹಲವು ಪ್ರಮುಖ ಟೆಕ್‌ ಕಂಪನಿಗಳಿಗೆ ತಾಯಿ ಮನೆ. ದಕ್ಷಿಣ ಸ್ಯಾನ್‌ಫ್ರಾನ್ಸಿಸ್ಕೋದ ಕೊಲ್ಲಿ ಪ್ರದೇಶದಲ್ಲಿರುವ, ಕೇಳಲು ಇಂಪಾಗಿರುವ ಸಿಲಿಕಾನ್‌ ವ್ಯಾಲಿಯಲ್ಲಿ ಭಾರತದ ಪ್ರಬಲ ಹಲವು ಟೆಕ್‌ ತಂತ್ರಜ್ಞರು ಇದ್ದಾರೆ.

ಓದಿರಿ: ಆನ್‌ಲೈನ್‌ನಿಂದ ಹಣ ಸಂಪಾದಿಸಲು 10 ಸರಳ ವಿಧಾನಗಳು

ಹೆಚ್ಚು ಕಡಿಮೆ ಅಮೇರಿಕದ ದೊಡ್ಡ ದೊಡ್ಡ ಟೆಕ್ನಾಲಜಿ ಕಂಪನಿಗಳು ಭಾರತದ ಟೆಕ್‌ ಹಿರೋಗಳನ್ನು ಒಳಗೊಂಡಿವೆ. ಅಲ್ಲದೇ ಯುಎಸ್‌ಬಿ ಮತ್ತು ಟೆಕ್ನಾಲಜಿ ಬ್ಲಾಗಿಂಗ್‌ ಪಿತಾಮಹರನ್ನು ಒಳಗೊಡಂತೆ ಭಾರತೀಯ ತಂತ್ರಜ್ಞರನ್ನು ಪ್ರಬಲ ಟೆಕ್‌ ಕಂಪನಿಗಳು ಹೊಂದಿವೆ. ಹಾಗಾದರೆ ಭಾರತದ ಹಿರಿಮೆಯನ್ನು ಎತ್ತಿ ಹಿಡಿದ ಭಾರತದ ಹೆಮ್ಮೆಯ ಪ್ರಜೆಗಳು ಯಾರು ಎಂಬುದನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ ಅಲ್ವೇ. ಹಾಗಾದರೆ ಸಿಲಿಕಾನ್‌ ವ್ಯಾಲಿಯಲ್ಲಿ ಇರುವ ಆ ಪ್ರಬಲ ಟೆಕ್‌ ತಂತ್ರಜ್ಞರು ಯಾರೂ ಎಂಬುದನ್ನು ಲೇಖನ ಓದಿ ತಿಳಿಯಿರಿ..

 ಅಜಯ್‌ ಭಟ್‌

ಅಜಯ್‌ ಭಟ್‌

ಹೆಚ್ಚು ಜನರಿಗೆ ಹೆಸರೆ ತಿಳಿಯದ ಭಾರತದ ಟೆಕ್‌ ಹಿರೋ ಅಜಯ್‌ ಭಟ್‌. ಇವರು ಭಾರತೀಯ ಅಮೇರಿಕದ ಕಂಪ್ಯೂಟರ್‌ ವಾಸ್ತುಶಿಲ್ಪಿ. ಇವರು USB ಪಿತಾಮಹ. ಇವರು ಭಾರತದ ಬರೋಡಾದಲ್ಲಿನ ಮಹಾರಾಜ ಸಯಾಜಿರಾವ್‌ ವಿಶ್ವವಿದ್ಯಾನಿಲಯದಲ್ಲಿ ಪದವಿಪಡೆದರು. ನಂತರದಲ್ಲಿ ನ್ಯೂಯಾರ್ಕ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರದಲ್ಲಿ ಇಂಟೆಲ್‌ ಕಂಪನಿಗೆ ಉದ್ಯೋಗಕ್ಕೆ 1990ರಲ್ಲಿ ಸೇರಿದರು.

 ವಿನೋದ್ ಧಾಮ್

ವಿನೋದ್ ಧಾಮ್

ಪ್ರಸಿದ್ಧ ಇಂಟೆಲ್‌ ಪೆಂಟಿಯಮ್‌ ಪ್ರೊಸೆಸರ್ಸ್‌ನ ಪಿತಾಮಹ ವಿನೋದ್‌ ಧಾಮ್‌ ಇವರು ಮೂಲತಃ ಭಾರತದ 'ಪುಣೆ'ಯವರು.

ವಿನೋದ್ ಖೋಸ್ಲಾ

ವಿನೋದ್ ಖೋಸ್ಲಾ

1955 ರಲ್ಲಿ ದೆಹಲಿಯಲ್ಲಿ ವಿನೋದ್ ಖೋಸ್ಲಾ ರವರು ಜನಿಸಿದರು. ಇವರು ಇಂದು ಭಾರತೀಯ ಮೂಲದ ಅಮೇರಿಕನ್‌ ಬಿಲೇನಿಯರ್‌ ಆಗಿದ್ದಾರೆ. ಇವರು ಸನ್‌ ಮೈಕ್ರೋಸಿಸ್ಟಮ್‌ನ ಸಹ-ಸಂಸ್ಥಾಪಕರು.

ಸುಂದರ್‌ ಪಿಚೈ

ಸುಂದರ್‌ ಪಿಚೈ

ತಮಿಳುನಾಡಿನ ಚೆನ್ನೈ ಮೂಲದ ಸುಂದರ್‌ ಪಿಚೈ ಇಂದು ಅಮೇರಿಕನ್‌ ಆಗಿದ್ದಾರೆ. ಪ್ರಸ್ತುತದಲ್ಲಿ ಗೂಗಲ್‌ನ ಮುಖ್ಯ ಕಾರ್ಯನಿರ್ವಾಹಕರಾಗಿದ್ದಾರೆ.

ಸಬೀರ್‌ ಭಟಿಯಾ

ಸಬೀರ್‌ ಭಟಿಯಾ

1980ರಲ್ಲಿ ಅಮೇರಿಕಕ್ಕೆ ತೆರಳಿದ "ಸಬೀರ್‌ ಭಟಿಯಾ ರವರು ಮೂಲತಃ ಚಂಡೀಘಢದವರು. ಅವರು ವೆಬ್‌ ಮೇಲ್‌ Hotmail.com ಸಂಸ್ಥಾಪಕರು.

 ವಿಕ್‌ ಗುಂಡೊತ್ರ (Vic Gundotra)

ವಿಕ್‌ ಗುಂಡೊತ್ರ (Vic Gundotra)

ಗೂಗಲ್‌ನ ಇನ್ನೊಬ್ಬ ಉನ್ನತ ಪ್ರೊಫೈಲ್‌ನ ಇಂಜಿನಿಯರ್ ಭಾರತದ 'ವಿಕ್‌ ಗುಂಡೊತ್ರ' ರವರು. ಇವರು ಗೂಗಲ್‌ ನ tsar ಮತ್ತು ಗೂಗಲ್‌ ಪ್ಲಸ್‌ ಸಾಮಾಜಿಕ ನೆಟ್‌ವರ್ಕ್‌ನಿಂದ ಪ್ರಖ್ಯಾತರಾಗಿದ್ದಾರೆ. ಇವರು ಮೂಲತಃ ಮುಂಬೈ.

ಅಮಿತ್‌ ಸಿಂಘಾಲ್‌

ಅಮಿತ್‌ ಸಿಂಘಾಲ್‌

ಅಮಿತ್‌ ಸಿಂಘಾಲ್‌ ಗೂಗಲ್‌ ಉನ್ನತ ಪ್ರೊಫೈಲ್‌ನ ಹಿರಿಯ ನಿರ್ವಹಣಾಧಿಕಾರಿ. ಇವರು 1968 ರಲ್ಲಿ ಝಾನ್ಸಿಯಲ್ಲಿ ಜನಿಸಿದರು.

ರುಚಿ ಸಾಂಘ್ವಿ

ರುಚಿ ಸಾಂಘ್ವಿ

ರುಚಿ ಸಾಂಘ್ವಿಯವರು ಅಮೇರಿಕದ ದೊಡ್ಡ ಕಂಪನಿಯ ಭಾರತೀಯ ಸಾಫ್ಟ್‌ವೇರ್‌ ತಂತ್ರಜ್ಞೆ. 1982 ರಲ್ಲಿ ಪುಣೆಯಲ್ಲಿ ಜನಿಸಿದರು. ರುಚಿ ಸಾಂಘ್ವಿಯವರು ಫೇಸ್‌ಬುಕ್‌ನ ಮೊದಲ ಮಹಿಳಾ ಇಂಜಿನಿಯರ್‌ ಆಗಿ 2005 ರಲ್ಲಿ ಸೇರ್ಪಡೆಗೊಂಡರು.

ಪದ್ಮಶ್ರೀ ವಾರಿಯರ್‌

ಪದ್ಮಶ್ರೀ ವಾರಿಯರ್‌

ಪದ್ಮಶ್ರೀ ವಾರಿಯರ್ ಭಾರತದ ವಿಜಯವಾಡದವರು. ಇವರು ಅಮೇರಿಕದ ಇಲೆಕ್ಟ್ರಾನಿಕ್‌ ವಾಹನ ಕಂಪನಿ 'NextEV' ಸಿಇಓ. ಇವರನ್ನು "Queen of the Electric Car Biz" ಎಂದು Fortune ನಿಯತಕಾಲಿಕೆಯವರು ಕರೆದಿದ್ದಾರೆ.

ಶಂತನು ನಾರಾಯಣ್

ಶಂತನು ನಾರಾಯಣ್

ಶಂತನು ನಾರಾಯಣ್ ರವರು ಭಾರತೀಯ ಅಮೇರಿಕನ್‌ ಬ್ಯುಸಿನೆಸ್‌ ಕಾರ್ಯನಿರ್ವಹಕ ಮತ್ತು ಅಡೋಬ್‌ ಸಿಸ್ಟಮ್‌ ಕಂಪನಿಯ ಸಿಇಓ. ಇವರು ಮೂಲತಃ ಹೈದಾರಾಬಾದ್‌ನವರು.

ಓಂ ಮಲ್ಲಿಕ್‌

ಓಂ ಮಲ್ಲಿಕ್‌

ಓಂ ಮಲ್ಲಿಕ್‌ ದೆಹಲಿಯಲ್ಲಿ 1966 ರಲ್ಲಿ ಜನಿಸಿದರು. ಭಾರತೀಯ ಮೂಲದ ಅಮೇರಿಕನ್‌ ವೆಬ್‌ ಮತ್ತು ಟೆಕ್ನಾಲಜಿ ಬರಹಗಾರರು. ಟೆಕ್ನಾಲಜಿ ನ್ಯೂಸ್‌ ಬ್ಲಾಗ್‌ನ ಪಿತಾಮಹರು ಹೌದು. GigaOM ನ ಸಂಸ್ಥಾಪಕರು ಮತ್ತು ಹಿರಿಯ ಪ್ರಖ್ಯಾತ ಬರಹಗಾರರು.

Most Read Articles
Best Mobiles in India

English summary
The most powerful Indian technologists in Silicon Valley. Know to those technologist read in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more