ಭಾರತದಲ್ಲಿ ಬಿಡುಗಡೆಗೊಂಡಿದೆ ಮೋಟೋ ಜಿ6 ಮತ್ತು ಜಿ6 ಪ್ಲೇ ಮೊಬೈಲ್ ಗಳು..

By GizBot Bureau
|

ಮೋಟೋ ಕಂಪೆನಿಯ ಬಹುನಿರೀಕ್ಷಿತ ಮೋಟೋ ಜಿ ಸೀರೀಸ್ ಮತ್ತೆರಡು ಮೊಬೈಲ್ ಗಳು ಇಂದು ಭಾರತೀಯ ಮಾರುಕಟ್ಟೆಗೆ ದರ್ಶನವಾಗಲಿದೆ. ಹೌದು, ಎಪ್ರಿಲ್ ನಲ್ಲಿ ಬ್ರೆಝಿಲ್ ನಲ್ಲಿ ಬಿಡುಗಡೆಗೊಂಡ ನಂತರ ಕೈಗೆಟುಕುವ ಬೆಲೆಯ ಮೊಟೋರೋಲಾ ಮೊಬೈಲ್ ಗಳಾದ ಮೊಟೋ ಜಿ6 ಮತ್ತು ಜಿ6 ಪ್ಲೇ ಮೊಬೈಲ್ ಗಳು ಇವತ್ತು ಭಾರತದಲ್ಲಿ ಬಿಡುಗಡೆಗೊಳ್ಳುತ್ತಿದೆ. ಈ ಎರಡು ಮೊಬೈಲ್ ಗಳು ಈ ವರ್ಷದ ಮೊದಲ ಸೆಟ್ ಆಫ್ ಫೋನ್ ಗಳಾಗಿದ್ದು, ಹೊಸ ಡಿಸೈನ್ ಗಳು ಮತ್ತು ವೈಶಿಷ್ಟ್ಯಗಳನ್ನು ಹೊಂದಿ ಬಿಡುಗಡೆಗೊಳ್ಳುತ್ತಿದೆ. ಕಳೆದ ವರ್ಷ ಬಿಡುಗಡೆಗೊಂಡಿದ್ದ ಮೋಟೋ ಜಿ5 ಫೋಟೋಗಳಿಗಿಂತ ಇದರಲ್ಲಿ ಇನ್ನಷ್ಟು ವಿಶೇಷತೆಗಳಿವೆ.

ಭಾರತದಲ್ಲಿ ಬಿಡುಗಡೆಗೊಂಡಿದೆ ಮೋಟೋ ಜಿ6 ಮತ್ತು ಜಿ6 ಪ್ಲೇ ಮೊಬೈಲ್ ಗಳು..

2016 ರ ಮೋಟೋ ಜಿ4 ಗೆ ಕಂಬ್ಯಾಕ್ ಎಂಬಂತೆ ಮೋಟೋ ಜಿ6 ಪ್ಲೇ ಬರುತ್ತಿದೆ.. ಮೋಟೋ ಜಿ6 ನ ಅಂದಾಜು ಬೆಲೆ 15,000 ರುಪಾಯಿಯ ಒಳಗೆ ಮತ್ತು ಜಿ6 ಪ್ಲೇ ಬೆಲೆ 10,000 ರುಪಾಯಿಯ ಒಳಗೆ ಇರಬಹುದೆಂದು ಊಹಿಸಲಾಗಿದೆ

ಮೋಟೋ ಕಂಪೆನಿಯ ಹಿಂದಿನ ಎಲ್ಲಾ ಮೊಬೈಲ್ ಗಳಿಗೆ ಹೋಲಿಸಿದ್ರೆ ಮೋಟೋ ಜಿ6 ನ ಡಿಸೈನ್ ತುಂಬಾ ವಿಭಿನ್ನವಾಗಿದೆ. ಮೋಟೋ ಜಿ6, ಮೋಟೋ ಜಿ6 ಪ್ಲೇ,ಮತ್ತು ಮೋಟೋ ಜಿ6 ಪ್ಲಸ್ ಎಲ್ಲವೂ ಕೂಡ 18:9 ಡಿಸ್ಪ್ಲೇ ಅನುಪಾತವನ್ನು ಹೊಂದಿದ್ದು ಈಗಿನ ಇಂಡಸ್ಟ್ರಿ ಟ್ರೆಂಡ್ ಗೆ ಸರಿಸಮವಾಗಿದೆ. ಜೊತೆಗೆ ಮೋಟೋ ಜಿ6 ಮತ್ತು ಮೋಟೋ ಜಿ6 ಪ್ಲಸ್ ಗ್ಲಾಸ್ ಡಿಸೈನ್ ಹೊಂದಿದ್ದು ಮೋಟೋ ಎಕ್ಸ್4 ನಲ್ಲಿರುವಂತೆ 3ಡಿ ಗ್ಲಾಸ್ ನ್ನು ಹಿಂಭಾಗದಲ್ಲಿ ಹೊಂದಿದೆ. ಮೋಟೋ ಜಿ5 ನ ಮೆಟಲ್ ಡಿಸೈನ್ ಈಗ ಹಳತಾಗಿದೆ. ಬೆರಳಚ್ಚು ತಂತ್ರಜ್ಞಾನವನ್ನೂ ಇದು ಒಳಗೊಂಡಿದೆ. ಆದರೆ ಮೋಟೋ ಜಿ6 ಪ್ಲೇ ಗ್ಲಾಸ್ ಬ್ಲಾಕ್ ನ್ನು ಹೊಂದಿಲ್ಲ ಆದರೆ ಗ್ಲಾಸ್ ಕೋಟಿಂಗ್ ನ್ನು ಇದು ಒಳಗೊಂಡಿದೆ.

. ಮೋಟೋ ಜಿ6 ನ ವೈಶಿಷ್ಟ್ಯತೆಗಳ ವಿವರ

ಮೋಟೋ ಜಿ6 5.7-ಇಂಜಿನ ಫುಲ್ -HD+ Max Vision IPS ಡಿಸ್ಪ್ಲೇ ಹೊಂದಿದ್ದು 1.8GHz ಆಕ್ಟಾ-ಕೋರ್- Snapdragon 450 ನ್ನು ಒಳಗೊಂಡಿದೆ.. ಎರಡು ವೇರಿಯಂಟ್ ನಲ್ಲಿ ಈ ಫೋನ್ ನಿಮಗೆ ಲಭ್ಯವಾಗಲಿದೆ. 3ಜಿಬಿ + 32ಜಿಬಿ ಮತ್ತು 4ಜಿಬಿ+ 64ಜಿಬಿ ಇವೆರಡೂ ಕೂಡ ಭಾರತದಲ್ಲೂ ರೀಲೀಸ್ ಆಗುವ ನಿರೀಕ್ಷೆ ಹೊಂದಲಾಗಿದೆ. ಹಿಂಭಾಗದಲ್ಲಿ ಗುಂಡಾಗಿರುವ ಕ್ಯಾಮರಾ ಸೆಟ್ ಅಪ್ ಇದ್ದು, 12 ಮೆಗಾ ಪಿಕ್ಸಲ್ ನ ಡುಯಲ್ ಸೆನ್ಸರ್ ನ್ನು ಹೊಂದಿದೆ. ಸೆಕೆಂಡರಿ ಕ್ಯಾಮರಾ 5 ಮೆಗಾಪಿಕ್ಸಲ್ ಸೆನ್ಸರ್ ಸಾಮರ್ಥ್ಯ ಹೊಂದಿದ್ದು ಆಳದ ಸೆನ್ಸಿಂಗ್ ಸಾಮರ್ಥ್ಯವಿದೆ. ಮುಂಭಾಗದಲ್ಲಿ 8 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮರಾ ಮತ್ತು ಗ್ರೂಪ್ ಸೆಲ್ಫೀ ಮೋಡ್ ವಿಶೇಷತೆಯಿದೆ. 3,000mAh ಬ್ಯಾಟರಿ ಸಾಮರ್ಥ್ಯವಿರುವ ಇದು ಫಾಸ್ಟ್ ಆಗಿ ಚಾರ್ಜ್ ಆಗುತ್ತೆ ಮತ್ತು ಆಂಡ್ರಾಯ್ಡ್ 8.0 Oreo out-of-the-boxನಿಂದ ಇದು ರನ್ ಆಗಲಿದೆ.

.ಮೋಟೋ ಜಿ6 ಪ್ಲೇ ನ ವೈಶಿಷ್ಟ್ಯಗಳ ವಿವರ

ಮೋಟೋ ಜಿ6 ಪ್ಲೇ ಕೂಡ 18:9 ಅನುಪಾತದಲ್ಲಿ 5.7 ಇಂಚಿನ ಬೆಝೆಲ್ ಲೆಸ್ ಡಿಸ್ಲ್ಪೇ ಹೊಂದಿದೆ. ಇದು ಹೆಚ್.ಡಿ ರೆಸೋಲ್ಯೂಷನ್ ನಲ್ಲಿ ಬರಲಿದೆ. 1.4GHz quad-core Qualcomm Snapdragon 427 ಪ್ರೊಸೆಸರ್ ನ್ನು ಹೊಂದಿದೆ. ಇದು ಕೂಡ ಎರಡು ವೇರಿಯಂಟ್ ನಲ್ಲಿ ನಿಮಗೆ ಲಭ್ಯವಾಗಲಿದ್ದು 2ಜಿಬಿ+ 16ಜಿಬಿ ಮತ್ತು 3ಜಿಬಿ+ 32ಜಿಬಿ ನೀವು ಯಾವುದನ್ನು ಬೇಕಿದ್ದರೂ ಆಯ್ಕೆ ಮಾಡಿಕೊಳ್ಳಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಎರಡೂ ಬರಲಿದೆಯಾ ಎಂಬ ಬಗ್ಗೆ ಇನ್ನೂ ಖಾತ್ರಿಯಾಗಿಲ್ಲ ಬರಬಹುದು ಎಂಬ ನಿರೀಕ್ಷೆ ಇದೆ.

ವಿಜ್ಞಾನ ಕೂಡ ವಿವರಣೆ ನೀಡಲಾಗದ ಸಾಮಾನ್ಯ 10 ಪ್ರಶ್ನೆಗಳಿವು!!

ಮೋಟೋ ಜಿ6 ಪ್ಲೇ ಸಿಂಗಲ್ 13 ಮೆಗಾಪಿಕ್ಸಲ್ ಹಿಂಭಾಗದ ಕ್ಯಾಮರಾವು f/2.0 ದ್ಯುತಿರಂದ್ರವನ್ನು ಹೊಂದಿರುತ್ತದೆ. ಮುಂಭಾಗದ ಕ್ಯಾಮರಾದಲ್ಲಿ 8 ಮೆಗಾಪಿಕ್ಸಲ್ ಸೆನ್ಸರ್ ಸಾಮರ್ಥ್ಯವಿದ್ದು, ಆಂಡ್ರಾಯ್ಡ್ 8.0 Oreo ಸಾಫ್ಟ್ ವೇರ್ out-of-the-box ನಿಂದ ಇದು ರನ್ ಆಗಲಿದೆ. ತುಂಬಾ ಗಮನಿಸಬೇಕಾಗಿರುವ ಅಂಶವೇನೆಂದರೆ ಇದರ ಬ್ಯಾಟರಿ ಸಾಮರ್ಥ್ಯ ಬಹಳ ಅಧಿಕವಾಗಿದ್ದು 4,000mAh ಬ್ಯಾಟರಿಯನ್ನು ಹೊಂದಿದ್ದು ಸಿಕ್ಕಾಪಟ್ಟೆ ಫಾಸ್ಟ್ ಚಾರ್ಜ್ ಆಗಲಿದೆ.

How to Send Message to Multiple Contacts on WhatsApp - GIZBOT KANNADA

ಮೋಟೋ ಜಿ6 ಮತ್ತು ಜಿ6 ಪ್ಲೇ ನ ಭಾರತೀಯ ಮಾರುಕಟ್ಟೆಯ ದರ ಹೇಗಿರಬಹುದು?

ಮೋಟೋ ಜಿ6 ವಿದೇಶದಲ್ಲಿ $249 ಇದೆ. ಅದನ್ನು ಭಾರತೀಯ ಮಾರುಕಟ್ಟೆಗೆ ದರದಲ್ಲಿ ಹೇಳುವುದಾದರೆ 17,000 ರುಪಾಯಿ ಆಗಲಿದೆ. ಇನ್ನು ಜಿ6 ಪ್ಲೇ ವಿದೇಶದಲ್ಲಿ$199 ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಅಂದಾಜು 13,000 ಇರಬಹುದು. ಭಾರತೀಯ ಮಾರುಕಟ್ಟೆಯ ದರವನ್ನು ಇನ್ನಷ್ಟೇ ಅಧಿಕೃತವಾಗಿ ಕಂಪೆನಿ ತಿಳಿಸಬೇಕಾಗಿದ್ದು. ಇಂದು ಅದಕ್ಕೆ ತೆರೆ ಬೀಳುವ ಸಾಧ್ಯತೆ ಇದೆ. ಹೆಚ್ಚು ಕಡಿಮೆ ಇದೇ ದರ ನಿಗದಿಯಾಗಬಹುದೆಂದು ಹೇಳಲಾಗುತ್ತಿದೆ. ಆದರೆ ಕೆಲವರ ಅಭಿಪ್ರಾಯದಂತೆ ಜಿ6 ಪ್ಲೇ ಬೆಲೆ 10,000 ಒಳಗೆ ಇರಲಿದ್ದು ಜಿ6 ಬೆಲೆ 15,000 ಅಥವಾ ಅದಕ್ಕಿಂತ ಕಡಿಮೆ ಇರುವ ನಿರೀಕ್ಷೆ ಇದೆ.

Most Read Articles
Best Mobiles in India

English summary
The Moto G6 Play and the Moto G6 officially launched in India for a price of Rs 11,999 and Rs 13,999 respectively. These are the first set of Motorola smartphones to launch in India with a premium all glass design running on the stock Android Oreo OS.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more