ಆಪಲ್ ಈ 15 ಆಪ್ಸ್‌ಗಳಿಗೆ ಗೇಟ್‌ಪಾಸ್‌ ನೀಡಿದೆ!..ಯಾಕೆ ಗೊತ್ತಾ?

|

ಜನಪ್ರಿಯ ಆಪಲ್ ಸಂಸ್ಥಯು ತನ್ನ ಐಫೋನ್‌ಗಳಲ್ಲಿ ಗ್ರಾಹಕರಿಗೆ ಅಗತ್ಯ ಸೆಕ್ಯುರಿಟಿ ಫೀಚರ್ಸ್‌ಗಳನ್ನು ಒದಗಿಸಿದೆ. ಪ್ರತ್ಯೇಕ ಅಪ್ಲಿಕೇಶನ್ ಸ್ಟೋರ್‌ ಸಹ ಒಳಗೊಂಡಿದೆ. ಈ ನಡುವೆಯು ಗ್ರಾಹಕರಿಗೆ ಕಿರಿ ಕಿರಿ ಎನಿಸುವ ಮತ್ತು ಅಸುರಕ್ಷಿತವಾಗಿರುವ ಕೆಲವು ಆಪ್ಸ್‌ಗಳು ಐಫೋನ್ ಸೇರಿ ಬಿಟ್ಟಿರುತ್ತವೆ. ಆದರೆ ಇದೀಗ ಆಪಲ್ ಸಂಸ್ಥೆಯು ಅಂತಹ ಕೆಲವು ನಕಲಿ ಆಪ್ಸ್‌ಗಳಿಗೆ ಆಪಲ್‌ ಆಪ್‌ ಸ್ಟೋರ್‌ನಿಂದ ಗೇಟ್‌ಪಾಸ್‌ ನೀಡಿದೆ.

ಆಪ್ಸ್‌ಗಳು

ಹೌದು, ಆಪಲ್ ಮೊಬೈಲ್ ಸೆಕ್ಯುರಿಟಿ ಸಂಸ್ಥೆಯ (Wandera ) ತಂಡವು ಸುಮಾರು 17 ನಕಲಿ ಆಪ್ಸ್‌ಗಳನ್ನು ಗುರುತಿಸಿದ್ದು, ಅವುಗಳನ್ನು ಬ್ಯಾನ್ ಮಾಡಿದೆ. ಆ 17 ಆಪ್ಸ್‌ಗಳಲ್ಲಿ 15 ಆಪ್ಸ್‌ಗಳು ಸಂಸ್ಥೆಯು ಈಗಾಗಲೇ ತಗೆದುಹಾಕಿದ್ದು, ಇನ್ನೆರಡು ಆಪ್ಸ್‌ಗಳು ತನಿಖೆಯಲ್ಲಿವೆ. ಬ್ಯಾನ್ ಮಾಡಲಾದ ಅಸುರಕ್ಷಿತ ಅಪ್ಲಿಕೇಶನ್‌ಗಳು ಜಾಹಿರಾತು ಆಧಾರಿತವಾಗಿದ್ದು, ಹಾಗೆಯೇ ಆಪ್‌ ತೆರೆದರೇ ಅಡ್ವರ್ಟೈಸ್‌ಮೆಂಟ್ ಓಪೆನ್ ಆಗುತ್ತದೆ.

ನಕಲಿ ಆಪ್‌ಗಳು

ಆಪಲ್ ಆಪ್‌ ಸ್ಟೋರ್‌ನಿಂದ ಕಿತ್ತೊಗೆದ 15 ಅಸುರಕ್ಷಿತ ನಕಲಿ ಆಪ್‌ಗಳು ಪ್ರತಿ ಬಾರಿ ಆಪ್‌ ಕ್ಲಿಕ್ ಮಾಡಿದಾಗಲೂ ಜಾಹಿರಾತುಗಳ ಲಿಂಕ್‌ಗಳನ್ನು ತೆರೆದುಕೊಳ್ಳುತ್ತವೆ. ಜೊತೆಗೆ ಬ್ಯಾಕ್‌ಗ್ರೌಂಡ್‌ನಲ್ಲಿ ಲಿಂಕ್ ರನ್‌ ಆಗುತ್ತಲಿರುತ್ತವೆ. ಇದು ಬಳಕೆದಾರರಿಗೆ ಕಿರಿ ಕಿರಿ ಎನಿಸಲಿದ್ದು, ಹಾಗೆಯೇ ಬಳಕೆದಾರರ ಖಾಸಗಿತದ ಮಾಹಿತಿ ಸುರಕ್ಷತೆಯ ಮೇಲೂ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕಾಗಿ ಆಪಲ್ ಅಂತಹ ಆಪ್ಸ್‌ಗಳನ್ನು ತೆಗೆದುಹಾಕಿದೆ.

ಡೈಲಿ ಫಿಟ್ನೆಸ್‌-ಯೋಗಾ

ಟ್ರಾವೆಲ್, ಪ್ರೊಡಕ್ಟಿವಿಟಿ ಮತ್ತು ಯುಟಿಲಿಟಿಗೆ ಸಂಬಂಧಿಸಿದ ಕೇಟಗರಿಯ ಅಪ್ಲಿಕೇಶನ್‌ಗಳು ಹೆಚ್ಚಾಗಿವೆ. ಇಎಮ್‌ಐ ಕ್ಯಾಲ್ಕುಲೇಟರ್ ಮತ್ತು ಲೋನ್ ಪ್ಲ್ಯಾನರ್, ಫೈಲ್ ಮ್ಯಾನೇಜರ್, ಸ್ಮಾರ್ಟ್‌ ಜಿಪಿಎಸ್‌ ಸ್ಪೀಡೋಮೀಡೋಮೀಟರ್, ಕ್ರೀಕ್‌ಒನ್-ಲೈವ್ ಕ್ರಿಕೆಟ್‌ ಸ್ಕೋರ್‌, ಡೈಲಿ ಫಿಟ್ನೆಸ್‌-ಯೋಗಾ ಫೋಸಸ್‌, ಎಫ್‌ಎಮ್ ರೇಡಿಯೊ-ಇಂಟರನೆಟ್‌ ರೇಡಿಯೊ, ಮೈ ಟ್ರೈನ್ ಇನ್‌ಫೋ-IRCTC & PNR,(ಥರ್ಡ್‌ಪಾರ್ಟಿ ಆಪ್), ಈಜಿ ಕಂಟೆಂಟ್‌ ಬ್ಯಾಕ್‌ಅಪ್‌ ಮ್ಯಾನೇಜರ್, ರೆಸ್ಟೋರಂಟ್ ಫೈಂಡರ್, ವಿಡಿಯೊ ಎಡಿಟರ್-ಮ್ಯೂಟ್ ವಿಡಿಯೊ ಸೇರಿದಂತೆ ಒಟ್ಟು 17 ಆಪ್ಸ್‌ಗಳನ್ನು ಲಿಸ್ಟ್‌ ಮಾಡಿ ತೆಗೆದಿದೆ.

ಅಪ್ಲಿಕೇಶನ್‌

ಇದೇ ರೀತಿ ಇತ್ತೀಚಿಗೆ ಗೂಗಲ್ ಸಂಸ್ಥೆಯು ಸಹ ಆಂಡ್ರಾಯ್ಡ್ ಓಎಸ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ಅಸುರಕ್ಷಿತ ಅಪ್ಲಿಕೇಶನ್‌ಗಳನ್ನು ಕಿತ್ತೊಗೆದಿದೆ. ಕ್ವಿಕ್‌ ಹೀಲ್‌ ಸೆಕ್ಯುರಿಟಿ ಲ್ಯಾಬ್ಸ್‌ ಸಂಸ್ಥೆಯು ಆಂಡ್ರಾಯ್ಡ್ ಮಾದರಿಯಲ್ಲಿ ಅಸುರಕ್ಷಿತ ನಕಲಿ ಆಪ್ಸ್‌ಗಳನ್ನು ಗುರುತಿಸಿತ್ತು. ಬಳಕೆದಾರರು ಆಪ್ಸ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡ ನಂತರ ಕೆಲವೊಮ್ಮೆ ಆಟೋಮ್ಯಾಟಿಕ್ ಆಗಿ ಆ ಆಪ್ಸ್‌ಗಳು ಹೋಮ್‌ ಸ್ಕ್ರೀನ್‌ನಲ್ಲಿ ಶಾರ್ಟ್‌ಕಟ್‌ ಕ್ರಿಯೆಟ್‌ ಆಗುತ್ತಿದ್ದವು. ಆ ನಕಲಿ ಆಪ್ಸ್‌ಗಳು ಓಎಸ್‌ಗೆ ಸುರಕ್ಷಿತವಾಗಿರಲಿಲ್ಲ.

Most Read Articles
Best Mobiles in India

English summary
Apple has banned 15 apps from the App store after they were found infected with clickware. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X