Just In
Don't Miss
- Automobiles
ಟಾಟಾ ಹ್ಯಾರಿಯರ್ ಎಸ್ಯುವಿಗೆ ಭರ್ಜರಿ ಆಫರ್
- Movies
ಕುರಿ ಪ್ರತಾಪ್ 'ಫೇಕ್' ಎನ್ನುವವರು ಸ್ವಲ್ಪ ಶ್ವೇತಾ ಚೆಂಗಪ್ಪ ಮಾತನ್ನ ಕೇಳಿ..
- News
ಏಪ್ರಿಲ್ 1 ರಂದೇ ಪಠ್ಯಪುಸ್ತಕ ಪೂರೈಕೆಗೆ ಡಿಸಿಎಂ ಸೂಚನೆ
- Sports
ಐಎಸ್ಎಲ್ 2019: ಒಡಿಶಾ ಎಫ್ಸಿಗೆ ಪುಣೆಯಲ್ಲಿ ಅಮೂಲ್ಯ ಜಯ
- Lifestyle
ಗುರುವಾರದ ದಿನ ಭವಿಷ್ಯ 12-12-2019
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಆಪಲ್ ಈ 15 ಆಪ್ಸ್ಗಳಿಗೆ ಗೇಟ್ಪಾಸ್ ನೀಡಿದೆ!..ಯಾಕೆ ಗೊತ್ತಾ?
ಜನಪ್ರಿಯ ಆಪಲ್ ಸಂಸ್ಥಯು ತನ್ನ ಐಫೋನ್ಗಳಲ್ಲಿ ಗ್ರಾಹಕರಿಗೆ ಅಗತ್ಯ ಸೆಕ್ಯುರಿಟಿ ಫೀಚರ್ಸ್ಗಳನ್ನು ಒದಗಿಸಿದೆ. ಪ್ರತ್ಯೇಕ ಅಪ್ಲಿಕೇಶನ್ ಸ್ಟೋರ್ ಸಹ ಒಳಗೊಂಡಿದೆ. ಈ ನಡುವೆಯು ಗ್ರಾಹಕರಿಗೆ ಕಿರಿ ಕಿರಿ ಎನಿಸುವ ಮತ್ತು ಅಸುರಕ್ಷಿತವಾಗಿರುವ ಕೆಲವು ಆಪ್ಸ್ಗಳು ಐಫೋನ್ ಸೇರಿ ಬಿಟ್ಟಿರುತ್ತವೆ. ಆದರೆ ಇದೀಗ ಆಪಲ್ ಸಂಸ್ಥೆಯು ಅಂತಹ ಕೆಲವು ನಕಲಿ ಆಪ್ಸ್ಗಳಿಗೆ ಆಪಲ್ ಆಪ್ ಸ್ಟೋರ್ನಿಂದ ಗೇಟ್ಪಾಸ್ ನೀಡಿದೆ.

ಹೌದು, ಆಪಲ್ ಮೊಬೈಲ್ ಸೆಕ್ಯುರಿಟಿ ಸಂಸ್ಥೆಯ (Wandera ) ತಂಡವು ಸುಮಾರು 17 ನಕಲಿ ಆಪ್ಸ್ಗಳನ್ನು ಗುರುತಿಸಿದ್ದು, ಅವುಗಳನ್ನು ಬ್ಯಾನ್ ಮಾಡಿದೆ. ಆ 17 ಆಪ್ಸ್ಗಳಲ್ಲಿ 15 ಆಪ್ಸ್ಗಳು ಸಂಸ್ಥೆಯು ಈಗಾಗಲೇ ತಗೆದುಹಾಕಿದ್ದು, ಇನ್ನೆರಡು ಆಪ್ಸ್ಗಳು ತನಿಖೆಯಲ್ಲಿವೆ. ಬ್ಯಾನ್ ಮಾಡಲಾದ ಅಸುರಕ್ಷಿತ ಅಪ್ಲಿಕೇಶನ್ಗಳು ಜಾಹಿರಾತು ಆಧಾರಿತವಾಗಿದ್ದು, ಹಾಗೆಯೇ ಆಪ್ ತೆರೆದರೇ ಅಡ್ವರ್ಟೈಸ್ಮೆಂಟ್ ಓಪೆನ್ ಆಗುತ್ತದೆ.

ಆಪಲ್ ಆಪ್ ಸ್ಟೋರ್ನಿಂದ ಕಿತ್ತೊಗೆದ 15 ಅಸುರಕ್ಷಿತ ನಕಲಿ ಆಪ್ಗಳು ಪ್ರತಿ ಬಾರಿ ಆಪ್ ಕ್ಲಿಕ್ ಮಾಡಿದಾಗಲೂ ಜಾಹಿರಾತುಗಳ ಲಿಂಕ್ಗಳನ್ನು ತೆರೆದುಕೊಳ್ಳುತ್ತವೆ. ಜೊತೆಗೆ ಬ್ಯಾಕ್ಗ್ರೌಂಡ್ನಲ್ಲಿ ಲಿಂಕ್ ರನ್ ಆಗುತ್ತಲಿರುತ್ತವೆ. ಇದು ಬಳಕೆದಾರರಿಗೆ ಕಿರಿ ಕಿರಿ ಎನಿಸಲಿದ್ದು, ಹಾಗೆಯೇ ಬಳಕೆದಾರರ ಖಾಸಗಿತದ ಮಾಹಿತಿ ಸುರಕ್ಷತೆಯ ಮೇಲೂ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕಾಗಿ ಆಪಲ್ ಅಂತಹ ಆಪ್ಸ್ಗಳನ್ನು ತೆಗೆದುಹಾಕಿದೆ.

ಟ್ರಾವೆಲ್, ಪ್ರೊಡಕ್ಟಿವಿಟಿ ಮತ್ತು ಯುಟಿಲಿಟಿಗೆ ಸಂಬಂಧಿಸಿದ ಕೇಟಗರಿಯ ಅಪ್ಲಿಕೇಶನ್ಗಳು ಹೆಚ್ಚಾಗಿವೆ. ಇಎಮ್ಐ ಕ್ಯಾಲ್ಕುಲೇಟರ್ ಮತ್ತು ಲೋನ್ ಪ್ಲ್ಯಾನರ್, ಫೈಲ್ ಮ್ಯಾನೇಜರ್, ಸ್ಮಾರ್ಟ್ ಜಿಪಿಎಸ್ ಸ್ಪೀಡೋಮೀಡೋಮೀಟರ್, ಕ್ರೀಕ್ಒನ್-ಲೈವ್ ಕ್ರಿಕೆಟ್ ಸ್ಕೋರ್, ಡೈಲಿ ಫಿಟ್ನೆಸ್-ಯೋಗಾ ಫೋಸಸ್, ಎಫ್ಎಮ್ ರೇಡಿಯೊ-ಇಂಟರನೆಟ್ ರೇಡಿಯೊ, ಮೈ ಟ್ರೈನ್ ಇನ್ಫೋ-IRCTC & PNR,(ಥರ್ಡ್ಪಾರ್ಟಿ ಆಪ್), ಈಜಿ ಕಂಟೆಂಟ್ ಬ್ಯಾಕ್ಅಪ್ ಮ್ಯಾನೇಜರ್, ರೆಸ್ಟೋರಂಟ್ ಫೈಂಡರ್, ವಿಡಿಯೊ ಎಡಿಟರ್-ಮ್ಯೂಟ್ ವಿಡಿಯೊ ಸೇರಿದಂತೆ ಒಟ್ಟು 17 ಆಪ್ಸ್ಗಳನ್ನು ಲಿಸ್ಟ್ ಮಾಡಿ ತೆಗೆದಿದೆ.

ಇದೇ ರೀತಿ ಇತ್ತೀಚಿಗೆ ಗೂಗಲ್ ಸಂಸ್ಥೆಯು ಸಹ ಆಂಡ್ರಾಯ್ಡ್ ಓಎಸ್ ಸ್ಮಾರ್ಟ್ಫೋನ್ಗಳಲ್ಲಿ ಕೆಲವು ಅಸುರಕ್ಷಿತ ಅಪ್ಲಿಕೇಶನ್ಗಳನ್ನು ಕಿತ್ತೊಗೆದಿದೆ. ಕ್ವಿಕ್ ಹೀಲ್ ಸೆಕ್ಯುರಿಟಿ ಲ್ಯಾಬ್ಸ್ ಸಂಸ್ಥೆಯು ಆಂಡ್ರಾಯ್ಡ್ ಮಾದರಿಯಲ್ಲಿ ಅಸುರಕ್ಷಿತ ನಕಲಿ ಆಪ್ಸ್ಗಳನ್ನು ಗುರುತಿಸಿತ್ತು. ಬಳಕೆದಾರರು ಆಪ್ಸ್ಗಳನ್ನು ಇನ್ಸ್ಟಾಲ್ ಮಾಡಿಕೊಂಡ ನಂತರ ಕೆಲವೊಮ್ಮೆ ಆಟೋಮ್ಯಾಟಿಕ್ ಆಗಿ ಆ ಆಪ್ಸ್ಗಳು ಹೋಮ್ ಸ್ಕ್ರೀನ್ನಲ್ಲಿ ಶಾರ್ಟ್ಕಟ್ ಕ್ರಿಯೆಟ್ ಆಗುತ್ತಿದ್ದವು. ಆ ನಕಲಿ ಆಪ್ಸ್ಗಳು ಓಎಸ್ಗೆ ಸುರಕ್ಷಿತವಾಗಿರಲಿಲ್ಲ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090