ವಾಟ್ಸಾಪ್‌ನಲ್ಲಿ ಈ ಕ್ರಮ ಅನುಸರಿಸಿ ಅಪರಿಚಿತರಿಂದ ಆಗುವ ಕಿರಿಕಿರಿ ತಪ್ಪಿಸಬಹುದು!

|

ವಿಶ್ವದಲ್ಲಿಯೇ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಇನ್‌ಸ್ಟಂಟ್ ಮೆಸೆಜ್ ಅಪ್ಲಿಕೇಶನ್ ವಾಟ್ಸಾಪ್ ಆಕರ್ಷಕ ಫೀಚರ್ಸ್‌ ಮೂಲಕ ಬಳಕೆದಾರ ಸ್ನೇಹಿ ಆಗಿದೆ. ಇತ್ತೀಚಿಗೆ ಹೊಸದಾಗಿ ಹಲವು ನೂತನ ಫೀಚರ್ಸ್‌ಗಳನ್ನು ಅಳವಡಿಸಿರುವ ವಾಟ್ಸಾಪ್‌ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಕ್ರಮ ಕೈಗೊಂಡಿದೆ. ಅದಾಗ್ಯೂ ಬಳಕೆದಾರರು ಕೆಲವೊಮ್ಮೆ ಅಪರಿಚಿತರಿಂದ ಕಿರಿಕಿರಿ ಅನಿಸುತ್ತದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ಸಂಸ್ಥೆಯು ಖಾಸಗಿತನ ಕಾಪಾಡಿಕೊಳ್ಳಲು ಅಗತ್ಯ ಫೀಚರ್ಸ್‌ಗಳನ್ನು ಸೇರಿಸಿದೆ. ಆದರೂ ಕೆಲವೊಮ್ಮೆ ಅಪರಿಚಿತ ನಂಬರ್‌ಗಳಿಂದ ಮೆಸೆಜ್, ವಾಯಿಸ್‌ ಕರೆ ಅಥವಾ ವಿಡಿಯೊ ಕರೆ ಗಳು ಬರುತ್ತಿರುತ್ತವೆ. ಇನ್ನು ಕೆಲವೊಮ್ಮೆ ಬಳಕೆದಾರರ ಅನುಮತಿ ಪಡೆಯದೆ ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆ ಮಾಡಬಹುದು. ಆದರೆ ವಾಟ್ಸಾಪ್‌ನಲ್ಲಿ ಕೆಲವು ಅಗತ್ಯ ಕ್ರಮ ಕೈ ಗೊಳ್ಳುವ ಮೂಲಕ ಬಳಕೆದಾರರು ಇಂತಹ ಅನಗತ್ಯ ಕಿರಿಕಿರಿಗಳನ್ನು ತಪ್ಪಿಸಬಹುದಾಗಿದೆ. ಈ ಬಗ್ಗೆ ತಿಳಿಯಲು ಮುಂದೆ ಓದಿರಿ.

ಅಪರಿಚಿತರ ಕರೆ ನಿರ್ಬಂಧಿಸಿ

ಅಪರಿಚಿತರ ಕರೆ ನಿರ್ಬಂಧಿಸಿ

ವಾಟ್ಸಾಪ್‌ನಲ್ಲಿ ಅಪರಿಚಿತರಿಂದ ಯಾವುದೇ ಕರೆ ಅಥವಾ ವೀಡಿಯೊ ಕರೆಗಳನ್ನು ಸ್ವೀಕರಿಸಬೇಡಿ. ಸಂಪರ್ಕ ಕಡಿತಗೊಳಿಸಿ ಮತ್ತು ನಿಮಗೆ ವೈಯಕ್ತಿಕ ತಿಳಿದಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಿ. ಅಪರಿಚಿತರಿಂದ ಬರುವ ಯಾವುದೇ ವಾಯಿಸ್‌ ಅಥವಾ ವಿಡಿಯೊ ಕರೆ ನಿರ್ಬಂಧಿಸಿ.

ಸೆಲ್ಫಿ ಕ್ಯಾಮೆರಾ ತಡೆಹಿಡಿಯಿರಿ

ಸೆಲ್ಫಿ ಕ್ಯಾಮೆರಾ ತಡೆಹಿಡಿಯಿರಿ

ಒಂದು ವೇಳೆ ಅಪರಿಚಿತರಿಂದ ಬರುವ ಕರೆಗಳನ್ನು ಸ್ವೀಕರಿಸಲು ಉತ್ಸುಕರಾಗಿದ್ದರೆ, ವಾಟ್ಸಾಪ್ ವೀಡಿಯೊ ಕರೆ ಸ್ವೀಕರಿಸುವಾಗ ನಿಮ್ಮ ಫೋನ್ ಸೆಲ್ಫಿ ಕ್ಯಾಮೆರಾವನ್ನು ನಿರ್ಬಂಧಿಸುವುದು ಯಾವಾಗಲೂ ಒಳ್ಳೆಯದು. ಸೆಲ್ಫಿ ಕ್ಯಾಮೆರಾಗೆ ಬೆರಳು ಅಡ್ಡ ಹಿಡಿಯಬಹುದು. ಕರೆ ಮಾಡಿದವರ ಗುರುತಿನ ಬಗ್ಗೆ ನಿಮಗೆ ಖಚಿತವಾದ ನಂತರ ಮಾತ್ರ ನಿಮ್ಮ ಮುಖವನ್ನು ತೋರಿಸಿ.

ಕಂಟ್ರಿ ಕೋಡ್ ಪರಿಶೀಲಿಸಿ

ಕಂಟ್ರಿ ಕೋಡ್ ಪರಿಶೀಲಿಸಿ

ಭಾರತದ (+91) ಕೋಡ್‌ ಹೊರತು ಪಡಿಸಿ ಇತರೆ ರಾಷ್ಟ್ರೀಯ ಕೋಡ್‌ ಒಳಗೊಂಡ ನಂಬರ್‌ಗಳಿಂದ ಬರುವ ಕರೆಗಳನ್ನು ಸಹ ನಿರ್ಬಂಧಿಸಿ. ಯಾಕೆಂದರೆ, ನೀವು ವಿದೇಶದಲ್ಲಿ ವಾಸಿಸುವ ಯಾವುದೇ ಸಂಬಂಧಿ ಅಥವಾ ಸ್ನೇಹಿತರನ್ನು ಹೊಂದಿಲ್ಲದಿದ್ದರೆ ಇತರೆ ರಾಷ್ಟ್ರಗಳ ಕರೆಗಳ ಸ್ವೀಕರಿಸುವುದು ಉತ್ತಮವಲ್ಲ.

ಪ್ರೊಫೈಲ್ ಪೋಟೊ ಸೆಟ್ಟಿಂಗ್

ಪ್ರೊಫೈಲ್ ಪೋಟೊ ಸೆಟ್ಟಿಂಗ್

ನಿಮ್ಮ ಪ್ರೊಫೈಲ್ ಪೋಟೊವನ್ನು ವಾಟ್ಸಾಪ್‌ನಲ್ಲಿ ಯಾರು ವೀಕ್ಷಿಸಬಹುದು ಎಂಬುದನ್ನು ಸೆಟ್ಟಿಂಗ್‌ನಲ್ಲಿ ಬದಲಾವಣೆ ಮಾಡಿಕೊಳ್ಳಿ. ಎಲ್ಲರಿಗೂ ಕಾಣಿಸುವ ಆಯ್ಕೆ ಇದ್ದರೇ ಅದನ್ನು ನಿಮ್ಮ ಕಾಂಟ್ಯಾಕ್ಟ್‌ ನಂಬರ್‌ಗಳಿಗೆ ಮಾತ್ರ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ. ಇದರಿಂದ ಇತರರು ನಿಮ್ಮ ಪ್ರೊಫೈಲ್ ವೀಕ್ಷಣೆಯನ್ನು ತಡೆಯಬಹುದು.

ಗ್ರೂಪ್ ಸೇರುವಿಕೆ ನಿರ್ಬಂಧ

ಗ್ರೂಪ್ ಸೇರುವಿಕೆ ನಿರ್ಬಂಧ

ವಾಟ್ಸಾಪ್‌ ಪ್ರೈವಸಿ ಸೆಟ್ಟಿಂಗ್‌ಗಳನ್ನು ಬದಲಾಯಿಸಿ ಮತ್ತು ನಿಮ್ಮ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿರುವ ಪಟ್ಟಿಯಲ್ಲಿರುವ ಜನರಿಗೆ ನಿಮ್ಮನ್ನು ಯಾವುದೇ ಹೊಸ ಗುಂಪಿಗೆ ಸೇರಿಸಲು ಮಾತ್ರ ಅನುಮತಿಸಿ.

Most Read Articles
Best Mobiles in India

English summary
Then there are some who keep saving WhatsApp profile pictures or status of women with the intention of harassing them after modifying images.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X