ನೆಟ್‌ಫ್ಲಿಕ್ಸ್‌, ಪ್ರೈಮ್‌ ವೀಡಿಯೋ ಉಚಿತವಾಗಿ ಪಡೆಯಲು ಈ ಪ್ಲ್ಯಾನ್‌ ಬೆಸ್ಟ್‌!

|

ಪ್ರಸ್ತುತ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇದೇ ಕಾರಣಕ್ಕೆ ಜಿಯೋ, ಏರ್‌ಟೆಲ್ ಮತ್ತು ವಿ ಟೆಲಿಕಾಂಗಳು ತಮ್ಮ ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳಲ್ಲಿ OTT ಪ್ರಯೋಜನಗಳನ್ನು ಕೂಡ ನೀಡುತ್ತಿವೆ. ಅನಿಯಮಿತ ಕರೆ, ಎಸ್‌ಎಂಎಸ್‌, ಅನ್‌ಲಿಮಿಟೆಡ್‌ ಡೇಟಾ ಮಾತ್ರವಲ್ಲ, ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಉಚಿತವಾಗಿ ಪ್ರವೇಶವನ್ನು ನೀಡುವ ಪ್ರಯೋಜನಗಳು ಕೂಡ ಕೆಲವು ಪ್ಲ್ಯಾನ್‌ಗಳಲ್ಲಿ ಲಭ್ಯವಿದೆ.

ಒಟಿಟಿ

ಹೌದು, ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಅವಕಾಶ ನೀಡುವ ಪ್ರಯೋಜನ ಹೊಂದಿರುವ ಕೆಲವು ಪ್ಲ್ಯಾನ್‌ಗಳನ್ನು ಜಿಯೋ,ಏರ್‌ಟೆಲ್‌, ವಿ ಟೆಲಿಕಾಂಗಳು ಹೊಂದಿವೆ. ಈ ಪ್ಲ್ಯಾನ್‌ಗಳನ್ನು ನೀವು ರೀಚಾರ್ಜ್‌ ಮಾಡಿಸಿದ್ರೆ ಒಟಿಟಿ ಪ್ಲಾಟ್‌ಪಾರ್ಮ್‌ಗಳಿಗೆ ಯಾವುದೇ ಚಂದಾದಾರಿಕೆ ಪಾವತಿಸಬೇಕಾದ ಅಗತ್ಯವಿರುವುದಿಲ್ಲ. ಆದರಿಂದ ನೀವು ನೆಟ್‌ಫ್ಲಿಕ್ಸ್‌, ಪ್ರೈಮ್‌ ವೀಡಿಯೊ, ಡಿಸ್ನಿ+ಹಾಟ್‌ಸ್ಟಾರ್‌ಗೆ ಉಚಿತ ಪ್ರವೇಶವನ್ನು ಒದಗಿಸುವ ಪ್ಲ್ಯಾನ್‌ಗಳನ್ನು ಹುಡುಕುತ್ತಿದ್ದರೆ ಅಂತಹ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ

ಜಿಯೋ

ಜಿಯೋ ಟೆಲಿಕಾಂನ 399ರೂ,ಗಳ ಪೋಸ್ಟ್‌ಪೇಯ್ಡ್ ಪ್ಲಾನ್ ಒಟ್ಟು 75GB FUP ಡೇಟಾದೊಂದಿಗೆ ಬರುತ್ತದೆ. ಈ ಯೋಜನೆಯು 200GB ವರೆಗಿನ ಡೇಟಾ ರೋಲ್‌ಓವರ್ ಸೌಲಭ್ಯ ಹಾಗೂ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ ಪ್ರಯೋಜನಗಳನ್ನು ಒಳಗೊಂಡಿದೆ. ನೀವು ದಿನಕ್ಕೆ 100 SMS ಗಳನ್ನೂ ಪಡೆಯುತ್ತೀರಿ. ಇದಲ್ಲದೇ, ಜಿಯೋ ಟಿವಿ, ಜಿಯೋ ಸಿನಿಮಾ ಮತ್ತು ಇತರವುಗಳಿಗೆ ಜಿಯೋ ಉಚಿತ ಪ್ರವೇಶವನ್ನು ಕೂಡ ನೀಡುತ್ತದೆ. ಇದರಲ್ಲಿ ಗ್ರಾಹಕರು ಉಚಿತ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ+ ಹಾಟ್ ಸ್ಟಾರ್ ವಿಐಪಿ ಚಂದಾದಾರಿಕೆಗಳನ್ನು ಸಹ ಪಡೆಯುತ್ತಾರೆ.

ಜಿಯೋ

ಇದಲ್ಲದೆ ರಿಲಯನ್ಸ್ ಜಿಯೋ ಎಲ್ಲಾ ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವಿಐಪಿ ಚಂದಾದಾರಿಕೆಗಳನ್ನು ನೀಡುತ್ತಿದೆ. ಇವುಗಳಲ್ಲಿ ರೂ 399, ರೂ 599, ರೂ 799, ರೂ 999, ಮತ್ತು ರೂ 1,499 ಸೇರಿವೆ. ರಿಲಯನ್ಸ್ ಜಿಯೋ ಕೆಲವು ಪ್ರಿಪೇಯ್ಡ್ ಯೋಜನೆಗಳೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್ ಅನ್ನು ಮಾತ್ರ ನೀಡುತ್ತದೆ. ನಿಮಗೆ ನೆಟ್‌ಫ್ಲಿಕ್ಸ್ ಮತ್ತು ಪ್ರೈಮ್ ವಿಡಿಯೋ ಕೂಡ ಬೇಕಾದರೆ, ನೀವು ಜಿಯೋ ಪೋಸ್ಟ್‌ಪೇಯ್ಡ್‌ಗೆ ಬದಲಾಯಿಸಬೇಕಾಗುತ್ತದೆ.

ಏರ್‌ಟೆಲ್‌

ಏರ್‌ಟೆಲ್‌

ಏರ್‌ಟೆಲ್ ನ 499ರೂ, ಪೋಸ್ಟ್‌ಪೇಯ್ಡ್ ಪ್ಲಾನ್ ಒಟ್ಟು 75GB FUP ಡೇಟಾದೊಂದಿಗೆ ರೋಲ್ಓವರ್ ಸೌಲಭ್ಯಕ್ಕೆ ಬೆಂಬಲವನ್ನು ನೀಡುತ್ತದೆ. ಈ ಯೋಜನೆಯು ಅನಿಯಮಿತ ಕರೆ ಪ್ರಯೋಜನಗಳು, ದಿನಕ್ಕೆ 100 ಎಸ್‌ಎಂಎಸ್ ಮತ್ತು ಏರ್‌ಟೆಲ್ ಥ್ಯಾಂಕ್ಸ್ ರಿವಾರ್ಡ್‌ಗಳು, ಅಮೆಜಾನ್ ಪ್ರೈಮ್ ವೀಡಿಯೋ ಮತ್ತು ಡಿಸ್ನಿ+ಹಾಟ್ ಸ್ಟಾರ್ ವಿಐಪಿಗೆ ಒಂದು ವರ್ಷದ ಪ್ರವೇಶವನ್ನು ಒಳಗೊಂಡಿದೆ. ಜಿಯೋದ ಪೋಸ್ಟ್‌ಪೇಯ್ಡ್ ಪ್ಲಸ್ ಯೋಜನೆಗಳಿಗಿಂತ ಭಿನ್ನವಾಗಿ ಏರ್‌ಟೆಲ್ ಯಾವುದೇ ಏರ್‌ಟೆಲ್ ಪೋಸ್ಟ್‌ಪೇಯ್ಡ್ ಯೋಜನೆಗಳೊಂದಿಗೆ ನೆಟ್‌ಫ್ಲಿಕ್ಸ್ ಅನ್ನು ನೀಡುವುದಿಲ್ಲ. ಕಂಪನಿಯ ಏರ್‌ಟೆಲ್ ಥ್ಯಾಂಕ್ಸ್ ಆಪ್‌ನಿಂದ ನೀವು ಪ್ರೈಮ್ ವಿಡಿಯೋವನ್ನು ಸಕ್ರಿಯಗೊಳಿಸುತ್ತೀರಿ. ಇದಲ್ಲದೆ ಏರ್‌ಟೆಲ್ ತನ್ನ ಪ್ರಿಪೇಯ್ಡ್ ಯೋಜನೆಗಳೊಂದಿಗೆ ನೆಟ್‌ಫ್ಲಿಕ್ಸ್ ನೀಡುತ್ತಿಲ್ಲ. ನೀವು ಕೆಲವು ಪ್ರಿಪೇಯ್ಡ್ ಯೋಜನೆಗಳೊಂದಿಗೆ ಡಿಸ್ನಿ+ಹಾಟ್‌ಸ್ಟಾರ್ ವಿಐಪಿ ಮತ್ತು ಅಮೆಜಾನ್ ಪ್ರೈಮ್ ವೀಡಿಯೊವನ್ನು ಪಡೆಯುತ್ತೀರಿ.

ವೊಡಾಫೋನ್ ಐಡಿಯಾ

ವೊಡಾಫೋನ್ ಐಡಿಯಾ

ವೊಡಾಫೋನ್ ಐಡಿಯಾ ಟೆಲಿಕಾಂ ಪೋಸ್ಟ್‌ಪೇಯ್ಡ್ ಪ್ಲಾನ್ 499ರೂ ಬೆಲೆ ಹೊಂದಿದೆ. ಇದರಲ್ಲಿ 75 ಜಿಬಿ ಎಫ್‌ಯುಪಿ ಡೇಟಾ, ಅನಿಯಮಿತ ಕರೆ ಮತ್ತು ದಿನನಿತ್ಯ 100 ಎಸ್‌ಎಂಎಸ್ ಸೌಲಭ್ಯ ಹೊಂದಿದೆ. ಇದು 200GB ವರೆಗಿನ ಡೇಟಾ ರೋಲ್‌ಓವರ್ ಸೌಲಭ್ಯವನ್ನು ಸಹ ಬೆಂಬಲಿಸುತ್ತದೆ. ಇದಲ್ಲದೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ವಿಇ ಮೂವಿಗಳು ಮತ್ತು ಟಿವಿ ಆಪ್‌ಗಳನ್ನು ಹೊರತುಪಡಿಸಿ ZEE5 ಗೆ ಉಚಿತ ಪ್ರವೇಶವನ್ನು ನೀಡುತ್ತಿದೆ. ಇನ್ನು ನೀವು ನೆಟ್‌ಫ್ಲಿಕ್ಸ್ ಅನ್ನು ಸಹ ಬಯಸಿದರೆ, ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿರುವ Vi's RedX ಯೋಜನೆಯನ್ನು ಪರಿಶೀಲಿಸಬಹುದು. ಈ ಯೋಜನೆಗೆ ತಿಂಗಳಿಗೆ 1,099 ರೂ. ಬೆಲೆ ನಿಗದಿಪಡಿಸಲಾಗಿದೆ.

ಪ್ರಿಪೇಯ್ಡ್

ಇನ್ನು ಪ್ರಿಪೇಯ್ಡ್ ಯೋಜನೆಗಳಿಗೆ ಸಂಬಂಧಿಸಿದಂತೆ, Vi ಡಿಸ್ನಿ+ ಹಾಟ್ ಸ್ಟಾರ್ ಮತ್ತು ಜೀ 5 ಚಂದಾದಾರಿಕೆಗಳನ್ನು ಮಾತ್ರ ನೀಡುತ್ತಿದೆ. ಇದಲ್ಲದೆ 401ರೂ,ಗಳ ಪ್ರಿಪೇಯ್ಡ್ ವಿ ಪ್ಲಾನ್ ಇದ್ದು, ಇದರಲ್ಲಿ ದಿನಕ್ಕೆ 3ಜಿಬಿ ಡೇಟಾ, ಅನಿಯಮಿತ ಕರೆ, ಹೆಚ್ಚುವರಿ 16ಜಿಬಿ ಡೇಟಾ ಮತ್ತು ಪ್ರತಿ ದಿನ 100 ಎಸ್‌ಎಂಎಸ್ ಪ್ರಯೋಜನ ಹೊಂದಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿ ಅವಧಿಯೊಂದಿಗೆ ಬರುತ್ತದೆ ಮತ್ತು ವಾರಾಂತ್ಯದ ಡೇಟಾ ರೋಲ್‌ಓವರ್ ವೈಶಿಷ್ಟ್ಯವನ್ನು ಸಹ ಬೆಂಬಲಿಸುತ್ತದೆ. ಇದರಲ್ಲಿ ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಡಿಸ್ನಿ+ ಹಾಟ್‌ಸ್ಟಾರ್ ವಿಐಪಿಯನ್ನು ಸಹ ಪಡೆಯುತ್ತೀರಿ.

Most Read Articles
Best Mobiles in India

English summary
Airtel vs Jio vs Vi Recharge Plans: We take a look at prepaid and postpaid plans that offer free access to Netflix, Prime Video or Disney+Hostar.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X