ವಿಶ್ವ ಎಮೋಜಿ ದಿನ: ಆಪಲ್, ಆಂಡ್ರಾಯ್ಡ್‌ನಲ್ಲಿ ಹೊಸ ಎಮೋಜಿಗಳ ಸೇರ್ಪಡೆ!

|

ಇಂದು ವಿಶ್ವ ಎಮೋಜಿ ದಿನ. ನಿಮ್ಮ ಪ್ರೀತಿ ಪಾತ್ರರಿಗೆ ಭಾವನೆಗಳನ್ನ ಎಮೋಜಿಗಳ ರೂಪದಲ್ಲಿ ವ್ಯಕ್ತಪಡಿಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಬದಲಾದ ಬದುಕಿನ ಒತ್ತಡದ ಜೀವನ ಶೈಲಿಯ ನಡುವೆ ಎಮೋಜಿ ಸಂದೇಶಗಳ ಬರಾಟೆ ಜೋರಾಗಿಯೆ ನಡೆಯುತ್ತಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಇನ್ಸಟಂಟ್‌ ಮೆಸೇಜಿಂಗ್‌ ಆಪ್‌ಗಳಲ್ಲಿ ಅಕ್ಷರ ಸಂದೇಶಗಳಿಗಿಂತ ಎಮೋಜಿ ಸಂದೇಶಗಳೇ ಹೆಚ್ಚಾಗಿ ಕಾನಬಹುದಾಗಿದೆ. ಅಷ್ಟರ ಮಟ್ಟಿಗೆ ಇ0ದಿನ ಜಮಾನ ಬಲದಾಗಿ ಹೋಗಿದೆ. ಸದ್ಯ ಇದೇ ಕಾರಣಕ್ಕೆ ವಿಶ್ವ ಎಮೋಜಿ ದಿನದ ಅಂಗವಾಗಿ ಆಪಲ್‌ ಮತ್ತು ಗೂಗಲ್‌ ತಮ್ಮ ಡಿವೈಸ್‌ಗಳಲ್ಲಿ ಹೊಸ ಮಾದರಿಯ ಎಮೋಜಿಗಳನ್ನ ಪ್ರಕಟಿಸಿವೆ.

ವಿಶ್ವ ಎಮೋಜಿ ದಿನ

ಹೌದು, ವಿಶ್ವ ಎಮೋಜಿ ದಿನವನ್ನು ಆಚರಿಸುತ್ತಿರುವ ಆಪಲ್ ಮತ್ತು ಗೂಗಲ್ ಎರಡೂ ಹೊಸ ಎಮೋಜಿಗಳನ್ನು ಪ್ರಕಟಿಸಿವೆ. ಈ ಎಮೋಜಿಗಳು ಶೀಘ್ರದಲ್ಲೇ ತಮ್ಮ ಡಿವಯಸ್‌ಗಳಲ್ಲಿ ತಮ್ಮ ಹೊಸ ಶ್ರೇಣಿ ಮಾದರಿಯಲ್ಲಿ ಲಭ್ಯವಾಗಲಿವೆ. ಇನ್ನು ಆಪಲ್‌ ತನ್ನ 13 ಹೊಸ ಎಮೋಜಿಗಳನ್ನ ಪರಿಚಯಿಸಿದ್ದು, ಐಫೋನ್‌ನಲ್ಲಿ ಹೊಸ ಆಪ್‌ಡೇಟ್‌ಗಳೊಂದಿಗೆ ರೋಲ್ ಆಗಲಿವೆ, ಐಪ್ಯಾಡ್, ಮ್ಯಾಕ್ ಮತ್ತು ಆಪಲ್ ವಾಚ್ ಬಳಕೆದಾರರು ಸಹ ಇವುಗಳನ್ನು ಪಡೆಯಬಹುದಾಗಿದೆ. ಇನ್ನು ಆಂಡ್ರಾಯ್ಡ್‌ನಲ್ಲಿ, 117 ಹೊಸ ಎಮೋಜಿಗಳನ್ನು ಗೂಗಲ್ ಪರಿಚಯಿಸಿದೆ. ಅಷ್ಟಕ್ಕೂ ಇವುಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆಪಲ್‌

ಸದ್ಯ ಆಪಲ್‌ ಪರಿಚಯಿಸಿರುವ ಹೊಸ ಎಮೋಜಿಗಳನ್ನು ನೋಡುವುದಾದರೆ - ಡೋಡೋ, ಅಂಗರಚನಾ ಹೃದಯ, ಗೂಡುಕಟ್ಟುವ ಗೊಂಬೆಗಳು, ಸೆಟೆದುಕೊಂಡ ಬೆರಳುಗಳು, ಪಿನಾಟಾ, ತಮಾಲೆ, ಬೂಮರಾಂಗ್, ನಿಂಜಾ, ಬೀವರ್, ಟ್ರಾನ್ಸ್ಜೆಂಡರ್ ಚಿಹ್ನೆ, ಬಬಲ್ ಟೀ, ನಾಣ್ಯ ಮತ್ತು ಶ್ವಾಸಕೋಶಗಳು. ಜನರು ತಬ್ಬಿಕೊಳ್ಳುವುದು, ವೇಷ ಧರಿಸಿದ ಮುಖ ಮತ್ತು ಕಣ್ಣೀರಿನೊಂದಿಗೆ ನಗುತ್ತಿರುವ ಮುಖದಂತಹ ಎಮೋಜಿಗಳನ್ನು ಆಪಲ್ ತನ್ನ ಹೆಚ್ಚುವರಿ ಎಮೋಜಿಗಳ ಸರಣಿಯಲ್ಲಿ ಪರಿಚಯಿಸಿದೆ.

ಆಂಡ್ರಾಯ್ಡ್‌

ಇದಲ್ಲದೆ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿ ಗೂಗಲ್‌ನ ಸಮಗ್ರ ಎಮೋಜಿಗಳ ಪಟ್ಟಿಯೇ ಬಿಡುಗಡೆ ಆಗಿದ್ದು. ಇವುಗಳಲ್ಲಿ ಆಪಲ್‌ನಲ್ಲಿ ಇರುವ ಕೆಲವು ಎಮೋಜಿಗಳನ್ನು ಸಹ ಇವುಗಳಲ್ಲಿ ನೀಡಲಾಗಿದೆ. ಅವುಗಳೆಂದರೆ ಸೆಟೆದುಕೊಂಡ ಬೆರಳುಗಳು, ಕಣ್ಣೀರು ಮತ್ತು ಬಬಲ್ ಚಹಾದೊಂದಿಗೆ ನಗುತ್ತಿರುವ ಮುಖ, ತಮಲೆ, ಅಂಗರಚನಾ ಹೃದಯ, ಪಿನಾಟಾದಂತಹ ಎಮೋಜಿಗಳು ಲಭ್ಯವಾಗಲಿವೆ. ಇವುಗಳಲ್ಲದೆ ಆಂಡ್ರಾಯ್ಡ್ 11 ಮೂಲಕ ಈ ವರ್ಷ ಆಂಡ್ರಾಯ್ಡ್‌ಗೆ ಬರುವ 117 ಹೊಸ ಎಮೋಜಿಗಳು ಆಮೆಯಂತಹ ಕೆಲವು ಕ್ಲಾಸಿಕ್‌ಗಳ ಶೈಲಿಯಲ್ಲಿ ಲಭ್ಯವಾಗಲಿವೆ.

ಆಂಡ್ರಾಯ್ಡ್‌

ಇನ್ನು ಆಂಡ್ರಾಯ್ಡ್‌ ನಲ್ಲಿ ಹೊಸ ಸೆಟ್ 62 ಹೊಸ ಅಕ್ಷರಗಳು, 55 ಸ್ಕಿನ್ ಟೋನ್ಗಳು ಮತ್ತು ಲಿಂಗ ಪ್ರಾತಿನಿಧ್ಯಗಳನ್ನು ಪ್ರತಿನಿಧಿಸುವ ಎಮೋಜಿಗಳು ಲಬ್ಯವಾಗಲಿದೆ. ಈ ಎಲ್ಲಾ ಎಮೋಜಿಗಳನ್ನು ಎಮೋಜಿ 13.0 ಬಿಡುಗಡೆಯ ಭಾಗವಾಗಿ ಯುನಿಕೋಡ್ ಕನ್ಸೋರ್ಟಿಯಂ ಅನುಮೋದಿಸಿದೆ. ಸನ್ನಿವೇಶಗಳನ್ನ ವ್ಯಕ್ತಪಡಿಸುವ ಈ ಎಮೋಜಿಗಳು ಇತ್ತೀಚಿನ ದಿನಗಲ್ಲಿ ಭಾರಿ ಬೇಡಿಕೆ ಪಡೆದಯುತ್ತಿರೋದು ಎಮೋಜಿಗಳ ಮೇಲೆಇನ ಬಳಕೆ ಹೆಚ್ಚುವಂತೆ ಮಾಡಿದೆ. ಸದ್ಯ ಆಪಲ್‌ ಮತ್ತು ಗೂಗಲ್‌ ಪರಿಚಯಿಸಿರುವ ಹೊಸ ಎಮೋಜಿಗಳು ಬಳಕೆದಾರರಿಗೆ ಇನ್ನಷ್ಟು ಭಾವನೆಗಲನ್ನ ವ್ಯಕ್ತಪಡಿಸುವುದಕ್ಕೆ ಅವಕಾಶ ನೀಡಬಹುದು ಎಂದು ಅಂದಾಜಿಸಲಾಗಿದೆ.

Most Read Articles
Best Mobiles in India

English summary
Apple previews 13 new emojis and Google confirms 117 new ones for Android. Happy World Emoji Day everyone.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X