Just In
Don't Miss
- News
'ರಫೇಲ್' ಖ್ಯಾತಿಯ ಬಿಲಿಯನೇರ್ ಒಲಿವರ್ ಡಸಾಲ್ಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ
- Lifestyle
ದಿನ ಭವಿಷ್ಯ: ನಿಮ್ಮ ರಾಶಿ ಸೋಮವಾರ ಹೇಗಿರಲಿದೆ ನೋಡಿ
- Movies
ಬಿಗ್ಬಾಸ್: ಒಂದು ವಾರದಲ್ಲಿ ಪ್ರಶಾಂತ್ ಸಂಬರ್ಗಿ ಬದಲಾಯಿಸಿರುವ ಬಟ್ಟೆ ಎಷ್ಟು ಗೊತ್ತೆ?
- Sports
ಆತನಲ್ಲಿ ನನಗಿಂತಲೂ ಹೆಚ್ಚಿನ ಸ್ವಾಭಾವಿಕ ಸಾಮರ್ಥ್ಯವಿದೆ: ರವಿಶಾಸ್ತ್ರಿ
- Finance
ಮಾರ್ಚ್ 07ರಂದು ಚಿನ್ನದ ಬೆಲೆ ಯಾವ ನಗರದಲ್ಲಿ ಹೆಚ್ಚು ಬೆಲೆ?
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್ಫೋನ್ಗಳು!
ಇತ್ತಿಚಿನ ದಿನಗಳಲ್ಲಿ ಟೆಕ್ ವಲಯದಲ್ಲಿ ಸ್ಮಾರ್ಟ್ಫೋನ್ಗಳಿಗೆ ಭಾರಿ ಬೇಡಿಕೆ ಇದೆ. ಇದೇ ಕಾರಣಕ್ಕೆ ಸ್ಮಾರ್ಟ್ಫೋನ್ ಕಂಪೆನಿಗಳು ತಮ್ಮ ಹೊಸ ಮಾದರಿಯ ಸ್ಮಾರ್ಟ್ಫೋನ್ಗಳನ್ನ ಪರಿಚಯಿಸುತ್ತಲೇ ಬಂದಿವೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್ ಕಂಪೆನಿಗಳ ಸ್ಮಾರ್ಟ್ಫೋನ್ಗಳನ್ನೇ ಖರೀದಿಸುತ್ತಾರೆ. ಇನ್ನು ಈ ವರ್ಷ ಕೂಡ ಹೊಸ ಸ್ಮಾರ್ಟ್ಫೋನ್ಗಳಿಗೆನೂ ಕಡಿಮೆ ಇಲ್ಲ. ಈಗಾಗಲೇ ಹಲವು ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಎಂಟ್ರಿ ನೀಡವೆ. ಅಲ್ಲದೆ ಮುಂದಿನ ತಿಂಗಳು ಭಾರತದಲ್ಲಿ ಇನ್ನು ಹೆಚ್ಚಿನ ಸಂಖ್ಯೆಯ ಸ್ಮಾರ್ಟ್ಫೋನ್ಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಹೌದು, ಫೆಬ್ರವರಿ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್ಫೋನ್ಗಳು ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಇವುಗಳಲ್ಲಿ ಶಿಯೋಮಿ ರೆಡ್ಮಿ ನೋಟ್ 10 ಸರಣಿ, ಪೊಕೊ m3, ಮತ್ತು ರಿಯಲ್ಮಿ X7 ಸರಣಿಗಳು ಸೇರಿವೆ. ಇದಲ್ಲದೆ, ಸ್ಯಾಮ್ಸಂಗ್ ಗ್ಯಾಲಕ್ಸಿ A52 ಸಹ ಫೆಬ್ರವರಿಯಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಇನ್ನುಳಿದಂತೆ ಪೆಬ್ರವರಿ ತಿಂಗಳಲ್ಲಿ ಬಿಡುಗಡೆ ಆಗಲಿರುವ ಸ್ಮಾರ್ಟ್ಫೋನ್ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಶಿಯೋಮಿ ರೆಡ್ಮಿ ನೋಟ್ 10 ಮತ್ತು ರೆಡ್ಮಿ ನೋಟ್ 10 ಪ್ರೊ
ಶಿಯೋಮಿ ರೆಡ್ಮಿ ನೋಟ್ 10 ಮತ್ತು ರೆಡ್ಮಿ ನೋಟ್ 10 ಪ್ರೊ ಫೆಬ್ರವರಿಯಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.ಈ ಎರಡೂ ಸ್ಮಾರ್ಟ್ಫೋನ್ಗಳು ಭಾರತದ BIS (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್) ಪ್ರಮಾಣೀಕರಣ ತಾಣದಲ್ಲಿ ಗುರುತಿಸಲ್ಪಟ್ಟಿದ್ದು, ಡಿವೈಸ್ಗಳು 4G ಮತ್ತು 5G ರೂಪಾಂತರಗಳಲ್ಲಿ ಬರಲಿವೆ ಎಂದು ಸೂಚಿಸುತ್ತದೆ. ಇನ್ನು ರೆಡ್ಮಿ ನೋಟ್ 10 ಮತ್ತು ರೆಡ್ಮಿ ನೋಟ್ 10 ಪ್ರೊ ಎರಡೂ ಸ್ಮಾರ್ಟ್ಫೋನ್ಳು ಪಂಚ್ಹೋಲ್ ಡಿಸ್ಪ್ಲೇ ವಿನ್ಯಾಸವನ್ನು ಹೊಂದಿರಲಿವೆ ಎಂದು ಹೇಳಲಾಗುತ್ತದೆ. ಅಲ್ಲದೆ ಶಿಯೋಮಿ ರೆಡ್ಮಿ ನೋಟ್ 10 ಮೀಡಿಯಾ ಟೆಕ್ ಡೈಮೆನ್ಸಿಟಿ 720 SoC ಪ್ರೊಸೆಸರ್ ಹೊಂದಿದ್ದು, ಪ್ರೊ ರೂಪಾಂತರವು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 750G ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ.

ಪೊಕೊ M3
ಕಳೆದ ವರ್ಷ ನವೆಂಬರ್ನಲ್ಲಿ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾದ ಪೊಕೊ M3 ಫೆಬ್ರವರಿಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಪೊಕೊ M3 ಸುಮಾರು 11,000 ರೂ. ಬೆಲೆಯಲ್ಲಿ ಲಭ್ಯವಾಗುವ ಸಾದ್ಯತೆ ಇದೆ. ಇನ್ನು ಪೊಕೊ M3 ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 662 ಪ್ರೊಸೆಸರ್,ಹೊಂದಿರಲಿದೆ ಎನ್ನಲಾಗಿದೆ. ಇದು 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಮತ್ತು ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಸಾದ್ಯತೆ ಇದೆ.

ರಿಯಲ್ಮಿ X7 ಮತ್ತು ರಿಯಲ್ಮಿ X7 ಪ್ರೊ
ರಿಯಲ್ಮಿ ತನ್ನ ಹೊಸ ಎಕ್ಸ್-ಸೀರೀಸ್ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ಅನಾವರಣಗೊಳಿಸುವ ಸಾಧ್ಯತೆ ಇದೆ. ರಿಯಲ್ಮಿ 7 ಮತ್ತು ರಿಯಲ್ಮಿ 7 ಪ್ರೊ ಸ್ಮಾರ್ಟ್ಫೋನ್ಗಳು ಡಿಸ್ಪ್ಲೇ ಮತ್ತು ಬ್ಯಾಟರಿ ಗಾತ್ರ ಸೇರಿದಂತೆ ಕೆಲವು ಬದಲಾವಣೆಗಳನ್ನು ಹೊರತುಪಡಿಸಿ ಒಂದೇ ರೀತಿಯ ಫೀಚರ್ಸ್ಗಳನ್ನು ಹೊಂದಿರುವ ಸಾದ್ಯತೆ ಇದೆ. ಇದು ಭಾರತದಲ್ಲಿ ಸುಮಾರು 19,290 ರೂ.ಗಳಿಗೆ ಲಭ್ಯವಾಗುವ ಸಾಧ್ಯತೆ ಇದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ A52
ಸ್ಯಾಮ್ಸಂಗ್ ಗ್ಯಾಲಕ್ಸಿ A52 ಸ್ಮಾರ್ಟ್ಫೋನ್ ಕೂಡ ಫೆಬ್ರವರಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 720G ಪ್ರೊಸೆಸರ್ ಅನ್ನು ಹೊಂದಿರಲಿದೆ. ಅಲ್ಲದೆ ಸ್ಯಾಮ್ಸಂಗ್ ಗ್ಯಾಲಕ್ಸಿ A52 4G ಮತ್ತು 5G ರೂಪಾಂತರಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗ್ತಿದೆ. ಈ ಸ್ಮಾರ್ಟ್ಫೋನ್ ಬೆಲೆ ಸರಿಸುಮಾರು 36,800 ರೂ. ಆಗಿರುವ ನಿರೀಕ್ಷೆ ಇದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190