ನಿಮ್ಮ ವಾಟ್ಸಾಪ್ ಚಾಟ್‌ಗಳು ಸುರಕ್ಷಿತವಾಗಿರಿಸಲು ಈ ಕ್ರಮಗಳನ್ನು ಅನುಸರಿಸಿ!

|

ವಿಶ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೇಜ್ ಆಪ್ 'ವಾಟ್ಸಾಪ್' ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿದೆ. ವಾಟ್ಸಾಪ್ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಅಲ್ಲದೆ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗಾಗಿ ಸಾಕಷ್ಟು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಬಳಕೆದಾರರ ಚಾಟ್‌ ಪ್ರೈವೆಸಿಯನ್ನು ಕಾಪಾಡಲು ಹಲವು ಫೀಚರ್ಸ್‌ಗಳನ್ನ ಪರಿಚಯಿಸಿರುವ ವಾಟ್ಸಾಪ್‌ ಬಳಕೆದಾರರಿಂದ ಸೈ ಎನಿಸಿಕೊಂಡಿದೆ. ಆದರೂ ವಾಟ್ಸಾಪ್‌ ಬಳಕೆದಾರರು ತಮ್ಮ ಚಾಟ್‌ ಸುರಕ್ಷತೆಯ ಬಗ್ಗೆ ಕೆಲವು ಕ್ರಮಗಳನ್ನು ಅನುಸರಿಸುವುದು ಅವಶ್ಯವಾಗಿದೆ.

ವಾಟ್ಸಪ್

ಹೌದು, ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಅವುಗಳಲ್ಲಿ ಬಳಕೆದಾರರ ಖಾಸಗಿ ಚಾಟ್‌ ಮಾಹಿತಿ ಕಾಪಾಡುವ ವಿಶೇಷ ಫೀಚರ್ಸ್‌ಗಳು ಸೇರಿವೆ. ಆದರೂ ಕೆಲವೊಮ್ಮೆ ಬಳಕೆದಾರರ ಚಾಟ್‌ ಮಾಹಿತಿ ಸೋರಿಕೆ ಆಗುವ ಸಾಧ್ಯತೆಗಳು ಇರುತ್ತವೆ. ಆದರೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನೀಡಿದರೆ, ನಿಮ್ಮ ವಾಟ್ಸಾಪ್‌ ಚಾಟ್‌ಗಳು ಸುರಕ್ಷಿತವಾಗಿರುತ್ತವೆ, ಆದಾಗ್ಯೂ, ನಿಮ್ಮ ವಾಟ್ಸಾಪ್ ಚಾಟ್‌ಗಳು ಸುರಕ್ಷಿತವಾಗಿರಬೇಕಾದರೆ ನೀವು ಅನುಸರಿಸಬಹುದಾದ ಮಾರ್ಗಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

1. ಎರಡು ಅಂಶಗಳ ದೃಡೀಕರಣವನ್ನು ಸಕ್ರಿಯಗೊಳಿಸಿ

1. ಎರಡು ಅಂಶಗಳ ದೃಡೀಕರಣವನ್ನು ಸಕ್ರಿಯಗೊಳಿಸಿ

ಇನ್ನು ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಚಾಟ್‌ ಸುರಕ್ಷಿತವಾಗಿರಬೇಕಾದರೆ ನೀವು ಎರಡು ಅಂಶಗಳ ದೃಡೀಕರಣ ರಕ್ಷಣೆಯೊಂದಿಗೆ ಅಪ್ಲಿಕೇಶನ್ ಅನ್ನು ರಕ್ಷಿಸಬಹುದು. ಅಲ್ಲದೆ ನೀವು ಹೊಸ ಫೋನ್‌ನಲ್ಲಿ ವಾಟ್ಸಾಪ್ ಡೌನ್‌ಲೋಡ್ ಮಾಡಿ ಮತ್ತು ಲಾಗ್ ಇನ್ ಮಾಡಲು ಪ್ರಯತ್ನಿಸಿದರೆ, ವಾಟ್ಸಾಪ್ ನಿಮ್ಮ ನೋಂದಾಯಿತ ಸಂಖ್ಯೆಗೆ ಪರಿಶೀಲನಾ ಕೋಡ್ ಅನ್ನು ಕಳುಹಿಸುತ್ತದೆ. ಸೈನ್ ಇನ್ ಮಾಡಲು ಮತ್ತು ವಾಟ್ಸಾಪ್ ಅನ್ನು ಬಳಸಲು ನಿಮಗೆ ಈ ನೋಂದಣಿ ಕೋಡ್ ಅಗತ್ಯವಿದೆ. ನಿಮ್ಮ ನೋಂದಾಯಿತ ಫೋನ್ ಸಂಖ್ಯೆಯಲ್ಲದೆ, ಸರಿಯಾದ ಬಳಕೆದಾರರು ಲಾಗಿನ್ ಆಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಇದು ಸುಲಭ ಮಾರ್ಗವಾಗಿದೆ.

2. ನಿಮ್ಮ ಅಪ್ಲಿಕೇಶನ್ ಅನ್ನು ಲಾಕ್ ಮಾಡಿ

2. ನಿಮ್ಮ ಅಪ್ಲಿಕೇಶನ್ ಅನ್ನು ಲಾಕ್ ಮಾಡಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ನಿಮ್ಮ ಫಿಂಗರ್‌ಪ್ರಿಂಟ್ ಅಥವಾ ಫೇಸ್ ಐಡಿಯಂತಹ ಪಾಸ್‌ಕೋಡ್ ಅಥವಾ ಬಯೋಮೆಟ್ರಿಕ್ಸ್‌ನೊಂದಿಗೆ ಅಪ್ಲಿಕೇಶನ್ ಅನ್ನು ಲಾಕ್ ಮಾಡುವ ಆಯ್ಕೆಯನ್ನು ಹೊಂದಿವೆ.ನಿಮ್ಮ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಲಾಕ್ಮಾಡಬಹುದಾಗಿದೆ. ನಿವು ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ ಲಾಕ್‌ ಮಾಡಿದ್ದರೆ ಯಾರೂ ಆದರೆ ನಿಮ್ಮ ವಾಟ್ಸಾಪ್ ತೆರೆಯಲು ನಿಮಗೆ ಸಾಧ್ಯವಾಗುವುದಿಲ್ಲ.

3. ಚಾಟ್ ಬ್ಯಾಕಪ್‌ಗಳನ್ನು ಆಫ್ ಮಾಡಿ

3. ಚಾಟ್ ಬ್ಯಾಕಪ್‌ಗಳನ್ನು ಆಫ್ ಮಾಡಿ

ನಿಮ್ಮ ಎಲ್ಲಾ ಚಾಟ್‌ಗಳನ್ನು ಬ್ಯಾಕಪ್ ಮಾಡುವ ಆಯ್ಕೆಯನ್ನು ವಾಟ್ಸಾಪ್ ನಿಮಗೆ ನೀಡುತ್ತದೆ. ಇದು ನಿಮಗೆ ಸರಿಹೊಂದುವಂತೆ ನೀವು ಪ್ರತಿದಿನ, ಪ್ರತಿ ವಾರ ಅಥವಾ ಪ್ರತಿ ತಿಂಗಳು ಮಾಡಬಹುದು. ನಿವು ನಿಮ್ಮ ಖಾಸಗಿ ಚಾಟ್‌ಗಳನ್ನು ರಕ್ಷಿಸುವುದಕ್ಕೆ ಹಾಗೂ ಹ್ಯಾಕರ್‌ಗಳಿಂದ ತಡೆಯುವ ಏಕೈಕ ಮಾರ್ಗವೆಂದರೆ ಚಾಟ್ ಬ್ಯಾಕ್ ಅಪ್‌ಗಳನ್ನು ಇಟ್ಟುಕೊಳ್ಳದಿರುವುದು. ಇನ್ನು ನಿಮ್ಮ ಚಾಟ್‌ಗಳನ್ನು ಎಷ್ಟು ಬಾರಿ ಬ್ಯಾಕಪ್ ಮಾಡಬೇಕೆಂದು ನೀವು ನಿರ್ಧರಿಸುವ ಆಯ್ಕೆಯನ್ನು ನೀಡುವುದರ ಜೊತೆಗೆ, ಅದನ್ನು ಆಫ್ ಮಾಡುವ ಆಯ್ಕೆಯನ್ನು ಸಹ ಇದು ನಿಮಗೆ ನೀಡುತ್ತದೆ. ಆದರೆ ನೀವು ಫೋನ್‌ಗಳನ್ನು ಬದಲಾಯಿಸಿದರೆ, ನಿಮ್ಮ ಹೊಸ ಫೋನ್‌ನಲ್ಲಿ ನಿಮ್ಮ ಹಳೆಯ ಚಾಟ್‌ಗಳನ್ನು ರಿ ಸ್ಟೋರ್‌ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ.

Most Read Articles
Best Mobiles in India

English summary
There are things you can do to ensure all your chats on WhatsApp remain secure, private and safe from hacks.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X