ಗೂಗಲ್‌ನಲ್ಲಿ ಅಪ್ಪಿ ತಪ್ಪಿಯೂ ಈ ತಪ್ಪು ಕೆಲಸ ಎಂದೂ ಮಾಡಬೇಡಿ!

|

ಗೂಗಲ್ ಸರ್ಚ್ ಇಂಜಿನ್ ಅತ್ಯುತ್ತಮ ಮಾಹಿತಿ ಪ್ಲಾಟ್‌ಫಾರ್ಮ್ ಆಗಿದೆ. ನಿಮ್ಮ ಯಾವುದೇ ಪ್ರಶ್ನೆಗೆ ತಕ್ಷಣಕ್ಕೆ ಮಾಹಿತಿ ಒದಗಿಸುವ ಗೂಗಲ್‌ನಲ್ಲಿ ಇಂತಹ ವಿಷಯಕ್ಕೆ ಉತ್ತರ ಇಲ್ಲ ಎನ್ನುವಂತಿಲ್ಲ. ಸದ್ಯ ಏನೇ ಮಾಹಿತಿ ಬೇಕಿದ್ದರೂ ಅದಕ್ಕೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯುವವರು ಕಡಿಮೆ. ಬಹುತೇಕರು ನೇರವಾಗಿ ಗೂಗಲ್ ಸರ್ಚ್‌ನಲ್ಲಿ ಬೇಕಾದ ಮಾಹಿತಿ ಹುಡುಕುತ್ತಾರೆ. ಆದರೆ ಕೆಲವೊಮ್ಮೆ ದೊಡ್ಡ ಆಪತ್ತಿದೆ ತಂದು ನಿಲ್ಲಿಸಿ ಬಿಡುತ್ತದೆ.

ಗೂಗಲ್ ಸರ್ಚ್

ಹೌದು, ಗೂಗಲ್ ಸರ್ಚ್ ನಿಜಕ್ಕೂ ಅಗತ್ಯ ಮಾಹಿತಿ ಒದಗಿಸುವ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಗೂಗಲ್‌ ಸರ್ಚ್‌ನಲ್ಲಿ ಕಾಣಿಸುವ ಫಲಿತಾಂಶಗಳು ವೇರಿಫೈಡ್ ಆಗಿರುತ್ತವೆ. ಆದರೆ ಕೆಲ ಮಾಹಿತಿ/ವಿಷಯಗಳು ವೇರಿಫೈಡ್‌ ಆಗಿರುವುದಿಲ್ಲ. ಅಂತಹ ಫಲಿತಾಂಶಗಳನ್ನೆನಾದರೂ ಬಳಕೆದಾರರು ನಂಬಿದಾಗ ತೊಂದರೆಗೆ ಸಿಲುಕುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಗೂಗಲ್‌ನಲ್ಲಿ ಸರ್ಚ್ ಮಾಡುವಾಗ ಅಂತಹ ತಪ್ಪುಗಳನ್ನು ಮಾಡಲೇಬೇಡಿ. ಹಾಗಾದರೆ ಯಾವೆಲ್ಲಾ ತಪ್ಪು ಕೆಲಸಗಳನ್ನು ಗೂಗಲ್‌ನಲ್ಲಿ ಮಾಡಲೇಬಾರದು ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಕಸ್ಟಮರ್ ಕೇರ್ ನಂಬರ್ ಸರ್ಚ್ ಬೇಡ

ಕಸ್ಟಮರ್ ಕೇರ್ ನಂಬರ್ ಸರ್ಚ್ ಬೇಡ

ಪ್ರಸ್ತುತ ಕಸ್ಟಮರ್ ಕೇರ್ ಹೆಸರಿನಲ್ಲಿ ಆನ್‌ಲೈನ್ ವಂಚನೆಯ ಪ್ರಕರಣಗಳು ನಡೆದಿರುವುದನ್ನು ಕೇಳಿದ್ದೆವೆ. ಆನ್‌ಲೈನ್ ವಂಚಕರು ಗೂಗಲ್‌ ಸರ್ಚ್‌ನಲ್ಲಿ ನಕಲಿ ಕಸ್ಟಮರ್ ಕೇರ್ ನಂಬರ್ ಎಂಟ್ರಿ ಮಾಡಿರುವ ಸಾಧ್ಯತೆಗಳಿರುತ್ತವೆ. ಗ್ರಾಹಕರೆನಾದರೂ ಇಂತಹ ನಕಲಿ ಕಸ್ಟಮರ್ ಕೇರ್ ನಂಬರ್‌ಗಳಿಗೆ ಕರೆ ಮಾಡಿದರೇ ವಂಚನೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಗೂಗಲ್ ಸರ್ಚ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಬೇಡಿ. ನಿಮಗೆ ಯಾವ ಕಂಪನಿಯ ಕಸ್ಟಮರ್ ಕೇರ್ ನಂಬರ್ ಬೇಕಾಗಿರುತ್ತದೊ ಆ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಪಡೆಯಿರಿ.

ಆಪ್ಸ್‌ ಸರ್ಚ್ ಮಾಡಲೇಬೇಡಿ

ಆಪ್ಸ್‌ ಸರ್ಚ್ ಮಾಡಲೇಬೇಡಿ

ಸ್ಮಾರ್ಟ್‌ಫೋನ್‌ ಇದ್ದ ಮೇಲೆ ಅದರಲ್ಲಿ ಅಗತ್ಯವಾಗಿರುವ ಕೆಲವು ಅಪ್ಲಿಕೇಶನ್‌ಗಳು ಇರಬೇಕಾಗುತ್ತದೆ. ಇನ್ನು ಕೆಲವೊಮ್ಮೆ ಯಾವುದೇ ಆಪ್‌ ಇನ್‌ಸ್ಟಾಲ್ ಮಾಡಬೇಕಿರುತ್ತದೆ ಆಗ ಗೂಗಲ್‌ ಸರ್ಚ್‌ನಲ್ಲಿ ಆ ಅಪ್ಲಿಕೇಶನ್ ಹುಡುಕಬೇಡಿ. ಏಕೆಂದರೇ ಗೂಗಲ್‌ ಸರ್ಚ್‌ನಲ್ಲಿ ಲಭ್ಯವಾಗುವ ಆಪ್ಸ್‌ ಕೆಲವೊಮ್ಮೆ ನಕಲಿ ಆಪ್ಸ್‌ ಆಗಿರುತ್ತವೆ. ಹೀಗಾಗಿ ನೀವು ಯಾವುದೇ ಆಪ್ಸ್‌ ಡೌನ್‌ಲೋಡ್ ಮಾಡಬೇಕಿದ್ದರು ಅಧಿಕೃತ ಆಪ್‌ ಸ್ಟೋರ್‌ನಲ್ಲಿಯೇ ಡೌನ್‌ಲೋಡ್ ಮಾಡಿರಿ. ಆಂಡ್ರಾಯ್ಡ್‌ ಫೋನಿಗೆ-ಗೂಗಲ್ ಪೇ ಮತ್ತು ಐಫೋನ್‌ಗಳಿಗೆ-ಆಪಲ್‌ ಆಪ್‌ ಸ್ಟೋರ್ ಇದೆ.

ಮೆಡಿಸಿನ್ ಸರ್ಚ್ ಅಪಾಯಕ್ಕೆ ದಾರಿ

ಮೆಡಿಸಿನ್ ಸರ್ಚ್ ಅಪಾಯಕ್ಕೆ ದಾರಿ

ಇತ್ತೀಚಿಗೆ ಬಹುತೇಕ ಬಳಕೆದಾರರು ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಗೂಗಲ್‌ ಸರ್ಚ್‌ನಲ್ಲಿ ಮೆಡಿಸಿನ್ ಹುಡುಕುತ್ತಾರೆ. ಆದರೆ ಇದು ಅಪಾಯಕ್ಕೆ ದಾರಿ ಮಾಡುವ ಸಾಧ್ಯತೆಗಳಿರುತ್ತವೆ. ಆನ್‌ಲೈನ್‌ ವಂಚಕರು ತಮ್ಮ ಬೆಳೆ ಬೇಯಿಸಿಕೊಳ್ಳಲು ನಕಲಿ ಲಿಂಕ್ ದಾರಿ ತಪ್ಪಿಸುವ ಮಾರ್ಗಗಳನ್ನು ರೂಪಿಸಿರುತ್ತಾರೆ. ಅದಕ್ಕಾಗಿ ಮೆಡಿಸಲ್ ತರಿಸಲು ಗೂಗಲ್ ಸರ್ಚ್ ನಂಬಬೇಡಿ. ನಿಮ್ಮ ಆರೋಗ್ಯ ಸರಿ ಇಲ್ಲದಾಗ ವೈದ್ಯರನ್ನು ಭೇಟಿಯಾಗಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಿ.

ಹಣಕಾಸಿನ ಟಿಪ್ಸ್‌ ಬಗ್ಗೆ ಸರ್ಚ್ ಮಾಡಬೇಡಿ

ಹಣಕಾಸಿನ ಟಿಪ್ಸ್‌ ಬಗ್ಗೆ ಸರ್ಚ್ ಮಾಡಬೇಡಿ

ನೇರವಾಗಿ ಗೂಗಲ್‌ ಸರ್ಚ್‌ನಲ್ಲಿ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಟಿಪ್ಸ್‌ ಪಡೆಯುವ ಪ್ರಯತ್ನಗಳನ್ನು ಮಾಡಲೇಬೇಡಿ. ಹಣಕಾಸಿನ ಇನ್‌ವೆಸ್ಟ್‌ಮೆಂಟ್ ಮಾಡುವ ಬಗ್ಗೆ ಟಿಪ್ಸ್ ಸರ್ಚ್ ಮಾಡಬೇಡಿ. ಏಕೆಂದರೇ ಹಣಕಾಸಿನ ಹೂಡಿಕೆಯ ಬಗ್ಗೆ ಟಿಪ್ಸ್‌ ಸರ್ಚ್ ಮಾಡುವ ಗ್ರಾಹಕರನ್ನು ವಂಚಿಸಲು ಆನ್‌ಲೈನ್‌ ವಂಚಕರು ಹೊಂಚು ಹಾಕಿರುವ ಸಾಧ್ಯತೆಗಳು ಅಧಿಕವಾಗಿರುತ್ತವೆ.

ಗೂಗಲ್‌ ಸರ್ಚ್‌ನಲ್ಲಿ ಸಾಮಾಜಿಕ ತಾಣಗಳಿಗೆ ಎಂಟ್ರಿ ಬೇಡ

ಗೂಗಲ್‌ ಸರ್ಚ್‌ನಲ್ಲಿ ಸಾಮಾಜಿಕ ತಾಣಗಳಿಗೆ ಎಂಟ್ರಿ ಬೇಡ

ಸದ್ಯ ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್, ಹೆಲೊ ಸೇರಿದಂತೆ ಜನಪ್ರಿಯ ಸಾಮಾಜಿಕ ತಾಣಗಳ ಬಳಕೆಮಾಡುವ ಚಂದಾದಾರರು ಹೆಚ್ಚಿದ್ದಾರೆ. ಕೆಲವರು ಈ ಸಾಮಾಜಿಕ ತಾಣಗಳಿಗೆ ಗೂಗಲ್ ಸರ್ಚ್‌ನಿಂದ ಲಾಗ್ ಇನ್ ಆಗುತ್ತಾರೆ. ಆದರೆ ಈ ರೀತಿ ಎಂದಿಗೂ ಮಾಡಬೇಡಿ. ಅಧಿಕೃತ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಕೊಂಡು ಸಾಮಾಜಿಕ ತಾಣಗಳನ್ನು ಬಳಕೆ ಮಾಡಿರಿ.

Most Read Articles
Best Mobiles in India

English summary
Here are few 'Google search mistakes' you should never make.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X