ಯೂಟ್ಯೂಬ್‌ನಲ್ಲಿ ಈ ಕುತೂಹಲಕಾರಿ ಫೀಚರ್ಸ್‌ಗಳನ್ನು ನೀವು ಬಳಕೆ ಮಾಡಿದ್ದಿರಾ?

|

ಯಾವುದೇ ವಿಷಯದ ಬಗ್ಗೆ ವಿಡಿಯೋ ಮೂಲಕ ಮಾಹಿತಿ ತಿಳಿಯಬೇಕಿದ್ದರೇ ತಕ್ಷಣಕ್ಕೆ ನೆನಪಾಗುವುದೇ ಗೂಗಲ್ ಒಡೆತನದ ಯೂಟ್ಯೂಬ್ ಪ್ಲಾಟ್‌ಫಾರ್ಮ್. ಯೂಟ್ಯೂಬ್‌ನಲ್ಲಿ ಎಲ್ಲ ಬಗೆಯ ಕಂಟೆಂಟ್‌ಗೆ ಸಂಬಂಧಿಸಿದ ವಿಡಿಯೋಗಳು ಲಭ್ಯ ಎನ್ನುವುದು ತಿಳಿದಿರುವ ಸಂಗತಿಯೇ ಆಗಿದೆ. ನೀವು ಸಹ ಸ್ಮಾರ್ಟ್‌ಫೋನಿನಲ್ಲಿಯೇ ಯೂಟ್ಯೂಬ್ ಬಳಕೆಯ ಮಾಡಿರುತ್ತಿರಿ. ಆದರೆ ಯೂಟ್ಯೂಬ್‌ನಲ್ಲಿ ಕೆಲವು ಕುತೂಹಲಕಾರಿ ಫೀಚರ್ಸ್‌ಗಳು ಇವೆ ಅವುಗಳನ್ನು ನೀವು ಬಳಕೆ ಮಾಡಿದ್ದಿರಾ?

ಯೂಟ್ಯೂಬ್‌

ಹೌದು, ಜನಪ್ರಿಯ ಯೂಟ್ಯೂಬ್‌ ಬಳಕೆದಾರರಿಗೆ ವಿಡಿಯೊ ವೀಕ್ಷಣೆ ಮಾಡಲು ಅನುಕೂಲಕರ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಹಾಗೆಯೇ ಯೂಟ್ಯೂಬ್‌ ಪ್ರಿಬಳಕೆದಾರರು ಸೆಟ್ಟಿಂಗ್‌ ಆಯ್ಕೆಯ ಮೂಲಕ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ. ಯೂಟ್ಯೂಬ್‌ನಲ್ಲಿ ಮತ್ತೆ ಕೆಲವು ವಿಶೇಷ ಫೀಚರ್ಸ್‌ಗಳಿದ್ದು, ಅವು ಬಳಕೆದಾರರಿಗೆ ಪ್ರಯೋಜನಕಾರಿ ಅನಿಸಲಿವೆ. ಅಂತಹ ಕೆಲವು ಫೀಚರ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಸ್ವಿಪ್‌ ಡೌನ್‌ ಆಯ್ಕೆ

ಸ್ವಿಪ್‌ ಡೌನ್‌ ಆಯ್ಕೆ

ಸ್ವಿಪ್‌ ಡೌನ್‌ ಆಯ್ಕೆಯು ಲ್ಯಾಂಡ್‌ಸ್ಕೇಪ್ ಮೋಡ್‌ನಿಂದ ವೀಡಿಯೊವನ್ನು ನಿರ್ಗಮಿಸುವ ಇನ್ನೊಂದು ಮಾರ್ಗವಾಗಿದೆ. ವೀಡಿಯೊ ನೋಡುವಾಗ ಮೇಲಿನಿಂದ ಕೆಳಕ್ಕೆ ಸ್ವೈಪ್ ಮಾಡಿ ಮತ್ತು ನೀವು ಹಿಂದಿನ ಪರದೆಯತ್ತ ಹಿಂತಿರುಗುತ್ತೀರಿ. ನ್ಯಾವಿಗೇಷನ್ ಕೀಲಿಯನ್ನು ಹಿಂದಕ್ಕೆ ಟ್ಯಾಪ್ ಮಾಡುವ ಅಗತ್ಯವಿಲ್ಲ ಅಥವಾ ಸಾಧನವನ್ನು ಅಡ್ಡಲಾಗಿ ತಿರುಗಿಸುವ ಅಗತ್ಯವಿಲ್ಲ.

Incognito ಮೋಡ್ ಆಯ್ಕೆ

Incognito ಮೋಡ್ ಆಯ್ಕೆ

ಯೂಟ್ಯೂಬ್‌ನಲ್ಲಿ ಕೀ ವರ್ಡ್ ಎಂಟ್ರಿ ಮಾಡಿ ಸರ್ಚ್ ಮಾಡುವಾಗ ಎಂಟ್ರಿ ಮಾಡಿರುವ ಕೀ ವರ್ಡ್ / ಹುಡುಕಾಡಿದ ಪದಗಳು ಮತ್ತೆ ಕಾಣಿಸಬಾರದು ಎಂದು ನೀವು ಬಯಸದಿದ್ದರೆ ಅದಕ್ಕೆ ಈ ಆಯ್ಕೆ ಪೂರಕವಾಗಿದೆ. ಈ ಆಯ್ಕೆ ಬಳಸಿ ಗೌಪ್ಯ ಸರ್ಚ್ ಮಾಡಬಹುದಾಗಿದೆ. ಪ್ರೊಫೈಲ್ ಫೋಟೊ ಕ್ಲಿಕ್ ಮಾಡಿ ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ incognito mode ಆಯ್ಕೆ ಮಾಡಿಕೊಳ್ಳಿರಿ.

ಡಾರ್ಕ್‌ ಮೋಡ್ ಆಯ್ಕೆ

ಡಾರ್ಕ್‌ ಮೋಡ್ ಆಯ್ಕೆ

ಯೂಟ್ಯೂಬ್‌ನಲ್ಲಿಯೂ ಡಾರ್ಕ್‌ ಮೋಡ್ ಆಯ್ಕೆ ಲಭ್ಯ ವಿದೆ. ಬಳಕೆದಾರರು ಡಾರ್ಕ್‌ ಮೋಡ್ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳಬಹುದಾಗಿದೆ. YouTube ನಲ್ಲಿ ಡಾರ್ಕ್ ಮೋಡ್ ಅನ್ನು ಆನ್ ಮಾಡಲು, ಸೆಟ್ಟಿಂಗ್‌ಗಳು -> ಜನರನ್‌ -> ಡಾರ್ಕ್ ಥೀಮ್‌ಗೆ ಹೋಗಿ ಮತ್ತು ಸ್ಲೈಡರ್ ಆನ್ ಮಾಡಿ.

ಹಿಸ್ಟರಿ ಕ್ಲಿಯರ್ ಮಾಡಿ

ಹಿಸ್ಟರಿ ಕ್ಲಿಯರ್ ಮಾಡಿ

ಯೂಟ್ಯೂಬ್‌ ಸರ್ಚ್‌ನಲ್ಲಿ ಏನೇ ಹುಡುಕಿದರೂ, ಅದು ಬೇರೊಬ್ಬರು ಸೋಡಿದಾಗ ಕಾಣದಂತೆ ಇಡಲು ಆಗಾಗಾ ಹಿಸ್ಟರಿ ಕ್ಲಿಯರ್ ಮಾಡುತ್ತಿರಿ. ಹಿಸ್ಟರಿ ಕ್ಲಿಯರ್ ಮಾಡಲು ಸರಳ ಆಯ್ಕೆಗಳು ಇವೆ. ಪ್ರೊಫೈಲ್ ಚಿತ್ರ> ಸೆಟ್ಟಿಂಗ್‌ಗಳು> ಇತಿಹಾಸ ಮತ್ತು ಗೌಪ್ಯತೆ> ಮತ್ತು ವಾಚ್ ಹಿಸ್ಟರಿ ಕ್ಲಿಯರ್ ನ್ಯಾವಿಗೇಟ್ ಮಾಡುವ ಮೂಲಕ ಹುಡುಕಾಟ ಹಿಸ್ಟರಿ ಅಳಿಸಬಹುದು.

ಡೇಟಾ ಬಳಕೆಯ ಮಿತಿ ಆಯ್ಕೆ

ಡೇಟಾ ಬಳಕೆಯ ಮಿತಿ ಆಯ್ಕೆ

ಯೂಟ್ಯೂಬ್ ವಿಡಿಯೊ ವೀಕ್ಷಿಸುವಾಗ ಡೇಟಾ ಬಳಕೆಯಲ್ಲಿ ಮಿತಿಗೊಳಿಸುವ ಆಯ್ಕೆ ಇದಾಗಿದೆ. ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡುವುದು> ಸೆಟ್ಟಿಂಗ್‌ಗಳು> ಸಾಮಾನ್ಯ> ಮೊಬೈಲ್ ಡೇಟಾ ಬಳಕೆಯನ್ನು ಮಿತಿಗೊಳಿಸಿ. ಇದು Wi-Fi ಗೆ ಸಂಪರ್ಕಗೊಂಡಾಗ ಮಾತ್ರ HD ವೀಡಿಯೊವನ್ನು ಸ್ಟ್ರೀಮ್ ಮಾಡುತ್ತದೆ.

Most Read Articles
Best Mobiles in India

English summary
Here are the few top YouTube tips and tricks and quick settings you should never miss.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X