Just In
Don't Miss
- News
ಅತ್ಯಾಚಾರ ಆರೋಪಿಗಳ ಕೊಂದ ಪೊಲೀಸರ ಮೇಲೆ ಹೂಮಳೆ
- Finance
ಆರ್ಬಿಐನಿಂದ ಡಿಜಿಟಲ್ ಪಾವತಿಗೆ ಉತ್ತೇಜನ: ಬರಲಿದೆ ಪಿಪಿಐ ಕಾರ್ಡ್
- Movies
50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ
- Automobiles
ಇನ್ಮುಂದೆ ಬಂಕ್ಗಳಲ್ಲಿ ಬಾಟಲ್ಗಳಿಗೆ ಪೆಟ್ರೋಲ್ ಹಾಕಲ್ಲ..!
- Sports
'ರಣಹದ್ದು'ಗಳಿಂದ ಯುವ ಕ್ರಿಕೆಟಿಗರ ರಕ್ಷಿಸಬೇಕಿದೆ: ಪೊಲಾರ್ಡ್ ಹೇಳಿದ್ಯಾರಿಗೆ?!
- Lifestyle
ಉಗುರು ಕತ್ತರಿಸುವಾಗ ಈ ತಪ್ಪು ಮಾಡಿದರೆ ಸೋಂಕು ತಗುಲಬಹುದು
- Travel
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ಮೊಬೈಲ್ ನಂಬರ್ ಬದಲಿಸುವಾಗ ಹುಷಾರ್!..ಈ ಸುದ್ದಿ ಭಯ ಹುಟ್ಟಿಸುತ್ತಿದೆ!
ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವ ಮುನ್ನ ಈ ಲೇಖನವನ್ನು ಓದಲೇಬೇಕು. ಏಕೆಂದರೆ, ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ನಂಬರ್ ಅನ್ನು ಬದಲಾಯಿಸಿದ ವ್ಯಕ್ತಿಯೋರ್ವರು ತಮ್ಮದೇ ತಪ್ಪಿನಿಂದ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರ ಮೂಲದ ದುಬೈ ನಿವಾಸಿ ಅಶ್ರಫ್ ಎಂಬುವವರು ತನ್ನ ಬ್ಯಾಂಕ್ ಖಾತೆ ಮತ್ತು ಪೇಟಿಎಂ ವ್ಯಾಲೆಟ್ಗೆ ಲಿಂಕ್ ಮಾಡಿದ್ದ ಮೊಬೈಲ್ ನಂಬರನ್ನು ಇತ್ತೀಚೆಗೆ ಸ್ಥಗಿತ ಮಾಡಿ ಹಣ ಕಳೆದುಕೊಂಡಿದ್ದಾರೆ.
ಹೌದು, ಅಶ್ರಫ್ ಅವರು ತಮ್ಮ ಮೊಬೈಲ್ ನಂಬರ್ ಅನ್ನು ಕುಶಾಲನಗದ ಬ್ಯಾಂಕ್ ಒಂದರ ಖಾತೆಗೆ ಖಾತೆ ಮತ್ತು ಪೇಟಿಎಂ ವ್ಯಾಲೆಟ್ಗೆ ಲಿಂಕ್ ಮಾಡಿದ್ದರು. ಇದಾದ ಕೆಲದಿನಗಳ ನಂತರ ಆ ಮೊಬೈಲ್ ನಂಬರ್ ಅನ್ನು ಬಳಸದೇ ಬಿಟ್ಟು, ಬೇರೊಂದು ಮೊಬೈಲ್ ನಂಬರ್ ಹೊಂದಿರುವ ಸಿಮ್ ಬಳಸಲು ಶುರು ಮಾಡಿದರು. ಹೀಗೆ ಮಾಡಿದಾಗ ಅಶ್ರಫ್ ಅವರ ಹಳೆ ಮೊಬೈಲ್ ನಂಬರ್ ಅನ್ನು ಮತ್ತೋರ್ವರಿಗೆ ನೀಡಿ ಟೆಲಿಕಾಂ ಸೇವಾ ಸಂಸ್ಥೆ ಕೈತೊಳೆದುಕೊಂಡಿದೆ. ಇದಾದ ನಂತರ ಅಶ್ರಫ್ ಅವರಿಗೆ ಸಮಸ್ಯೆಗಳು ಶುರುವಾಗಿವೆ.
ಅಶ್ರಫ್ ಅವರ ಹಳೆ ಮೊಬೈಲ್ ನಂಬರ್ ಅನ್ನು ಟೆಲಿಕಾಂ ಕಂಪೆನಿಯು ದಾವಣಗೆರೆಯ ಭರತ್ ಎಂಬ ಮತ್ತೋರ್ವ ವ್ಯಕ್ತಿಗೆ ನೀಡಿದೆ. ಈ ನಂಬರ್ ಅನ್ನು ಪಡೆದುಕೊಂಡಿರುವ ಭರತ್ ಹೊಸ ಸಿಮ್ ಹಾಕಿಕೊಂಡಾಗ ಆಶ್ರಫ್ ಬ್ಯಾಂಕಿಂಗ್ ಸಂದೇಶಗಳು ಮೊಬೈಲ್ಗೆ ಬರುತ್ತಿದ್ದವು. ಇದನ್ನು ಬಳಸಿಕೊಂಡ ಭರತ್, ನಂತರ ಮೊಬೈಲ್ಗೆ ಪೇಟಿಎಂ ವ್ಯಾಲೆಟ್ ಆಕ್ಟಿವ್ ಮಾಡಿಕೊಂಡಿದ್ದ. ಆಶ್ರಫ್ ಬ್ಯಾಂಕ್ ಖಾತೆ ದಕ್ಕೆ ಸಿಂಕ್ ಆಗಿತ್ತು. ಬಳಿಕ ಭರತ್ ಪೇಟಿಎಂ ವ್ಯಾಲೆಟ್ನಿಂದ ತನ್ನ ಬ್ಯಾಂಕ್ ಖಾತೆಗೆ 4 ದಿನಗಳಲ್ಲಿ 79,994 ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದ.
ಇದರಿಂದ ಗಾಬರಿಗೊಂಡ ಆಶ್ರಫ್ ಅವರು ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ನಂಬರ್ ಆಧಾರದ ಮೇಲೆ ಭರತ್ನನ್ನು ಬಂಧಿಸಿದ್ದಾರೆ. ಆದರೆ, ಎಲ್ಲ ಪ್ರಕರಣದಲ್ಲೂ ಆರೋಪಿ ಹೀಗೆ ಸಿಕ್ಕಿಕೊಳ್ಳುವುದು ಕಷ್ಟವೇ ಸರಿ. ಹಾಗಾಗಿ, ಸಿಮ್ ಜತೆಗೆ ಲಿಂಕ್ ಆಗಿರುವ ಎಲ್ಲಾ ಖಾತೆಗಳ ಬಗ್ಗೆ ಎಚ್ಚರ ವಹಿಸಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಸಿಮ್ ಜತೆಗೆ ಲಿಂಕ್ ಆಗಿರುವ ಎಲ್ಲ ಸಂಪರ್ಕವನ್ನು ಕಡಿತ ಮಾಡಿ ಬಳಿಕವೇ ಹೊಸ ಗ್ರಾಹಕನಿಗೆ ಮಾರಾಟ ಮಾಡಬೇಕು ಎಂಬ ಕಾನೂನನ್ನು ತರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
21,999 ರೂ.ಗೆ ಪಾಪ್ಅಪ್ ಸೆಲ್ಫೀ ಕ್ಯಾಮೆರಾ ಫೋನ್ 'ರೆಡ್ಮಿ ಕೆ20' ರಿಲೀಸ್!
ಸೈಬರ್ ಅಪರಾಧ ತಡೆಗಟ್ಟಲು ಮತ್ತು ಭದ್ರತೆ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಲಿಂಕ್ ಆದೇಶ ನೀಡಿ ಸುತ್ತೋಲೆ ಹೊರಡಿಸಿದೆ. ಹಾಗಾಗಿ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಇನ್ನಿತರ ಬ್ಯಾಂಕಿಂಗ್ ಸೇವೆಗೆ ಮೊಬೈಲ್ ನಂಬರ್ ಕಡ್ಡಾಯ.ಈ ಸೇವೆಗಳನ್ನು ಪಡೆಯುವಾಗ ಮೊಬೈಲ್ಗೆ ಬರುವ ಒನ್ ಟೈಮ್ ಪಾಸ್ವರ್ಡ್(ಒಟಿಪಿ) ಅತಿ ಮುಖ್ಯವಾಗಿರುತ್ತವೆ. ಇದರ ಮೇಲೆ ನೀವು ನಿಗಾ ವಹಿಸದೆ ಇದ್ದರೆ ಬ್ಯಾಂಕ್ ಖಾತೆ ಖಾಲಿ ಆಗಲಿದೆ. ಹಾಗಾಗಿ, ನೀವು ಎಚ್ಚರ.!
ಭಾರತೀಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಆಪಲ್!
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090