ಈ ಕ್ಯಾಮೆರಾದ ಸೈಜ್‌ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ!

|

ಸೂಕ್ಷ್ಮ ಗಾತ್ರದ ಕ್ಯಾಮೆರಾಗಳು ವೈದ್ಯಕೀಯ ಕ್ಷೆತ್ರದಲ್ಲಿ ಸಾಕಷ್ಟು ಉಪಯುಕ್ತವಾಗಿವೆ. ಅದರಲ್ಲೂ ಮಾನವನ ದೇಹದಲ್ಲಿನ ಸಮಸ್ಯೆಗಳನ್ನು ಗುರುತಿಸುವಲ್ಲಿ ಸೂಕ್ಷ್ಮ ಗಾತ್ರದ ಕ್ಯಾಮೆರಾಗಳ ಪಾತ್ರ ಮಹತ್ವದ್ದು. ಇನ್ನು ಈ ಮೈಕ್ರೋ ಸೈಜ್‌ ಕ್ಯಾಮೆರಾಗಳು ಸೆರೆ ಹಿಡಿಯುವ ಚಿತ್ರಗಳು ಸಮಸ್ಯೆಗಳಿಗೆ ಪರಿಹಾರ ನೀಡುವುದಕ್ಕೆ ಸಹಕಾರಿಯಾಗಿವೆ. ಈ ಹಿಂದಿನ ಮೈಕ್ರೋ ಕ್ಯಾಮೆರಾಗಳು ಚಿತ್ರ ಸೆರೆ ಹಿಡಿಯುವಾಗ ಅಸ್ಪಷ್ಟತೆ ಕಾಣುತ್ತಿತ್ತು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯ ಮತ್ತು ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಸಂಶೋಧಕರು ಹೊಸ ಕ್ಯಾಮೆರಾವನ್ನು ಪರಿಚಯಿಸಿದ್ದಾರೆ. ಇದು ಅಸ್ಪಷ್ಟತೆಯನ್ನು ನಿವಾರಿಸಿ ಸ್ಪಷ್ಟ ಚಿತ್ರವನ್ನು ಸೆರೆ ಹಿಡಿಯಲಿದೆ.

ಈ ಕ್ಯಾಮೆರಾದ ಸೈಜ್‌ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ!

ಹೌದು, ಮೈಕ್ರೋಸೈಜ್‌ ಕ್ಯಾಮೆರಾ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ಪ್ರಿನ್ಸಟನ್‌ ವಿವಿ ಮತ್ತು ವಾಷಿಂಗ್ಟನ್‌ ವಿವಿ ಸಂಶೋಧಕರ ಹೊಸ ಹೆಜ್ಜೆ ಇಟ್ಟಿದ್ದಾರೆ. ಒರಟಾದ ಉಪ್ಪಿನ ಗಾತ್ರದ ಅಲ್ಟ್ರಾಕಾಂಪ್ಯಾಕ್ಟ್ ಕ್ಯಾಮೆರಾವನ್ನು ಪರಿಚಯಿಸಿದ್ದು, ಮಾನವನ ದೇಹದ ಸಮಸ್ಯೆಗಳು ಸ್ಪಷ್ಟವಾಗಿ ಸೆರೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಈ ಹೊಸ ವ್ಯವಸ್ಥೆಯು 500,000 ಪಟ್ಟು ದೊಡ್ಡದಾದ ಸಾಂಪ್ರದಾಯಿಕ ಸಂಯುಕ್ತ ಕ್ಯಾಮೆರಾ ಲೆನ್ಸ್‌ಗೆ ಸಮನಾಗಿ ಗರಿಗರಿಯಾದ, ಫುಲ್‌-ಕಲರ್‌ ಇಮೇಜ್‌ಗಳನ್ನು ಸೆರೆಹಿಡಿಯಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಹಾಗಾದ್ರೆ ಈ ಹೊಸ ಮೈಕ್ರೋ ಸೈಜ್‌ ಕ್ಯಾಮೆರಾದ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒಂದು ಉಪ್ಪಿನ ಹರಳು ಗಾತ್ರದ ಕ್ಯಾಮೆರಾವನ್ನು ಪ್ರಿನ್ಸಟನ್‌ ವಿವಿ ಮತ್ತು ವಾಷಿಂಗ್ಟನ್‌ ವಿವಿ ಸಂಶೋಧಕರು ಪರಿಚಯಿಸಿದ್ದಾರೆ. ಈ ಕ್ಯಾಮೆರಾ 500,000 ಪಟ್ಟು ದೊಡ್ಡದಾದ ಸಾಂಪ್ರದಾಯಿಕ ಸಂಯುಕ್ತ ಕ್ಯಾಮೆರಾ ಲೆನ್ಸ್‌ಗೆ ಸಮನಾಗಿದೆ ಎನ್ನಲಾಗಿದೆ. ಅಲ್ಲದೆ ಈ ಕ್ಯಾಮರಾದ ಹಾರ್ಡ್‌ವೇರ್ ಮತ್ತು ಕಂಪ್ಯೂಟೇಶನಲ್ ಪ್ರೊಸೆಸಿಂಗ್‌ನ ಜಂಟಿ ವಿನ್ಯಾಸದಿಂದ ಸಕ್ರಿಯಗೊಳಿಸಲಾದ ವ್ಯವಸ್ಥೆಯು ರೋಗಗಳನ್ನು ಪತ್ತೆಹಚ್ಚಲು ಬಳಸಬಹುದಾಗಿದೆ. ಅಲ್ಲದೆ ಚಿಕಿತ್ಸೆ ನೀಡಲು ವೈದ್ಯಕೀಯ ರೋಬೋಟ್‌ಗಳಿಗೆ ಕನಿಷ್ಠ ಆಕ್ರಮಣಕಾರಿ ಎಂಡೋಸ್ಕೋಪಿಯನ್ನು ಸಕ್ರಿಯಗೊಳಿಸಲು ಸಹಾಯ ಮಾಡಲಿದೆ. ಇಂತಹ ಸಾವಿರಾರು ಕ್ಯಾಮೆರಾಗಳ ಅರೇಗಳನ್ನು ಫುಲ್‌ ವ್ಯೂ ಸೆನ್ಸಾರ್‌ಗಾಗಿ ಬಳಸಬಹುದು. ಅಲ್ಲದೆ ಮೇಲ್ಮೈಗಳನ್ನು ಕ್ಯಾಮೆರಾಗಳಾಗಿ ಪರಿವರ್ತಿಸಬಹುದು.

ಈ ಕ್ಯಾಮೆರಾದ ಸೈಜ್‌ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ!

ಇನ್ನು ಈ ಕ್ಯಾಮೆರಾವು ಹೊಸ ಆಪ್ಟಿಕಲ್ ಸಿಸ್ಟಮ್ ಮೆಟಾಸರ್ಫೇಸ್ ಎಂಬ ತಂತ್ರಜ್ಞಾನವನ್ನು ಅವಲಂಬಿಸಿದೆ. ಇದನ್ನು ಕಂಪ್ಯೂಟರ್ ಚಿಪ್‌ನಂತೆ ಉತ್ಪಾದಿಸಬಹುದು. ಕೇವಲ ಅರ್ಧ ಮಿಲಿಮೀಟರ್ ಅಗಲ, ಮೆಟಾಸರ್ಫೇಸ್ 1.6 ಮಿಲಿಯನ್ ಸಿಲಿಂಡರಾಕಾರದ ಪೋಸ್ಟ್‌ಗಳಿಂದ ಕೂಡಿದೆ. ಇದರಲ್ಲಿರುವ ಪ್ರತಿಯೊಂದು ಪೋಸ್ಟ್ ಒಂದು ವಿಶಿಷ್ಟವಾದ ರೇಖಾಗಣಿತವನ್ನು ಹೊಂದಿದ್ದು, ಆಪ್ಟಿಕಲ್ ಆಂಟೆನಾದಂತೆ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ಕಂಪ್ಲಿಟ್‌ ಆಪ್ಟಿಕಲ್ ವೇವ್‌ಫ್ರಂಟ್ ಅನ್ನು ಸರಿಯಾಗಿ ರೂಪಿಸಲು ಪ್ರತಿ ಪೋಸ್ಟ್‌ನ ವಿನ್ಯಾಸವನ್ನು ಬದಲಾಯಿಸುವುದು ಅವಶ್ಯಕವಾಗಿದೆ.

ಈ ಕ್ಯಾಮೆರಾದ ರಚನೆಯಲ್ಲಿನ ಪ್ರಮುಖ ಆವಿಷ್ಕಾರವೆಂದರೆ ಆಪ್ಟಿಕಲ್ ಮೇಲ್ಮೈಯ ಸಮಗ್ರ ವಿನ್ಯಾಸ ಮತ್ತು ಚಿತ್ರವನ್ನು ಉತ್ಪಾದಿಸುವ ಸಿಗ್ನಲ್ ಪ್ರೊಸೆಸಿಂಗ್ ಅಲ್ಗಾರಿದಮ್‌ ಎನ್ನಬಹುದು. ಇದು ನೈಸರ್ಗಿಕ ಬೆಳಕಿನ ಪರಿಸ್ಥಿತಿಗಳಲ್ಲಿ ಕ್ಯಾಮೆರಾದ ಕಾರ್ಯಕ್ಷಮತೆಯನ್ನು ಹೆಚ್ಚಿಸಿದೆ. ಸಂಶೋಧಕರು ತಮ್ಮ ಸಿಸ್ಟಂನೊಂದಿಗೆ ತಯಾರಿಸಿದ ಚಿತ್ರಗಳನ್ನು ಹಿಂದಿನ ಮೆಟಾಸರ್ಫೇಸ್ ಕ್ಯಾಮೆರಾಗಳ ಫಲಿತಾಂಶಗಳಿಗೆ ಹೋಲಿಸಿದ್ದಾರೆ. ಅದರಂತೆ ಈ ಕ್ಯಾಮೆರಾ ಪರಿಮಾಣದಲ್ಲಿ 500,000 ಪಟ್ಟು ಹೆಚ್ಚು ದೊಡ್ಡದಾಗಿದೆ.

ಈ ಕ್ಯಾಮೆರಾದ ಸೈಜ್‌ ಕೇಳಿದ್ರೆ ನೀವು ಶಾಕ್‌ ಆಗೋದು ಗ್ಯಾರಂಟಿ!

ಇತರ ಅಲ್ಟ್ರಾಕಾಂಪ್ಯಾಕ್ಟ್ ಮೆಟಾಸರ್ಫೇಸ್ ಲೆನ್ಸ್‌ಗಳಲ್ಲಿ ತೆಗೆದಿರುವ ಚಿತ್ರಗಳು ಅಸ್ಪಷ್ಟವಾದ ಮಾದರಿಯಲ್ಲಿ ಕಾಣುತ್ತಿವೆ. ಆದರೆ ಇ ಕ್ಯಾಮೆರಾದಲ್ಲಿ ಸೆರೆ ಹಿಡಿದ ಚಿತ್ರಗಳು ಪರಿಪೂರ್ಣದ ಸ್ಪಷ್ಟತೆಯನ್ನು ಪಡೆದಿವೆ. ಏಕೆಂದರೆ ಇದು ಕೆಂಪು, ಹಸಿರು ಮತ್ತು ನೀಲಿ ಬಣ್ಣವನ್ನು ಸಂಯೋಜಿಸುತ್ತದೆ. ಇನ್ನು ಈ ಆಪ್ಟಿಕಲ್ ವಿನ್ಯಾಸದ ವಿಧಾನವು ಹೊಸದಲ್ಲವಾದರೂ, ಮುಂಭಾಗದಲ್ಲಿ ಮೇಲ್ಮೈ ಆಪ್ಟಿಕಲ್ ತಂತ್ರಜ್ಞಾನವನ್ನು ಮತ್ತು ಹಿಂಭಾಗದಲ್ಲಿ ನರ ಆಧಾರಿತ ಸಂಸ್ಕರಣೆಯನ್ನು ಬಳಸುವ ಮೊದಲ ವ್ಯವಸ್ಥೆ ಇದಾಗಿದೆ ಎಂದು ಮೈಟ್-ಆಪ್ಟಿಕ್‌ನ ಸಲಹೆಗಾರ ಜೋಸೆಫ್ ಮೈಟ್ ಹೇಳಿದ್ದಾರೆ.

ಹೊಸ ಮಾದರಿಯ ತಂತ್ರಜ್ಞಾನ ಸಂಶೋದಕರ ಪರಿಶ್ರಮದ ಫಲವಾಗಿ ಈ ಹೊಸ ಕ್ಯಾಮೆರಾವನ್ನು ಪರಿಚಯಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕ್ಯಾಮೆರಾದ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗುವ ಸಾದ್ಯತೆ ಇದೆ. ಮಾನವನ ದೇಹದಲ್ಲಿ ಕಂಡುಬರುವ ಸೂಕ್ಷ್ಮ ಸಮಸ್ಯೆಗಳನ್ನು ಪತ್ತೆ ಹಚ್ಚುವಲ್ಲಿ ಈ ಕ್ಯಾಮೆರಾ ಸಹಾಯಕವಾಗಲಿದೆ. ಪರಿಪೂರ್ಣವಾದ ಚಿತ್ರಗಳನ್ನು ಸೆರೆಹಿಡಿಯುವುದರಿಂದ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಸುಲಭವಾಗಲಿದೆ ಎಂದು ಹೇಳಲಾಗಿದೆ.

Most Read Articles
Best Mobiles in India

English summary
Micro-sized cameras have great potential to spot problems in the human body and enable sensing for super-small robots.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X