ಮೊಬೈಲ್ ಕವರ್‌ಗೆ ಚರ್ಮದ ಟಚ್‌!..ಫೋನ್ ಬೀಗಿ ಹಿಡಿದರೆ ಕವರ್‌ಗೆ ಬರುತ್ತೆ ಕೋಪ!

|

ಪ್ರಸ್ತುತ ತಂತ್ರಜ್ಞಾನವು ವೇಗದ ಗತಿಯಲ್ಲಿ ಸಾಗುತ್ತಿದ್ದು, ಅದರ ಪ್ರತಿಫಲವಾಗಿ ಸ್ಮಾರ್ಟ್‌ಫೋನ್ ವಲಯದಲ್ಲಿ ಈಗಾಗಲೇ ಸಾಕಷ್ಟು ಮಹತ್ತರ ಬದಲಾವಣೆಗಳು ನಡೆದಿವೆ. ಇತ್ತೀಚಿನ ಹೊಸ AI ತಂತ್ರಜ್ಞಾನ ಆಧಾರಿತ ಸ್ಮಾರ್ಟ್‌ಫೋನ್‌ಗಳು ಎಷ್ಟು ಸ್ಮಾರ್ಟ್‌ ಆಗಿ ಗ್ರಹಿಸುತ್ತವೆ ಎಂಬುದನ್ನು ನೋಡಿರುತ್ತಿರಿ. ಆದರೆ ಸ್ಮಾರ್ಟ್‌ಫೋನ್‌ ಕೇಸ್‌(ಕವರ್) ಸಹ ನಿಮ್ಮ ಕ್ರಿಯೆಗಳನ್ನು ಗ್ರಹಿಸಿ ಪ್ರತಿಕ್ರಿಯೆ ನೀಡಬಲ್ಲದು ಎನ್ನುವುದನ್ನು ನೀವು ನೋಡಿರುವುದಕ್ಕೆ ಚಾನ್ಸೇ ಇಲ್ಲ.

ಸ್ಮಾರ್ಟ್‌ಫೋನ್ ಕವರ್‌

ಹೌದು, ಫ್ರಾನ್ಸ್‌ನ ಸೊರ್ಬನ್‌ ವಿಶ್ವವಿದ್ಯಾಲಯ ಹಾಗೂ ಟೆಲಿಕಾಂ ಪ್ಯಾರಿಸ್‌ಟೆಕ್‌ ಸಹಯೋಗದಲ್ಲಿ ಲಂಡನ್‌ನ ಬ್ರಿಸ್ಟಲ್‌ ವಿಶ್ವವಿದ್ಯಾಲಯದ ಸಂಶೋಧಕರು (HCI Sorbonne Université and CNRS) ಸ್ಮಾರ್ಟ್‌ಫೋನ್ ಕವರ್‌ ಅಭಿವೃದ್ಧಿಪಡಿಸಿದ್ದು, ಈ ಸ್ಮಾರ್ಟ್‌ಫೋನ್ ಕವರ್‌ ರಚನೆಯು ಮನುಷ್ಯನ ಚರ್ಮವನ್ನು ಹೋಲುವಂತಿದೆ. ಈ ಆವಿಸ್ಕಾರ ಸ್ಮಾರ್ಟ್‌ಫೋನ್ ಆಕ್ಸಸರಿಸ್‌ಗಳ ಮಟ್ಟವನ್ನು ಮುಂದುವರಿದ ಅಡ್ವಾನ್ಸ್‌ ಲೆವೆಲ್‌ಗೆ ತಲುಪಿಸಿದೆ.

ಕೃತಕ ಚರ್ಮ

ಈ ಸ್ಮಾರ್ಟ್‌ಫೋನ್ ಕವರ್ ಕೃತಕ ಚರ್ಮದಿಂದ ತಯಾರಿಸಲ್ಪಟ್ಟಿದ್ದು, ಮನುಷ್ಯರ ಚರ್ಮದಲ್ಲಿ ಇರುವಂತೆ ಪದರದ ಮಾದರಿಯಲ್ಲಿ ಹಲವು ಪದರಗಳ ಸಿಲಿಕಾನ್‌ ಲೇಯರ್‌ಗಳನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ ಅನ್ನು ಬೀಗಿಯಾಗಿ ಹಿಡಿಯುವುದು, ಕವರ್ ಚಿವುಟುವುದು, ಕವರ್‌ಗೆ ಕಚಗುಳಿ ಇಂಥಹ ಕೆಲವೊಂದು ಗೆಸ್ಚರ್‌ಗಳನ್ನು ಈ ಸ್ಮಾರ್ಟ್‌ ಕವರ್ ಗ್ರಹಿಸಿ ಅದಕ್ಕೆ ತಕ್ಕನಾಗಿ ವರ್ತಿಸುತ್ತದೆ.

ಕವರ್ ತಯಾರಿಕೆ

ಪ್ರಸ್ತುತ ಕೃತಕ ಚರ್ಮವನ್ನು (artificial skin) ಹೆಚ್ಚಾಗಿ ರೋಬೋಟ್‌ಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಸ್ಮಾರ್ಟ್‌ಫೋನ್ ಕವರ್ ತಯಾರಿಕೆಯಲ್ಲಿ ಬಳಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಸ್ಮಾರ್ಟ್‌ಫೋನ್ ಆಕ್ಸಸರಿಸನಲ್ಲಿ ಇದೊಂದು ಹೊಸ ಆವಿಸ್ಕಾರ್‌ ಆಗಿದೆ. ಜೊತೆಗೆ ಇದು ಸ್ಮಾರ್ಟ್‌ಫೋನ್‌ಗಳಿಗೆ ಗಟ್ಟಿಮುಟ್ಟಾದ ಬ್ಯಾಕ್‌ ಕವರ್‌ ಆಗಿವು ಕೆಲಸಮಾಡಲಿದೆ.

ಸ್ಮಾರ್ಟ್‌ಫೋನ್

ಈ ಕೃತಕ ಚರ್ಮದ ಸ್ಮಾರ್ಟ್‌ಫೋನ್ ಕವರ್ ಇಮೋಜಿಗಳ ರೂಪದಲ್ಲಿ ಪ್ರತಿಕ್ರಿಯಿಸುವಂತೆ ಡಿಸೈನ್ ಮಾಡಲಾಗಿದೆ. ಸ್ಮಾರ್ಟ್‌ಫೋನ್‌ ಅನ್ನು ನೀವು ಗಟ್ಟಿಯಾಗಿ ಹಿಡಿದರೇ, ಕೋಪದ ಇಮೋಜಿ ವ್ಯಕ್ತಪಡಿಸುತ್ತದೆ. ಹಾಗೆಯೇ ಕವರ್‌ಗೆ ಕಚಗುಳಿ ಕೊಟ್ಟರೇ ಅದು ತಕ್ಷಣವೇ ನಗುವ ಇಮೋಜಿಯನ್ನು ಹೊರಹಾಕುತ್ತದೆ. ಹಾಗೆಯೇ ಸ್ಮಾರ್ಟ್‌ಫೋನ್ ಬಳಕೆದಾರರ ಲೋಕೇಶನ್‌ ಸಹ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

Most Read Articles
Best Mobiles in India

English summary
The cover also works with your phone to display emojis that correspond to how you touch it, like a laughing face for tickles. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more