Just In
Don't Miss
- News
ಅಮೆರಿಕ ತಲುಪಿದ ಅಭಿಷೇಕ್ ಕುಟುಂಬ; ಅಂತ್ಯಕ್ರಿಯೆ ಬಗ್ಗೆ ತೀರ್ಮಾನ
- Lifestyle
ನೀರಿನ ಉಪವಾಸ: ಏನಿದರ ಪ್ರಯೋಜನ ಮತ್ತು ಏನಿವೆ ಅಡ್ಡ ಪರಿಣಾಮಗಳು?
- Sports
South Asian Games: ಈ ಬಾರಿ ಭಾರತದಿಂದ ಭರ್ಜರಿ ಬಂಗಾರದ ಬೇಟೆ!
- Finance
ಈ 4 ಹೂಡಿಕೆ ಮೇಲೆ ಬರುವ ಆದಾಯಕ್ಕೆ ಭಾರತದಲ್ಲಿ ತೆರಿಗೆ ಇಲ್ಲ
- Automobiles
ಹೊಸ ಲುಕ್ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ 2020ರ ಮಹೀಂದ್ರಾ ಬೊಲೆರೊ
- Movies
50 ದಿನ ಪೂರೈಸಿದ ಶ್ರೀಮುರಳಿ 'ಭರಾಟೆ' ಸಿನಿಮಾ
- Travel
ಲಕ್ಷದ್ವೀಪಕ್ಕೆ ಪ್ರವಾಸ ಹೋಗುವವರಿದ್ದೀರಾ? ಈ ಸಂಗತಿಗಳ ಬಗ್ಗೆ ಎಚ್ಚರಿಕೆ ಇರಲಿ
- Education
ಅರಣ್ಯ ಇಲಾಖೆಯಲ್ಲಿ ಕಾನೂನು ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ...ತಿಂಗಳಿಗೆ 60,000/-ರೂ ವೇತನ
ಮೊಬೈಲ್ ಕವರ್ಗೆ ಚರ್ಮದ ಟಚ್!..ಫೋನ್ ಬೀಗಿ ಹಿಡಿದರೆ ಕವರ್ಗೆ ಬರುತ್ತೆ ಕೋಪ!
ಪ್ರಸ್ತುತ ತಂತ್ರಜ್ಞಾನವು ವೇಗದ ಗತಿಯಲ್ಲಿ ಸಾಗುತ್ತಿದ್ದು, ಅದರ ಪ್ರತಿಫಲವಾಗಿ ಸ್ಮಾರ್ಟ್ಫೋನ್ ವಲಯದಲ್ಲಿ ಈಗಾಗಲೇ ಸಾಕಷ್ಟು ಮಹತ್ತರ ಬದಲಾವಣೆಗಳು ನಡೆದಿವೆ. ಇತ್ತೀಚಿನ ಹೊಸ AI ತಂತ್ರಜ್ಞಾನ ಆಧಾರಿತ ಸ್ಮಾರ್ಟ್ಫೋನ್ಗಳು ಎಷ್ಟು ಸ್ಮಾರ್ಟ್ ಆಗಿ ಗ್ರಹಿಸುತ್ತವೆ ಎಂಬುದನ್ನು ನೋಡಿರುತ್ತಿರಿ. ಆದರೆ ಸ್ಮಾರ್ಟ್ಫೋನ್ ಕೇಸ್(ಕವರ್) ಸಹ ನಿಮ್ಮ ಕ್ರಿಯೆಗಳನ್ನು ಗ್ರಹಿಸಿ ಪ್ರತಿಕ್ರಿಯೆ ನೀಡಬಲ್ಲದು ಎನ್ನುವುದನ್ನು ನೀವು ನೋಡಿರುವುದಕ್ಕೆ ಚಾನ್ಸೇ ಇಲ್ಲ.

ಹೌದು, ಫ್ರಾನ್ಸ್ನ ಸೊರ್ಬನ್ ವಿಶ್ವವಿದ್ಯಾಲಯ ಹಾಗೂ ಟೆಲಿಕಾಂ ಪ್ಯಾರಿಸ್ಟೆಕ್ ಸಹಯೋಗದಲ್ಲಿ ಲಂಡನ್ನ ಬ್ರಿಸ್ಟಲ್ ವಿಶ್ವವಿದ್ಯಾಲಯದ ಸಂಶೋಧಕರು (HCI Sorbonne Université and CNRS) ಸ್ಮಾರ್ಟ್ಫೋನ್ ಕವರ್ ಅಭಿವೃದ್ಧಿಪಡಿಸಿದ್ದು, ಈ ಸ್ಮಾರ್ಟ್ಫೋನ್ ಕವರ್ ರಚನೆಯು ಮನುಷ್ಯನ ಚರ್ಮವನ್ನು ಹೋಲುವಂತಿದೆ. ಈ ಆವಿಸ್ಕಾರ ಸ್ಮಾರ್ಟ್ಫೋನ್ ಆಕ್ಸಸರಿಸ್ಗಳ ಮಟ್ಟವನ್ನು ಮುಂದುವರಿದ ಅಡ್ವಾನ್ಸ್ ಲೆವೆಲ್ಗೆ ತಲುಪಿಸಿದೆ.

ಈ ಸ್ಮಾರ್ಟ್ಫೋನ್ ಕವರ್ ಕೃತಕ ಚರ್ಮದಿಂದ ತಯಾರಿಸಲ್ಪಟ್ಟಿದ್ದು, ಮನುಷ್ಯರ ಚರ್ಮದಲ್ಲಿ ಇರುವಂತೆ ಪದರದ ಮಾದರಿಯಲ್ಲಿ ಹಲವು ಪದರಗಳ ಸಿಲಿಕಾನ್ ಲೇಯರ್ಗಳನ್ನು ಹೊಂದಿದೆ. ಸ್ಮಾರ್ಟ್ಫೋನ್ ಅನ್ನು ಬೀಗಿಯಾಗಿ ಹಿಡಿಯುವುದು, ಕವರ್ ಚಿವುಟುವುದು, ಕವರ್ಗೆ ಕಚಗುಳಿ ಇಂಥಹ ಕೆಲವೊಂದು ಗೆಸ್ಚರ್ಗಳನ್ನು ಈ ಸ್ಮಾರ್ಟ್ ಕವರ್ ಗ್ರಹಿಸಿ ಅದಕ್ಕೆ ತಕ್ಕನಾಗಿ ವರ್ತಿಸುತ್ತದೆ.

ಪ್ರಸ್ತುತ ಕೃತಕ ಚರ್ಮವನ್ನು (artificial skin) ಹೆಚ್ಚಾಗಿ ರೋಬೋಟ್ಗಳ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಸ್ಮಾರ್ಟ್ಫೋನ್ ಕವರ್ ತಯಾರಿಕೆಯಲ್ಲಿ ಬಳಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಸ್ಮಾರ್ಟ್ಫೋನ್ ಆಕ್ಸಸರಿಸನಲ್ಲಿ ಇದೊಂದು ಹೊಸ ಆವಿಸ್ಕಾರ್ ಆಗಿದೆ. ಜೊತೆಗೆ ಇದು ಸ್ಮಾರ್ಟ್ಫೋನ್ಗಳಿಗೆ ಗಟ್ಟಿಮುಟ್ಟಾದ ಬ್ಯಾಕ್ ಕವರ್ ಆಗಿವು ಕೆಲಸಮಾಡಲಿದೆ.

ಈ ಕೃತಕ ಚರ್ಮದ ಸ್ಮಾರ್ಟ್ಫೋನ್ ಕವರ್ ಇಮೋಜಿಗಳ ರೂಪದಲ್ಲಿ ಪ್ರತಿಕ್ರಿಯಿಸುವಂತೆ ಡಿಸೈನ್ ಮಾಡಲಾಗಿದೆ. ಸ್ಮಾರ್ಟ್ಫೋನ್ ಅನ್ನು ನೀವು ಗಟ್ಟಿಯಾಗಿ ಹಿಡಿದರೇ, ಕೋಪದ ಇಮೋಜಿ ವ್ಯಕ್ತಪಡಿಸುತ್ತದೆ. ಹಾಗೆಯೇ ಕವರ್ಗೆ ಕಚಗುಳಿ ಕೊಟ್ಟರೇ ಅದು ತಕ್ಷಣವೇ ನಗುವ ಇಮೋಜಿಯನ್ನು ಹೊರಹಾಕುತ್ತದೆ. ಹಾಗೆಯೇ ಸ್ಮಾರ್ಟ್ಫೋನ್ ಬಳಕೆದಾರರ ಲೋಕೇಶನ್ ಸಹ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090