ಕೋವಿಡ್ -19 ಕುರಿತ ತಪ್ಪು ಮಾಹಿತಿ ಪತ್ತೆಗೆ ಟಿಕ್‌ಟಾಕ್‌ನ ಹೊಸ ಫೀಚರ್!

|

ಕೋವಿಡ್‌-19 ವಿರುದ್ದ ಇಡೀ ವಿಶ್ವವೇ ಹೋರಾಡುತ್ತಿದೆ. ಜಗತ್ತಿನ ಬಹುತೇಕ ರಾಷ್ಟ್ರಗಲು ಕೊರೋನಾ ವೈರಸ್‌ ಅನ್ನು ಇನ್ನಿಲ್ಲದಂತೆ ಮಾಡುವುದಕ್ಕೆ ಶ್ರಮಿಸುತ್ತಿವೆ. ಇದಕ್ಕೇ ಭಾರತ ದೇಶವೂ ಕುಡ ಹೊರತಾಗಿಲ್ಲ. ಇನ್ನು ವಿಶ್ವದ ಎಲ್ಲಾ ವಲಯಗಳು ಕೂಡ ತಮ್ಮ ಕೈಲಾದ ಸಹಾಯವನ್ನ ಮಾಡುತ್ತಿವೆ. ಇದರಲ್ಲಿ ಟೆಕ್‌ ವಲಯವೂ ಕೂಡ ಸೇರಿದೆ. ಇನ್ನು ಟೆಕ್‌ ವಲಯವೂ ಆರ್ಥಿಕವಾಗಿ ಮಾತ್ರವಲ್ಲದೆ ತಾಂತ್ರಿಕವಾಗಿಯೂ ಕೂಡ ಕೊರೋನಾ ವಿರುದ್ದ ಹೋರಾಟಕ್ಕೆ ಕಯ ಜೋಡಿಸಿವೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಆಪ್‌ಗಳು ಬಿಡುಗಡೆ ಆಗಿವೆ. ಇನ್ನು ಕೆಲವೂ ಟ್ರ್ಯಾಕಿಂಗ್‌ ಫೀಚರ್ಸ್‌ಗಳನ್ನ ಬಿಡುಗಡೆ ಮಾಡಿವೆ. ಇದೀಗ ಇದೇ ಸಾಲಿಗೆ ಟಿಕ್‌ಟಾಕ್‌ ಕೂಡ ಸೇರಿದೆ.

ಹೌದು

ಹೌದು, ಬೈಟ್‌ ಡ್ಯಾನ್ಸ್‌ ಒಡೆತನದ ಟಿಕ್‌ಟಾಕ್‌ ಜಾಗತಿಕವಾಗಿ ಜನಪ್ರಿಯತೆ ಪಡೆದುಕೊಂಡಿರುವ ಸೊಶೀಯಲ್‌ ಮೀಡಿಯಾ ಆಪ್‌ಗಳಲ್ಲಿ ಒಂದಾಗಿದೆ. ಈಗಾಗಲೇ ಎಲ್ಲಾ ಮಾದರಿಯಲ್ಲೂ ಟಿಕ್‌ಟಾಕ್‌ ಕೋವಿಡ್ -19 ವಿರುದ್ಧ ಹೋರಾಡಲು ಕೈ ಜೋಡಿಸಿದೆ. ಇನ್ನು ಕಂಪನಿಯು ಈಗಾಗಲೇ ವಿವಿಧ ಕರೋನವೈರಸ್ ಪರಿಹಾರ ಕಾರ್ಯಾಚರಣೆಗಳಲ್ಲಿ million 250 ಮಿಲಿಯನ್ ದೇಣಿಗೆ ನೀಡಿದೆ. ಈಗ, ಕಂಪನಿಯು ಕೋವಿಡ್ -19 ಕುರಿತು ತಪ್ಪು ಮಾಹಿತಿ ಹಡುವುದನ್ನ ಟ್ರ್ಯಾಕಿಂಗ್‌ ಮಾಡಲು ಮುಂದಾಗಿದೆ.

ಟಿಕ್‌ಟಾಕ್‌

ಸದ್ಯ ಟಿಕ್‌ಟಾಕ್‌ ಕೋವಿಡ್‌-19 ವಿರುದ್ದದ ಹೋರಾಟದಲ್ಲಿ ಸಕ್ರಿಯವಾಗಿದ್ದು, ಮೊದಲನೆಯದಾಗಿ, ಕಂಪನಿಯು ಅಪ್ಲಿಕೇಶನ್‌ನಲ್ಲಿನ ತಪ್ಪು ಮಾಹಿತಿ ನೀಡುವ ವೀಡಿಯೋಗಳನ್ನ ಪೋಸ್ಟ್‌ ಮಾಡಿದರೆ ಅದನ್ನು ಪತ್ತೆ ಮಾಡುವ ಹಾಗೂ ತಪ್ಪು ಮಾಹಿತಿ ಎಂದು ತಿಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದು ಕೋವಿಡ್ -19 ಏಕಾಏಕಿ ಬಗ್ಗೆ ತಪ್ಪು ಮಾಹಿತಿಯನ್ನು ವರದಿ ಮಾಡಲು ಮಾತ್ರವಲ್ಲದೆ ಇತರ ವಿಷಯಗಳ ಬಗ್ಗೆಯೂ ಬಳಕೆದಾರರಿಗೆ ಅವಕಾಶ ನೀಡುತ್ತದೆ. ಅಲ್ಲದೆ ಟಿಕ್‌ಟಾಕ್ ಬಳಕೆದಾರರು ಕೂಡ ಕೊರೋನಾ ಕುರಿತು ತಪ್ಪು ಮಾಹಿತಿ ಇರುವ ವಿಡಿಯೋಗಳು ಕಂಡು ಬಂದರೆ ಅದರ ವಿರುದ್ದ ಟಿಕ್‌ಟಾಕ್‌ ಆಪ್‌ನಲ್ಲಿ ರಿಪೋರ್ಟ್‌ ಮಾಡಬಹುದಾಗಿದೆ.

ವೀಡಿಯೋಗಳು

ಇನ್ನು ಈ ವೀಡಿಯೋಗಳು ಕುರಿತು ನೀವು ವರದಿ ಮಾಡಬೇಕಾದರೆ ಶೇರ್‌ > ವರದಿ> ತಪ್ಪುದಾರಿಗೆಳೆಯುವ ಮಾಹಿತಿ> ಕೋವಿಡ್ -19 ತಪ್ಪು ಮಾಹಿತಿ> ಸಲ್ಲಿಸಿ, ಈ ಮಾರ್ಗವನ್ನು ಅನುಸರಿಸುವ ಮೂಲಕ ತಪ್ಪುದಾರಿಗೆಳೆಯುವ ವೀಡಿಯೊವನ್ನು ವರದಿ ಮಾಡಬಹುದು ಇದಲ್ಲದೆ ಬಳಕೆದಾರರು ಯಾವುದೇ ವಿಷಯವನ್ನು‘ COVID-19 ತಪ್ಪು ಮಾಹಿತಿ ಎಂದು ವರದಿ ಮಾಡಿದಾಗ, ಅದನ್ನು ಆದ್ಯತೆಯ ಮಾಡರೇಶನ್ ಕ್ಯೂಗೆ ಕಳುಹಿಸಲಾಗುತ್ತದೆ, ಇದನ್ನು ಆಂತರಿಕ ಕಾರ್ಯಪಡೆಯಿಂದ ನಿರ್ವಹಿಸಲಾಗುತ್ತದೆ ಮತ್ತು ಮೂರನೇ ವ್ಯಕ್ತಿಯ ಫ್ಯಾಕ್ಟ್-ಚೆಕರ್‌ಗಳಿಗೆ ಹೆಚ್ಚಿಸುತ್ತದೆ. COVID-19 ರ ಸುತ್ತಲಿನ ತಪ್ಪು ಮಾಹಿತಿಯನ್ನು ಪರಿಹರಿಸಲು ಮತ್ತು ನಿರ್ಧಾರ ತೆಗೆದುಕೊಳ್ಳಲು ಆದ್ಯತೆ ನೀಡುವಲ್ಲಿ ನಮ್ಮ ಸಾಮರ್ಥ್ಯಗಳನ್ನು ಬಲಪಡಿಸಲು ಕಾರ್ಯಪಡೆ ಸ್ಥಾಪಿಸಲಾಗಿದೆ "ಎಂದು ಟಿಕ್‌ಟಾಕ್ ಹೇಳಿಕೆ ನೀಡಿದೆ.

ಫೀಚರ್ಸ್‌

ಸದ್ಯ ಈ ಫೀಚರ್ಸ್‌ ಅನ್ನು ಹಂತಹಂತವಾಗಿ ದೇಶಾದ್ಯಂತ ಹೊರತರಲಾಗುತ್ತಿದೆ. ಇದರ ಜೊತೆಗೆ, USD 50K (3.5 ಮಿಲಿಯನ್ ರೂ.) ಅನುದಾನವನ್ನೂ ಸಹ ಕಂಪನಿಯು ಘೋಷಿಸಿದೆ, ಇದರ ಭಾಗವಾಗಿ ಸೋಶಿಯಲ್ ಮೀಡಿಯಾದಲ್ಲಿ ತಪ್ಪು ಮಾಹಿತಿ ಪರಿಸರ ವ್ಯವಸ್ಥೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಪ್ರಸ್ತಾಪಗಳನ್ನು ಸಲ್ಲಿಸಲು ಕಂಪನಿಯು 'ವಿಶ್ವಾಸಾರ್ಹ ಪಾಲುದಾರರನ್ನು' ಆಹ್ವಾನಿಸುತ್ತಿದೆ, ಇದರಲ್ಲಿ 'ವಿವರವಾದ ತಿಳುವಳಿಕೆ ಒಟ್ಟಾರೆಯಾಗಿ ತಪ್ಪು ಮಾಹಿತಿಯನ್ನು ಪತ್ತೆಹಚ್ಚುವುದನ್ನು ಹೇಗೆ ಸುಧಾರಿಸುವುದು, ಅದು ಹೇಗೆ ಹರಡುತ್ತದೆ,ಎಂಬುದನ್ನ ತಿಳಿಯಲು ಟಿಕ್‌ಟಾಕ್‌ ಮುಂದಾಗಿದೆ. ನಾವು ಅಪ್ಲಿಕೇಶನ್ ಮತ್ತು ಬಳಕೆದಾರರ ಅನುಭವವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಟಿಕ್‌ಟಾಕ್‌ ಸಂಸ್ಥೆ ಹೇಳಿಕೆಯನ್ನ ನೀಡಿದೆ.

Most Read Articles
Best Mobiles in India

English summary
TikTok has also announced a grant of USD50K (Rs 3.5 million) as a part of which the company is inviting ‘credible partners’ to submit proposals for better understanding the misinformation ecosystem on social media.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more