2020 ರಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಿದ ಪ್ರಮುಖ ಗ್ಯಾಜೆಟ್ಸ್‌ಗಳು!

|

ಪ್ರಸಕ್ತ 2020 ವರ್ಷ ಹೆಚ್ಚು ಸದ್ದು ಮಾಡಿದ್ದು, ಕೊರೊನಾ ವೈರಸ್‌ನ ಹಾವಳಿಯ ಕಾರಣಕ್ಕೆ. ಇಂದಿಗೂ ಜಗತ್ತನ್ನ ಕಾಡುತ್ತಿರುವ ಕೊರೊನಾ ವೈರಸ್‌ ಕಾರಣದಿಂದಾಗಿ ಎಲ್ಲಾ ವಲಯಗಳಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಇದರಲ್ಲಿ ಟೆಕ್‌ ವಲಯವೂ ಕೂಡ ಸೇರಿದೆ. ಇನ್ನು ಕೊರೊನಾ ನಂತರ ಟೆಕ್‌ ವಲಯದ ಪರಿಚಯಿಸಿದ ಅನೇಕ ಗ್ಯಾಜೆಟ್‌ಗಳು ಜನರಿಗೆ ವಿಶ್ವದ ಇತರ ಭಾಗಗಳೊಂದಿಗೆ ಸಂಪರ್ಕ ಸಾಧಿಸಲು, ಕೆಲಸ ಮಾಡುವುದನ್ನು ಮುಂದುವರಿಸಲು ಮತ್ತು ಬದಲಾಗುತ್ತಿರುವ ಆರ್ಥಿಕ ಸನ್ನಿವೇಶಗಳಲ್ಲಿ ಪ್ರಸ್ತುತವಾಗಲು ಅವಕಾಶವನ್ನು ಸೃಷ್ಟಿಸಿವೆ.

ಟೆಕ್ನಾಲಜಿ

ಹೌದು, ಕೊರೊನಾ ವೈರಸ್‌ನ ಹಾವಳಿಯಿಂದ ಇಡೀ ಜಗತ್ತೇ ಲಾಕ್‌ಡೌನ್‌ ಆದಾಗ, ಜನರ ನೆರವಿಗೆ ಬಂದಿದ್ದೆ ಟೆಕ್ನಾಲಜಿ. ಸಾಮಾಜಿಕ ಅಂತರದಿಂದಾಗಿ ದೂರವೇ ಉಳಿದಿದ್ದ ಸ್ನೇಹಿತರು, ಸಂಬಂಧಿಕರ ಜೊತೆ ಸಂಪರ್ಕ ಸಾಧಿಸುವಲ್ಲಿ ಟೆಕ್‌ ವಲಯ ಪ್ರಮುಖ ಪಾತ್ರವನ್ನು ವಹಿಸಿದೆ. ಇನ್ನು ಉದ್ಯೋಗಿಗಳು ಮನೆಯಿಂದಲೇ ಕೆಲಸ ನಿರ್ವಹಿಸುವ ಸಂದರ್ಭ ಬಂದಾಗ ಹೊಸ ಅವಶ್ಯಕತೆಗಳಿಗೆ ಅನುಗುಣವಾದ ಗ್ಯಾಜೆಟ್ಸ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಹಾಗಾದ್ರೆ ಕೊರೊನಾ ಸಮಯದಲ್ಲಿಯೂ ಜನಮನ್ನಣೆ ಗಳಿಸಿದ ಪ್ರಮುಖ ಗ್ಯಾಜೆಟ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್ 12 ಮಿನಿ

ಐಫೋನ್ 12 ಮಿನಿ

ಈ ವರ್ಷ ಟೆಕ್‌ ವಲಯದಲ್ಲಿ ಜನಪ್ರಿಯತೆ ಸಾಧಿಸಿದ ಪ್ರಮುಖ ಗ್ಯಾಜೆಟ್ಸ್‌ಗಳಲ್ಲಿ ಆಪಲ್ ಐಫೋನ್ 12 ಮಿನಿ ಕೂಡ ಒಂದಾಗಿದೆ. ಐಫೋನ್ ತುಂಬಾ ದೊಡ್ಡದಾಗಿದೆ ಎಂದು ಭಾವಿಸಿದವರು ಐಫೋನ್ 12 ಮಿನಿ ಮೂಲಕ ಕಡಿಮೆ ಗಾತ್ರದ ಐಫೋನ್‌ ಪಡೆದುಕೊಳ್ಳಲು ಅವಕಾಶವನ್ನು ಸಹ ನೀಡಲಾಗಿದೆ. ಇನ್ನು 69,900 ರೂ ಬೆಲೆಯ, ಐಫೋನ್ 12 ಮಿನಿ ಐಫೋನ್ 12 ರಂತೆಯೇ ಕಾಣುತ್ತದೆ, ಆದರೆ 5.4-ಇಂಚಿನ ಪರದೆಯ ಈ ಐಫೋನ್ ಕಡಿಮೆ ಗಾತ್ರವನ್ನು ಹೊಂದಿದೆ. ಹೊಸ ಮ್ಯಾಗ್‌ಸೇಫ್ ಚಾರ್ಜಿಂಗ್, ಫೇಸ್ ಐಡಿ ಮತ್ತು ಸುಧಾರಿತ ಡ್ಯುಯಲ್ ಕ್ಯಾಮೆರಾಗಳಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಗೋಪ್ರೊ ಹೀರೋ 9ಬ್ಲ್ಯಾಕ್‌

ಗೋಪ್ರೊ ಹೀರೋ 9ಬ್ಲ್ಯಾಕ್‌

ಗೋಪ್ರೊ ಹೀರೋ 9 ಬ್ಲ್ಯಾಕ್ ಅನ್ನು ಬಿಡುಗಡೆ ಮಾಡಿದಾಗ,ಇದನ್ನು ಮತ್ತೊಂದು ಆಕ್ಷನ್ ಕ್ಯಾಮೆರಾ ಎಂದು ತಿಳಿದುಕೊಳ್ಳಲಾಗಿತ್ತು. ಆದರೆ ಈ ಕ್ಯಾಮೆರಾವನ್ನು ವಿಶೇಷವಾಗಿ ವಿಷಯ ರಚನೆಕಾರರು ಮತ್ತು ವ್ಲಾಗ್ಗರ್‌ಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಸೆಲ್ಫಿ ಶೈಲಿಯ ಶೂಟ್‌ಗಳನ್ನು ತೆಗೆಯುವಾಗ ನೀವು ಏನು ಚಿತ್ರೀಕರಣ ಮಾಡುತ್ತಿದ್ದೀರಿ ಎಂದು ನೋಡುವುದು ಸುಲಭವಾಗಿದೆ. ಇನ್ನು ಹೀರೋ 9 ಬ್ಲ್ಯಾಕ್ ಉತ್ತಮ ಬ್ಯಾಟರಿ ಅವಧಿಯನ್ನು ಹೊಂದಿದೆ, 33 ಅಡಿಗಳವರೆಗೆ ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನು ಸಹ ಹೊಂದಿದೆ. ಇದರಲ್ಲಿ 20 ಎಂಪಿ ಸ್ಟಿಲ್‌ಗಳೊಂದಿಗೆ 5K ವಿಡಿಯೋವನ್ನು ಶೂಟ್ ಮಾಡಬಹುದು, ಅಲ್ಟ್ರಾ-ವೈಡ್ ಡಿಟ್ಯಾಚೇಬಲ್ ಲೆನ್ಸ್ ಆಯ್ಕೆಯನ್ನು ಹೊಂದಿದೆ ಮತ್ತು ಆಕ್ಷನ್ ಕ್ಯಾಮೆರಾವನ್ನು ವೆಬ್‌ಕ್ಯಾಮ್‌ನಂತೆ ಬಳಸಬಹುದು. ಇದರ ಬೆಲೆ 49,500 ರೂ.ಆಗಿದೆ.

ಮಿ ನೋಟ್‌ಬುಕ್ 14 E-ಲರ್ನಿಂಗ್ ಆವೃತ್ತಿ

ಮಿ ನೋಟ್‌ಬುಕ್ 14 E-ಲರ್ನಿಂಗ್ ಆವೃತ್ತಿ

ಮಿ ನೋಟ್‌ಬುಕ್ 14E-ಲರ್ನಿಂಗ್ ಆವೃತ್ತಿಯು ಈ ವರ್ಷದ ಪ್ರಮುಖ ಗ್ಯಾಜೆಟ್ಸ್‌ ಆಗಿದೆ. ಇದು ನಿರ್ವಹಿಸುವಲ್ಲಿನ ಕಾರ್ಯಕ್ಷಮತೆಯಿಂದ ಜನಪ್ರಿಯತೆ ಪಡೆದುಕೊಂಡಿದೆ. ಇದು ಕೈಗೆಟುಕುವ ಲ್ಯಾಪ್‌ಟಾಪ್‌ ಆಗಿದ್ದು, 14-ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಸ್ಲಿಮ್ ಬೆಜೆಲ್ಸ್‌, ಆಲ್-ಮೆಟಲ್ ವಿನ್ಯಾಸ, ಅದ್ಭುತ ಕೀಬೋರ್ಡ್ ಮತ್ತು ದೀರ್ಘ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಈ ಲ್ಯಾಪ್‌ಟಾಪ್‌ ಅನ್ನು ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು, ವಿನ್ಯಾಸಗೊಳಿಸಲಾಗಿದ್ದು ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE

ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE

ಈ ವರ್ಷ ಬಿಡುಗಡೆ ಆದ ಪ್ರಮುಖ ಗ್ಯಾಜೆಟ್ಸ್‌ಗಳಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S20 FE (ಫ್ಯಾನ್ ಎಡಿಷನ್) ಕೂಡ ಒಂದಾಗಿದೆ. ಇದು ತನ್ನ ಬೆಲೆಯ ಶ್ರೇಣಿಯಲ್ಲಿನ ಕೂಲ್‌ ಸ್ಮಾರ್ಟ್‌ಫೋನ್‌ನ ಎಲ್ಲಾ ಅಂಶಗಳನ್ನು ಹೊಂದಿದೆ. ಇನ್ನು ಗ್ಯಾಲಕ್ಸಿ S20 ಶ್ರೇಣಿಯ ಇತರ ಫೋನ್‌ಗಳಂತೆ, FE120Hz ಡಿಸ್‌ಪ್ಲೇ, ಉನ್ನತ ದರ್ಜೆಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಇದು 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಅತ್ಯುತ್ತಮ ಟಿವಿ: ಸೋನಿ ಬ್ರಾವಿಯಾ 55X9000H

ಅತ್ಯುತ್ತಮ ಟಿವಿ: ಸೋನಿ ಬ್ರಾವಿಯಾ 55X9000H

ಇನ್ನು ಈ ವರ್ಷ ಬಿಡುಗಡೆ ಆದ ಪ್ರಮುಖ ಗ್ಯಾಜೆಟ್ಸ್‌ಗಳಲ್ಲಿ ಸೋನಿ ಬ್ರಾವಿಯಾ 55X9000H ಸ್ಮಾರ್ಟ್‌ಟಿವಿ ಕೂಡ ಒಂದಾಗಿದೆ. ಇದು 120Hz ರಿಪ್ರೇಶ್‌ ರೇಟ್‌ ಅನ್ನು ಒಳಗೊಂಡಿದೆ. ಅಲ್ಲದೆ ಈ ಪ್ರೀಮಿಯಂ ಮಾದರಿಯು PS5 ಅನ್ನು ಖರೀದಿಸಲು ಯೋಜಿಸುವವರಿಗೆ ಉತ್ತಮ ಆಯ್ಕೆಯಾಗಿದೆ. ಇದು ಸ್ಮೋಟಿಂಗ್ ಅನುಭವವನ್ನು ನೀಡುವ ಸಾಫ್ಟ್‌ವೇರ್‌ಗಿಂತ ಹೆಚ್ಚಿನ ಅನುಭವವನ್ನು ನೀಡಲಿದೆ.

Most Read Articles
Best Mobiles in India

English summary
The year 2020 has been like none other before. As the Covid-19 pandemic took its grip on every country, gadgets became the way for people to connect with the rest of the world.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X