ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಐದು ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳು!

|

ಇತ್ತೀಚಿನ ದಿನಗಳಲ್ಲಿ ಟೆಕ್‌ ವಲಯದಲ್ಲಿ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳು ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿವೆ. ಇನ್ನು ಈ ಫಿಟ್ನೆಸ್‌ ಸ್ಮಾರ್ಟ್‌ವಾಚ್‌ಗಳು ನಮ್ಮ ದೇಹದ ಹೆಲ್ತ್‌ ಟ್ರ್ಯಾಕ್‌ ಮಾಡುವುದರಿಂದ ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿವೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮದೇ ಆದ ವೈವಿಧ್ಯಮಯ ಫೀಟ್ನೆಸ್‌ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿವೆ. ಸದ್ಯ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಸ್ಮಾರ್ಟ್ ವಾಚ್‌ಗಳನ್ನು ನಾವು ಕಾಣಬಹುದಾಗಿದೆ.

ಸ್ಮಾರ್ಟ್‌ವಾಚ್‌

ಹೌದು, ಟೆಕ್‌ ವಲಯದಲ್ಲಿ ಹಲವು ಆಯ್ಕೆಯ ಸ್ಮಾರ್ಟ್‌ವಾಚ್‌ಗಳು ಲಭ್ಯವಿವೆ. ಬಜೆಟ್‌ ಮಾದರಿಯ ಸ್ಮಾರ್ಟ್‌ವಾಚ್‌ಗಳು ಕೂಡ ಹೆಚ್ಚಿನ ಗ್ರಾಹಕರನ್ನು ಸೆಳೆದಿವೆ. ಈ ಸ್ಮಾರ್ಟ್‌ವಾಚ್‌ಗಳು ಹೃದಯ ಬಡಿತ ಮೇಲ್ವಿಚಾರಣೆ, ಎಸ್‌ಪಿಒ2 ನಂತಹ ಫೀಚರ್ಸ್‌ಗಳನ್ನು ಹೊಂದಿವೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ 5 ಅತ್ಯುತ್ತಮ ಸ್ಮಾರ್ಟ್ ವಾಚ್ ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಿಸ್ಕ SW100 ಸ್ಮಾರ್ಟ್‌ವಾಚ್‌

ಸಿಸ್ಕ SW100 ಸ್ಮಾರ್ಟ್‌ವಾಚ್‌

ಸಿಸ್ಕ SW100 ಸ್ಮಾರ್ಟ್‌ವಾಚ್‌ ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ವಾಚ್‌ಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್‌ವಾಚ್‌ ಸಿಸ್ಕಾ ಫಿಟ್‌ ಅಪ್ಲಿಕೇಶನ್‌ ಅನ್ನು ಹೊಂದಿದೆ. ಈ ಅಪ್ಲಿಕೇಶನ್‌ ಮೂಲಕ ನಿಮ್ಮ ಹೃದಯ ಬಡಿತ ಮತ್ತು ನಿದ್ರೆಯ ಮಾದರಿಗಳನ್ನು ಗಮನದಲ್ಲಿರಿಸಿಕೊಳ್ಳಲು ಸಾಧ್ಯವಾಗಲಿದೆ. ಇದಲ್ಲದೆ, ನಿಮ್ಮ ಸ್ಮಾರ್ಟ್‌ಫೋನ್‌ನ ಗ್ಯಾಲರಿಯಿಂದ ನಿಮ್ಮ ವಾಲ್‌ಪೇಪರ್ ಅನ್ನು ಫೋಟೋಗೆ ಬದಲಾಯಿಸಲು ನೀವು ಸಿಸ್ಕಾ ಫಿಟ್ ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ. ಈ ಸ್ಮಾರ್ಟ್‌ವಾಚ್‌ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಒಂದು ಸಲ ಚಾರ್ಜಿಂಗ್‌ ಮಾಡಿದ್ರೆ ಹದಿನೈದು ದಿನಗಳ ಬ್ಯಾಟರಿ ಲೈಪ್‌ ನೀಡಲಿದೆ. ಈ ಸ್ಮಾರ್ಟ್ ವಾಚ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಮಾಡುವ ಮೂಲಕ ಕರೆಗಳು, SMS ಗಳು, ಇಮೇಲ್‌ಗಳು, ಅಲಾರಂ ಅಲರ್ಟ್‌ ಅನ್ನು ಪಡೆಯಬಹುದಾಗಿದೆ. ಇದು ಫ್ಲಿಪ್‌ಕಾರ್ಟ್‌ನಲ್ಲಿ 1,999ರೂ. ಬೆಲೆಗೆ ಲಭ್ಯವಾಗಲಿದೆ.

ಪೆಬ್ಬಲ್ ಇಂಪಲ್ಸ್ ಸ್ಮಾರ್ಟ್‌ವಾಚ್‌

ಪೆಬ್ಬಲ್ ಇಂಪಲ್ಸ್ ಸ್ಮಾರ್ಟ್‌ವಾಚ್‌

ಬಜೆಟ್‌ ಬೆಲೆಯ ಸ್ಮಾರ್ಟ್‌ವಾಚ್‌ಗಳಲ್ಲಿ ಪೆಬ್ಬಲ್ ಇಂಪಲ್ಸ್ ಸ್ಮಾರ್ಟ್‌ವಾಚ್‌ ಕೂಡ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ನಿದ್ರೆ, ನಿರಂತರ ಹೃದಯ ಬಡಿತ, ರಕ್ತದೊತ್ತಡ ಮತ್ತು ಆಮ್ಲಜನಕದ ಮಟ್ಟವನ್ನು ಪರೀಕ್ಷಿಸಲು ಸಹಾಯ ಮಾಡುತ್ತದೆ. ಇದು ಐಒಎಸ್ ಮತ್ತು ಆಂಡ್ರಾಯ್ಡ್ ಫೋನ್‌ಗಳೊಂದಿಗೆ ಹೊಂದಿಕೊಳ್ಳುತ್ತದೆ. ಇನ್ನು ಈ ವಾಚ್‌ 1.3 ಇಂಚಿನ ಎಲ್‌ಇಡಿ ಡಿಸ್‌ಪ್ಲೇ ಸ್ಕ್ರೀನ್ ಹೊಂದಿದೆ. ಈ ಸ್ಮಾರ್ಟ್‌ವಾಚ್‌ 5.0 ಬ್ಲೂಟೂತ್ ಕನೆಕ್ಟಿವಿಟಿಯನ್ನು ಬೆಂಬಲಿಸಲಿದೆ. ಇನ್‌ಕಮಿಂಗ್‌ ಕರೆಗಳು, ಸಂದೇಶಗಳು ಮತ್ತು ವಾಟ್ಸಾಪ್‌ ನೋಟಿಫಿಕೇಶನ್ ಫೀಚರ್ಸ್‌ ಅನ್ನು ಹೊಂದಿದೆ. ಇದರ ಬೆಲೆ ಕೇವಲ 1,699ರೂ.ಆಗಿದೆ.

ಇನ್ಫಿನಿಜಿ ಸ್ಮಾರ್ಟ್ ವಾಚ್

ಇನ್ಫಿನಿಜಿ ಸ್ಮಾರ್ಟ್ ವಾಚ್

ಇನ್ಫಿನಿಜಿ ಸ್ಮಾರ್ಟ್ ವಾಚ್ 240x240 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.3 ಇಂಚಿನ ಟಚ್ ಸ್ಕ್ರೀನ್ ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕ್ಯಾಮೆರಾ, ನಿದ್ರೆ ಮೇಲ್ವಿಚಾರಣೆ, ಹೃದಯ ಬಡಿತ ಫಿಚರ್ಸ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಮಲ್ಟಿ-ಫಂಕ್ಷನ್ ಸ್ಮಾರ್ಟ್ ವಾಚ್ ಆಗಿದೆ. ಇದು ಹಾರ್ಟ್ ರೇಟ್ ಕ್ಯಾಲೋರಿ ಸ್ಲೀಪ್ ಮಾನಿಟರ್ ಕಾಲ್ ಜ್ಞಾಪನೆಯನ್ನು ಬೆಂಬಲಿಸಲಿದೆ. ಇದು ಹಲವು ಭಾಷೆಗಳನ್ನು ಬೆಂಬಲಿಸುತ್ತದೆ. ಇದರ ಬೆಲೆ 1,499ರೂ ಆಗಿದೆ.

ಜಿಯೋನಿ ಸೆನೊರಿಟಾ ಸ್ಮಾರ್ಟ್ ವಾಚ್

ಜಿಯೋನಿ ಸೆನೊರಿಟಾ ಸ್ಮಾರ್ಟ್ ವಾಚ್

ಜಿಯೋನಿ ಕಂಪೆನಿ ಪರಿಚಯಿಸಿರುವ ಬಜೆಟ್‌ ಬೆಲೆಯ ಸ್ಮಾರ್ಟ್‌ವಾಚ್‌ಗಳಲ್ಲಿ ಜಿಯೋನಿ ಸೆನೊರಿಟಾ ಸ್ಮಾರ್ಟ್ ವಾಚ್ ಕೂಡ ಒಂದಾಗಿದೆ. ಇನ್ನು ಈ ಸ್ಮಾರ್ಟ್ ವಾಚ್ ಸ್ಲೀಪ್ ಟ್ರ್ಯಾಕರ್ ಅನ್ನು ಹೊಂದಿದ್ದು, ಇದು ನಿಮ್ಮ ನಿದ್ರೆಯ ಮಾದರಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ. ಜೊತೆಗೆ ಈ ಸ್ಮಾರ್ಟ್ ವಾಚ್ ಆಕ್ಟಿವಿಟಿ ಟ್ರ್ಯಾಕರ್, ವೈಯಕ್ತಿಕಗೊಳಿಸಿದ ವಾಚ್ ಫೇಸ್, ಹೃದಯ ಬಡಿತ ಮಾನಿಟರ್ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದಲ್ಲದೆ ಈ ಜಿಯೋನಿ ಸ್ಮಾರ್ಟ್ ವಾಚ್ ಇಂಟರ್‌ಬಿಲ್ಟ್‌ ಅಲಾರಂ ಅನ್ನು ಹೊಂದಿದ್ದು, ನಿಮ್ಮನ್ನು ಎಚ್ಚರಗೊಳಿಸಲು ಸಹಕಾರಿಯಾಗಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 2,299ರೂ. ಬೆಲೆ ಹೊಂದಿದೆ.

ಆಂಬ್ರೇನ್ ಪಲ್ಸ್ ಸ್ಮಾರ್ಟ್ ವಾಚ್

ಆಂಬ್ರೇನ್ ಪಲ್ಸ್ ಸ್ಮಾರ್ಟ್ ವಾಚ್

ಫಿಟ್ನೆಸ್‌ ಸ್ಮಾರ್ಟ್‌ವಾಚ್‌ಗಳಲ್ಲಿ ಆಂಬ್ರೇನ್ ಪಲ್ಸ್ ಸ್ಮಾರ್ಟ್ ವಾಚ್ ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್ ವಾಚ್ ಹತ್ತು ದಿನಗಳ ಕಾಲ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ನಿಮ್ಮ ಆರೋಗ್ಯ ಕ್ರಮವನ್ನು ಮೇಲ್ವಿಚಾರಣೆ ಮಾಡುವುದಕ್ಕಾಗಿ ಹಲವು ಹೆಲ್ತ ಫಿಟ್ನೆಸ್‌ ಟ್ರ್ಯಾಕರ್‌ ಅನ್ನು ಹೊಂದಿದೆ. ಈ ಗಡಿಯಾರವು ನಿಮ್ಮ ಆರೋಗ್ಯದ ಮೇಲೆ ನಿಗಾ ಇಡಲು ಸಹಾಯ ಮಾಡುವ ವಿಭಿನ್ನ ಕಾರ್ಯಗಳನ್ನು ಹೊಂದಿದೆ. ಇದರಲ್ಲಿ ನಿಮ್ಮ ಹೃದಯದ ಬಡಿತವನ್ನು ಅಳೆಯುವುದು, ಅಮ್ಲಜನಕ ಮಟ್ಟವನ್ನು ಅಳೆಯುವ ಫೀಚರ್ಸ್‌ ಒಳಗೊಂಡಿರುತ್ತದೆ. ಈ ಸ್ಮಾರ್ಟ್‌ವಾಚ್‌ 2,799 ರೂ. ಬೆಲೆಗೆ ಲಭ್ಯವಾಗಲಿದೆ.

Most Read Articles
Best Mobiles in India

English summary
Top 5 Best smartwatch under 2000 and unique features available.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X