ಜನಪ್ರಿಯತೆ ಪಡೆದುಕೊಂಡಿರುವ ಟಾಪ್ 5 ಮೊಬೈಲ್‌ ಗೇಮ್‌ಗಳು!

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಗೇಮ್‌ಗಳ ಹಾವಳಿ ಜಾಸ್ತಿಯಾಗಿದೆ. ಅದರಲ್ಲೂ ಆನಿಮೇಷನ್‌ ಗೇಮ್‌ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಕೂಡ ಇದೆ. ಸದ್ಯದ ದಿನಗಳಲ್ಲಿ ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಗೇಮಿಂಗ್‌ ವ್ಯಸನ ಜಾಸ್ತಿಯಾಗಿದ್ದು, ಹೊಸತನದ ಗೇಮಿಂಗ್‌ಗೆ ಎಲ್ಲರೂ ಆಡಿಕ್ಟ್‌ ಆಗುತ್ತಲೇ ಇದ್ದಾರೆ. ಇವುಗಳ ನಡುವೆಯೂ ಕೆಲವು ಗೇಮ್‌ಗಳು ಹಲವು ವರ್ಷಗಳಿಂದಲೂ ತಮ್ಮ ಪ್ರಾಬಲ್ಯವನ್ನ ಸಾಧಿಸುತ್ತಲೇ ಬರುತ್ತಿದ್ದು, ಇಂದಿಗೂ ತಮ್ಮ ಜನಪ್ರಿಯತೆಯನ್ನ ಉಳಿಸಿಕೊಂಡಿವೆ.

ಹೌದು

ಹೌದು, ಪ್ರಸ್ತುತ ಗೇಮಿಂಗ್‌ ಬಗ್ಗೆ ಹೆಚ್ಚಿನ ಜನರು ಆಸಕ್ತಿ ತೋರುತ್ತಿರೋದು ನಿಮಗೆಲ್ಲಾ ಗೊತ್ತೇ ಇದೆ. ಆಂಡ್ರಾಯ್ಡ್‌, ಐಫೋನ್‌ ಬಳಕೆದಾರರಿಂದ ಹಿಡಿದು ಕಂಪ್ಯೂಟರ್‌, ಡೆಸ್ಕ್‌ಟಾಪ್‌ ನಲ್ಲೂ ಕೂಡ ಗೇಮ್‌ ಆಡುವವರಿದ್ದಾರೆ. ಅಷ್ಟರ ಮಟ್ಟಿಗೆ ಇಂದು ಆನ್‌ಲೈನ್‌ ಗೇಮ್‌ಗಳು ತಮ್ಮ ಜನಪ್ರಿಯತೆಯನ್ನ ಪಡೆದುಕೊಂಡಿವೆ. ಇನ್ನು ಈ ಗೇಮ್‌ಗಳಲ್ಲಿ ಸದ್ಯ ಟಾಪ್‌ 5 ಸ್ಥಾನವನ್ನ ಪಡೆದುಕೊಂಡಿರುವ ಗೇಮ್‌ಗಳು ಯಾವುವು, ಅವುಗಳ ವಿಶೇಷತೆಯೇನು,ಸೆನ್ಸಾರ್‌ ಟವರ್‌ ಸಂಶೋದನೆಯ ವರದಿ ಪ್ರಕಾರ ಅವುಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಕೊಡ್ತೀವಿ ಓದಿ.

ಪಬ್‌ಜಿ ಮೊಬೈಲ್‌ ಗೇಮ್‌

ಪಬ್‌ಜಿ ಮೊಬೈಲ್‌ ಗೇಮ್‌

ಸದ್ಯ ಎಲ್ಲಾ ಕಡೆ ಕೇಳಿಬರುವ ಗೇಮಿಂಗ್‌ನ ಹೆಸರು ಅಂದ್ರೆ ಅದು ಪಬ್‌ಜಿ ಹೌದು ಅನುಮಾನವೇ ಇಲ್ಲ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಎಲ್ಲಾ ವಯೋಮಾನದವರನ್ನ ತನ್ನತ್ತ ಆಕರ್ಷಿಸಿರುವ ಪಬ್‌ಜಿ ಗೇಮ್‌ ಟಾಪ್‌ 5 ಗೇಮ್‌ಗಳಲ್ಲಿ ಮೊದಲನೇ ಸ್ಥಾನವನ್ನ ಪಡೆದುಕೊಂಡಿದೆ. ಇನ್ನು ಈ ಗೇಮ್‌ ಅನ್ನು ಟೆನ್‌ಸೆಂಟ್‌ ಸಂಸ್ಥೆ ನಿರೂಪಿಸಿದ್ದು, ಭಾರಿ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಅದರಲ್ಲೂ ‘ಪಬ್ ಜಿ ಮೊಬೈಲ್' ಮತ್ತು ‘ಪೀಸ್ ಎಲೈಟ್' ಜಗತ್ತಿನಾದ್ಯಂತ $191 (14,386.ರೂ ) ಮಿಲಿಯನ್‌ಗಿಂತ ಹೆಚ್ಚಿನ ಹಣವನ್ನು ಗಳಿಸಿದೆ. ಜೊತೆಗೆ ಜಾಗತಿಕ ಮೊಬೈಲ್ ಗೇಮ್ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಹಾನರ್ ಆಫ್ ಕಿಂಗ್ಸ್

ಹಾನರ್ ಆಫ್ ಕಿಂಗ್ಸ್

ಇನ್ನು ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಗೇಮ್‌ಗಳಲ್ಲಿ ಹಾನರ್‌ ಆಪ್‌ ಕಿಂಗ್ಸ್‌ ಎರಡನೇ ಸ್ಥಾನದಲ್ಲಿದೆ. ರೆಟ್ರೋ ಶೈಲಿಯಲ್ಲಿಯೇ ಮೂಡಿಬಂದಿರುವ ಈ ಗೇಮ್‌ ಹೆಚ್ಚು ಆಕರ್ಷಿತವಾಗಿದ್ದು, ಉತ್ತಮ ಅನುಭವ ನೀಡಲಿದೆ. ಸದ್ಯ ಇದರ ಸಾಗರೋತ್ತರ ಆವೃತ್ತಿಯು $121(9,114.ರೂ,) ಮಿಲಿಯನ್ ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಇದರ ಚೀನಾ ಆವೃತ್ತಿಯು 92.6% ನಷ್ಟು ಆದಾಯವನ್ನು ನೀಡಿದೆ, ಅಲ್ಲದೆ ಥಾಯ್ ಆವೃತ್ತಿ "ಗರೆನಾ ರಿಯಲ್ಮ್ ಆಫ್ ವಾಲರ್‌, ಇದು 3.7% ಕೊಡುಗೆ ನೀಡಿದೆ. ಈ ಮೂಲಕ ಎರಡನೇ ಸ್ಥಾನದಲ್ಲಿ ತನ್ನ ಜನಪ್ರಿಯತೆಯನ್ನ ಸಾಧಿಸಿದೆ.

ಮಾನ್ಸ್ಟರ್ ಸ್ಟ್ರೈಕ್

ಮಾನ್ಸ್ಟರ್ ಸ್ಟ್ರೈಕ್

ಮಾನ್ಸರ್‌ ಸ್ಟ್ರೈಕ್‌ ಗೇಮ್‌ ಕೂಡ ಇತ್ತೀಚಿನ ದಿನಗಳಲ್ಲಿ ಉತ್ತಮ ಜನಪ್ರಿಯತೆಯನ್ನ ಪಡೆದುಕೊಂಡಿದ್ದು, ಇದರ ಪ್ರತಿಸ್ಪರ್ಧಿ ಗೇಮ್‌ಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಇನ್ನು ಈ ಗೇಮ್‌ನಲ್ಲಿ ಪ್ರಬಲ ರಾಕ್ಷಸರ ಸೈನ್ಯವನ್ನ ಎದುರಿಸುತ್ತಾ ಸಾಗುವುದೇ ಆಗಿದ್ದು, ಉತ್ತಮ ಅನುಭವ ನೀಡಲಿದೆ. ಇದಲ್ಲದೆ ಈ ರಾಕ್ಷಸರ ಅಲೆಗಳನ್ನು ಎದುರಿಸಲು ಹಾಗೂ ವಿಕಸಿಸಲು ಹೋರಾಡುವುದೇ ಈ ಗೇಮ್‌ನ ವಿಶೇಷತೆ ಆಗಿದೆ. ಆದಾಯ ಮತ್ತು ಜನಪ್ರಿಯತೆ ದೃಷ್ಟಿಯಿಂದ ಇದು ಮೂರನೇ ಸ್ಥಾನದಲ್ಲಿದೆ.

AFK ಅರೆನಾ

AFK ಅರೆನಾ

ಇನ್ನು ಪ್ರಸಿದ್ಧ ಗೇಮ್‌ಗಳ ಪಟ್ಟಿಯಲ್ಲಿ AFK ಅರೆನಾ ಗೇಮ್‌ ಕೂಡ ಒಂದಾಗಿದ್ದು,ಇದೊಂದು ಕ್ಯಾಶುಯಲ್ ಆಕ್ಷನ್ ಕಾರ್ಡ್ ಗೇಮ್‌ ಆಗಿದೆ. ಇದರಲ್ಲಿ ಆಟಗಾರರು ತಮ್ಮಗೆ ಭೇಕಾದ ವೈಯಕ್ತಿಕ ಟೀಂಗಳನ್ನ ನಿರ್ಮಿಸಿಬಹುದಾಗಿದೆ. ಇದರ ಜೊತೆಗೆ ತಮಗೆ ಭೇಕಾದ ಅನನ್ಯ AFK ಅವಾರ್ಡ್‌ಸ ಆಟೋ ಫಾರ್ಮಿಂಗ್ ಸಿಸ್ಟಮ್‌ನೊಂದಿಗೆ ನೆಲಸಮ ಮಾಡಬಹುದು. ಇನ್ನು ಈ ಫ್ಯಾಂಟಸಿಯ ಗೇಮ್‌ನಲ್ಲಿ ಪ್ರಪಂಚದ ಯಾವುದೇ ಮೂಲೆಯ ಆಟಗಾರರನ್ನು ಬೇಕಾದರೂ ಸೇರಿಸಿಕೊಳ್ಳಬಹುದು. ನಿಮ್ಮ ಸ್ನೇಹಿತರ ಜೊತೆಗೆ ನೀವು ಆರಾಮದಾಯಕವಾಗಿ ಆಡಬಹುದಾಗಿದೆ.

ಡೊಕ್ಕನ್ ಬ್ಯಾಟಲ್‌

ಡೊಕ್ಕನ್ ಬ್ಯಾಟಲ್‌

ಈ ಗೇಮ್‌ ಒಂದು ಬೋರ್ಡ್ ಮಾದರಿಯಲ್ಲಿ ಸಂಗ್ರಹ ಮಾಡುತ್ತ ಆಟವಾಡುವ ಗೇಮ್‌ ಆಗಿದೆ. ಈ ಗೇಮ್‌ನಲ್ಲಿ ಬಳಕೆದಾರರು ಬಲೆಗಳು ಮತ್ತು ಪಂದ್ಯಗಳಿಗೆ ಮೀಸಲಾಗಿರುವ ತಾಣಗಳು. ಇದರ ಪಂದ್ಯಗಳ ಸಮಯದಲ್ಲಿ, ಆಟಗಾರನ ಪಾತ್ರಗಳು ಮ್ಯಾಚ್ -3 ಆಟಗಳನ್ನು ಹೋಲುವ ಒಂದು ಸಿಸ್ಟಂ ಮೂಲಕ ಶತ್ರುವಿನೊಂದಿಗೆ ಹೋರಾಡಬಹುದಾಗಿದೆ. ಆಟಗಾರನ ಪಾತ್ರ ಮತ್ತು ಶತ್ರುಗಳ ನಡುವೆ ವಿಭಿನ್ನ ಬಣ್ಣಗಳ ಅನೇಕ ಆರ್ಬ್‌ಗಳನ್ನು ಇರಿಸಲಾಗುತ್ತದೆ. ಅಲ್ಲದೆ ಆಟಗಾರನು ದಾಳಿ ಮಾಡಲು ಅಥವಾ ಇತರ ಸಾಮರ್ಥ್ಯಗಳನ್ನು ಬಳಸಲು ವಿಭಿನ್ನ ರೀತಿಯ ಆರ್ಬ್‌ಗಳನ್ನು ಹೊಂದಿಸಬಹುದು.

Most Read Articles
Best Mobiles in India

English summary
TOP 5 MOST POPULAR MOBILE GAMES IN FEBRUARY 2020.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more