Just In
Don't Miss
- Movies
ಪ್ರತಿಷ್ಟಿತ ಗೋವಾ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡದ ಸ್ಟಾರ್ ನಟ
- News
ರೈತರ ಪ್ರತಿಭಟನೆ: ಜನವರಿ 19ಕ್ಕೆ ಕೇಂದ್ರ ಮತ್ತು ರೈತ ಸಂಘಟನೆಗಳ ನಡುವೆ ಮತ್ತೊಂದು ಸುತ್ತಿನ ಸಭೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಭಾರತದಲ್ಲಿ ನೀವು ಖರೀದಿಸಬಹುದಾದ ಐದು ಅತ್ಯುತ್ತಮ ಪವರ್ಬ್ಯಾಂಕ್ಗಳು!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ ಬಳಕೆ ಹೆಚ್ಚಾದಂತೆ ಅವುಗಳ ವಿದ್ಯುತ್ ದಾಹ ನೀಗಿಸುವ ಪವರ್ ಬ್ಯಾಂಕ್ಗಳ ಜನಪ್ರಿಯತೆ ಕೂಡ ಹೆಚ್ಚಾಗುತ್ತಲೇ ಇದೆ. ಇನ್ನು ಮಾರುಕಟ್ಟೆಯಲ್ಲಿ ಬಿಗ್ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್ಫೋನ್ಗಳು ಲಭ್ಯವಿವೆ. ಆದರೆ ಪ್ರವಾಸದ ಸಂದರ್ಭದಲ್ಲಿ, ಪ್ರಯಾಣದ ಸಂದರ್ಭದಲ್ಲಿ, ಇಲ್ಲವೇ ಲೋಡ್ ಶೆಡ್ಡಿಂಗ್ನಂತಹ ಸಮಯದಲ್ಲಿ ಪವರ್ ಬ್ಯಾಂಕ್ ಇದ್ದರೆ ಅನುಕೂಲವಾಗಲಿದೆ. ಪವರ್ ಬ್ಯಾಂಕ್ಗಳು ನಿಮ್ಮ ಸ್ಮಾರ್ಟ್ಫೋನ್ಗಳ ವಿದ್ಯುತ್ ನೀಗಿಸುತ್ತವೆ.

ಹೌದು ಸ್ಮಾರ್ಟ್ಫೋನ್ ಜೊತೆಗೆ ಪವರ್ ಬ್ಯಾಂಕ್ ಅನ್ನು ಕೂಡ ಹೊಂದಲು ಪೋನ್ ಪ್ರಿಯರು ಬಯಸುತ್ತಾರೆ. ಇನ್ನು ಹೆಚ್ಚಿನ ಸ್ಮಾರ್ಟ್ಪೋನ್ ಬಳಕೆದಾರರು ತಮ್ಮ ಹಳೆಯ ಬ್ಯಾರಿ ಬದಲಿಸುವ ಬದಲು ತಮ್ಮ ಸ್ಮಾರ್ಟ್ಪೋನ್ನ ವಿದ್ಯುತ್ ದಾಹ ನೀಗಿಸೋಕೆ ಪವರ್ ಬ್ಯಾಂಕ್ ಖರೀದಿಸಲು ಆಸಕ್ತಿ ತೊರುತ್ತಾರೆ. ಸದ್ಯ ನಿಮ್ಮ ಸ್ಮಾರ್ಟ್ಫೋನ್ಗೆ ವಿದ್ಯುತ್ ಶಕ್ತಿ ತುಂಬಲು ನೀವು ಪವರ್ ಬ್ಯಾಂಕ್ ಅನ್ನು ಹುಡುಕುತ್ತಿದ್ದರೆ, ಈ ಕೆಳಗಿನ ಐದು ಪವರ್ ಬ್ಯಾಂಕ್ಗಳು ಉತ್ತಮ ಆಯ್ಕೆ ಯಾಗಿರುತ್ತವೆ.

ಆಂಕರ್ ಪವರ್ಕೋರ್ 20100
ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಪವರ್ ಬ್ಯಾಂಕ್ಳಲ್ಲಿ ಆಂಕರ್ ಕಂಪೆನಿ ಗುರುತಿಸಿಕೊಂಡಿದೆ. ಆಂಕರ್ ಪವರ್ ಕೋರ್ ಪವರ್ ಬ್ಯಾಂಕ್ 20,100 mAh ಹೆಚ್ಚಿನ ಸಾಮರ್ಥ್ಯದೊಂದಿಗೆ ಬರುತ್ತದೆ. ಅಂದರೆ ಇದು ಸಿಂಗಲ್ ಚಾರ್ಜ್ನಲ್ಲಿ ಸ್ಮಾರ್ಟ್ಫೋನ್ ಅನ್ನು ಹಲವು ಬಾರಿ ಚಾರ್ಜ್ ಮಾಡಬಹುದಾಗಿದೆ. 2AMP ಚಾರ್ಜರ್ನೊಂದಿಗೆ, ಇದನ್ನು 10 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು. ಏಕಕಾಲದಲ್ಲಿ 2 ಸಾಧನಗಳನ್ನು ಚಾರ್ಜ್ ಮಾಡಲು ಇದು 2 ಪೋರ್ಟ್ಗಳನ್ನು ಹೊಂದಿದೆ. ಈ ಆಂಕರ್ ಪವರ್ ಬ್ಯಾಂಕ್ ಸಾಮಾನ್ಯಕ್ಕಿಂತ ವೇಗವಾಗಿ ಯಾವುದೇ ಸಾಧನವನ್ನು ಚಾರ್ಜ್ ಮಾಡಲು ವೋಲ್ಟೇಜ್ ಬೂಸ್ಟ್ ಮತ್ತು ಪವರ್ಐಕ್ಯೂ ಫೀಚರ್ಸ್ ಅನ್ನು ಸಹ ಹೊಂದಿದೆ. ಇದರ ಬೆಲೆ 3,199 ರೂ ಆಗಿದೆ.

ಮಿ ಲಿ-ಪಾಲಿಮರ್ ಪವರ್ ಬ್ಯಾಂಕ್ 2i
ಭಾರತದಲ್ಲಿ, ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಅಗ್ಗದ ಬೆಲೆಗೆ ಪೂರೈಸುವ ಜನಪ್ರಿಯ ಬ್ರಾಂಡ್ಗಳಲ್ಲಿ ಶಿಯೋಮಿ ಕೂಡ ಒಂದು.ಶಿಯೋಮಿ ಈ ಪವರ್ ಬ್ಯಾಂಕ್ ಸಾಕಷ್ಟು ಸುಧಾರಿತ ಫೀಚರ್ಸ್ಗಳನ್ನು ಹೊಂದಿದೆ. ಇದು 20,000 mAh ಸಾಮರ್ಥ್ಯದೊಂದಿಗೆ ಬರುತ್ತದೆ. ಹೀಗಾಗಿ, ಇದು 4,000 mAh ಬ್ಯಾಟರಿಯನ್ನು 3 ಬಾರಿ ಮತ್ತು 3000 mAh ಬ್ಯಾಟರಿಯನ್ನು 4 ಬಾರಿ ಚಾರ್ಜ್ ಮಾಡಬಹುದು. ಇದು 18 ವ್ಯಾಟ್ಸ್ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಏಕಕಾಲದಲ್ಲಿ ಎರಡು ಡಿವೈಸ್ಗಳನ್ನು ಚಾರ್ಜ್ ಮಾಡಲು ಇದು 2 ಪೋರ್ಟ್ಗಳನ್ನು ಸಹ ಒಳಗೊಂಡಿದೆ. ಇದರ ಬೆಲೆ 1,499 ರೂ ಆಗಿದೆ.

ಆಂಬ್ರೇನ್ ಲಿಥಿಯಂ ಪಾಲಿಮರ್ ಪವರ್ ಬ್ಯಾಂಕ್
ಅತ್ಯುತ್ತಮ ಪವರ್ ಬ್ಯಾಂಕ್ಗಳಲ್ಲಿ ಆಂಬ್ರೇನ್ ಕಂಪೆನಿಯ ಪವರ್ ಬ್ಯಾಂಕ್ ಕೂಡ ಒಂದಾಗಿದೆ. ಆಂಬ್ರೇನ್ ಕಂಪೆನಿಯ ಆಂಬ್ರೇನ್ ಲಿಥಿಯಂ ಪಾಲಿಮರ್ ಪವರ್ ಬ್ಯಾಂಕ್ 20,000 mAh ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಪವರ್ ಬ್ಯಾಂಕ್ ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದ್ದು, 9 ಲೆಯರ್ ಸರ್ಕ್ಯೂಟ್ ಪ್ರೊಟೆಕ್ಷನ್ ಅನ್ನು ಒಳಗೊಂಡಿದೆ. ಇದು 500 ಕ್ಕೂ ಹೆಚ್ಚು ಚಾರ್ಜ್ ಲೈಪ್ ಸೈಕಲ್ ಅನ್ನು ಹೊಂದಿದೆ. ಇದನ್ನು ಎಬಿಎಸ್ ಪ್ಲಾಸ್ಟಿಕ್ ನಿಂದ ಮಾಡಿರುವುದರಿಂದ ಇದರ ತೂಕ ಕೇವಲ 349 ಗ್ರಾಂ. ಇದೆ. ಇನ್ನು ಏಕಕಾಲದಲ್ಲಿ ಎರಡು ಫೋನ್ಗಳನ್ನು ಚಾರ್ಜ್ ಮಾಡಲು ಇದು ಡಬಲ್ ಯುಎಸ್ಬಿ ಪೋರ್ಟ್ಗಳನ್ನು ಸಹ ಹೊಂದಿದೆ. ಇದರ ಬೆಲೆ 599 ರೂ ಆಗಿದ್ದು, ಇದು ಕಪ್ಪು, ಬಿಳಿ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿದೆ.

ರಿಯಲ್ಮಿ ಪವರ್ ಬ್ಯಾಂಕ್
ಭಾರತದಲ್ಲಿ ಬಜೆಟ್ ಬೆಲೆಯ ಪವರ್ ಬ್ಯಾಂಕ್ಗಳಿಗೆ ರಿಯಲ್ಮಿ ಸಂಸ್ಥೆ ಸೈ ಎನಿಸಿಕೊಂಡಿದೆ. ಕೈ ಗೆಟಕುವ ಬೆಲೆಯಲ್ಲಿ ನೀವು ಪವರ್ ಬ್ಯಾಂಕ್ ಖರೀದಿಸಬೇಕಾದರೆ ರಿಯಲ್ಮಿ 10,000 mAh ಪವರ್ ಬ್ಯಾಂಕ್ ಅತ್ಯುತ್ತಮ ಆಯ್ಕೆಯಾಗಿದೆ. ಇದು 18 ವ್ಯಾಟ್ ವೇಗದ ಚಾರ್ಜ್ ಅನ್ನು ಬೆಂಬಲಿಸುತ್ತದೆ. ನೀವು ಸುಮಾರು 3 ಗಂಟೆ 40 ನಿಮಿಷಗಳಲ್ಲಿ ಈ ಪವರ್ ಬ್ಯಾಂಕ್ ಅನ್ನು ಚಾರ್ಜ್ ಮಾಡಲು ಸಾಧ್ಯವಾಗುತ್ತದೆ. ಇನ್ನು ಏಕಕಾಲದಲ್ಲಿ ಅನೇಕ ಡಿವೈಸ್ಗಳನ್ನು ಚಾರ್ಜ್ ಮಾಡಲು ಡ್ಯುಯಲ್ ಯುಎಸ್ಬಿ ಪೋರ್ಟ್ಗಳನ್ನು ಸಹ ಇದು ಹೊಂದಿದೆ. ವಿಶಿಷ್ಟವಾಗಿ, ಇದು 4000 mAh ಬ್ಯಾಟರಿಯನ್ನು 1.8 ಬಾರಿ ಮತ್ತು 3000 mAh ಬ್ಯಾಟರಿಯನ್ನು 2.3 ಪಟ್ಟು ಚಾರ್ಜ್ ಮಾಡಬಹುದು. ಇದರ ಬೆಲೆ 1,647 ರೂ ಆಗಿದ್ದು, ಇದು ಕೆಂಪು, ಹಳದಿ ಮತ್ತು ಬೂದು ಬಣ್ಣಗಳಲ್ಲಿ ಬರುತ್ತದೆ.

ಸ್ಯಾಮ್ಸಂಗ್ ಲಿಥಿಯಂ ಅಯಾನ್ ಪವರ್ ಬ್ಯಾಂಕ್ (EB-P 1100 BSNGIN)
ಸ್ಯಾಮ್ಸಂಗ್ ಸಂಸ್ಥೆಯ ಲಿಥಿಯಂ ಅಯಾನ್ ಪವರ್ ಬ್ಯಾಂಕ್ ಅತ್ಯುತ್ತಮ ಪವರ್ ಬ್ಯಾಂಕ್ಗಳಲ್ಲಿ ಒಂದಾಗಿದೆ. ಇದು 10,000 mAh ಸಾಮರ್ಥ್ಯದೊಂದಿಗೆ ಲಭ್ಯವಿದೆ. ಇದು ಡ್ಯುಯಲ್ ಯುಎಸ್ಬಿ ಪೋರ್ಟ್ಗಳನ್ನು ಸಹ ಒಳಗೊಂಡಿದೆ. ಇದು ತುಂಬಾ ಸಾಂದ್ರವಾಗಿರುತ್ತದೆ ಮತ್ತು ಹಗುರವಾಗಿರುತ್ತದೆ. ಅಲ್ಲದೆ, ಗಟ್ಟಿಮುಟ್ಟಾದ ನಿರ್ಮಾಣ ಗುಣಮಟ್ಟವು ಹಿಂಜರಿಕೆಯಿಲ್ಲದೆ ನೀವು ಎಲ್ಲಿ ಬೇಕಾದರೂ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇನ್ನು ಈ ಪವರ್ ಬ್ಯಾಂಕ್ ಬೆಲೆ 1,499 ರೂ ಆಗಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190