ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳ ಮೇಲೆ 80% ಆಫರ್‌!

|

ಫ್ಲಿಪ್‌ಕಾರ್ಟ್‌ ತನ್ನ ಆನ್‌ಲೈನ್‌ ಗ್ರಾಹಕರಿಗೆ ವಿಶೇಷ ರಿಯಾಯಿತಿ ಸೇಲ್‌ಗಳನ್ನು ಆಯೋಜಿಸುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಸದಾ ಹೊಸ ಮಾದರಿಯ ಸೇಲ್‌ಗಳನ್ನು ಆಯೋಜಿಸುತ್ತಾ ರಿಯಾಯಿತಿ ಮೇಳಗಳನ್ನು ನಡೆಸಿಕೊಂಡು ಬಂದಿದೆ. ಇದರಲ್ಲಿ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಸಾಕಷ್ಟು ಪ್ರಸಿದ್ದಿ ಪಡೆದುಕೊಂಡಿದೆ. ಇದೀಗ ಮತ್ತೊಮ್ಮೆ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಆಯೋಜಿಸಿದ್ದು, ಇದು ಇದೇ ಆಗಸ್ಟ್‌ 5 ರಿಂದ 9ರ ತನಕ ನಡೆಯಲಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಮತ್ತೆ ಬಂದಿದೆ. ಇನ್ನು ಈ ಸೇಲ್‌ ಫ್ಲಿಪ್‌ಕಾರ್ಟ್‌ ಪ್ಲಸ್‌ ಸದಸ್ಯರಿಗೆ ಇಂದಿನಿಂದಲೇ ಲೈವ್‌ ಆಗಿದೆ. ಈ ಮೂಲಕ ಭಾರತದಲ್ಲಿ ಸ್ವಾತಂತ್ರ ದಿನಾಚರಣೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ ಮಾತ್ರವಲ್ಲದೆ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳ ಮೇಲೆ ಸಾಕಷ್ಟು ರಿಯಾಯಿತಿಗಳನ್ನು ನೀಡಲಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್ ಡೇಸ್ 2021 ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳ ಮೇಲೆ ಏನೆಲ್ಲಾ ರಿಯಾಯಿತಿ ಇದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್ TWS ಇಯರ್‌ಫೋನ್‌ಗಳು ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ಕೇವಲ 10,990 (MRP ರೂ. 15,990) ರೂ ಗಳಿಗೆ ಲಭ್ಯವಾಗಲಿದೆ. ಅಲ್ಲದೆ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಮೂಲಕ ಖರೀದಿಸಿದರೆ 5% ಅನಿಯಮಿತ ಕ್ಯಾಶ್‌ಬ್ಯಾಕ್ ಕೂಡ ದೊರೆಯಲಿದೆ. ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್ TWS ಇಯರ್‌ಫೋನ್‌ಗಳು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಮತ್ತು ಬ್ಲೂಟೂತ್ 5 ಬೆಂಬಲವನ್ನು ಹೊಂದಿವೆ.

iFFalcon 55 ಇಂಚಿನ ಸ್ಮಾರ್ಟ್ 4K QLED ಟಿವಿ

iFFalcon 55 ಇಂಚಿನ ಸ್ಮಾರ್ಟ್ 4K QLED ಟಿವಿ

iFFalcon 55-inch QLED 4K ಸ್ಮಾರ್ಟ್ ಟಿವಿ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ಕೇವಲ 36,999 (MRP ರೂ. 1,06,990)ರೂ ಗಳಿಗೆ ದೊರೆಯಲಿದೆ. ಈ ದೊಡ್ಡ ಪರದೆಯ ಟಿವಿಯಲ್ಲಿ ಅತ್ಯಂತ ಕಡಿಮೆ ಬೆಲೆಗಳಲ್ಲಿ ಇದು ಒಂದು. ಆಕ್ಸಿಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡುದಾರರು ಹೆಚ್ಚುವರಿ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಪಡೆಯಬಹುದು.

ಆಸುಸ್ ವಿವೋಬುಕ್ ಗೇಮಿಂಗ್ ಕೋರ್ i5

ಆಸುಸ್ ವಿವೋಬುಕ್ ಗೇಮಿಂಗ್ ಕೋರ್ i5

ಆಸುಸ್ ನ ವಿವೋಬುಕ್ ಗೇಮಿಂಗ್ ಲ್ಯಾಪ್ ಟಾಪ್ ಈಗ ರಿಯಾಯಿತಿ ದರದಲ್ಲಿ ಬಿಗ್ ಸೇವಿಂಗ್ ಡೇಸ್ 2021 ಮಾರಾಟದ ಸಮಯದಲ್ಲಿ 54,990 (MRP ರೂ. 76,990)ರೂ ಗಳಿಗೆ ದೊರೆಯಲಿದೆ. ಇನ್ನು ಈ ಗೇಮಿಂಗ್ ಲ್ಯಾಪ್ ಟಾಪ್ ಒಂಬತ್ತನೇ ತಲೆಮಾರಿನ ಕೋರ್ ಐ 5 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 8GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಅಲ್ಲದೆ ಇದು ವಿಂಡೋಸ್ 10 ಹೋಮ್ ಔಟ್-ಆಫ್-ದಿ-ಬಾಕ್ಸ್ ಅನ್ನು ರನ್ ಮಾಡುತ್ತದೆ.

ಫ್ಲಿಪ್‌ಕಾರ್ಟ್‌

ಇನ್ನು ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಎಲೆಕ್ಟ್ರಾನಿಕ್ಸ್ ಮೇಲೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಪಡೆಯುತ್ತಾರೆ. ಅದರಲ್ಲೂ ಫ್ಲಿಪ್‌ಕಾರ್ಟ್ ಪಟ್ಟಿಯ ಪ್ರಕಾರ ಎಲೆಕ್ಟ್ರಾನಿಕ್ಸ್ ಮತ್ತು ಆಕ್ಸಿಸರೀಸ್ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಮತ್ತು ಟಿವಿ ಮತ್ತು ಇತರೆ ಉಪಕರಣಗಳ ಮೇಲೆ ಶೇಕಡಾ 75 ರಷ್ಟು ರಿಯಾಯಿತಿ ಇರುತ್ತದೆ.

Most Read Articles
Best Mobiles in India

English summary
Flipkart Big Saving Days sale:Axis Bank cards and ICICI Bank credit cards will get 10 per cent instant discount on electronics.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X