ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಟಾಪ್‌ 5 ಪೆನ್‌ಡ್ರೈವ್‌ಗಳು!

|

ಇತ್ತೀಚಿನ ದಿನಗಳಲ್ಲಿ ಮಾಹಿತಿಯನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ರವಾನಿಸುವುದು ಸಾಕಷ್ಟು ಸುಲಭವಾಗಿದೆ. ಟೆಕ್ನಾಲಜಿ ಆಪ್ಡೇಟ್‌ ಆದಂತೆ ಗಜ ಗಾತ್ರದ ಫೈಲ್‌ಗಳಲ್ಲಿ ಸಾಗಿಸುತ್ತಿದ್ದ ಮಾಹಿತಿಯನ್ನ ಇಂದು ಕಿರು ಬೆರಳು ಗಾತ್ರದ ಪೆನ್‌ಡ್ರೈವ್‌ಗಳಲ್ಲಿ ಸಾಗಿಸಬಹುದಾಗಿದೆ. ಸದ್ಯ ಇತ್ತೀಚಿನ ದಿನಗಳಲ್ಲಿ ಪೆನ್‌ಡೈವ್ ಗಳ ಅವಶ್ಯಕತೆ ಹೆಚ್ಚಾಗಿದ್ದು, ಡಿಜಿಟಲ್ ಮಾಹಿತಿಯನ್ನು ಸಾಗಿಸಲು ಅಥವಾ ಸ್ಟೊರ್ ಮಾಡಿಡಲು ಪೆನ್‌ಡ್ರೈವ್‌ಗಳ ಅಗತ್ಯತೆ ತೀರಾ ಹೆಚ್ಚಾಗಿದೆ. ಹಾಗಾಗಿಯೇ ಇಂದು ಕೈಗೆಟುವ ಬೆಲೆಯಲ್ಲಿ ಹೆಚ್ಚಿನ ಮೊಮೊರಿ ಹೊಂದಿರುವ ಪೆನ್‌ಡ್ರೈವ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಡಿಜಿಟಲ್‌

ಹೌದು, ಡಿಜಿಟಲ್‌ ಮಾಹಿತಿಯನ್ನು ಸಾಗಿಸುವ ಹಾಗೂ ಸ್ಟೊರ್‌ ಮಾಡಲು ಪೆನ್‌ಡ್ರೈವ್‌ಗಳ ಅವಶ್ಯಕತೆ ಹೆಚ್ಚಿದೆ. ಬಹುತೇಕ ಎಲ್ಲಾ ಕಡೆಯೂ ಇಂದು ಪೆನ್‌ಡ್ರೈವ್‌ಗಳನ್ನ ಬಳಸುತ್ತಾರೆ. ತಮ್ಮ ಡಿಜಿಟಲ್‌ ಮಾಹಿತಿಯನ್ನ ಗೌಪ್ಯವಾಗಿಡುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ಕಂಪೆನಿಗಳು ತಮ್ಮ ವಿಭಿನ್ನ ಮಾದರಿಯ ಪೆನ್‌ಡ್ರೈವ್‌ಗಳನ್ನ ಪರಿಚಯಿಸಿವೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಐದು ಅತ್ಯುತ್ತಮ ಪೆನ್‌ಡ್ರೈವ್‌ಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸಿಕೊಡ್ತೀವಿ ಓದಿರಿ.

1. ಸ್ಯಾನ್‌ಡಿಸ್ಕ್ ಕ್ರೂಜರ್ ಬ್ಲೇಡ್

1. ಸ್ಯಾನ್‌ಡಿಸ್ಕ್ ಕ್ರೂಜರ್ ಬ್ಲೇಡ್

ಸ್ಯಾನ್‌ಡಿಸ್ಕ್‌ ಕಂಪೆನಿಯ ಕ್ರೊಜರ್‌ ಬ್ಲೇಡ್‌ ಪೆನ್‌ಡ್ರೈವ್ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನ ಪಡೆದುಕೊಂಡಿದೆ. ಇದು 32GB ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಪೆನ್‌ಡ್ರೈವ್‌ ಪ್ಲಾಸ್ಟಿಕ್‌ನಿಮದ ಸುತ್ತುವರೆದಿರುವ ಬಾಡಿ ವಿನ್ಯಾಸವನ್ನು ಹೊಂದಿದ್ದು, ಇದರಿಂದಾಗಿ ಇದನ್ನು ಸುಲಭವಾಗಿ ಎಲ್ಲಿಗೆ ಬೇಕಿದ್ದರೂ ಸಾಗಿಸಬಹುದು. ಇದು ಯಾವುದೇ ತಾಪಮಾನವನ್ನು ಸಹ ಸಹಿಸಿಕೊಳ್ಳಬಲ್ಲದು. ಅಲ್ಲದೆ ಈ ಪೆನ್‌ಡ್ರೈವ್ ಯುಎಸ್‌ಬಿ 2.0 ಸ್ಟ್ಯಾಂಡರ್ಡ್ ಅನ್ನು ಬೆಂಬಲಿಸಲಿದ್ದು, ಟಫೈಲ್‌ ಟ್ರಾನ್ಸಫರ್‌ ಮಾಡಲು ಉತ್ತಮ ಆಯ್ಕೆ ಎನಿಸಲಿದೆ. ಸದ್ಯ ಇದರ ಬೆಲೆ ಅಮೆಜಾನ್‌ ತಾಣದಲ್ಲಿ 349 ರೂ ಆಗಿದೆ.

2. ಸ್ಯಾನ್‌ಡಿಸ್ಕ್ ಅಲ್ಟ್ರಾ

2. ಸ್ಯಾನ್‌ಡಿಸ್ಕ್ ಅಲ್ಟ್ರಾ

ಇದು 16GB ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಅಲ್ಟ್ರಾ ಪೆನ್‌ಡ್ರೈವ್ USB3.0 ಸ್ಟ್ಯಾಂಡರ್ಡ್‌ಗೆ ಹೊಂದಿಕೆಯಾಗುವ ಫಾಸ್ಟ್‌ ಟ್ರಾನ್ಸಫರ್‌ ಅನ್ನು ನೀಡಲಿದೆ. ಜೊತೆಗೆ ಇದು USB2.0 ಪೆಂಡ್ರೈವ್‌ಗಳಿಗಿಂತ 4 ಪಟ್ಟು ವೇಗವಾಗಿದ್ದು, 100MB/ s ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಪೆನ್‌ಡ್ರೈವ್‌ನಲ್ಲಿ ಇಂಟರ್‌ಬಿಲ್ಟ್‌ ಸಾಫ್ಟ್‌ವೇರ್ ಬಳಸಿ ನಿಮ್ಮ ಪ್ರಮುಖ ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ ಆಯ್ಕೆಯನ್ನು ಸಹ ನೀಡಲಾಗಿದೆ. ಇನ್ನು ಈ ಪೆನ್‌ಡ್ರೈವ್‌ ಇ-ಕಾಮರ್ಸ್‌ ತಾಣ ಅಮೆಜಾನ್‌ ನಲ್ಲಿ ಬೆಲೆ, 514 ರೂ,ಆಗಿದೆ.

3. ಸೋನಿ ಮೈಕ್ರೋವಾಲ್ಟ್

3. ಸೋನಿ ಮೈಕ್ರೋವಾಲ್ಟ್

ಸೋನಿ ಕಂಪೆನಿ ಗುಣಮಟ್ಟದ ಪ್ರಾಡಕ್ಟ್‌ಗಳಿಗೆ ಆದ್ಯತೆ ನೀಡಲಿದೆ. ಇದರಲ್ಲಿ ಸೋನಿ ಮೈಕ್ರೋವಾಲ್ಟ್‌ ಪೆನ್‌ಡ್ರೈವ್‌ ಕೂಡ ಒಂದಾಗಿದೆ. ಇನ್ನು ಈ ಪೆನ್‌ಡ್ರೈವ್‌ 16GB ಪೆನ್‌ಡ್ರೈವ್‌ ಆಗಿದ್ದು, ಇದು USB2.0ಗೆ ಬೆಂಬಲವನ್ನು ನೀಡಲಿದೆ. ಇನ್ನು ಸೋನಿ ಮೈಕ್ರೊವಾಲ್ಟ್ ಹಿಂತೆಗೆದುಕೊಳ್ಳುವ ಪೆನ್‌ಡ್ರೈವ್ ಆಗಿದ್ದು, ಬದಿಯಲ್ಲಿ ಪುಶ್ ಬಟನ್ ಇರುತ್ತದೆ. ಇನ್ನು ಈ ಪೆನ್‌ಡ್ರೈವ್‌ ಬೆಲೆ 800 ರೂ ಆಗಿದೆ.

4. HP v236w

4. HP v236w

ಎಚ್‌ಪಿ ಕಂಪೆನಿಯ ಈ ಪೆನ್‌ಡ್ರೈವ್ 16GB ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. HP v236w ಪೆಂಡ್ರೈವ್ ಅನ್ನು ಉತ್ತಮ-ಗುಣಮಟ್ಟದ ಲೋಹದಿಂದ ತಯಾರಿಸಲಾಗಿದ್ದು, ಎಲ್ಲಿಗೆ ಬೇಕಿದ್ದರೂ ಸಾಗಿಸಬಹುದಾಗಿದೆ. ಇನ್ನು ಈ ಪೆನ್‌ಡ್ರೈವ್‌ USB2.0 ಮಾನದಂಡದ ಆಧಾರದ ಮೇಲೆ ವರ್ಗಾವಣೆ ವೇಗವನ್ನು ನೀಡಲಿದೆ. ಅಲ್ಲದೆ ಇದು ವಾಟರ್‌ ಪ್ರೂಪ್‌ ವ್ಯವಸ್ಥೆಯನ್ನು ಹೊಂದಿದ್ದು, ಆಂಡ್ರಾಯ್ಡ್ ಫೋನ್‌ಗಳಲ್ಲಿ ಇದು ಒಟಿಜಿಯಾಗಿ ಕಾರ್ಯನಿರ್ವಹಿಸುತ್ತದೆ. ಇನ್ನು ಇದರ ಬೆಲೆ 362 ರೂ, ಆಗಿದೆ.

5. ತೋಷಿಬಾ U202W0160A4

5. ತೋಷಿಬಾ U202W0160A4

ಬಜೆಟ್‌ ಬೆಲೆಯಲ್ಲಿ ಲಭ್ಯವಾಗುವ ಪೆನ್‌ಡ್ರೈವ್‌ಗಳಲ್ಲಿ ತೋಷಿಬಾ ಕಂಪೆನಿಯ U202W0160A4 ಪೆನ್‌ಡ್ರೈವ್‌ ಕೂಡ ಒಂದಾಗಿದೆ. ಇದು 16GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಪೆನ್‌ಡ್ರೈವ್‌ ಮುಚ್ಚುವ ಕ್ಯಾಪ್ ಅನ್ನು ಸಹ ಹೊಂದಿದೆ. ಇದು 2 ವರ್ಷಗಳ ಖಾತರಿಯನ್ನು ಸಹ ಒಳಗೊಂಡಿದೆ. ನೀವು ಉತ್ತಮ ವರ್ಗಾವಣೆ ವೇಗಕ್ಕಾಗಿ ಯುಎಸ್‌ಬಿ 2.0 ಇಂಟರ್ಫೇಸ್ ಅನ್ನು ಸಹ ಒಳಗೊಂಡಿದೆ. ಜೊತೆಗೆ ಆಂಡ್ರಾಯ್ಡ್ ಫೋನ್‌ನೊಂದಿಗೆ ಈ ತೋಷಿಬಾ ಪೆನ್‌ಡ್ರೈವ್ ಅನ್ನು ಒಟಿಜಿಯಾಗಿ ಸಹ ಬಳಸಬಹುದಾಗಿದೆ. ಇನ್ನು ಈ ಪೆನ್‌ಡ್ರೈವ್‌ನ ಬೆಲೆ 334 ರೂ ಆಗಿದೆ.

Most Read Articles
Best Mobiles in India

English summary
Best pendrives available in the market with ample storage space.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X