300 ರೂ.ಗಿಂತ ಕಡಿಮೆ ಬೆಲೆಯ ಪ್ರಿಪೇಯ್ಡ್ ಪ್ಲ್ಯಾನ್‌ಗಳು! ರೀಚಾರ್ಜ್‌ಗೆ ಯಾವುದು ಸೂಕ್ತ!

|

ದೇಶದ ಟೆಲಿಕಾಂ ವಲಯದಲ್ಲಿ ಜಿಯೋ, ಏರ್‌ಟೆಲ್‌, ವಿ ಟೆಲಿಕಾಂ ಆಪರೇಟರ್‌ಗಳು ಮುಂಚೂಣಿಯಲ್ಲಿವೆ. ತಮ್ಮ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಆಕರ್ಷಕ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ಇನ್ನು ಟೆಲಿಕಾಂ ಆಪರೇಟರ್‌ಗಳಾದ ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ, ವೊಡಾಫೋನ್ ಐಡಿಯಾ ಮತ್ತು ಬಿಎಸ್‌ಎನ್‌ಎಲ್ ಹಲವು ಆಕರ್ಷಕ ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿವೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ನೀಡುವ ಮೂಲಕ ಸ್ಪರ್ಧಾತ್ಮಕ ಪೈಪೋಟಿಯನ್ನು ನಡೆಸುತ್ತಿವೆ.

ಟೆಲಿಕಾಂ

ಹೌದು, ಟೆಲಿಕಾಂ ಕಂಪೆನಿಗಳು ತಮ್ಮ ಚಂದಾದಾರರಿಗೆ ಹಲವು ಪ್ರಿಪೇಯ್ಡ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿವೆ. ತಮ್ಮ ಪ್ರಿಪೇಯ್ಡ್ ಪ್ಲ್ಯಾನ್‌ಗಳ ಮೂಲಕ ಹಲವು ಮಾನ್ಯತೆಯ ಅವಧಿಯ ಪ್ರಯೋಜನಗಳನ್ನು ನೀಡಿವೆ. ಇವುಗಳಲ್ಲಿ 300 ರೂ.ಗಿಂತ ಕಡಿಮೆ ಮೊತ್ತದ ಪ್ರಿಪೇಯ್ಡ್‌ ಪ್ಲ್ಯಾನ್‌ಗಳು ಕೂಡ ಸೇರಿವೆ. ಇನ್ನು ನೀವು 300 ರೂ.ಗಿಂತ ಕಡಿಮೆ ಬೆಲೆಯಲ್ಲಿ ಉತ್ತಮ-ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು ಹುಡುಕುತ್ತಿದ್ದರೆ, ಹೆಸರಾಂತ ಟೆಲಿಕಾಂ ಆಪರೇಟರ್‌ಗಳು ಒದಗಿಸುವ ಪ್ರಿಪೇಯ್ಡ್ ಪ್ಲ್ಯಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಲಯನ್ಸ್ ಜಿಯೋ 149ರೂ ಮತ್ತು 249ರೂ ಪ್ರಿಪೇಯ್ಡ್ ಪ್ಲ್ಯಾನ್‌

ರಿಲಯನ್ಸ್ ಜಿಯೋ 149ರೂ ಮತ್ತು 249ರೂ ಪ್ರಿಪೇಯ್ಡ್ ಪ್ಲ್ಯಾನ್‌

ಜಿಯೋ 149ರೂ ಪ್ರಿಪೇಯ್ಡ್ ಪ್ಲ್ಯಾನ್‌, ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆ ಸೌಲಭ್ಯಗಳೊಂದಿಗೆ ದಿನಕ್ಕೆ 1GB ಡೇಟಾ ಮತ್ತು ದಿನಕ್ಕೆ 100 ಎಸ್‌ಎಂಎಸ್‌ ಪ್ರಯೋಜನ ನೀಡಲಿದೆ. ಇನ್ನು ಈ ಪ್ಲ್ಯಾನ್‌ 24 ದಿನಗಳ ಮಾನ್ಯತೆ ಹೊಂದಿದೆ. ಅಲ್ಲದೆ ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಜಿಯೋ ಟಿವಿ, ಜಿಯೋ ಸಿನೆಮಾ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಗಳನ್ನು ಪಡೆಯಬಹುದಾಗಿದೆ. ಹಾಗೆಯೇ 249 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ ದಿನಕ್ಕೆ 2GB ಡೇಟಾವನ್ನು 28 ದಿನಗಳವರೆಗೆ ಪಡೆದುಕೊಳ್ಳಬಹುದಾಗುದೆ. ಜೊತೆಗೆ ಅನಿಯಮಿತ ಕರೆ ಪ್ರಯೋಜನಗಳು ಮತ್ತು ದಿನಕ್ಕೆ 100 SMS ಗಳನ್ನು ಪಡೆಯಬಹುದಾಗಿದೆ.

ಏರ್‌ಟೆಲ್ 199ರೂ ಮತ್ತು 249ರೂ ಪ್ರಿಪೇಯ್ಡ್ ಪ್ಲ್ಯಾನ್‌

ಏರ್‌ಟೆಲ್ 199ರೂ ಮತ್ತು 249ರೂ ಪ್ರಿಪೇಯ್ಡ್ ಪ್ಲ್ಯಾನ್‌

ಏರ್‌ಟೆಲ್‌ 199ರೂ ಪ್ರಿಪೇಯ್ಡ್ ಪ್ಲ್ಯಾನ್‌ ಟ್ರೂಲಿ ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್ ಮತ್ತು 24 ದಿನಗಳ ಮಾನ್ಯತೆಯೊಂದಿಗೆ ಚಂದಾದಾರರು ದಿನಕ್ಕೆ 1GB ಡೇಟಾ ಪ್ರಯೋಜನ ಪಡೆಯಬಹುದಾಗಿದೆ. ಇನ್ನು ಈ ಪ್ರಿಪೇಯ್ಡ್ ಪ್ಲ್ಯಾನ್‌ನ ಹೆಚ್ಚುವರಿ ಪ್ರಯೋಜನಗಳಲ್ಲಿ ವಿಂಕ್ ಮ್ಯೂಸಿಕ್ ಚಂದಾದಾರಿಕೆ, ಉಚಿತ ಹಲೋ ಟ್ಯೂನ್‌ಗಳು, 30 ದಿನಗಳ ಉಚಿತ ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ ಟ್ರಯಲ್ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇನ್ನು 249 ರೂ.ಗಳ ಏರ್‌ಟೆಲ್ ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 1.5GB ಡೇಟಾವನ್ನು 28 ದಿನಗಳ ಮಾನ್ಯತೆ ಮತ್ತು ಟ್ರೂಲಿ ಅನಿಯಮಿತ ಕರೆ ಪ್ರಯೋಜನಗಳನ್ನು ಒದಗಿಸುತ್ತದೆ. ಜೊತೆಗೆ ಬಳಕೆದಾರರು ಅಮೆಜಾನ್ ಮೊಬೈಲ್ ಆವೃತ್ತಿಯ ಉಚಿತ ಪ್ರಯೋಗ, 1 ವರ್ಷದ ಶಾ ಅಕಾಡೆಮಿ ಕೋರ್ಸ್‌ಗಳು, ಉಚಿತ ಹಲೋ ಟ್ಯೂನ್‌ಗಳು, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಮತ್ತು ಹೆಚ್ಚಿನದನ್ನು ಪಡೆದುಕೊಳ್ಳಬಹುದಾಗಿದೆ.

ವೊಡಾಫೋನ್ ಐಡಿಯಾ 199ರೂ ಮತ್ತು 299ರೂ, ಪ್ರಿಪೇಯ್ಡ್ ಪ್ಲ್ಯಾನ್‌

ವೊಡಾಫೋನ್ ಐಡಿಯಾ 199ರೂ ಮತ್ತು 299ರೂ, ಪ್ರಿಪೇಯ್ಡ್ ಪ್ಲ್ಯಾನ್‌

ವೊಡಾಫೋನ್ ಐಡಿಯಾ 199ರೂ ಪ್ರಿಪೇಯ್ಡ್ ಪ್ಲ್ಯಾನ್‌ 24 ದಿನಗಳ ಮಾನ್ಯತೆ ಹೊಂದಿದೆ. ಇದು ಟ್ರೂಲಿ ಅನಿಯಮಿತ ಕರೆ, ದಿನಕ್ಕೆ 100 ಎಸ್‌ಎಂಎಸ್‌ ಮತ್ತು 1GB ಡೇಟಾ ಪ್ರಯೋಜನ ಪಡೆಯಬಹುದಾಗಿದೆ. ಇದರಲ್ಲಿ ವಿ ಚಲನಚಿತ್ರಗಳು ಮತ್ತು ಟಿವಿ ಸೇವೆಗಳನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಬಹುದಾಗಿದೆ. ಇನ್ನು ವೊಡಾಫೋನ್ ಐಡಿಯಾ 299ರೂ,ಗಳ ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 4GB ಡೇಟಾ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇದು 28 ದಿನಗಳ ಮಾನ್ಯತೆ ಹೊಂದಿದೆ.

ಬಿಎಸ್ಎನ್ಎಲ್ 187ರೂ ಮತ್ತು 298ರೂ ಪ್ರಿಪೇಯ್ಡ್ ಪ್ಲ್ಯಾನ್‌

ಬಿಎಸ್ಎನ್ಎಲ್ 187ರೂ ಮತ್ತು 298ರೂ ಪ್ರಿಪೇಯ್ಡ್ ಪ್ಲ್ಯಾನ್‌

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಕೂಡ ಹಲವು ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಇದರಲ್ಲಿ 187 ರೂ ಪ್ರಿಪೇಯ್ಡ್ ಯೋಜನೆಯು ದಿನಕ್ಕೆ 2 GB ಡೇಟಾವನ್ನು 28 ದಿನಗಳ ಸೇವಾ ಮಾನ್ಯತೆಯೊಂದಿಗೆ ನೀಡುತ್ತದೆ. ಅನಿಯಮಿತ ಕರೆ ಪ್ರಯೋಜನಗಳು ಮತ್ತು ದಿನಕ್ಕೆ 100 ಎಸ್‌ಎಂಎಸ್ ಪ್ರಯೋಜನ ಕೂಡ ಈ ಪ್ಲ್ಯಾನ್‌ನಲ್ಲಿ ದೊರೆಯಲಿದೆ. ಜೊತೆಗೆ 298ರೂ ಪ್ರಿಪೇಯ್ಡ್ ಯೋಜನೆಯು ಅನಿಯಮಿತ ಧ್ವನಿ ಕರೆ ಪ್ರಯೋಜನಗಳನ್ನು ಒಳಗೊಂಡಂತೆ ದಿನಕ್ಕೆ 1GB ಡೇಟಾವನ್ನು ಒದಗಿಸುತ್ತದೆ. ಯೋಜನೆಯ ಹೆಚ್ಚುವರಿ ಪ್ರಯೋಜನಗಳಲ್ಲಿ 56 ದಿನಗಳ ಕಾಲ EROS NOW ಮನರಂಜನಾ ಸೇವೆಗಳನ್ನು ಒಳಗೊಂಡಿವೆ.

Most Read Articles
Best Mobiles in India

Read more about:
English summary
All the telco giants offer a decent validity period in their prepaid offering to provide a hassle-free experience. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X