Just In
Don't Miss
- Movies
ಕುರಿ ಪ್ರತಾಪ್ 'ಫೇಕ್' ಎನ್ನುವವರು ಸ್ವಲ್ಪ ಶ್ವೇತಾ ಚೆಂಗಪ್ಪ ಮಾತನ್ನ ಕೇಳಿ..
- News
ಏಪ್ರಿಲ್ 1 ರಂದೇ ಪಠ್ಯಪುಸ್ತಕ ಪೂರೈಕೆಗೆ ಡಿಸಿಎಂ ಸೂಚನೆ
- Sports
ಐಎಸ್ಎಲ್ 2019: ಒಡಿಶಾ ಎಫ್ಸಿಗೆ ಪುಣೆಯಲ್ಲಿ ಅಮೂಲ್ಯ ಜಯ
- Lifestyle
ಗುರುವಾರದ ದಿನ ಭವಿಷ್ಯ 12-12-2019
- Finance
ಚಿನ್ನ ಖರೀದಿಸುವ ಮುನ್ನ ಚಿನ್ನದ ಶುದ್ಧತೆಯನ್ನು ಪರಿಶೀಲಿಸುವುದು ಹೇಗೆ?
- Automobiles
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಟಾಟಾ ಆಲ್ಟ್ರೊಜ್ ಕಾರು
- Education
ಸ್ಪೋರ್ಟ್ಸ್ ಅಥಾರಿಟಿಯಲ್ಲಿ 130 ಯಂಗ್ ಪ್ರೊಫೆಷನಲ್ ಹುದ್ದೆಗಳ ನೇಮಕಾತಿ.. ತಿಂಗಳಿಗೆ 40,000/-ರೂ ವೇತನ
- Travel
ದಕ್ಷಿಣ ಭಾರತಕ್ಕೆ ಪ್ರವಾಸ ಹೋದ್ರೆ ಈ ಅತ್ಯುತ್ತಮ ಪಾನೀಯಗಳು, ತಿಂಡಿಗಳು ಮತ್ತು ಭಕ್ಷ್ಯಗಳನ್ನೂ ಟ್ರೈ ಮಾಡಿ!
ಹೊಸ ಸ್ಮಾರ್ಟ್ಫೋನ್ ಖರೀದಿಸುವ ಪ್ಲ್ಯಾನ್ ಇದೆಯಾ?.ಹಾಗಿದ್ರೆ ಅವಸರ ಮಾಡ್ಬೇಡಿ!
ದೇಶಿಯ ಮಾರುಕಟ್ಟೆಗೆ ಹಲವು ಹೊಸ ಸ್ಮಾರ್ಟ್ಫೋನ್ಗಳು ಎಂಟ್ರಿಕೊಡುತ್ತಲೇ ಇದ್ದು, ಅವುಗಳಲ್ಲಿ ಬಜೆಟ್ ಬೆಲೆಯ ಸ್ಮಾರ್ಟ್ಫೋನ್ಗಳು ಹೆಚ್ಚು ಸದ್ದು ಮಾಡುತ್ತಿವೆ. ಇತ್ತೀಚಿನ ಹೊಸ ಸ್ಮಾರ್ಟ್ಫೋನ್ಗಳಲ್ಲಿ ತ್ರಿವಳಿ ಕ್ಯಾಮೆರಾ, ಅಧಿಕ ಪ್ರೊಸೆಸರ್, ಬಿಗ್ ಬ್ಯಾಟರಿ ಫೀಚರ್ಸ್ಗಳು ಸೇರಿದಂತೆ ಫೋಣ್ ಡಿಸೈನ್ಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ ಗ್ರಾಹಕರು ಮಾತ್ರ ಅತ್ಯುತ್ತಮ ಹೈ ಎಂಡ್ ಫೀಚರ್ಸ್ಗಳಿರುವ ಸ್ಮಾರ್ಟ್ಫೋನಿನತ್ತವೇ ಹೆಜ್ಜೆ ಹಾಕುತ್ತಾರೆ.

ಹೌದು, ಪ್ರಸ್ತುತ ಈ ನವೆಂಬರ್ ತಿಂಗಳಿನಲ್ಲಿ ಮಾರುಕಟ್ಟೆಗೆ ಕೆಲವು ಬೆಸ್ಟ್ ಸ್ಮಾರ್ಟ್ಫೋನ್ಗಳು ಲಗ್ಗೆ ಇಟ್ಟಿವೆ ಹಾಗೆಯೇ ಇನ್ನಷ್ಟು ಟ್ರೆಂಡಿಂಗ್ ಸ್ಮಾರ್ಟ್ಫೋನ್ಗಳು ಸಹ ಪ್ರವೇಶ ನೀಡಲಿವೆ. ಹೀಗಾಗಿ ಈ ತಿಂಗಳು ಹೊಸ ಸ್ಮಾರ್ಟ್ಫೋನ್ ಖರೀದಿಸುವ ಯೋಜನೆ ಇದ್ರೆ ಸ್ಪಲ್ವ ಕಾಯಿರಿ. ಏಕೆಂದರೇ ಈ ತಿಂಗಳು ಸಹ ಕೆಲವು ಹೈ ಎಂಡ್ ಫೀಚರ್ಸ್ಗಳ ಸ್ಮಾರ್ಟ್ಫೋನ್ಗಳು ಬಜಾರಗೆ ಬರಲಿವೆ. ಹಾಗಾದರೇ ಈ ತಿಂಗಳು ಕುತೂಹಲ ಮೂಡಿಸಿರುವ ಪ್ರಮುಖ 5 ಸ್ಮಾರ್ಟ್ಫೋನ್ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ರಿಯಲ್ ಮಿ ಎಕ್ಸ್2 ಪ್ರೊ
ಚೀನಾ ಮೂಲದ 'ರಿಯಲ್ ಮಿ' ಕಂಪನಿಯ ಹೊಸ 'ರಿಯಲ್ ಮಿ ಎಕ್ಸ್2 ಪ್ರೊ' ಸ್ಮಾರ್ಟ್ಫೋನ್ ಇದೇ ನವೆಂಬರ್ 20ರಂದು ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಸ್ಮಾರ್ಟ್ಫೋನ್ 6.5 ಇಂಚಿನ ಪೂರ್ಣ ಹೆಚ್ಡಿ ಡಿಸ್ಪ್ಲೇ ಹೊಂದಿರಲಿದ್ದು, ಅಧಿಕ RAM ಆಯ್ಕೆ ಇರುವ ಸಾಧ್ಯತೆಗಳಿವೆ. ಕ್ವಾಲ್ಕಮ್ ಸ್ನ್ಯಾಪ್ಡ್ರಾಗನ್ 855 ಪ್ರೊಸೆಸರ್ ಸಹ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಬೆಲೆಯು ಸುಮಾರು 30,000ರೂ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.

ವಿವೋ ಯು 20
ಇತ್ತೀಚಿಗೆ ವಿವೋ ಕಂಪನಿಯು ವಿವೋ ಯು 10 ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದ್ದು, ಅದರ ಮುಂದುವರಿದ ಭಾಗವಾಗಿ ಈಗ ವಿವೋ ಯು 20 ಫೋನ್ ಬಿಡುಗಡೆಗೆ ಸಜ್ಜಾಗಿದೆ. ಈ ಸ್ಮಾರ್ಟ್ಫೋನ್ ಇದೇ ನವೆಂಬರ್ 22 ರಂದು ಎಂಟ್ರಿ ಕೊಡಲಿದ ಎಂದೆನ್ನಲಾಗಿದೆ. 5000mAh ಬ್ಯಾಟರಿ ಲೈಫ್ ಜೊತೆಗೆ ಸ್ನ್ಯಾಪ್ಡ್ರಾಗನ್ 675 ಪ್ರೊಸೆಸರ್ ಒಳಗೊಂಡಿರುವ ಸಾಧ್ಯತೆಗಳಿವೆ. ಹಾಗೆಯೇ ಬೆಲೆಯು ಮೀಡ್ರೇಂಜ್ನಲ್ಲಿರಲಿದೆ ಎಂದು ಊಹಿಸಲಾಗಿದೆ.

ಇನ್ಫಿನಿಕ್ಸ್ S5 ಲೈಟ್
ಅಗ್ಗದ ಬೆಲೆಯ ಇನ್ಫಿನಿಕ್ಸ್ ಎಸ್5 ಲೈಟ್ ಸ್ಮಾರ್ಟ್ಫೋನ್ ಸಹ ಇದೇ ನವೆಂಬರ್ 15ರಂದು ಬಿಡುಗಡೆ ಆಗಿದೆ. ಈ ಸ್ಮಾರ್ಟ್ಫೋನ್ 7999ರೂ.ಗಳ ಪ್ರೈಸ್ಟ್ಯಾಗ್ ಹೊಂದಿದ್ದು, ಪಂಚ್ಹೋಲ್ ಡಿಸ್ಪ್ಲೇ ಮಾದರಿಯನ್ನು ಹೊಂದಿದೆ. ತ್ರಿವಳಿ ಕ್ಯಾಮೆರಾ ಸೆಟ್ಅಪ್ ಪಡೆದಿರುವ ಈ ಫೋನ್ 4GB RAM ಮತ್ತು 64GB ವೇರಿಯಂಟ್ ಆಯ್ಕೆಯನ್ನು ಪಡೆದುಕೊಂಡಿದೆ.

ರಿಯಲ್ ಮಿ 5S
ರಿಯಲ್ ಮಿ ಸಂಸ್ಥೆಯಿಂದ ಈ ತಿಂಗಳು 'ರಿಯಲ್ ಮಿ 5S' ಹೆಸರಿನ ಸ್ಮಾರ್ಟ್ಫೋನ್ ಬಿಡುಗಡೆ ಆಗುವ ನಿರೀಕ್ಷೆಗಳಿವೆ. ಈ ಸ್ಮಾರ್ಟ್ಫೋನ 5000mAh ಬ್ಯಾಟರಿ ಲೈಫ್ ಜೊತೆಗೆ ಅಧಿಕ ಪ್ರೊಸೆಸರ್ ಮತ್ತು 48ಎಂಪಿ ಕ್ಯಾಮೆರಾ ಒಳಗೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಾಗೆಯೇ ಫಿಂಗರ್ಪ್ರಿಂಟ್ ಸೆನ್ಸಾರ್ ಮತ್ತು ವಾಟರ್ನಾಚ್ ಮಾದರಿಯ ಡಿಸ್ಪ್ಲೇ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090