ಎಮರ್ಜೆನ್ಸಿ ಕಾಲ್‌ಗೆ ದೇಶದಲ್ಲೆಡೆ ಒಂದೇ ನಂಬರ್‌

By Ashwath
|

ದೇಶದಲ್ಲಿ ತುರ್ತು ಸಂವಹನಕ್ಕಾಗಿ ಒಂದೇ ನಂಬರ್‌ ಸ್ಥಾಪನೆಗೆ ಟ್ರಾಯ್‌ ಚಿಂತನೆ ನಡೆಸಿದೆ. ಈ ಸಂಬಂಧ 100 ಮತ್ತು 108 ಎರಡು ನಂಬರ್‌ನ್ನು ಟ್ರಾಯ್‌ ಆರಿಸಿದ್ದು, ಸಾರ್ವಜನಿಕರಲ್ಲಿ ಈ ನಂಬರ್‌ಗಳಲ್ಲಿ ಒಂದು ನಂಬರ್‌ ಸ್ಥಾಪನೆಗೆ ಸಲಹೆಯನ್ನು ಕೇಳಿದೆ.

ಭಾರತದಲ್ಲಿ ನಂಬರ್‌ 100 ಪೊಲೀಸ್ ಸಹಾಯಕ್ಕಾಗಿ ಮತ್ತು ನಂಬರ್‌ 108 ಕೆಲ ರಾಜ್ಯಗಳಲ್ಲಿ ಅಂಬುಲೆನ್ಸ್‌ ಈಗಾಗ್ಲೇ ಮೀಸಲಾಗಿದೆ. ಹೀಗಾಗಿ ಅನೇಕ ಜನರಿಗೆ ಈ ನಂಬರ್‌ ಚಿರಪರಿಚಿತವಾದ್ದರಿಂದ ಈ ನಂಬರ್‌ನ್ನೇ ಆರಿಸಿಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (Telecom Regulatory Authority of India ) ಚಿಂತನೆ ನಡೆಸಿದೆ.

ಎಮರ್ಜೆನ್ಸಿ ಕಾಲ್‌ಗೆ ದೇಶದಲ್ಲೆಡೆ ಒಂದೇ ನಂಬರ್‌

ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ತುರ್ತು ಸೇವೆಗಾಗಿ ರಾಷ್ಟ್ರವ್ಯಾಪಿ ಒಂದೇ ನಂಬರ್‌ ಸ್ಥಾಪಿಸಿವೆ. ಹೀಗಾಗಿ ಜನರ ಹಿತಕ್ಕಾಗಿ ನಮ್ಮ ದೇಶದಲ್ಲೂ ಈ ರೀತಿಯ ನಂಬರ್‌ ಅಗತ್ಯವಿದೆ ಎಂದು ಟ್ರಾಯ್‌ ಹೇಳಿದೆ.ಅಷ್ಟೇ ಅಲ್ಲದೇ ನಿಷ್ಕ್ರಿಯಗೊಂಡಿರುವ ಸಿಮ್‌ನಿಂದಲೂ ಈ ನಂಬರ್‌ಗೆ ತುರ್ತು ಕರೆ ಮಾಡುವಂತೆ ವ್ಯವಸ್ಥೆ ರೂಪಿಸಲು ಟ್ರಾಯ್‌ ಚಿಂತನೆ ನಡೆಸಿದೆ.

ಬೇರೆ ಯಾವ ದೇಶದಲ್ಲಿ ಸಿಂಗಲ್‌ ನಂಬರ್ ಇದೆ ?
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಾದ ಅಮೆರಿಕದಲ್ಲಿ 911, ಇಂಗ್ಲೆಂಡ್‌ನಲ್ಲಿ 999, ಆಸ್ಟ್ರೇಲಿಯಾದಲ್ಲಿ 000 ನಂಬರ್‌ನ್ನು ತುರ್ತು ಸಂವಹನಕ್ಕಾಗಿ ಈಗಾಗ್ಲೇ ಸ್ಥಾಪಿಸಲಾಗಿದೆ.

ಲಿಂಕ್‌ : 155223 ನಂಬರ್‌ಗೆ ಕಾಲ್‌ ಮಾಡಿ ಅನಗತ್ಯ ಸೇವೆ ಬಂದ್‌ ಮಾಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X