ಇ-ಲರ್ನರ್‌ ಲೈಸೆನ್ಸ್‌ ಸೇವೆಯಲ್ಲಿ ದಾಖಲೆ ಬರೆದ ದೆಹಲಿ ಸಾರಿಗೆ ಇಲಾಖೆ!

|

ಪ್ರಸ್ತುತ ದಿನಗಳಲ್ಲಿ ದೇಶದ ಎಲ್ಲಾ ವಲಯದಲ್ಲೂ ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗ್ತಿದೆ. ಅದರಂತೆ ಸಾರಿಗೆ ಇಲಾಖೆಯಲ್ಲೂ ಕೂಡ ಸಾಕಷ್ಟು ಬದಲಾವಣೆ ಆಗಿದೆ. ಇತ್ತೀಚಿಗೆ ಸಾರಿಗೆ ಇಲಾಖೆ ಇ-ಲರ್ನರ್‌ ಲೈಸೆನ್ಸ್‌ ಅನ್ನು ನೀಡುತ್ತಿದೆ. ಸದ್ಯ ದೆಹಲಿಯಲ್ಲಿ ಈ ಸೇವೆಯನ್ನು ಪರಿಚಯಿಸಲಾಗಿದೆ. ದೆಹಲಿಯಲ್ಲಿ ಈ ಸೇವೆಯನ್ನು ಪರಿಚಯಿಸಿದ ಎರಡು ತಿಂಗಳ ಅವಧಿಯಲ್ಲಿ 66,900 ಅರ್ಜಿದಾರರಿಗೆ -ಇ- ಲರ್ನರ್ ಲೈಸೆನ್ಸ್‌ ನೀಡಲಾಗಿದೆ ಎಂದು ಹೇಳಲಾಗಿದೆ.

ಇ-ಲರ್ನರ್‌

ಹೌದು, ದೆಹಲಿಯಲ್ಲಿ ಜಾರಿಗೊಳಿಸಿರುವ ಇ-ಲರ್ನರ್‌ ಲೈಸೆನ್ಸ್‌ ಸೇವೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ದೆಹಲಿ ಸಾರಿಗೆ ಸಚಿವರಾದ ಕೈಲಾಶ್ ಗೆಹ್ಲೋಟ್ ಲರ್ನರ್‌ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿದ ಸುಮಾರು 94% ನಷ್ಟು ಜನರಿಗೆ ಈ ಲರ್ನರ್ ಲೈಸೆನ್ಸ್‌ ನೀಡಲಾಗಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ. ಚಾಲನಾ ಪರವಾನಗಿ ಪಡೆಯುವಲ್ಲಿ ಮಾಡಿರುವ ಬದಲಾವಣೆಯನ್ನು ಜನರು ದೊಡ್ಡ ಮಟ್ಟಿದ್ದಲ್ಲಿ ಸ್ವಾಗತಿಸಿದ್ದಾರೆ ಎಂದಿದ್ದಾರೆ. ಹಾಗಾದ್ರೆ ಇ-ಲರ್ನರ್‌ ಲೈಸೆನ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೈಸೆನ್ಸ್‌

ದೆಹಲಿ ಸರ್ಕಾರ ಇತ್ತೀಚಿಗೆ ಚಾಲನಾ ಪರವಾನಗಿ ಪಡೆಯುವಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಜನರಿಗೆ ಆನ್‌ಲೈನ್‌ ಮೂಲಕವೇ ಇ-ಲರ್ನರ್‌ ಲೈಸೆನ್ಸ್‌ ಪಡೆಯುವುದಕ್ಕೆ ಅವಕಾಶ ಕಲ್ಪಿಸಿದೆ. ದೆಹಲಿಯಲ್ಲಿ ಆನ್‌ಲೈನ್ ಮೂಲಕ ಇ-ಲರ್ನಿಂಗ್‌ ಲೈಸೆನ್ಸ್‌ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಗಸ್ಟ್ 11 ರಿಂದ ಆರಂಭಗೊಂಡಿದೆ. ಇದಕ್ಕೆ ಜನರು ಕೂಡ ಸಖತ್‌ ರೆಸ್ಪಾನ್ಸ್‌ ಮಾಡಿದ್ದು, ಇಲ್ಲಿಯವರೆಗೆ 66,900 ಅರ್ಜಿದಾರರು ಈ ಲರ್ನರ್ ಲೈಸೆನ್ಸ್‌ ಪಡೆದುಕೊಂಡಿದ್ದಾರೆ. ಡ್ರೈವಿಂಗ್‌ ಲೈಸೆನ್ಸ್‌ ಗೆ ಸಂಬಂದಿಸಿದ ಮಾಹಿತಿಗಾಗಿ ಹೆಲ್ಪಲೈನ್‌ ನಂಬರ್‌ 1076ಗೆ ಕರೆ ಮಾಡುವುದಕ್ಕೆ ಅವಕಾಶವನ್ನು ಸಹ ನೀಡಲಾಗಿದೆ.

ಲೈಸೆನ್ಸ್‌

ಆನ್‌ಲೈನ್‌ ಮೂಲಕ ಇ-ಲರ್ನರ್‌ ಲೈಸೆನ್ಸ್‌ ಪಡೆಯಲು ಅರ್ಜಿ ಸಲ್ಲಿಸುವವರಿಗೆ ಆನ್‌ಲೈನ್ ಪರೀಕ್ಷೆಯ ದಿನಾಂಕವನ್ನು ನಿಗಧಿಪಡಿಸಲಾಗುತ್ತದೆ. ನಂತರ ಅರ್ಜಿದಾರರು ನಿಗದಿತ ಸಮಯದಲ್ಲಿ ಮನೆಯಲ್ಲಿಯೇ ಕುಳಿತು ಆನ್ ಲೈನ್ ಮೂಲಕ ಲರ್ನರ್‌ ಲೈಸೆನ್ಸ್‌ ಎಕ್ಸಾಂ ತೆಗೆದುಕೊಳ್ಳಬಹುದಾಗಿದೆ. ಆಧಾರ್ ಮೂಲಕ ಅರ್ಜಿದಾರರ ಬಯೋಮೆಟ್ರಿಕ್ ಮಾಹಿತಿಯನ್ನು ಈ ಸಾಪ್ಟ್‌ವೇರ್‌ ಗುರುತಿಸಲಿದೆ ಎನ್ನಲಾಗಿದೆ. ಆನ್‌ಲೈನ್ ಎಕ್ಸಾಂ ನಂತರ, ಅರ್ಜಿದಾರರು ಪರ್ಮನೆಂಟ್‌ ಲೈಸೆನ್ಸ್‌ ಪಡೆಯಲು ಆರ್‌ಟಿಒ ಕಚೇರಿಗೆ ತೆರಳಿ ಡ್ರೈವಿಂಗ್‌ ಟೆಸ್ಟ್‌ ನೀಡಬಹುದಾಗಿದೆ. ದೆಹಲಿ ಸರ್ಕಾರದ ಈ ಎಲ್ಲಾ ಆನ್‌ಲೈನ್ ಸೇವೆಗಳನ್ನು ಪಡೆಯಲು ಅರ್ಜಿದಾರರು ಆಧಾರ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.

ಲೈಸೆನ್ಸ್‌

ಇನ್ನು ಇ-ಲರ್ನರ್‌ ಲೈಸೆನ್ಸ್‌ ಪಡೆಯಲು ನಡೆಸಲಾಗುವ ಆನ್‌ಲೈನ್‌ ಎಕ್ಸಾಂನಲ್ಲಿ 20 ಪ್ರಶ್ನೆಗಳನ್ನು ನೀಡಲಾಗಿರುತ್ತದೆ. ಈ ಎಕ್ಸಾಂನಲ್ಲಿ ರೋಡ್‌ ಸೇಫ್ಟಿ ಮತ್ತು ಡ್ರೈವಿಂಗ್‌ ಸಿಗ್ನಲ್ಸ್‌ಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತೆ. ಇದರಲ್ಲಿ 10 ಪ್ರಶ್ನೆಗಳಿಗೆ ಆರು ಅಥವಾ ಹೆಚ್ಚಿನ ಅಂಕ ಪಡೆದವರು ಇ-ಲರ್ನರ್‌ ಲೈಸೆನ್ಸ್‌ ಪಡೆಯಲು ಅರ್ಹರಾಗುತ್ತಾರೆ. ಸದ್ಯ ದೆಹಲಿ ಸಾರಿಗೆ ಇಲಾಖೆಯು ಆನ್‌ಲೈನ್‌ ಮೂಲಕ ಒಟ್ಟು 33 ಸೇವೆಗಳನ್ನು ಒದಗಿಸುತ್ತಿದೆ. ಇವುಗಳಲ್ಲಿ ಡೂಪ್ಲಿಕೇಟ್‌ ಡ್ರೈವಿಂಗ್‌ ಲೈಸೆನ್ಸ್‌, ಅಡ್ರೆಸ್‌ ಚೇಂಜ್‌, ಹೊಸ ಕಂಡಕ್ಟರ್ ಪರವಾನಗಿ, ನೋಂದಣಿ ಪ್ರಮಾಣಪತ್ರ, ಕೈಗಾರಿಕಾ ಚಾಲನಾ ಪರವಾನಗಿ, ಬದಲಿ ಡಿಎಲ್ , ರೋಡ್‌ ಟ್ಯಾಕ್ಸ್‌ ಸೇರಿದಂತೆ ಹಲವು ಸೇವೆಗಳು ದೊರೆಯಲಿದೆ. ಇದರ ಜೊತೆಗೆ ದೆಹಲಿ ಸಾರಿಗೆ ಇಲಾಖೆಯು ಡ್ರೈವಿಂಗ್ ಪರೀಕ್ಷೆಯಲ್ಲಿ ಫೇಲ್ ಆಗುವವರ ತಪ್ಪುಗಳನ್ನು ಸರಿ ಪಡಿಸುವುದಕ್ಕೂ ಕೂಡ ಕ್ರಮಕೈಗೊಂಡಿದೆ.

ರೆಕಾರ್ಡಿಂಗ್‌

ಡ್ರೈವಿಂಗ್‌ ಟೆಸ್ಟ್‌ ನೀಡುವಾಗ ಅರ್ಜಿದಾರರು ತಪ್ಪು ಮಾಡಿದಾಗ ಅದನ್ನು ವೀಡಿಯೊ ರೆಕಾರ್ಡಿಂಗ್‌ ಮೂಲಕ ಅವರು ಮಾಡಿದ ತಪ್ಪನ್ನು ವಿವರಿಸಲಾಗುತ್ತದೆ. ಇದರಿಂದ ಮುಂದಿನ ಬಾರಿ ಡ್ರೈವಿಂಗ್ ಟೆಸ್ಟ್‌ನಲ್ಲಿ ತಪ್ಪುಗಳಾಗದಂತೆ ನೋಡಿಕೊಳ್ಳಬಹುದಾಗಿದೆ. ಮೂಲಗಳ ಪ್ರಕಾರ ಆಟೋಮೇಟೆಡ್ ಟೆಸ್ಟ್ ಟ್ರೈಕ್ ಡ್ರೈವಿಂಗ್ ಟೆಸ್ಟ್ ತೆಗೆದುಕೊಳ್ಳುವ ಅರ್ಜಿದಾರರಿಗೆ ಅಕ್ಟೋಬರ್ ತಿಂಗಳಿನಿಂದ ಈ ಸೌಲಭ್ಯವನ್ನು ಆರಂಭಿಸಲಾಗಿದೆ. ಡ್ರೈವಿಂಗ್‌ ಟೆಸ್ಟ್‌ನಲ್ಲಿ ಅನುತ್ತೀರ್ಣರಾದವರಿಗೆ ಅವರು ಮಾಡಿದ ತಪ್ಪಿನ ವೀಡಿಯೋ ರೆಕಾರ್ಡಿಂಗ್ ಕ್ಲಿಪ್ ಜೊತೆಗೆ ವಿವರವಾದ ಪರೀಕ್ಷಾ ವರದಿಯನ್ನು ಕಳುಹಿಸಿಕೊಡಲಾಗುತ್ತದೆ. ಜೊತೆಗೆ ಅವರ ವೀಡಿಯೊ ಕ್ಲಿಪ್ ಅನ್ನು ವಾಟ್ಸಾಪ್ ಸಂದೇಶದ ಮೂಲಕ ಅರ್ಜಿದಾರರಿಗೆ ಕಳುಹಿಸಲಾಗುತ್ತದೆ ಎನ್ನಲಾಗಿದೆ. ಸದ್ಯ ದೆಹಲಿ ಸಾರಿಗೆ ಇಲಾಖೆ ತೆಗೆದುಕೊಂಡಿರುವ ನಿರ್ಧಾರ ಜನರಿಂದ ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ.

Most Read Articles
Best Mobiles in India

English summary
Transport Department Issued Over 60,000 E-Learner License In Delhi.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X