ಅಮೆಜಾನ್‌ ಸಂಸ್ಥೆಯ 1.64 ಕೋಟಿ ಸರಕು ಕದಿಯಲು ಹೋಗಿದ್ದ ಟ್ರಕ್‌ ಚಾಲಕ ಸೆರೆ!

|

ಅಮೆಜಾನ್‌ ಸಂಸ್ಥೆಗೆ ಮೋಸ ಮಾಡಿ ಅಮೆಜಾನ್‌ ಸರಕುಗಳನ್ನು ಬೇರೆಡೆ ಸಾಗಿಸಿದ್ದ ಆರೋಪದಲ್ಲಿ ಮೂವರು ಆರೋಪಿಗಳನ್ನು ಕರ್ನಾಟಕದಲ್ಲಿ ಬಂಧಿಸಲಾಗಿದೆ. ಈ ಕೃತ್ಯದಲ್ಲಿ ಟ್ರಕ್‌ ಚಾಲಕ ಹಾಗೂ ತನಿಗೆ ಸಹಕರಿಸಿದವರನ್ನು ಕೋಲಾರದಲ್ಲಿ ಅರೆಸ್ಟ್‌ ಮಾಡಲಾಗಿದೆ. ಬಂಧಿತರಲ್ಲಿ ಟ್ರಕ್‌ನ ಚಾಲಕ ಅಸ್ಸಾಂ ಮೂಲದ ಬದ್ರುಲ್ ಹಕ್ ಅಲಿಯಾಸ್ ವಾಸಿ ಅಜಯ್, ಅಸ್ಸಾಂ ಮೂಲದ ಅಭಿನಾಥ್ ಮತ್ತು ಅಬ್ದುಲ್ ಹುಸೇನ್ ಮತ್ತು ಬೆಂಗಳೂರು ನಿವಾಸಿ ಪ್ರದೀಪ್ ಎಚ್‌ಆರ್ ಎಂದು ಗುರುತಿಸಲಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಸರಕುಗಳನ್ನು ಸಾಗಿಸುವ ಟ್ರಕ್‌ ಒಂದು ಕೆಲದಿನಗಳ ಹಿಂದೆ ನಾಪತ್ತೆಯಾಗಿತ್ತು. ಈ ಸಂಬಂಧ ಕೋಲಾರ ಗ್ರಾಮಾಂತರ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಟ್ರಕ್‌ ಚಾಲಕನೇ ಆರೋಪಿಯಾಗಿದ್ದು, ಇದೀಗ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಇವರಲ್ಲಿ ಹಕ್, ಅಭಿನಾಥ್ ಮತ್ತು ಅಬ್ದುಲ್ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಹಾಗಾದ್ರೆ ಅಮೆಜಾನ್‌ ಸರಕಿನ ಟ್ರಕ್‌ ನಾಪತ್ತೆಯಾಗಿದ್ದು ಯಾವಾಗ ಇದರ ಹಿನ್ನಲೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಸರಕುಗಳನ್ನು ಹೊತ್ತು ಸಾಗಿದ್ದ ಟ್ರಕ್‌ ಒಂದು ಅಕ್ಟೋಬರ್ 30 ರಂದು ನಾಪತ್ತೆಯಾಗಿತ್ತು. ಆಕ್ಟೋಬರ್‌30ರ ಮುಂಜಾನೆ 3.15 ರ ಸುಮಾರಿಗೆ ದೇವನಹಳ್ಳಿ ಬಳಿಯ ಬೂದಿಗೆರೆ ಕೈಗಾರಿಕಾ ಪ್ರದೇಶದ ಅಮೆಜಾನ್ ಸಂಸ್ಥೆಯಿಂದ ಸರಕುಗಳನ್ನು ನೋಂದಣಿ ಸಂಖ್ಯೆ ಕೆಎ-05 ಎಡಿ-0956 ರ ಲಾರಿಯಲ್ಲಿ ತುಂಬಲಾಗಿತ್ತು. ಈ ಟ್ರಕ್ ಅನ್ನು ವಾಸಿ ಅಜಯ್ ಚಲಾಯಿಸುತ್ತಿದ್ದ ಎನ್ನಲಾಗಿದ್ದು, ಸುಮಾರು 15 ಕಿಮೀ ದೂರದ ಹೊಸಕೋಟೆ ಸಮೀಪದ ಅನುಗೊಂಡನಹಳ್ಳಿಯಲ್ಲಿ ಅಮೆಜಾನ್ ಸರಕುಗಳನ್ನು ರವಾನೆ ಮಾಡುವುದಕ್ಕೆ ಹೋಗಬೇಕಿತ್ತು.

ಅಮೆಜಾನ್‌

ಇನ್ನು ಅಮೆಜಾನ್‌ ಸರಕು ಹೊತ್ತಿದ್ದ ಈ ಟ್ರಕ್‌ನಲ್ಲಿ ಮೊಬೈಲ್ ಫೋನ್‌ಗಳು, ಸೌಂದರ್ಯವರ್ಧಕಗಳು, ಲ್ಯಾಪ್‌ಟಾಪ್‌ಗಳು ಮತ್ತು 300 ಇತರ ವಿಧದ ಸರಕುಗಳು, ಒಟ್ಟು 4,027 ವಸ್ತುಗಳನ್ನು ಒಳಗೊಂಡಿತ್ತು ಎನ್ನಲಾಗಿದೆ. ಆದರೆ ಬೆಳಗಿನ ಜಾವ 5 ಗಂಟೆ ವೇಳೆಗೆ ವಾಹನ ಹೋಗಬೇಕಾದ ಮಾರ್ಗಕ್ಕೆ ಬದಲಾಗಿ ಬೇರೆ ಮಾರ್ಗದಲ್ಲಿ ಸಾಗುತ್ತಿರೋದು ಅಮೆಜಾನ್‌ ಗಮನಕ್ಕೆ ಬಂದಿದೆ. ಅದರಲ್ಲೂ ಹೊಸಕೋಟೆ ದಾಟಿದ ನಂತರ ಟ್ರಕ್‌ನ ಜಿಪಿಎಸ್ ಸ್ವಿಚ್ ಆಫ್ ಆಗಿದೆ. ಇದರಲ್ಲಿ ಏನೋ ಮೋಸ ನಡೆದಿದೆ ಅನ್ನೊದನ್ನ ಅರಿತ ಅಮೆಜಾನ್‌ ಸಿಬ್ಬದಿ ಅಂತಿಮ ವಾಗಿ ನಿಗದಿತ ಸ್ಥಳದಿಂದ 145 ಕಿಮೀ ದೂರದಲ್ಲಿರುವ ನಾಗಲಾಪುರ ಗೇಟ್‌ನಲ್ಲಿ ವಾಹನವನ್ನು ಪತ್ತೆ ಮಾಡಿದ್ದಾರೆ. ಅಲ್ಲಿ ಟ್ರಕ್‌ ಪರಿಶೀಲನೆ ನಡೆಸಿದಾಗ ಲಾರಿಯಲ್ಲಿದ್ದ ಮಾಲು ನಾಪತ್ತೆಯಾಗಿರುವುದು ಕಂಡು ಬಂದಿದ್ದು, ಸಿಬ್ಬಂದಿ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಅಮೆಜಾನ್‌

ಅಮೆಜಾನ್‌ಗೆ ಲಾಜಿಸ್ಟಿಕ್ಸ್ ಬೆಂಬಲವನ್ನು ಒದಗಿಸುವ ಬೆಂಗಳೂರಿನ ಸಂಸ್ಥೆಯ ಸಾರಿಗೆ ವ್ಯವಸ್ಥಾಪಕ ಸುಧಾಕರ್ ಅವರು ಕೋಲಾರಾ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದದ್ದಾರೆ. ಅಮೆಜಾನ್‌ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಇನ್ನು ಈ ಆರೋಪಿಗಳು ಅಕ್ಟೋಬರ್ 30ರಂದು ಟ್ರಕ್‌ನಲ್ಲಿದ್ದ ಅಮೆಜಾನ್‌ ಸರಕುಗಳನ್ನು ಬೇರೊಂದು ಟ್ರಕ್‌ ಮೂಲಕ ಬೇರೆಡೆ ಸಾಗಿಸಿರೋದು ತನಿಖೆಯಿಂದ ತಿಳಿದುಬಂದಿದೆ.

ಅಮೆಜಾನ್‌

ಇನ್ನು ಅಮೆಜಾನ್‌ ಸರಕುಗಳನ್ನು ಕದ್ದು ಬೇರೆ ಸಾಗಿಸುತ್ತಿದ್ದಾಗ ಈ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸದ್ಯ ಪೋಲಿಸರು ನಾವು ಸರಕುಗಳನ್ನು ಮರುಪಡೆಯಲು ಸಾಧ್ಯವಾಗಿದ್ದರೂ, ಪ್ರಕರಣದ ಹೆಚ್ಚಿನ ವಿವರಗಳನ್ನು ಸದ್ಯ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೋಲಿಸರು ಹೇಳಿದ್ದಾರೆ. ಇದರ ನಡುವೆ ಅಮೆಜಾನ್‌ ಸರಕುಗಳನ್ನು ಚಿಲ್ಲರೆ ಅಥವಾ ಸಗಟು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಪ್ಲಾನ್‌ ಮಾಡಿದ್ದರು ಎನ್ನಲಾಗಿದೆ. ಆರೋಪಿಗಳು ಈ ಮಾಲುಗಳನ್ನು ಮಾರಾಟ ಮಾಡಿ ಕನಿಷ್ಠ ಒಂದು ಕೋಟಿ ರೂಪಾಯಿ ಗಳಿಸುವ ಆಸೆಯನ್ನು ಹೊಂದಿದ್ದರು. ಆದರೆ ಪ್ಲಾನ್‌ ವರ್ಕೌಟ್‌ ಆಗುವ ಮುನ್ನವೇ ಪೋಲಿಸರ ಬಲೆಗೆ ಬಿದ್ದಿದ್ದಾರೆ.

ಅಮೆಜಾನ್‌

ಇನ್ನು ಟ್ರಕ್‌ನಲ್ಲಿ ಸಾಗಿಸಲಾಗ್ತಿದ್ದ ಸರಕುಗಳ ಒಟ್ಟು ಮೌಲ್ಯ 1.64 ಕೋಟಿ ಎಂದು ತಿಳಿದುಬಂದಿದೆ. ಗ್ರಾಹಕರು ನೀಡಿದ್ದ ಆರ್ಡರ್‌ಗಳನ್ನು ಡೆಲಿವರಿ ಮಾಡುವುದಕ್ಕಾಗಿ ಈ ಟ್ರಕ್‌ ಅನ್ನು ಬಳಸಲಾಗ್ತಿತ್ತು. ಕೆಲಸ ಆರಸಿ ಬೆಂಗಳೂರಿಗೆ ಬಂದಿದ್ದ ಅಸ್ಸಾಂ ಮೂಲದ ಬದ್ರುಲ್ ಹಕ್ ಅಲಿಯಾಸ್ ವಾಸಿ ಅಜಯ್, ಅಸ್ಸಾಂ ಮೂಲದ ಅಭಿನಾಥ್ ಮತ್ತು ಅಬ್ದುಲ್ ಹುಸೇನ್ ಮತ್ತು ಬೆಂಗಳೂರು ನಿವಾಸಿ ಪ್ರದೀಪ್ ಎಚ್‌ಆರ್ ಇದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಮೆಜಾನ್‌ ವಹಿಸಿದ್ದ ಕೆಲಸವನ್ನು ಮಾಡುವುದನ್ನು ಬಿಟ್ಟು ಟ್ರಕ್‌ ನಲ್ಲಿದ್ದ ಸರಕುಗಳನ್ನು ಕದ್ದು ಇದೀಗ ಪೋಲಿಸ್‌ ಠಾಣೆಯ ಕಂಬಿ ಎಣಿಸುತ್ತಿದ್ದಾರೆ.

Most Read Articles
Best Mobiles in India

English summary
Truck driver, 3 associates flee with Amazon goods worth Rs 1.64 crore were arrested by Kolar police in Karnataka.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X