ಟ್ರೂ ಕಾಲರ್‌ ಗಾರ್ಡಿಯನ್ಸ್ ಸೇಫ್ಟಿ ಅಪ್ಲಿಕೇಶನ್ ಲಾಂಚ್‌!..ವಿಶೇಷತೆ ಏನು?

|

ಜನಪ್ರಿಯ ಟ್ರೂ ಕಾಲರ್‌ ಅಪ್ಲಿಕೇಶನ್‌ ತನ್ನ ಗಾರ್ಡಿಯನ್ಸ್ ಸುರಕ್ಷತಾ ಅಪ್ಲಿಕೇಶನ್‌ನ ಅನ್ನು ಪರಿಚಯಿಸಿದೆ. ಇದು ಬಳಕೆದಾರರು ತಮ್ಮ ಸಂಪರ್ಕಗಳಿಂದ ಆಯ್ಕೆ ಮಾಡಿದ ಗಾರ್ಡಿಯನ್‌ಗಳೊಂದಿಗೆ ತಮ್ಮ ಲೈವ್ ಸ್ಥಳವನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಸದ್ಯ ಈ ಅಪ್ಲಿಕೇಶನ್‌ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಲು ಲಭ್ಯವಿದೆ.

ಟ್ರೂ ಕಾಲರ್

ಹೌದು, ಟ್ರೂ ಕಾಲರ್‌ ಅಪ್ಲಿಕೇಶನ್‌ ಗಾರ್ಡಿಯನ್ಸ್ ಸೇಫ್ಟಿ ಅಪ್ಲಿಕೇಶನ್‌ ಅನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್‌ನಲ್ಲಿ ಎಲ್ಲಾ ಫೀಚರ್ಸ್‌ಗಳನ್ನು ಉಚಿತವಾಗಿ ಬಳಸಬಹುದಾಗಿದೆ. ಅಲ್ಲದೆ ಯಾವುದೇ ಜಾಹೀರಾತುಗಳು ಅಥವಾ ಪ್ರೀಮಿಯಂ ಶ್ರೇಣಿಗಳಿಲ್ಲ ಎಂದು ಟ್ರೂ ಕಾಲರ್‌ ಕಂಪನಿ ಹೇಳಿದೆ. ಇದರಲ್ಲಿ ಆಯ್ಕೆಮಾಡಿದ ಗಾರ್ಡಿಯನ್‌ಗಳೊಂದಿಗೆ ಲೈವ್ ಸ್ಥಳ ಹಂಚಿಕೆಯ ಜೊತೆಗೆ ಬಳಕೆದಾರರು ಪ್ರಯಾಣಿಸುವಾಗ ತಮ್ಮ ಸ್ಥಳವನ್ನು ಹಂಚಿಕೊಳ್ಳಲು ಆಯ್ಕೆ ಮಾಡಬಹುದು. ಇನ್ನುಳಿದಂತೆ ಈ ಅಪ್ಲಿಕೇಶನ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ರೂಕಾಲರ್ ಗಾರ್ಡಿಯನ್ಸ್ ಅಪ್ಲಿಕೇಶನ್: ವಿಶೇಷತೆ ಏನು?

ಟ್ರೂಕಾಲರ್ ಗಾರ್ಡಿಯನ್ಸ್ ಅಪ್ಲಿಕೇಶನ್: ವಿಶೇಷತೆ ಏನು?

ಟ್ರೂಕಾಲರ್ ಗಾರ್ಡಿಯನ್ಸ್ ಅಪ್ಲಿಕೇಶನ್‌ ಆಂಡ್ರಾಯ್ಡ್ ಸೇಪ್ಟಿ ಅಪ್ಲಿಕೇಶನ್‌ ಆಗಿದ್ದು, ಬಳಕೆದಾರರು ತಮ್ಮ ಸ್ಥಳವನ್ನು ಅವರು ಆಯ್ಕೆ ಮಾಡಿದ ಸಂಪರ್ಕಗಳೊಂದಿಗೆ ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದನ್ನು ಕಂಪನಿಯು ‘ಗಾರ್ಡಿಯನ್ಸ್' ಎಂದು ಕರೆಯುತ್ತದೆ. ಪರ್ಮನೆಂಟ್ ಲೊಕೇಶನ್ ಶೇರಿಂಗ್ ಆನ್ ಮಾಡಿದಾಗ (ಸಾಮಾನ್ಯ ಮೋಡ್), ಬ್ಯಾಟರಿ ಅವಧಿಯನ್ನು ಕಾಪಾಡುವಾಗ ಅಪ್ಲಿಕೇಶನ್ ಮಧ್ಯಂತರವಾಗಿ ಶೇರ್‌ ಮಾಡಲಿದೆ ಎಂದು ಹೇಳಲಾಗಿದೆ.

ಎಮೆರ್ಜೆನ್ಸಿ

ಇನ್ನು ಎಮೆರ್ಜೆನ್ಸಿ ಮೋಡ್‌ನಲ್ಲಿ, ಬಳಕೆದಾರರು ಆಯ್ಕೆ ಮಾಡಿರಬಹುದಾದ ಗಾರ್ಡಿಯನ್‌ಗಳಿಗೆ ಹೆಚ್ಚುವರಿಯಾಗಿ ಸಮುದಾಯದ ಗಾರ್ಡಿಯನ್‌ಗಳೊಂದಿಗೆ ಅಪ್ಲಿಕೇಶನ್ ಲೋಕೇಶನ್‌ ಅನ್ನು ಹಂಚಿಕೊಳ್ಳುತ್ತದೆ. ಇದರಿಂದ ಸಹಾಯ ಸ್ವೀಕರಿಸ ಬಹುದಾಗಿದೆ. ಇದಲ್ಲದೆ ಶೀಘ್ರದಲ್ಲೇ, ನೀವು ಆಪ್ ಮೂಲಕ ಸ್ಥಳೀಯ ಕಾನೂನು ಜಾರಿಗೊಳಿಸುವವರ ಸಹಾಯವನ್ನು ಸಹ ಪಡೆಯಬಹುದು. ಇದರಿಂದಾಗಿ ನೀವು ಅಲ್ಪಾವಧಿಯಲ್ಲಿಯೇ ಸಹಾಯ ಪಡೆಯಬಹುದು ಎಂದು ಕಂಪನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಟ್ರೂಕಾಲರ್ ಅಪ್ಲಿಕೇಶನ್ ಸೇರಿದಂತೆ ವಾಣಿಜ್ಯ ಬಳಕೆಗಾಗಿ ಯಾವುದೇ ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ಗಳೊಂದಿಗೆ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಟ್ರೂಕಾಲರ್ ಗಾರ್ಡಿಯನ್ಸ್ ಅಪ್ಲಿಕೇಶನ್: ಸೈನ್ ಅಪ್ ಮಾಡುವುದು ಹೇಗೆ?

ಟ್ರೂಕಾಲರ್ ಗಾರ್ಡಿಯನ್ಸ್ ಅಪ್ಲಿಕೇಶನ್: ಸೈನ್ ಅಪ್ ಮಾಡುವುದು ಹೇಗೆ?

ಈಗಾಗಲೇ ಟ್ರೂಕಾಲರ್ ಅಪ್ಲಿಕೇಶನ್ ಬಳಸುತ್ತಿರುವವರು ಟ್ಯಾಪ್ ಮೂಲಕ ಸೈನ್ ಇನ್ ಮಾಡಬಹುದು. ಇತರರು ತಮ್ಮ ಫೋನ್ ಸಂಖ್ಯೆಯನ್ನು ಬಳಸಿಕೊಂಡು ಸೈನ್ ಇನ್ ಮಾಡಬೇಕಾಗುತ್ತದೆ. ಇದನ್ನು ಮಿಸ್ಡ್‌ಕಾಲ್‌ ಮೂಲ ಪರಿಶೀಲಿಸಲಾಗುತ್ತದೆ ಅಥವಾ ಒಟಿಪಿ ಮೂಲಕ ಪರಿಶೀಲನೆ ಮಾಡಲಿದೆ. ನಂತರ ಸೈನ್‌ ಅಪ್‌ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಹಂತ:1 ಗಾರ್ಡಿಯನ್ಸ್ ಅಪ್ಲಿಕೇಶನ್‌ಗೆ ಕಾರ್ಯನಿರ್ವಹಿಸಲು ಬಳಕೆದಾರರಿಂದ ಸ್ಥಳ, ಸಂಪರ್ಕಗಳು ಮತ್ತು ಫೋನ್ ಅನುಮತಿ ಅಗತ್ಯವಿರುತ್ತದೆ.

ಹಂತ:2 ಒಮ್ಮೆ ಲಾಗ್ ಇನ್ ಮಾಡಿದ ನಂತರ, ಬಳಕೆದಾರರು ತಮ್ಮ ಸಂಪರ್ಕ ಪಟ್ಟಿಯಿಂದ ತಮ್ಮದೇ ಆದ ರಕ್ಷಕರನ್ನು ಆಯ್ಕೆ ಮಾಡಬಹುದು.

ಹಂತ:3 ಬಳಕೆದಾರರು ಆಯ್ದ ರಕ್ಷಕರೊಂದಿಗೆ ಶಾಶ್ವತ ಹಂಚಿಕೆಯನ್ನು ಹೊಂದಿಸಲು ಆಯ್ಕೆ ಮಾಡಬಹುದು ಅಥವಾ ಆಯ್ದ ಹಂಚಿಕೆಯೊಂದಿಗೆ ಹೋಗಬಹುದು.

ಹಂತ:4 ಆಯ್ದ ಹಂಚಿಕೆಯ ಸಂದರ್ಭದಲ್ಲಿ, ಹಂಚಿಕೆ ಸ್ಥಳವನ್ನು ಯಾವಾಗ ನಿಲ್ಲಿಸಬೇಕು / ಪ್ರಾರಂಭಿಸಬೇಕು ಎಂಬುದನ್ನು ಆರಿಸಬೇಕಾಗುತ್ತದೆ.

ಹಂತ:5 ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ರಕ್ಷಕರು ತಮ್ಮ ಸ್ಥಳ ಮತ್ತು ಪರಿಸ್ಥಿತಿಯನ್ನು ತಿಳಿಸಲು ತುರ್ತು ಗುಂಡಿಯನ್ನು ಟ್ಯಾಪ್ ಮಾಡಬಹುದು.

ಹಂತ:6 ಈ ಸಂದರ್ಭದಲ್ಲಿ, ರಕ್ಷಕರು ಬಳಕೆದಾರರ ಸ್ಥಳವನ್ನು ನಿಖರವಾಗಿ ಅನುಸರಿಸಲು ಅಥವಾ ಅದಕ್ಕೆ ಸಹಾಯವನ್ನು ಕಳುಹಿಸಲು ಸಾಧ್ಯವಾಗುತ್ತದೆ.

Most Read Articles
Best Mobiles in India

English summary
Truecaller has launched its new Guardians safety app, which lets users permanently share their location with contacts they choose.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X