ಕೇಂದ್ರ ಐಟಿ ಸಚಿವರ ಟ್ವಿಟ್‌ ಖಾತೆ ಬ್ಲಾಕ್‌ ಮಾಡಿದ್ದ ಟ್ವಿಟರ್‌!

|

ಕಳೆದ ಕೆಲ ದಿನಗಳ ಭಾರತದ ನಾಯಕರ ವಿಚಾರದಲ್ಲಿ ಟ್ವಿಟರ್‌ ಎಡವಟ್ಟುಗಳ ಮೇಲೆ ಎಡವಟ್ಟು ಮಾಡಿಕೊಳ್ತಿದೆ. ಹೊಸ ಐಟಿ ನಿಯಮ ಪಾಲನೆ ವಿಚಾರದಲ್ಲಿ ಸರ್ಕಾರದ ಕ್ರಮ ಎದುರಿಸುತ್ತಿರುವ ಟ್ವಿಟರ್‌ ಇದೀಗ ಕೇಂದ್ರ ಐಟಿ ಸಚಿವರ ಟ್ವಿಟರ್‌ ಖಾತೆಯನ್ನು ಕೆಲವು ಗಂಟೆಗಳ ಕಾಲ ಬ್ಲಾಕ್‌ ಮಾಡಿ ಎಡವಟ್ಟು ಮಾಡಿಕೊಂಡಿದೆ. ಅಷ್ಟೇ ಅಲ್ಲ ಸ್ವತಃ ಕೇಂದ್ರ ಐಟಿ ಸಚಿವರೆ ಈ ಮಾಹಿತಿಯನ್ನು ಹಂಚಿಕೊಂಡಿರುವುದು ವಿಶೇಷ. ಇದರ ನಡುವೆ ಬ್ಯಾನ್‌ ಟ್ವಿಟರ್‌ ಇಂಡಿಯಾ ಅನ್ನೊ ಕೂಗು ಮತ್ತೇ ಕೇಳಿ ಬರುತ್ತಿದೆ.

ಟ್ವಿಟರ್‌

ಹೌದು, ಟ್ವಿಟರ್‌ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಆಕ್ರೋಶಕ್ಕೆ ಕಾರಣವಾಗುತ್ತಿವೆ. ಕೆಲ ದಿನಗಳ ಹಿಂದೆ ಉಪರಾಷ್ಟ್ರಪತಿಗಳ ವೈಯುಕ್ತಿಕ ಟ್ವಿಟರ್ ಖಾತೆಯ ಬ್ಲೂಟಿಕ್‌ ತೆಗೆದು ಹಾಕಿ ನಂತರ ಮತ್ತೆ ರೀ ಸ್ಟೋರ್‌ ಮಾಡಿದ್ದ ಟ್ವಿಟರ್, ಇದೀಗ ಮತ್ತೊಮ್ಮೆ ಅಂತಹದ್ದೆ ನಾಟಕೀಯ ಘಟನೆಗೆ ಸಾಕ್ಷಿಯಾಗಿದೆ. ದೇಶದ ಐಟಿ ಸಚಿವರ ಟ್ವಿಟ್‌ ಖಾತೆಯನ್ನು ಬ್ಲಾಕ್‌ ಮಾಡಿ ನಂತರ ಅನ್‌ಬ್ಲಾಕ್‌ ಮಾಡಿದೆ.

ಟ್ವಿಟರ್

ಟ್ವಿಟರ್ Vs ಭಾರತೀಯ ಸರ್ಕಾರದ ಇತ್ತೀಚಿನ ಬೆಳವಣಿಗೆ ಮತ್ತೊಂದು ನಾಟಕೀಯ ತಿರುವು ಪಡೆದುಕೊಂಡಿದೆ. ಕೃತಿಸ್ವಾಮ್ಯ ಉಲ್ಲಂಘನೆಯ ಹಿನ್ನೆಲೆಯಲ್ಲಿ ತಮ್ಮ ಟ್ವಿಟರ್‌ ಖಾತೆಯನ್ನು ಬ್ಲಾಕ್‌ ಮಾಡಿದ್ದಾರೆ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಹೇಳಿಕೊಂಡಿದ್ದಾರೆ. ಅದರ ಸ್ಕ್ರೀನ್‌ಶಾಟ್‌ಗಳನ್ನು ಸಹ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ಕ್ರೀನ್‌ಶಾಟ್ ಆಧರಿಸಿ, ಯುಎಸ್‌ಎದ ಡಿಜಿಟಲ್ ಮಿಲೇನಿಯಮ್ ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆಯ ನಂತರ ರವಿಶಂಕರ್ ಪ್ರಸಾದ್ ಅವರನ್ನು ಈ ಟ್ವಿಟ್ಟರ್ ಖಾತೆಗೆ ಪ್ರವೇಶಿಸುವುದನ್ನು ತಡೆಯಲಾಗಿತ್ತು. ಇದೀಗ ಮತ್ತೆ ಅವರ ಖಾತೆ ಅನ್‌ಬ್ಲಾಕ್‌ ಆಗಿದೆ. ಆದರೂ ಟ್ವಿಟರ್‌ ಈ ನಡೆಯಿಂದ ರವಿಶಂಕರ್‌ ಪ್ರಸಾದ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಟ್ವಿಟರ್‌

ಇನ್ನು ತಮ್ಮ ಟ್ವಿಟರ್‌ ಖಾತೆಗ ಬ್ಲಾಕ್‌ ಆಗಿರುವುದರ ಬಗ್ಗೆ ಟ್ವೀಟ್‌ ಮಾಡಿರುವ ಸಚಿವರು "ಸ್ನೇಹಿತರೇ! ಇಂದು ಹೆಚ್ಚು ವಿಚಿತ್ರವಾದದ್ದು ಸಂಭವಿಸಿದೆ. ಯುಎಸ್ಎದ ಡಿಜಿಟಲ್ ಮಿಲೇನಿಯಮ್ ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆ ಇದೆ ಎಂದು ಆರೋಪಿಸಿ ಸುಮಾರು ಒಂದು ಗಂಟೆ ಕಾಲ ನನ್ನ ಖಾತೆಗೆ ಪ್ರವೇಶವನ್ನು ಟ್ವಿಟರ್ ನಿರಾಕರಿಸಿದೆ. ತರುವಾಯ ಅವರು ನನಗೆ ಖಾತೆಯನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು "ಎಂದು ಪ್ರಸಾದ್ ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.

ಟ್ವಿಟರ್

ಇದಲ್ಲದೆ, ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ಏಕೆ ನಿರಾಕರಿಸುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ ಏಕೆಂದರೆ ಟ್ವಿಟರ್ ಅದನ್ನು ಅನುಸರಿಸಿದರೆ, ಅವರ ಕಾರ್ಯಸೂಚಿಗೆ ಸರಿಹೊಂದುವುದಿಲ್ಲವಾದ ವ್ಯಕ್ತಿಯ ಖಾತೆಗೆ ಪ್ರವೇಶವನ್ನು ನಿರಂಕುಶವಾಗಿ ನಿರಾಕರಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಂತಹ ನಿರಾಕರಣೆ ಸಾಮಾಜಿಕ ಮಾಧ್ಯಮ ವೇದಿಕೆಯ ಸದಸ್ಯರನ್ನು ಹೇಗೆ ಸಮರ್ಥಿಸದೆ ಪರಿಣಾಮ ಬೀರುತ್ತದೆ ಎಂದು ಪ್ರಸಾದ್ ಹೇಳಿದ್ದಾರೆ.

Most Read Articles
Best Mobiles in India

Read more about:
English summary
The latest development in the Twitter vs Indian Govt has taken another dramatic turn.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X