ಭಾರತೀಯ ಟ್ವಿಟರ್‌ ಬಳಕೆದಾರರಿಗೆ ಟ್ವಿಟರ್ ಫ್ಲೀಟ್‌ಗಳನ್ನು ಪರಿಚಯಿಸಿದ ಟ್ವಿಟರ್‌!

|

ಟೆಕ್ನಾಲಜಿ ಮುಂದುವರೆದಂತೆ ಜಗತ್ತಿನಲ್ಲಿ ಸೊಶೀಯಲ್‌ ಮೀಡಿಯಾ ಜಗತ್ತು ಕೂಡ ತುಂಬಾನೆ ಜನಪ್ರಿಯತೆಯನ್ನ ಪಡೆದುಕೊಂಡಿದೆ. ಹೊಸ ಮಾದರಿಯ ಸೊಶೀಯಲ್‌ ಮೀಡಿಯಾ ಜಗತ್ತು ಅನಾವರಣಗೊಂಡಿರುವುದು ನಿಮಗೆಲ್ಲಾ ತಿಳಿದೆ ಇದೆ. ಇಂದಿನ ಯುವಜನತೆ ಮಾತ್ರವಲ್ಲ ಎಲ್ಲಾ ವಯೋಮಾನದವರು ಕೂಡ ಸೊಶೀಯಲ್‌ ಮೀಡಿಯಾಗಳಲ್ಲಿ ಆಕ್ಟಿವ್‌ ಆಗುವುದಕ್ಕೆ ಇಷ್ಟ ಪಡುತ್ತ ಇದ್ದಾರೆ. ಅಷ್ಟರ ಮಟ್ಟಿಗೆ ಸೊಶೀಯಲ್‌ ಮೀಡಿಯಾ ತನ್ನ ಜನಪ್ರಿಯತೆಯನ್ನ ವೃದ್ಧಿಸಿಕೊಂಡಿದೆ. ಇನ್ನು ಸೊಶೀಯಲ್‌ ಮೀಡಿಯಾ ಆಪ್‌ಗಳಲ್ಲಿ ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಮ್‌ ಜನಪ್ರಿಯತೆಯನ್ನ ಸಾಧಿಸಿದ್ದು. ಇದರಲ್ಲಿ ಟ್ವಿಟರ್‌ ಕೂಡ ತನ್ನ ಜನಪರಿಯತೆಯನ್ನ ಜಗತ್ತಿನೆಲ್ಲೆಡೆ ವಿಸ್ತಾರ ಮಾಡಿಕೊಂಡಿದೆ.

ಟ್ವಿಟರ್‌

ಹೌದು, ಜನಪ್ರಿಯ ಸೊಶೀಯಲ್‌ ಮೀಡಿಯಾ ಆಪ್‌ಗಳಲ್ಲಿ ಒಂದಾದ ಟ್ವಿಟರ್‌ ತನ್ನ ಬಳಕೆದಾರರ ಆಶಯಗಳಿಗೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸಧ್ಯ ಇದೀಗ ಕಡಿಮೆ ಒತ್ತಡ ಮತ್ತು ಹೆಚ್ಚಿನ ರೀತಿಯಲ್ಲಿ ಕಂಟ್ರೋಲ್‌ ಹೊಂದಿರುವ ಹೊಸ ರೀತಿಯಲ್ಲಿ ಸಂಭಾಷಣೆ ನಡೆಸಲು ಸಾಧ್ಯವಾಗುವಂತೆ ಮಾಡುವ ಪ್ರಯತ್ನದ ಭಾಗವಾಗಿ, ಟ್ವಿಟರ್ ಭಾರತದಲ್ಲಿ ಫ್ಲೀಟ್‌ಗಳನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಈ ಮಾದರಿಯ ಫ್ಲೀಟ್‌ಗಳಿಂದ ನಿವು ಮಾಡಿರುವ ಟ್ವಿಟ್‌ಗಳು 24 ಗಂಟೆಗಳಲ್ಲಿ ಸ್ವಯಂ ಕಣ್ಮರೆಯಾಗುತ್ತವೆ. ಅಲ್ಲದೆ ರಿಟ್ವೀಟ್‌ಗಳು, ಲೈಕ್ಸ್‌, ಎಲ್ಲವು ಕನ್ಮರೆಯಾಗುತ್ತವೆ. ಇನ್ನು ಈ ಹೊಸ ಫೀಚರ್ಸ್‌ ಇದೀಗ ಭಾರತದಲ್ಲಿ ಟ್ವಿಟರ್‌ ಬಳಕೆದಾರರಿಗೆ ಪರಿಚಯಿಸಿದೆ. ಅಷ್ಟಕ್ಕೂ ಇದರ ವಿಶೇಷತೆ ಏನು, ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲೀಟ್‌ಗಳ ಕಾರ್ಯನಿರ್ವಹಣೆ ಹೇಗೆ?

ಫ್ಲೀಟ್‌ಗಳ ಕಾರ್ಯನಿರ್ವಹಣೆ ಹೇಗೆ?

ಸದ್ಯ ಟ್ವಿಟರ್‌ ತನ್ನ ಬಳಕೆದಾರಿಗೆ ಪರಿಚಯಿಸಿರುವ ಫ್ಲೀಟ್‌ಗಳು ನಿಮ್ಮ ಕ್ಷಣಿಕ ಆಲೋಚನೆಗಳ ಸಂಭಾಷಣೆಗಳನ್ನು ಪ್ರಾರಂಭಿಸಲು ಇರುವ ಹೊಸ ಮಾರ್ಗವಾಗಿದೆ. ಇನ್ನು ಈ ಫ್ಲೀಟ್‌ಗಳು ನೀವು ಟ್ವಿಟ್‌ ಮಾಡಿದ 24 ಗಂಟೆಗಳ ನಂತರ ಕಣ್ಮರೆಯಾಗುತ್ತವೆ. ಜೊತೆಗೆ ರಿಟ್ವೀಟ್, ಲೈಕ್‌,ಕಾಮೆಂಟ್‌ಗಳನ್ನ ಕುಡ ಮರೆಯಾಗಲಿವೆ. ಅಲ್ಲದೆ ಈ ಫ್ಲೀಟ್‌ಗಳಲ್ಲಿ ಮೊದಲು ಟೆಕ್ಸ್ಟ್‌, ನಂತರ ಅದಕ್ಕೆ ಸಂಬಂಧಿಸಿದಂತೆ ವೀಡಿಯೊಗಳು ಅಥವಾ ಫೋಟೋಗಳನ್ನು ಸಹ ಸೇರಿಸಬಹುದಾಗಿದೆ. ಜೊತೆಗೆ ನೀವು ಈ ಫ್ಲೀಟ್‌ಗೆ ಪ್ರತ್ಯುತ್ತರಿಸಲು ಬಯಸಿದರೆ, ನೇರ ಸಂದೇಶ ಅಥವಾ ಎಮೋಜಿಗಳನ್ನು ಕಳುಹಿಸಲು ಅದರ ಮೇಲೆ ಟ್ಯಾಪ್ ಮಾಡಿ ಮತ್ತು ನಿಮ್ಮ ಡಿಎಂಗಳಲ್ಲಿ ಸಂವಾದವನ್ನು ಮುಂದುವರಿಸಬಹುದಾಗಿದೆ. ಇನ್ನು ನಿಮ್ಮ ಪೂರ್ಣ ಪ್ರೊಫೈಲ್ ಅನ್ನು ನೋಡುವ ಯಾರಾದರೂ ನಿಮ್ಮ ಫ್ಲೀಟ್‌ಗಳನ್ನು ಸಹ ಕಾಣಬಹುದಾಗಿದೆ. ಇದಲ್ಲದೆ ನೀವು ಟ್ವೀಟ್‌ಗಳನ್ನು ರಕ್ಷಿಸಿದ್ದರೆ, ನಿಮ್ಮನ್ನು ಅನುಸರಿಸುವ ಜನರು ಮಾತ್ರ ನಿಮ್ಮ ಫ್ಲೀಟ್‌ಗಳನ್ನು ಅವರ ಟೈಮ್‌ಲೈನ್‌ನ ಮೇಲ್ಭಾಗದಲ್ಲಿ ಅಥವಾ ನಿಮ್ಮ ಪ್ರೊಫೈಲ್ ಫೋಟೋ ಕ್ಲಿಕ್ ಮಾಡುವ ಮೂಲಕ ನೋಡಬಹುದಾಗಿದೆ.

ಈ ಫೀಚರ್ಸ್‌ನಿಂದಾಗುವ ಉಪಯೋಗ ಏನು?

ಈ ಫೀಚರ್ಸ್‌ನಿಂದಾಗುವ ಉಪಯೋಗ ಏನು?

ಸದ್ಯ ನಿಮಗೆಲ್ಲಾ ತಿಳಿದಿರುವಂತೆ ಟ್ವಿಟರ್ ಎಂದರೆ ಪ್ರಸ್ತುತ ಜಮಾನದಲ್ಲಿ ನಡೆಯುತ್ತಿರುವ ವಿಚಾರಗಳನ್ನ ಮಂಥನ ಮಾಡಲು ಇರುವ ಒ0ದು ಉತ್ತಮ ವೇದಿಕೆ ಆಗಿದೆ ಎನ್ನಬಹುದಾಗಿದೆ. ಆದರೆ, ಟ್ವೀಟ್‌ಗಳು ಸಾರ್ವಜನಿಕವಾಗಿರುತ್ತವೆ.ಇದಲ್ಲದೆ ಟ್ವೀಟ್‌ಗಳು ಮತ್ತು ನೇರ ಸಂದೇಶಗಳನ್ನು ಮೀರಿ ಜನರು ಕಡಿಮೆ ಒತ್ತಡ ಮತ್ತು ಹೆಚ್ಚಿನ ನಿಯಂತ್ರಣದೊಂದಿಗೆ ಹೊಸ ರೀತಿಯಲ್ಲಿ ಸಂಭಾಷಣೆ ನಡೆಸಬಹುದಾಗಿದ್ದು, ನಿಮ್ಮ ಕ್ಷಣಿಕ ಆಲೋಚನೆಗಳಿಂದ ಯಾವುದೇ ಲೈಕ್ಸ್‌ ಹಾಗೂ ರಿಟ್ವೀಟ್‌ಗಳು, ಸಾರ್ವಜನಿಕ ಪ್ರತ್ಯುತ್ತರಗಳು ಮತ್ತು ಶಾಶ್ವತತೆಯಿಲ್ಲದೆ ಸಂಭಾಷಣೆಗಳನ್ನು ಪ್ರಾರಂಭಿಸುವ ಹೊಸ ಮಾರ್ಗವಾಗಿ ಫ್ಲಿಟ್ಸ್‌ ಅನ್ನು ಬಳಸಬಹುದಾಗಿದೆ.

ಟ್ವಿಟರ್‌

ಇದಲ್ಲದೆ ಫ್ಲೀಟ್‌ಗಳನ್ನು ಭಾರತಕ್ಕೆ ಪರಿಚಯಿಸಿರುವುದರಿಂದ ಟ್ವಿಟರ್‌ನಲ್ಲಿ ಸಂಭಾಷಣೆ ನಡೆಸಲು ಭಾರತದಲ್ಲಿ ಜನರು ಟ್ವಿಟರ್‌ನಲ್ಲಿ ಸಂವಹನ ನಡೆಸುವ ವಿಧಾನವನ್ನು ಹೇಗೆ ಬದಲಾಯಿಸಬಹುದಾಗಿದೆ. ಇದರಿಮದ ಸಾರ್ವಜನಿಕವಾಗಿ ಟ್ವೀಟ್‌ ಮಾಡುವ ಅಥವಾ ಸಾರ್ವಜನಿಕ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ವಿಧಾನಗಳಲ್ಲಿ ಬದಲಾವಣೆಗಳನ್ನ ಕಾಣಬಹುದಾಗಿದೆ. ಇದಲ್ಲದೆ ಜನರು ಏನನ್ನಾದರೂ ಟ್ವಿಟರ್ ನಿಯಮಗಳ ಉಲ್ಲಂಘನೆ ಎಂದು ಭಾವಿಸಿದರೆ, ಅವರು ಇದರ ಮೂಲಕ ವರದಿ ಮಾಡಬಹುದಾಗಿದೆ.

Most Read Articles
Best Mobiles in India

English summary
Twitter starts testing Fleets in India. It is a self-disappearing tweet similar to Instagram Stories that will vanish in 24 hours and will not have retweets, likes or public comments.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X