ಟ್ವಿಟರ್ ಪರಿಚಯಿಸಿರುವ ಈ ಹೊಸ ಫೀಚರ್ಸ್‌ ಅತ್ಯಂತ ಉಪಯುಕ್ತ ಎನಿಸಲಿದೆ!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಟ್ವಿಟ್ಟರ್‌ ತನ್ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈಗಾಗಲೇ ಹಲವು ಹೊಸ ಮಾದರಿಯ ಫೀಚರ್ಸ್‌ ಅನ್ನು ಪರಿಚಯಿಸಿರುವ ಟ್ವಿಟ್ಟರ್‌ ಬಳಕೆದಾರರ ನೆಚ್ಚಿನ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಆಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ಜಗತ್ತಿನ ಎಲ್ಲ ಬಳಕೆದಾರರಿಗಾಗಿ ತನ್ನ ಸೀಮಿತ ಉತ್ತರ ನೀಡುವ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರು ಇನ್ಮುಂದೆ ಟ್ವೀಟ್ ಕಳುಹಿಸುವ ಮೊದಲು, ಬಳಕೆದಾರರು ಈ ಟ್ವಿಟ್‌ಗೆ ಯಾರು ಉತ್ತರಿಸಬಹುದು ಎಂಬುದನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ.

ಟ್ವಿಟರ್‌

ಹೌದು, ಟ್ವಿಟರ್‌ ತನ್ನ ಬಳಕೆದಾರರಿಗೆ ಲಿಮಿಟೆಡ್‌ ರಿಪ್ಲೇ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರಿಂದ ಬಳಕೆದಾರರ ಟ್ವಿಟ್‌ ಮಾಡುವ ಮೊದಲು ಈ ಟ್ವಿಟ್ಗೆ ಯಾರು ಮಾತ್ರ ರಿಪ್ಲೇ ಮಾಡಬಹುದು ಅನ್ನೊದನ್ನ ಆಯ್ಕೆ ಮಾಡಬಹುದಾಗಿದೆ. ಇದರಿಂದ ಅನಗತ್ಯವಾಗಿ ರಿಪ್ಲೆ ಮಾಡುವ ಟ್ವಿಟ್‌ಗಳಿಗೆ ಬ್ರೇಕ್‌ ಬೀಳಲಿದೆ. ಸದ್ಯ ಈ ಫೀಚರ್ಸ್‌ ಮೂಲಕ ಟ್ವಿಟ್‌ ಬಳಕೆದಾರ ತನ್ನನ್ನು ಅನುಸರಿಸುವ ಜನರನ್ನು ಮಾತ್ರ ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ಆಯ್ಕೆ ಮಾಡಿದವರು ಮಾತ್ರ ನಿಮ್ಮ ಟ್ವಿಟ್‌ಗೆ ಉತ್ತರಿಸಬಹುದಾಗಿದ್ದು, ಉಳಿದವರು ಡೀಫಾಲ್ಟ್ ಸೆಟ್ಟಿಂಗ್ ಆಗಿರುತ್ತಾರೆ. ಇದರಿಂದ ಅನಗತ್ಯ ಪ್ರತ್ಯುತ್ತರಗಳನ್ನು ತಡೆಯಬಹುದಾಗಿದೆ. ಈ ಫೀಚರ್ಸ್‌ ಒಳಗೊಂಡಿರುವ ಇನ್ನಷ್ಟು ವಿಶೇಷತೆಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಬನ್ನಿರಿ.

ಟ್ವಿಟರ್

ಟ್ವಿಟರ್ ಇದೀಗ ಪರಿಚಯಿಸಿರುವ ಲಿಮಿಟೆಡ್‌ ರಿಪ್ಲೇ ಫೀಚರ್ಸ್‌ ಕಳೆದ ಮೇ ತಿಂಗಳಲ್ಲಿ ಕೆಲವು ಬಳಕೆದಾರರಿಗೆ ಪರೀಕ್ಷಿಸಲು ಪರಿಚಯಿಸಲಾಗಿತ್ತು. ಸತತ ಮೂರು ತಿಂಗಳ ಪರೀಕ್ಷೆಯ ನಂತರ ಇದೀಗ ಜಗತ್ತಿನ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ಈ ಹೊಸ ಫೀಚರ್ಸ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ನೀವು ಮಾಡುವ ಫೋಸ್ಟ್‌ಗಳಿಗೆ ಅನತ್ಯವಾಗಿ ಬರುವ ರಿಪ್ಲೇಗಳು, ಅಶ್ಲಿಲ ಸಂಭಾಷಣೆಗಳನ್ನ ತಡೆಯಲು ಸಾಧ್ಯವಾಗಲಿದೆ. ಇದರಿಂದ ಈ ಹೊಸ ಸೆಟ್ಟಿಂಗ್ಸ್‌ ಬಳಕೆದಾರರಿಗೆ ಸುರಕ್ಷಿತವೆಂದು ಭಾವಿಸಲು, ಹೆಚ್ಚು ಅರ್ಥಪೂರ್ಣ ಸಂಭಾಷಣೆಗಳನ್ನು ಮಾಡಲು ಸಹಾಯ ಮಾಡಿದೆ. ಅಲ್ಲದೆ ಇನ್ನೂ ವಿಭಿನ್ನ ದೃಷ್ಟಿಕೋನಗಳನ್ನು ನೋಡಲು ಸಹಾಯ ಮಾಡಿದೆ ಎಂದು ಟ್ವಿಟರ್‌ ಹೇಳಿಕೊಂಡಿದೆ.

ಟ್ವೀಟ್‌

ಇನ್ನು ಈ ಫೀಚರ್ಸ್‌ ಅನ್ನು ಬಳಸಲು ನಿಮ್ಮ ಟ್ವೀಟ್‌ನ ಕೆಳಭಾಗದಲ್ಲಿರುವ ಸಣ್ಣ ಗ್ಲೋಬ್ ಐಕಾನ್ ಮೂಲಕ ಮೂರು ಆಯ್ಕೆಗಳ ನಡುವೆ ನೀವು ಒಂದನ್ನ ಆಯ್ಕೆ ಮಾಡಬಹುದು. ನೀವು ಯಾವುದನ್ನೂ ಕ್ಲಿಕ್ ಮಾಡದಿದ್ದರೆ, ಡೀಫಾಲ್ಟ್ ಆಯ್ಕೆಯನ್ನು ಉಳಿಸಲಾಗಿರುತ್ತದೆ.ಇದರಿಂದ ನಿಮ್ಮ ಟ್ವಿಟ್‌ಗೆ ಪ್ರತಿಯೊಬ್ಬರೂ ಅದಕ್ಕೆ ರಿಪ್ಲೇ ಮಾಡಲು ಸಾಧ್ಯವಾಗುತ್ತದೆ. ಆದರೆ ನೀವು ಸೀಮಿತ ಪ್ರತ್ಯುತ್ತರ ಆಯ್ಕೆಗಳನ್ನು ಆಯ್ಕೆ ಮಾಡುವ ಟ್ವೀಟ್‌ಗಳನ್ನು ಲೇಬಲ್ ಮಾಡಲಾಗುತ್ತದೆ, ಇದರಿಂದ ಪ್ರತ್ಯುತ್ತರ ನೀಡಲಾಗದ ಜನರಿಗೆ ಪ್ರತ್ಯುತ್ತರ ಐಕಾನ್ ಅನ್ನು ಗ್ರೇ ಮಾಡಲಾಗುತ್ತದೆ. ಆದರೆ ಈ ಟ್ವಿಟ್‌ಗೆ ರಿಪ್ಲೇ ಮಾಡಲು ಅವಕಾಶವಿಲ್ಲದೆ ಹೊದರೂ ಪ್ರತಿಯೊಬ್ಬರೂ ಈ ಟ್ವೀಟ್‌ಗಳನ್ನು ವೀಕ್ಷಿಸಲು, ಲೈಕ್‌ ಮಾಡುವ ಮತ್ತು ರಿಟ್ವೀಟ್ ಮಾಡಲು ಸಾಧ್ಯವಾಗುತ್ತದೆ.

ಟ್ವಿಟ್‌

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಟ್ವಿಟ್‌ ಮಾಡಿದರೆ ಸಾಕು ಅಲ್ಲಿ ಪರ ವಿರೋದ ಚರ್ಚೆಗಳು ಶುರುವಾಗುತ್ತವೆ. ಅಷ್ಟೇ ಅಲ್ಲ ವಾದ ವಿವಾದಗಳು ತಾರಕಕ್ಕೇರಿ ಅಶ್ಲಿಲ ಸಂಭಾಷನೆಗಳು ಅನಗತ್ಯ ಸಂಭಾಷಣೆಗಳು ಮುಂದುವರೆಯುತ್ತವೆ. ಇದರಿಂದ ಬಳಕೆದಾರರಿಗೆ ಕಿರಿಕಿರಿ ಎನಿಸಲಿದೆ ಇದನ್ನ ಮನಗಂಡಿರುವ ಟ್ವಿಟರ್‌ ಈ ಫೀಚರ್ಸ್‌ ಅನ್ನು ಪರಿಚಯಿಸುವ ಮೂಲಕ ಬಳಕೆದಾರರ ಸ್ನೇಹಿಯಾಗಿದೆ. ಇದಲ್ಲದೆ ಆಗಾಗ್ಗೆ ದ್ವೇಷ ಮತ್ತು ನಿಂದನೀಯ ಪ್ರತ್ಯುತ್ತರಗಳ ರೂಪದಲ್ಲಿ ಬರುವ ಟ್ವೀಟ್‌ಗಳು ಸಾಮಾಜಿಕ ಅಶಾಂತಿ ಸೃಷ್ಟಿಗೆ ಕಾರಣವಾಗಲಿವೆ ಇದನ್ನ ತಡೆಗಟ್ಟುವಲ್ಲಿ ಈ ಫೀಚರ್ಸ್‌ ಸಹಾಯಕವಾಗಲಿದೆ.

Most Read Articles
Best Mobiles in India

English summary
Twitter’s limited reply feature, after being tested for months, is now available for all users.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X