ಕೇಂದ್ರದಿಂದ ಟ್ವಿಟರ್‌ಗೆ ಶಾಕ್‌: ಸೇಫ್‌ ಹಾರ್ಬರ್‌ ರಕ್ಷಣೆ ಕಳೆದುಕೊಂಡ ಟ್ವಿಟರ್‌!

|

ಭಾರತ ಸರ್ಕಾರ ಮತ್ತು ಟ್ವಿಟರ್‌ ನಡುವಿನ ತಿಕ್ಕಾಟ ಇನ್ನಷ್ಟು ಮುಂದುವರೆದಿದೆ. ಸರ್ಕಾರದ ಹೊಸ ಐಟಿ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾಗಿರುವ ಟ್ವಿಟರ್‌ ವಿರುದ್ದ ಭಾರತ ಹಲವು ಭಾರಿ ಎಚ್ಚರಿಕೆ ನೀಡಿದೆ. ಸದ್ಯ ಇದೀಗ ಭಾರತದಲ್ಲಿ ಟ್ವಿಟರ್ ಇನ್ನು ಮುಂದೆ "ಮಧ್ಯವರ್ತಿ" ಆಗಿರುವುದಿಲ್ಲ ಎಂದು ಹೇಳಿದೆ. ಆದ್ದರಿಂದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಇಂಟರ್ನೆಟ್ ಮಧ್ಯವರ್ತಿಗಳಿಗೆ ನೀಡಲಾಗುವ ಕಾನೂನು ರಕ್ಷಣೆಯನ್ನು ಒದಗಿಸಲಾಗುವುದಿಲ್ಲ ಎಂದು ಸರ್ಕಾರ ತೀರ್ಮಾನಿಸಿದೆ.

ಕೇಂದ್ರ

ಹೌದು, ಕೇಂದ್ರ ಸರ್ಕಾರ ಟ್ವಿಟರ್‌ಗೆ ಭಾರತದಲ್ಲಿ ‘ಸುರಕ್ಷಿತ ಬಂದರು' ರಕ್ಷಣೆ ತೆಗೆದುಹಾಕುವುದಕ್ಕೆ ಮುಂದಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕಳೆದ ಹಲವು ದಿನಗಳಿಂದ ಕಾನೂನು ತಜ್ಞರು ಮತ್ತು ಸರ್ಕಾರದ ಇತರ ಇಲಾಖೆಗಳೊಂದಿಗೆ ಸಮಾಲೋಚಿಸಿದ ನಂತರ ಈ ಅಭಿಪ್ರಾಯಕ್ಕೆ ಬಂದಿದೆ. ಅಲ್ಲದೆ ಅಗತ್ಯವಿದ್ದಾಗ ಅದನ್ನು ನ್ಯಾಯಾಲಯಗಳು ಅಥವಾ ಕಾನೂನು ಜಾರಿ ಸಂಸ್ಥೆಗಳ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ಹಾಗಾದ್ರೆ ಭಾರತದಲ್ಲಿ ಟ್ವಟರ್‌ ಬ್ಯಾನ್‌ ಆಗಲಿದೆಯಾ? ಟ್ವಿಟರ್‌ ಮುಂದೆ ಏನು ಮಾಡಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌

ಭಾರತದಲ್ಲಿ ಟ್ವಿಟರ್‌ ಹಾಗೂ ಸರ್ಕಾರದ ನಡುವಿನ ತಿಕ್ಕಾಟ ಇಲ್ಲಿಗೆ ಮುಗಿಯುವ ಲಕ್ಷಣಗಲು ಕಾಣುತ್ತಿಲ್ಲ. ಭಾರತದ ಗಣ್ಯರ ಖಾತೆಯ ಬ್ಲೂಟಿಕ್‌ ತೆಗೆದು ಹಾಕಿ ಎಡವಟ್ಟು ಮಾಡಿದ್ದ ಟ್ವಿಟರ್‌, ಭಾರತದ ಭೂಪಟದ ವಿಚಾರದಲ್ಲಿ ತಪ್ಪಾಗಿ ನಡೆದುಕೊಂಡು ಆಕ್ರೋಶಕ್ಕೆ ಕಾರಣವಾಗಿದೆ. ಇದೆಲ್ಲದರ ನಡುವೆ ಹೊಸ ಐಟಿ ನಿಯಮ ಪಾಲಿಸುವಲ್ಲಿ ಪದೇ ಪದೇ ವಿಫಲವಾಗುತ್ತಿರುವ ಟ್ವಿಟರ್‌ ಇನ್ಮುಂದೆ ಭಾರತದಲ್ಲಿ ಯಾವುದೇ ರೀತಿಯ ಸೇಫ್‌ ಹಾರ್ಬರ್‌ ಹೊಂದುವುದು ಇಲ್ಲ ಎಂದು ಹೇಳಲಾಗ್ತಿದೆ.

ಟ್ವಿಟರ್

ಟ್ವಿಟರ್ ಇನ್ನೂ ಸುರಕ್ಷಿತ ಬಂದರಿನ ಸ್ಥಿತಿಯನ್ನು ಅನುಭವಿಸುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ಅಂತಿಮವಾಗಿ ನಿರ್ಧರಿಸುವ ಜವಾಬ್ದಾರಿ ನ್ಯಾಯಾಲಯಗಳ ಮೇಲಿದೆ. ನಾವು (ಐಟಿ ಸಚಿವಾಲಯ) ವಿಚಾರದಲ್ಲಿ, ನಮ್ಮ ದೃಷ್ಟಿಕೋನವನ್ನು ಈಗ ನಿರ್ಧರಿಸಲಾಗಿದೆ. ಅವರು (ಟ್ವಿಟರ್) ಇಲ್ಲಿಯವರೆಗೆ ಅನೇಕ ರೂಲ್ಸ್‌ಗಳನ್ನು ಪಾಲಿಸಿಲ್ಲ "ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೊಸದಾಗಿ ಹೊರತಂದಿರುವ ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ಅನ್ನು ಟ್ವಟಿರ್‌ ಸರಿಯಾಗಿ ಪಾಲಿಸುತ್ತಿಲ್ಲ ಅನ್ನೊದು ಸರ್ಕಾರದ ಆಕ್ರೋಶಕ್ಕೆ ಕಾರಣವಾಗಿದೆ.

ಫೇಸ್‌ಬುಕ್

ಈಗಾಗಲೇ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಲಿಂಕ್ಡ್‌ಇನ್, ವಾಟ್ಸಾಪ್, ಮತ್ತು ಟೆಲಿಗ್ರಾಮ್ ಸೇರಿದಂತೆ ಅನೇಕ ಸಂಸ್ಥೆಗಳು ಸರ್ಕಾರದ ಹೊಸ ಐಟಿ ನಿಯಮ ಪಾಲನೆ ಮಾಡುತ್ತಿವೆ. ದರೆ ಟ್ವಿಟರ್‌ ಮಾತ್ರ ಭಾರತ ಸರ್ಕಾರದ ನಿಯಮ ಅನುಸರಣೆಯಲ್ಲಿ ವಿಳಂಬ ದೋರಣೆ ಅನುಸರಿಸುತ್ತಿದೆ. ಅಲ್ಲದೆ ಮುಖ್ಯ ಅನುಸರಣೆ ಅಧಿಕಾರಿಯ ನೇಮಕವನ್ನು ಅಂತಿಮಗೊಳಿಸುವ ಮುಂದುವರಿದ ಹಂತದಲ್ಲಿದೆ ಮತ್ತು ಮುಂದಿನ ವಾರದೊಳಗೆ ವಿವರಗಳನ್ನು ಸಚಿವಾಲಯಕ್ಕೆ ನೀಡಲಾಗುವುದು ಎಂದು ಅದು ಹೇಳಿದೆ. ಇದು ಹೀಗೆ ಮುಂದುವರೆದರೆ ಭಾರತದಲ್ಲಿ ಟ್ವಿಟರ್‌ಗೆ ಗೇಟ್‌ಪಾಸ್‌ ಸಿಕ್ಕರೂ ಅಚ್ಚರಿಯಿಲ್ಲ.

Most Read Articles
Best Mobiles in India

English summary
The Ministry of Electronics and Information Technology has arrived at this view after consultations with legal experts and other departments of the government over the last several days.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X