ಟ್ವಿಟ್ಟರ್ ಸೇರಲಿದೆ ಟ್ವಿಟ್‌ಗಳನ್ನು ಸ್ವಯಂಚಾಲಿತ ಭಾಷಾಂತರಿಸುವ ಹೊಸ ಫೀಚರ್!

|

ಜನಪ್ರಿಯ ಸಾಮಾಜಿಕ ತಾಣಗಳಲ್ಲಿ ಒಂದಾದ ಟ್ವಿಟರ್ ಪ್ರಸ್ತುತ ಬಿಲ್ಟ್‌ಇನ್ ಅನುವಾದಗಳನ್ನು ಬೆಂಬಲಿಸುತ್ತದೆ. ಬಳಕೆದಾರರು ಬೇರೆ ಭಾಷೆಯಲ್ಲಿ ಬರೆದ ಯಾವುದೇ ಟ್ವೀಟ್ ಅನ್ನು ಭಾಷಾಂತರವಾಗಿ ನೋಡಬಹುದಾಗಿದೆ. ಟ್ವೀಟ್‌ಗಳನ್ನು ಸ್ವಯಂಚಾಲಿತ ಅನುವಾದಿಸುವ ಈ ಫೀಚರ್‌ ಅನ್ನು ಟ್ವಿಟ್ಟರ್ ಸಂಸ್ಥೆಯು ವಿಸ್ತರಿಸುವುದಾಗಿ ಕಂಪನಿ ಇಂದು ಪ್ರಕಟಿಸಿದೆ.

ಟ್ವಿಟ್ಟರ್

ಹೌದು, ಟ್ವಿಟ್ಟರ್ ಸಂಸ್ಥೆಯು ಟ್ವಿಟ್ ಗಳನ್ನು ಸ್ವಯಂಚಾಲಿತವಾಗಿ ಭಾಷಾಂತರಿಸುವ ಆಯ್ಕೆ ಪರಿಚಯಿಸಿದೆ. ಬೇರೆ ಭಾಷೆಯಲ್ಲಿ ಬರೆದ ಯಾವುದೇ ಟ್ವೀಟ್ ಅನ್ನು ಕ್ಲಿಕ್ ಮಾಡುವ ಅಥವಾ ಟ್ಯಾಪ್ ಮಾಡುವ ಮೂಲಕ ಭಾಷಾಂತರ ಮಾಡಬಹುದಾಗಿದೆ. ನಿಮ್ಮ ಪ್ರಾಥಮಿಕ ಭಾಷೆಯನ್ನು ಟ್ವಿಟರ್‌ನಲ್ಲಿ ಇಂಗ್ಲಿಷ್‌ಗೆ ಹೊಂದಿಸಿದ್ದರೆ, ಬೇರೆ ಬೇರೆ ಭಾಷೆಗಳಲ್ಲಿರುವ ಎಲ್ಲಾ ಇತರೆ ಟ್ವೀಟ್‌ಗಳು ಅನುವಾದ ಬಟನ್‌ ಆಯ್ಕೆ ಹೊಂದಿರುತ್ತವೆ.

ಹಸ್ತಚಾಲಿತ

ಭಾಷಾಂತರ ಆಯ್ಕೆಯು ಇಲ್ಲಿಯವರೆಗೆ ಹಸ್ತಚಾಲಿತ ಪ್ರಕ್ರಿಯೆಯಾಗಿದೆ, ಅಂದರೆ ನೀವು ಅನುವಾದಿಸಿದ ಆವೃತ್ತಿಯನ್ನು ಆರಿಸದ ಹೊರತು ಮೂಲ ಟ್ವೀಟ್ ಅನ್ನು ತೋರಿಸಲಾಗುತ್ತದೆ. ಈ ಹೊಸ ಬದಲಾವಣೆಯಲ್ಲಿ ಟ್ವಿಟರ್ ಎಲ್ಲಾ ಟ್ವೀಟ್‌ಗಳನ್ನು ಬಳಕೆದಾರರು ಹೊಂದಿಸಿದ/ ಸೆಟ್ ಮಾಡಿರುವ ಭಾಷೆಯಲ್ಲಿ ಕಾಣಿಸುವಂತೆ ಒತ್ತಾಯಿಸುತ್ತದೆ. ಈ ಹೊಸ ಆಯ್ಕೆಯನ್ನು ಪ್ರಸ್ತುತ ಬ್ರೆಜಿಲ್‌ನ ಬಳಕೆದಾರರೊಂದಿಗೆ ಮಾತ್ರ ಪರೀಕ್ಷಿಸಲಾಗುತ್ತಿದೆ ಎಂದು ಟ್ವಿಟರ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.

ಅನುವಾದಿ

ಸದ್ಯ ಬ್ರೆಜಿಲಿಯನ್ನಲ್ಲಿ ಪೋರ್ಚುಗೀಸ್ ಹೊರತುಪಡಿಸಿ ಬೇರೆ ಯಾವುದೇ ಭಾಷೆಯಲ್ಲಿ ಬರೆಯಲಾದ ಎಲ್ಲಾ ಟ್ವೀಟ್‌ಗಳನ್ನು ಅವರ ಭಾಷೆಗೆ ಅನುವಾದಿಸಲಾಗುತ್ತದೆ. ಬಳಕೆದಾರರು ತಮ್ಮ ಭಾಷೆಯ ಆದ್ಯತೆಗಳನ್ನು ಹೊಂದಿಸುವ ಆಯ್ಕೆಯನ್ನು ಅಲ್ಲಿ ಪಡೆಯುತ್ತಾರೆ. ಪ್ರಾಯೋಗಿಕ ಹಂತದಲ್ಲಿ ಆಯ್ಕೆ ಸೀಮಿತ ಐಒಎಸ್ ಮತ್ತು ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ.

ದೇಶಗಳಿಗೆ

ಈ ಹೊಸ ಫೀಚರ್ ಇತರೆ ದೇಶಗಳಿಗೆ ವಿಸ್ತರಿಸುತ್ತದೆಯೇ? ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಪ್ರಸ್ತುತ ಈ ಫೀಚರ್ ಪ್ರಾಯೋಗಿಕ ಹಂತದಲ್ಲಿದ್ದು, ಇದು ಪ್ರಾಯೋಗಿಕ ಹಂತದಿಂದ ಚಾಲ್ತಿಗೆ ಬರಲಿದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಅನ್ನು ಅಂತರರಾಷ್ಟ್ರೀಯ ವಿಸ್ತರಣೆಗೆ ಮುಂಚೆಯೇ ಈ ಫೀಚರ್‌ ಅನ್ನು ಸಂಸ್ಥೆಯು ಕೈಬಿಡಬಹುದು ಎನ್ನಲಾಗಿದೆ.

Most Read Articles
Best Mobiles in India

English summary
Twitter currently supports translations, where-in users can tap or click on the ‘Translate tweet’ button written in a different language to translate it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X