ಭಾರತದಲ್ಲಿ ಟ್ವಿಟರ್‌ ಟಾಪಿಕ್‌ ಬಿಡುಗಡೆ! ಟಾಪಿಕ್‌ಗಳನ್ನು ಅನುಸರಿಸುವುದು ಹೇಗೆ?

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಆಗಿರುವ ಟ್ವಿಟರ್ ಅಂತಿಮವಾಗಿ ಭಾರತದಲ್ಲಿ ಟಾಪಿಕ್ ಗಳನ್ನು ಪ್ರಾರಂಭಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ತನ್ನ ಟಾಪಿಕ್‌ ಅನ್ನು ಘೋಷಿಸಿದ್ದ ಟ್ವಿಟರ್‌ ಇದೀಗ ತನ್ನ ಬಳಕೆದಾರರು ಅವರು ಆಸಕ್ತಿ ಹೊಂದಿರುವ ಕೆಲವು ವಿಷಯಗಳನ್ನು ಅನುಸರಿಸಬಹುದು ಮತ್ತು ಆಯ್ಕೆಮಾಡಿದ ವಿಷಯಗಳಿಂದ ಹೆಚ್ಚಿನ ವಿಷಯವನ್ನು ನೋಡುವ ಅವಕಾಶವನ್ನು ಕಲ್ಪಿಸಿದೆ. ಸದ್ಯ ಭಾರತದಲ್ಲಿ ಟ್ವಿಟರ್ ವಿಷಯಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ.

ಟ್ವಿಟರ್‌

ಹೌದು, ಟ್ವಿಟರ್‌ ಭಾರತದಲ್ಲಿ ತನ್ನ ಟಾಪಿಕ್‌ ಅನ್ನು ಪರಿಚಯಿಸಿದೆ. ಟ್ವಿಟರ್‌ ಟಾಪಿಕ್‌ ಹಿಂದಿ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಲಭ್ಯವಿದ್ದು, ಹಿಂದಿಯಲ್ಲಿನ ವಿಷಯಗಳು ದೇವನಾಗರಿ ಲಿಪಿಯಲ್ಲಿ ಮತ್ತು ರೋಮನ್ ವರ್ಣಮಾಲೆಯಲ್ಲಿ ಗೋಚರಿಸುತ್ತದೆ. ಅಲ್ಲದೆ ನೀವು ನಿಮ್ಮ ಡಿವೈಸ್‌ನ ಭಾಷೆಯನ್ನು ಹಿಂದಿಗೆ ಹೊಂದಿಸಿದಾಗ ಮಾತ್ರ ವಿಷಯಗಳು ಹಿಂದಿಯಲ್ಲಿ ಕಾಣಿಸುತ್ತದೆ. ಟ್ವಿಟರ್ ಹಿಂದಿಯಲ್ಲಿ ಲಭ್ಯವಿರುವ ಕೆಲವು ವಿಷಯಗಳನ್ನು ಹೈಲೈಟ್ ಮಾಡಿದೆ, ಇವುಗಳಲ್ಲಿ ಆಗ್ರಾ (आगरा), ಪಾಟ್ನಾ (पटना) ಮತ್ತು ಪುಣೆ (पुणे), ಪ್ರಾಣಿಗಳಂತಹ ಸಾಮಾನ್ಯ ಆಸಕ್ತಿಗಳು (जानवर), ಜಾತಕ (राशिफल), ಕವನ (कविता) ವಿಷಯಗಳನ್ನು ನೀಡಿದೆ. ಹಾಗಾದ್ರೆ ಟ್ವಿಟರ್‌ ಟಾಪಿಕ್‌ ಎಂದರೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ವಿಟರ್‌

ಭಾರತದಲ್ಲಿ ಟ್ವಿಟರ್‌ ಟಾಪಿಕ್‌ ಅನ್ನು ಪರಿಚಯಿಸಿದೆ. ಈ ಟಾಪಿಕ್‌ನಲ್ಲಿ ಭಾರತೀಯ ಬಳಕೆದಾರರಿಗೆ ಸಂಬಂಧಿಸಿದ ಆಸಕ್ತಿಗಳಿಗೆ ಕಸ್ಟಮೈಸ್ ಮಾಡಲಾಗಿದೆ ಎಂದು ಟ್ವಿಟರ್ ತಿಳಿಸಿದೆ. ಬಳಕೆದಾರರು ವಿಭಿನ್ನ ವಿಷಯಗಳ ಮೂಲಕ ಬ್ರೌಸ್ ಮಾಡಬಹುದಾಗಿದೆ. ಟ್ವಿಟರ್ ಸಹ ಟೈಮ್‌ಲೈನ್ ಮತ್ತು ಸರ್ಚ್ ಬಾರ್‌ನಲ್ಲಿ ಕೆಲವು ಸಲಹೆಗಳನ್ನು ಸಹ ತೋರಿಸಲಿದೆ. ಜೊತೆಗೆ ಬಳಕೆದಾರರಿಗೆ ಹೆಚ್ಚು ಪ್ರಸ್ತುತವಾದದ್ದನ್ನು ಆಧರಿಸಿ ವಿಷಯದ ಸಲಹೆಗಳನ್ನು ಸಹ ತೋರಿಸಲಾಗುತ್ತದೆ. ಹಾಗಾದ್ರೆ ಟ್ವಿಟರ್‌ನಲ್ಲಿ ಟಾಪಿಕ್‌ಗಳನ್ನು ಅನುಸರಿಸುವುದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ಟ್ವಿಟರ್‌ನಲ್ಲಿ ಟಾಪಿಕ್‌ಗಳನ್ನು ಅನುಸರಿಸುವುದು ಹೇಗೆ?

ಟ್ವಿಟರ್‌ನಲ್ಲಿ ಟಾಪಿಕ್‌ಗಳನ್ನು ಅನುಸರಿಸುವುದು ಹೇಗೆ?

ಹಂತ:1 ಟ್ವಿಟರ್ ಅಪ್ಲಿಕೇಶನ್ ತೆರೆಯಿರಿ ಮತ್ತು ಮೆನು ಬಟನ್ ಕ್ಲಿಕ್ ಮಾಡಿ.

ಹಂತ:2 ಲಿಸ್ಟ್‌ನಲ್ಲಿ ಟಾಪಿಕ್ಗಳನ್ನು ಆಯ್ಕೆಮಾಡಿ.

ಹಂತ:3 ಸೂಚಿಸಿದ ಟಾಪಿಕ್‌ ಲಿಸ್ಟ್‌ ಅನ್ನು ನೀವು ಇಲ್ಲಿ ನೋಡುತ್ತೀರಿ.

ಹಂತ:4 ಕೆಳಗೆ ಸ್ಕ್ರಾಲ್ ಮಾಡಿ ಮತ್ತು ‘ಮೋರ್‌ ಟಾಪಿಕ್‌' ಆಯ್ಕೆಮಾಡಿ.

ಹಂತ:5 ಟಾಪಿಕ್‌ ಲಿಸ್ಟ್‌ ಮೂಲಕ ಬ್ರೌಸ್ ಮಾಡಿ ಅಥವಾ ಒಂದನ್ನು ಹುಡುಕಿ.

ಟಾಪಿಕ್‌ಗಳು

ಇನ್ನು ಟಾಪಿಕ್‌ಗಳು ವಿಶಾಲವಾದ ವಿಷಯಗಳಲ್ಲಿ ಲಭ್ಯವಿದೆ. ಆದರೆ ಇದರಲ್ಲಿ ಇನ್ನೂ ಅನೇಕ ಉಪವಿಭಾಗಗಳು ಲಭ್ಯವಿದೆ. ಉದಾಹರಣೆಗೆ, ಅನಿಮೆ ಮತ್ತು ಮಂಗಾ ಅಡಿಯಲ್ಲಿ, ಅನಿಮೇಷನ್, ಟೋಕುಸಾಟ್ಸು ಮತ್ತು ಧ್ವನಿ ನಟರು ಇದ್ದಾರೆ. ಅನಿಮೇಷನ್ ಅಡಿಯಲ್ಲಿ ಇನ್ನೂ ಹಲವು ವಿಷಯಗಳಿವೆ. ನೀವು ಅನುಸರಿಸುವ ವಿಷಯಗಳು ಈ ಕೆಳಗಿನ ಪಟ್ಟಿಯಲ್ಲಿ ಕಾಣಿಸುತ್ತದೆ. ನೀವು ಯಾವಾಗ ಬೇಕಾದರೂ ಈ ವಿಷಯಗಳನ್ನು ಅನುಸರಿಸಬಹುದು. ನಿಮ್ಮ ಟೈಮ್‌ಲೈನ್‌ನಲ್ಲಿ ನೀವು ನೋಡಲು ಬಯಸದ ವಿಷಯಗಳಿಗಾಗಿ ಆಸಕ್ತಿ ಇಲ್ಲದ ಟ್ಯಾಬ್ ಸಹ ಇದೆ.

Most Read Articles
Best Mobiles in India

Read more about:
English summary
Twitter Topics will be visible in Hindi only on devices that have the default languages set to Hindi.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X