Just In
Don't Miss
- News
ಮೈಸೂರು, ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಇಬ್ಬರು ಸಾವು
- Sports
ಟೀಕೆಗಳಿಂದ ಗೊಂದಲಕ್ಕೀಡಾಗಬೇಡಿ: ವಿರಾಟ್ ಕೊಹ್ಲಿಗೆ ಹೀಗೆ ಕಿವಿಮಾತು ಹೇಳಿದ್ಯಾರು?
- Movies
ಬಾಡಿ ಶೇಮಿಂಗ್ ಇದೆ, ಒತ್ತಡ ಬೇಡ: ನಟಿ ಮಯೂರಿ
- Automobiles
ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್ ಮಾಡಿದ ಮೆಗಾಸ್ಟಾರ್ ಮಮ್ಮುಟ್ಟಿ
- Lifestyle
ಸಂಖ್ಯಾಶಾಸ್ತ್ರ: ಈ ಜನ್ಮ ಸಂಖ್ಯೆ ಹೊಂದಿರುವವರ ದಾಂಪಾತ್ಯದಲ್ಲಿ ಸಮಸ್ಯೆಗಳೇ ಹೆಚ್ಚು
- Education
IOCL Recruitment 2022 : 43 ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಎಸಿ ಬಳಸಿದರೂ ವಿದ್ಯುತ್ ಬಿಲ್ ಕಡಿತ ಮಾಡುವುದು ಹೇಗೆ?
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸದ್ಯದಲ್ಲೇ ಟ್ವಿಟರ್ ಸೇರಲಿರುವ ಈ ಫೀಚರ್ಸ್ ಸಾಕಷ್ಟು ಉಪಕಾರಿಯಾಗಲಿದೆ!
ಮೈಕ್ರೊಬ್ಲಾಗಿಂಗ್ ಸೈಟ್ ಟ್ವಿಟರ್ ಜನಪ್ರಿಯ ಸೊಶೀಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ಅದು ಟ್ವಿಟರ್ನಲ್ಲಿ ಟ್ರೆಂಡ್ ಆಗಿರುತ್ತೆ. ರಾಜಕೀಯ ಗಣ್ಯರಿಂದ ಹಿಡಿದು ಎಲ್ಲಾ ವಲಯದ ಗಣ್ಯ ವ್ಯಕ್ತಿಗಳು ಕೂಡ ಟ್ವಿಟರ್ ಮೂಲಕ ತಮ್ಮ ಟ್ವಿಟ್ಗಳನ್ನು ಮಾಡುತ್ತಿರುತ್ತಾರೆ. ಇದೇ ಕಾರಣಕ್ಕೆ ಟ್ವಿಟರ್ ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್ಗಳನ್ನು ಪರಿಚಯಿಸಿದೆ. ಜೊತೆಗೆ ಹೊಸ ಮಾದರಿಯ ಫೀಚರ್ಸ್ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಇನ್ಸ್ಟಾಗ್ರಾಮ್ನ ಕ್ಲೋಸ್ ಫ್ರೆಂಡ್ಸ್ ಫೀಚರ್ಸ್ ಮಾದರಿಯಲ್ಲಿ ಹೊಸ ಫೀಚರ್ಸ್ ಪರಿಚಯಿಸಲು ಮುಂದಾಗಿದೆ.

ಹೌದು, ಟ್ವಿಟರ್ ಇನ್ಸ್ಟಾಗ್ರಾಮ್ನ ಕ್ಲೋಸ್ ಫ್ರೆಂಡ್ಸ್ ಮಾದರಿಯ ಫೀಚರ್ಸ್ ಅನ್ನು ಪರಿಚಯಿಸಲು ಮುಂದಾಗಿದೆ. ಇದು ಟ್ವಿಟರ್ ಒಂದು ನಿರ್ದಿಷ್ಟ ಗ್ರೂಪ್ನೊಂದಿಗೆ ಟ್ವೀಟ್ಗಳನ್ನು ಶೇರ್ ಮಾಡಲು ಅನುಮತಿಸಲಿದೆ. ಇದರಿಂದ ನೀವು ನಿಮ್ಮ ಟ್ವೀಟ್ಗಳನ್ನು ನಿಮ್ಮ "ಫ್ಲಾಕ್" ಗೆ ಸೀಮಿತಗೊಳಿಸಬಹುದು ಎಂದು ಹೇಳಲಾಗಿದೆ. ಈ ಹೊಸ ಫೀಚರ್ಸ್ ಬಗ್ಗೆ ಟ್ವಿಟರ್ ಈಗಾಗಲೇ ಮಾಹಿತಿ ನೀಡಿತ್ತು. ಇದನ್ನು ವಿಶ್ವಾಸಾರ್ಹ ಸ್ನೇಹಿತರು ಎಂದು ಹೆಸರಿಸಿತ್ತು. ಈ ಫೀಚರ್ಸ್ ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗುವ ಸಾಧ್ಯತೆ ಇದೆ. ಹಾಗಾದ್ರೆ ಟ್ವಿಟರ್ನ ಈ ಹೊಸ ಫೀಚರ್ಸ್ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ವಿಟರ್ ಮೂಲಗಳ ಪ್ರಕಾರ, ಫ್ಲಾಕ್ ಫೀಚರ್ಸ್ ಪರಿಚಯಿಸಲು ಮುಂದಾಗಿದೆ. ಈ ಹೊಸ ಫೀಚರ್ಸ್ ಕುರಿತು ಹೆಚ್ಚಿನ ಮಾಹಿತಿಯನ್ನು ತೋರಿಸುವ ಪೇಜ್ನಲ್ಲಿ ಟ್ವಿಟರ್ ಮಾಹಿತಿ ಒದಗಿಸಿದೆ. ಅದರಂತೆ ಈ ಫೀಚರ್ಸ್ ಮೂಲಕ ನೀವು 150 ಸದಸ್ಯರನ್ನು ಸೇರಿಸಬಹುದು ಎಂದು ವಿವರಿಸಲಾಗಿದೆ. ಈ ಫೀಚರ್ಸ್ ಬಳಸುವ ಬಳಕೆದಾರರು ಮಾತ್ರ ನಿಮ್ಮ ಫ್ಲಾಕ್ಗೆ ಕಳುಹಿಸಲಾದ ಟ್ವೀಟ್ಗಳನ್ನು ವೀಕ್ಷಿಸಬಹುದು ಅಥವಾ ಪ್ರತ್ಯುತ್ತರಿಸಬಹುದು. ಇದಲ್ಲದೆ ನಿಮ್ಮ ಗುಂಪಿನಲ್ಲಿ ಇನ್ನು ಮುಂದೆ ಯಾರಾದರೂ ಬೇಡವೆಂದು ನೀವು ನಿರ್ಧರಿಸಿದರೆ, ಯಾವುದೇ ಸಮಯದಲ್ಲಿ ಅವರನ್ನು ನೀವು ತೆಗೆದುಹಾಕಬಹುದು. ಅಲ್ಲದೆ ನೀವು ಅವರನ್ನು ಗ್ರೂಪ್ನಿಂದ ತೆಗೆದು ಹಾಕಿದರೆ ಅವರಿಗೆ ಯಾವುದೇ ನೋಟಿಫಿಕೇಶನ್ ಪಡೆಯಲು ಸಾದ್ಯವಾಗುವುದಿಲ್ಲ.

ಇದಲ್ಲದೆ ನೀವು ಯಾರೊಬ್ಬರ ಗ್ರೂಪ್ನಲ್ಲಿದ್ದರೆ ಅವರು ಟ್ವೀಟ್ ಅನ್ನು ಕಳುಹಿಸಿದರೆ, ಆ ಟ್ವೀಟ್ನ ಕೆಳಗೆ ಒಂದು ಲೇಬಲ್ ಕಾಣಿಸಲಿದೆ. ಟ್ವಿಟರ್ನಲ್ಲಿ ನೀವು ಅನುಸರಿಸುವ ಪ್ರತಿಯೊಬ್ಬರ ನಡುವೆ ನಿಕಟ ಸ್ನೇಹಿತರ ನಡುವಿನ ವ್ಯತ್ಯಾಸವನ್ನು ಇದು ಸುಲಭವಾಗಿಸುತ್ತದೆ. ಇದರಿಂದ ನಿಮ್ಮ ಫ್ಲಾಕ್ಗೆ ಟ್ವೀಟ್ ಅನ್ನು ಕಳುಹಿಸುವ ಮೊದಲು ಟ್ವಿಟರ್ ಪ್ರೇಕ್ಷಕರ ಆಯ್ಕೆಯನ್ನು ಡಿಸ್ಪ್ಲೇ ಮಾಡಲಿದೆ. ಇದು ಎಲ್ಲಾ ಟ್ವಿಟರ್ ಮತ್ತು ನಿಮ್ಮ ಆಯ್ಕೆಮಾಡಿದ ಬಳಕೆದಾರರ ನಡುವೆ ಆಯ್ಕೆ ಮಾಡಲು ನಿಮಗೆ ಅವಕಾಶ ನೀಡಲಿದೆ.

ಇನ್ನು ಟ್ವಿಟರ್ ಕಳೆದ ಸೆಪ್ಟೆಂಬರ್ನಲ್ಲಿ ಇನ್ವೈಟ್ ಒನ್ಲಿ ಕಮ್ಯೂನಿಟಿಗಳನ್ನು ಪ್ರಾರಂಭಿಸಿತು. ಈ ಫೀಚರ್ಸ್ ಶೇರ್ ಮಾಡಿದ ಆಸಕ್ತಿಗಳ ಮೂಲಕ ಬಳಕೆದಾರರೊಂದಿಗೆ ಸಂಪರ್ಕ ಸಾಧಿಸಲು ನಿಮಗೆ ಅನುಮತಿಸಲಿದೆ. ಇದಲ್ಲದೆ ನಿಮ್ಮ ಟ್ವೀಟ್ಗಳನ್ನು ನಿಮ್ಮ ಗ್ರೂಪ್ಗಳಿಗೆ ಮಿತಿಗೊಳಿಸುವಂತೆಯೇ, ನಿಮ್ಮ ಎಲ್ಲಾ ಅನುಯಾಯಿಗಳಿಗಿಂತ ನಿರ್ದಿಷ್ಟ ಸಮುದಾಯಕ್ಕೆ ನೀವು ಟ್ವೀಟ್ಗಳನ್ನು ಕಳುಹಿಸಬಹುದಾಗಿದೆ. ಸದ್ಯ ಟ್ವಿಟರ್ನ "ಆಪ್ತ ಸ್ನೇಹಿತರ" ರೀತಿಯ ಈ ಫೀಚರ್ಸ್ ಎಲ್ಲಾ ಬಳಕೆದಾರರನ್ನು ಯಾವಾಗ ತಲುಪುತ್ತದೆ ಅನ್ನೊದು ಇನ್ನೂ ಕೂಡ ಸ್ಪಷ್ಟವಾಗಿಲ್ಲ.

ಟ್ವಿಟರ್ ಖಾತೆ ಹ್ಯಾಕರ್ ದಾಳಿಗೆ ಒಳಗಾಗದಂತೆ ತಡೆಯುವುದು ಹೇಗೆ?
* ಸ್ಟ್ರಾಂಗ್ ಪಾಸ್ವರ್ಡ್ ಸೆಟ್ಮಾಡಿ
ಟ್ವಿಟರ್ ಖಾತೆ ಹ್ಯಾಕರ್ಗಳ ದಾಳಿಗೆ ಒಳಗಾಗದಂತೆ ತಡೆಯುವುದಕ್ಕಾಗಿ ಸ್ಟ್ರಾಂಗ್ ಪಾಸ್ವರ್ಡ್ ಅನ್ನು ಕ್ರಿಯೆಟ್ ಮಾಡುವುದು ಉತ್ತಮ. ನೀವು ಬಳಸುವ ಪಾಸ್ವರ್ಡ್ ಬೇರೆಲ್ಲೂ ಬಳಕೆ ಆಗಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿರಿ. ಸಾಮಾನ್ಯವಾಗಿ ನೀವು ಸೆಟ್ ಮಾಡುವ ಪಾಸ್ವರ್ಡ್ ದೊಡ್ಡಕ್ಷರ, ಸಣ್ಣಕ್ಷರ, ಸಂಖ್ಯೆಗಳು ಮತ್ತು ಚಿಹ್ನೆಗಳನ್ನು ಒಳಗೊಂಡಿದ್ದರೆ ಉತ್ತಮ ಎನಿಸಲಿದೆ. ಇದಲ್ಲದೆ ನಿಮ್ಮ ಎಲ್ಲಾ ಲಾಗಿನ್ ಮಾಹಿತಿಯನ್ನು ಸುರಕ್ಷಿತವಾಗಿಡಲು ಪಾಸ್ವರ್ಡ್ ಮ್ಯಾನೇಜ್ ಸಾಫ್ಟ್ವೇರ್ ಅನ್ನು ಬಳಸಬಹುದಾಗಿದೆ.

ಎರಡು ಅಂಶದ ದೃಢೀಕರಣವನ್ನು ಬಳಸಿ
ಇನ್ನು ನಿಮ್ಮ ಟ್ವಿಟರ್ ಖಾತೆಯನ್ನು ಸುರಕ್ಷಿತವಾಗಿಡಲು ಎರಡು ಅಂಶಗಳ ದೃಢೀಕರಣವನ್ನು ಬಳಸುವುದು ಸೂಕ್ತವಾಗಿದೆ. ದೃಢೀಕರಣದ ಸೆಕ್ಯುರಿಟಿಯನ್ನು ಹೆಚ್ಚಿಸಲು ಪಾಸ್ವರ್ಡ್ ಜೊತೆಗೆ ಸೆಕ್ಯುರಿಟಿ ಕೋಡ್ ಅಥವಾ ಸೆಕ್ಯುರಿಟಿ ಕೀಯನ್ನು ಬಳಸಬಹುದು. ಟ್ವಿಟರ್ ಬಳಕೆದಾರರು ಸೆಕ್ಯುರಿಟಿ ಸೆಟ್ಟಿಂಗ್ಗಳಲ್ಲಿ ಈ ಫೀಚರ್ಸ್ ಅನ್ನು ಸಕ್ರಿಯಗೊಳಿಸಬಹುದು. ಈ ಫೀಚರ್ಸ್ ಅನ್ನು ಸಕ್ರಿಯಗೊಳಿಸಿದ ನಂತರ, ಬಳಕೆದಾರರಿಗೆ ದ್ವಿತೀಯ ಲಾಗಿನ್ ವಿಧಾನದೊಂದಿಗೆ ಪಾಸ್ವರ್ಡ್ ಅಗತ್ಯವಿರುತ್ತದೆ. ಒಂದು ಕೋಡ್, ಅಪ್ಲಿಕೇಶನ್ ಮೂಲಕ ಲಾಗಿನ್ ದೃಢೀಕರಣವನ್ನು ಬಳಸಬಹುದು.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999