Just In
- 8 hrs ago
ಆಂಡ್ರಾಯ್ಡ್ ಗೆ ಬಂದಿದೆ ಅತ್ಯಂತ ಅಪಾಯಕಾರಿ ವೈರಸ್..! ಈ ಬಗ್ಗೆ ಗೂಗಲ್ ಏನೇಳುತ್ತೆ..?
- 12 hrs ago
ಏರ್ಟೆಲ್, ಜಿಯೋದಿಂದ ಮುಂದುವರೆದ ಸ್ಪರ್ಧೆ..! ರಿಟೇಲ್ ವ್ಯಾಪಾರಿಗಳಿಗೆ ಬಂಪರ್..!
- 13 hrs ago
ವಾಟ್ಸಪ್ ಸ್ಟೇಟಸ್ಗಳನ್ನು ಸುಲಭವಾಗಿ ಸೇವ್ ಮಾಡುವುದು ಹೇಗೆ ಗೊತ್ತಾ?
- 14 hrs ago
ಐಫೋನ್ 11 ಪ್ರೊ ಅರ್ಡರ್ ಮಾಡಿದ್ದ ಬೆಂಗಳೂರು ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ?
Don't Miss
- News
ಫಲ ನೀಡಿದ ಬ್ರೆಕ್ಸಿಟ್ ವಚನ, ಬೋರಿಸ್ ಜಾನ್ಸನ್ಗೆ ಐತಿಹಾಸಿಕ ಬಹುಮತ
- Sports
ಐಎಸ್ಎಲ್ 2019: ಕೊಚ್ಚಿಯಲ್ಲಿ ಕೇರಳ ಗೆದ್ದಿಲ್ಲ, ಜೆಮ್ಶೆಡ್ಪುರ ಸೋತಿಲ್ಲ
- Movies
ದಬಾಂಗ್-3 ರಿಲೀಸ್ ಗೂ ಮೊದಲೇ ಅಚ್ಚರಿ ನೀಡಿದ ಸಲ್ಮಾನ್ ಖಾನ್
- Finance
ಬ್ರಿಟಿಷ್ ಬಿಲಿಯನೇರ್ ಉದ್ಯಮಿ ಬ್ರಾನ್ಸನ್ ಪೂರ್ವಜರ ಮೂಲ ತ.ನಾಡಿನ ಕಡಲೂರು
- Automobiles
ದುಬಾರಿ ಬೆಲೆಯೊಂದಿಗೆ ಪೋರ್ಷೆ ಕಯೆನಿ ಕೂಪೆ ಎಸ್ಯುವಿ ಬಿಡುಗಡೆ
- Lifestyle
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
- Education
DRDO: 1817 ಹುದ್ದೆಗಳ ನೇಮಕಾತಿ...ತಿಂಗಳಿಗೆ 56,900/-ರೂ ವೇತನ
- Travel
ವಾರಾಂತ್ಯದಲ್ಲಿ ನಿಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಬೆಂಗಳೂರಿನ ಸುತ್ತಮುತ್ತ ಈ ಸ್ಥಳಗಳೇ ಬೆಸ್ಟ್
ಇಲ್ಲಿವೆ ನೋಡಿ ಅಗ್ಗದ ಬ್ರಾಡ್ಬ್ಯಾಂಡ್ ಪ್ಲ್ಯಾನ್ಗಳು!..ಹಾಗಾದ್ರೆ ಯಾವುದು ಬೆಸ್ಟ್?
ಪ್ರಸ್ತುತ ದೇಶದ ಬ್ರಾಡ್ಬ್ಯಾಂಡ್ ಸೇವಾ ವಲಯದಲ್ಲಿ ಜನಪ್ರಿಯ ಸಂಸ್ಥೆಗಳ ಜತೆಗೆ ಹೊಸ ಪೂರೈಕೆದಾರ ಸಂಸ್ಥೆಗಳು ಸಹ ಪೈಪೋಟಿಗೆ ಇಳಿದಿವೆ. ಇತ್ತೀಚಿಗೆ ಜಿಯೋ ಸಹ ಗಿಗಾಫೈಬರ್ ಸೇವೆ ಆರಂಭಿಸಿದ್ದು, ದರ ಸಮರದ ಹೋರಾಟ ಹೆಚ್ಚಾಗಿದೆ. ಹೀಗಾಗಿ ಟಾಟಾಸ್ಕೈ, ಏರ್ಟೆಲ್, ವೊಡಾಫೋನ್, ಬಿಎಸ್ಎನ್ಎಲ್, ಹಾತ್ವೇ ಮತ್ತು ಆಕ್ಟ್ ಬ್ರಾಡ್ಬ್ಯಾಂಡ್ ಪೂರೈಕೆದಾರ ಸಂಸ್ಥೆಗಳು ಕಡಿಮೆ ಬೆಲೆಯಲ್ಲಿ ಆರಂಭಿಕ ಪ್ಲ್ಯಾನ್ಗಳನ್ನು ಪರಿಚಯಿಸಿವೆ.

ಹೌದು, ಭಾರತೀಯ ಬ್ರಾಡ್ಬ್ಯಾಂಡ್ ಕ್ಷೇತ್ರದಲ್ಲಿ ಇದೀಗ ಕಡಿಮೆ ಬೆಲೆಗೆ ಆರಂಭಿಕ ಬ್ರಾಡ್ಬ್ಯಾಂಡ್ ಪ್ಲ್ಯಾನ್ಗಳನ್ನು ನೀಡುತ್ತಿವೆ. ಅವುಗಳಲ್ಲಿ ಕೆಲವು ಸಂಸ್ಥೆಗಳು 100MBPS ವೇಗದ ಸಾಮರ್ಥ್ಯದಲ್ಲಿ ಬ್ರಾಡ್ಬ್ಯಾಂಡ್ ಸೇವೆಯನ್ನು ಪೂರೈಕೆ ಮಾಡುತ್ತಿದ್ದು, ಅನಿಯಮಿತ (ತಿಂಗಳ FUP ಮಿತಿ ಇಲ್ಲ) ಡೇಟಾ ಸೇವೆಯ ಸೌಲಭ್ಯವನ್ನು ಒಳಗೊಂಡಿವೆ. ಹಾಗಾದರೇ ಟಾಟಾಸ್ಕೈ, ಏರ್ಟೆಲ್ ಎಕ್ಸ್ಸ್ಟ್ರೀಮ್ ಫೈಬರ್, ಹಾತ್ವೇ, ಬಿಎಸ್ಎನ್ಎಲ್, ಸಂಸ್ಥೆಗಳ ಬ್ರಾಡ್ಪ್ಲ್ಯಾನ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಏರ್ಟೆಲ್ ಎಕ್ಸ್ಸ್ಟ್ರೀಮ್ ಫೈಬರ್ ಪ್ಲ್ಯಾನ್
ಏರ್ಟೆಲ್ ಎಕ್ಸ್ಸ್ಟ್ರೀಮ್ ಫೈಬರ್ ಹೊಸ ಬ್ರಾಡ್ಬ್ಯಾಂಡ್ ಬೇಸಿಕ್ ಪ್ಲ್ಯಾನ್ 799 ರೂ.ಗಳಾಗಿದ್ದು, ಇದು 100 ಎಂಬಿಪಿಎಸ್ ವೇಗವನ್ನು 150 ಜಿಬಿ ವರೆಗೆ ನೀಡುತ್ತದೆ. ಎಫ್ಯುಪಿ ಮಿತಿಯ ನಂತರ, ವೇಗವನ್ನು 1 ಎಮ್ಬಿಪಿಎಸ್ಗೆ ಇಳಿಸಲಾಗುತ್ತದೆ ಮತ್ತು ಈ ಯೋಜನೆಯು ಯಾವುದೇ ಒಟಿಟಿ ಸೇವಾ ಚಂದಾದಾರಿಕೆಗಳೊಂದಿಗೆ ರವಾನಿಸುವುದಿಲ್ಲ. ಭಾರ್ತಿ ಏರ್ಟೆಲ್ ಬಳಕೆದಾರರು ವಿಷಯವನ್ನು ಉಚಿತವಾಗಿ ವೀಕ್ಷಿಸಲು ಏರ್ಟೆಲ್ ಎಕ್ಸ್ಸ್ಟ್ರೀಮ್ ಅಪ್ಲಿಕೇಶನ್ಗೆ ಮಾತ್ರ ಪ್ರವೇಶ ಪಡೆಯುತ್ತಾರೆ. ಬ್ರಾಡ್ಬ್ಯಾಂಡ್ ಡೇಟಾದ ಜೊತೆಗೆ, ಏರ್ಟೆಲ್ ಗ್ರಾಹಕರ ಮನೆಯಲ್ಲಿ ಲ್ಯಾಂಡ್ಲೈನ್ ಸಂಪರ್ಕವನ್ನು ಸಹ ಸ್ಥಾಪಿಸುತ್ತದೆ.

ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಪ್ಲ್ಯಾನ್
ಬಿಎಸ್ಎನ್ಎಲ್ ಸಂಸ್ಥೆಯ ಬೇಸಿಕ್ ಬ್ರಾಡ್ಬ್ಯಾಂಡ್ ಪ್ಲ್ಯಾನ್ 555ರೂ,ಗಳಾಗಿದ್ದು, ಈ ಪ್ಲ್ಯಾನಿನಲ್ಲಿ ಒಟ್ಟು 100GB ಡೇಟಾ ಸಿಗಲಿದೆ. ಬ್ರಾಡ್ಬ್ಯಾಂಡ್ ಸೇವೆಯು 20 Mbps ವೇಗದ ಸಾಮರ್ಥ್ಯದಲ್ಲಿರಲಿದ್ದು, ಪ್ರತಿದಿನ ಯಾವುದೇ ಮಿತಿ ಇಲ್ಲದೇ ಡೇಟಾ ಬಳಕೆ ಮಾಡಬಹುದಾಗಿದೆ. ತಿಂಗಳ ಮಿತಿ 100GB ಡೇಟಾ ಮುಗಿದ ಬಳಿಕ 1 Mbps ವೇಗದಲ್ಲಿ ಡೇಟಾ ಸೌಲಭ್ಯವು ಲಭ್ಯವಾಗಲಿದೆ. ಉಚಿತ ಕರೆಗಳು ಸೌಲಭ್ಯ ಇರಲಿದೆ.

ಹಾತ್ವೇ ಬ್ರಾಡ್ಬ್ಯಾಂಡ್ ಪ್ಲ್ಯಾನ್
ಕೇಬಲ್ ಟಿವಿಯಲ್ಲಿ ಹೆಸರುವಾಸಿ ಆಗಿರುವ ಹಾತ್ವೇ ಸಂಸ್ಥೆಯು ಬ್ರಾಡ್ಬ್ಯಾಂಡ್ ಪ್ಲ್ಯಾನ್ಗಳಿಂದಲೂ ಗುರುತಿಸಿಕೊಂಡಿದೆ. ಹಾತ್ವೇ 499ರೂ.ಗಳ ಬ್ರಾಡ್ಬ್ಯಾಂಡ್ ಪ್ಲ್ಯಾನ್ ಪರಿಚಯಿಸಿದ್ದು, 100 Mbps ವೇಗದಲ್ಲಿ ಡೇಟಾ ಲಭ್ಯವಾಗಲಿದೆ. ಯಾವುದೇ FUP ಲಿಮಿಟ್ ಇರುವುದಿಲ್ಲ. ಗ್ರಾಹಕರು 12 ತಿಂಗಳು ಸಹ 499ರೂ. ಪ್ಲ್ಯಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಟಾಟಾ ಸ್ಕೈ ಬ್ರಾಡ್ಬ್ಯಾಂಡ್ ಪ್ಲ್ಯಾನ್
ಟಾಟಾ ಸ್ಕೈ ಬ್ರಾಡ್ಬ್ಯಾಂಡ್ ಸೇವೆಯು ಹಲವು ವಿಶೇಷ ಪ್ಲ್ಯಾನ್ಗಳನ್ನು ಬಿಡುಗಡೆ ಮಾಡಿದ್ದು, ಅವುಗಳಲ್ಲಿ ಆರಂಭಿಕ ಪ್ಲ್ಯಾನ್ 999ರೂ.ಗಳಾಗಿದೆ. ಈ ಪ್ಲ್ಯಾನ್ನಲ್ಲಿ ಇಂಟರ್ನೆಟ್ 10 Mbps ವೇಗದಲ್ಲಿ ಕಾರ್ಯಮಾಡಲಿದ್ದು, ಉಚಿತ ಡಾಟಾ ಲಭ್ಯವಾಗಲಿದೆ. ಹಾಗೆಯೇ 1,250ರೂ.ಗಳ ಪ್ಲ್ಯಾನ್ನಲ್ಲಿ 25 Mbps, 1,500ರೂ.ಗಳ ಪ್ಲ್ಯಾನ್ನಲ್ಲಿ 50 Mbps, 1,800ರೂ.ಗಳ ಪ್ಲ್ಯಾನ್ನಲ್ಲಿ 75 Mbps ಮತ್ತು 2,400ರೂ.ಗಳ ಪ್ಲ್ಯಾನ್ 100 Mbps ವೇಗವನ್ನು ಪಡೆದುಕೊಂಡಿರುತ್ತದೆ.

ಆರಂಭಿಕ ಬ್ರಾಡ್ಬ್ಯಾಂಡ್ ಪ್ಲ್ಯಾನ್
ಸದ್ಯ ಹಲವು ಸಂಸ್ಥೆಗಳು ಬ್ರಾಡ್ಬ್ಯಾಂಡ್ ಪ್ಲ್ಯಾನ್ಗಳನ್ನು ಪರಿಚಯಿದ್ದು, ಗ್ರಾಹಕರು ಅವರ ಅಗತ್ಯ ಮತ್ತು ಅನುಕೂಲಗಳ ಆಧಾರದ ಮೇಲೆ ಪ್ಲ್ಯಾನ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಎಂಟ್ರಿ ಲೆವೆಲ್ನಲ್ಲಿ ಜಿಯೋ ಸೇರಿದಂತೆ ಬಿಎಸ್ಎನ್ಎಲ್, ಹಾತ್ವೇ, ಟಾಟಾಸ್ಕೈ ಮತ್ತು ಏರ್ಟೆಲ್ ಬ್ರಾಡ್ಬ್ಯಾಂಡ್ ಪ್ಲ್ಯಾನ್ಗಳು ಹೆಚ್ಚು ಆಕರ್ಷಕ ಎನಿಸಿವೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790