ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಅಪಲ್‌ನ ಮ್ಯಾಕ್‌ಬುಕ್ ಪ್ರೊ!

|

ಈಗಾಗ್ಲೆ ಟೆಕ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಆಕರ್ಷಕ ಮಾದರಿಯ ಸ್ಮಾರ್ಟಬುಕ್‌, ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ಆದರೂ ಗ್ರಾಹಕರು ಮಾತ್ರ ತಮ್ಮ ನೆಚ್ಚಿನ ಬ್ರ್ಯಾಂಡ್‌ ಕಂಪೆನಿಗಳ ಲ್ಯಾಪ್‌ಟಾಪ್‌, ಸ್ಮಾರ್ಟ್‌ಬುಕ್‌ಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಸ್ಮಾರ್ಟ್‌ಫೋನ್‌ಗಳ ಗುಣಮಟ್ಟದ ಮೂಲಕ ವಿಶ್ವ ಪ್ರಸಿದ್ದಿಯನ್ನ ಪಡೆದಿರುವ ಅಪಲ್‌ ಕಂಪೆನಿ ತನ್ನ ಹೊಸ ಐಫೋನ್‌ ಮತ್ತು ಐಪ್ಯಾಡ್‌ ಪ್ರೊ ಜೊತೆಗೆ ಹೊಸ ಮಾದರಿಯ ಸ್ಮಾರ್ಟ್‌ಬುಕ್‌ ಅನ್ನು ಸಹ ಲಾಂಚ್‌ ಮಾಡಲಿದೆ ಎಂದು ಹೇಳಲಾಗ್ತಿದೆ.

ಹೌದು

ಹೌದು, ವಿಶ್ವಪ್ರಸಿದ್ದ ಅಪಲ್‌ ಕಂಪೆನಿ 2020ರ ಮೊದಲ ತ್ರೈಮಾಸಿಕದೊಳಗಡೆ ಹೊಸ ಐಫೋನ್‌ ಹಾಗೂ ಹೊಸ ಆಪ್ಡೇಟ್‌ನಲ್ಲಿ ಐಪ್ಯಾಡ್‌ ಪ್ರೋ ಬಿಡುಗಡೆ ಮಾಡಲಿದೆ ಎಂದು ಸುದ್ದಿಯಾಗಿತ್ತು. ಇದೀಗ ಲಭ್ಯವಿರುವ ಲೆಟೆಸ್ಟ್‌ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಹೊಸ ಮಾದರಿಯ ರಿಪ್ರೇಶ್‌ ಮ್ಯಾಕ್‌ಬುಕ್ ಪ್ರೊ ಅನ್ನು ಬಿಡುಗಡೆ ಮಾಡಲಿದೆ ಎಂದು ಹೇಳಲಾಗ್ತಿದ್ದು. ಈ ಮ್ಯಾಕ್‌ಬುಕ್ ಪ್ರೊ 13ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ ಎಂಬ ಮಾಹಿತಿ ಲೀಕ್‌ ಆಗಿದೆ.

ಮ್ಯಾಕ್‌ಬುಕ್ ಪ್ರೊ 13

ಮ್ಯಾಕ್‌ಬುಕ್ ಪ್ರೊ 13

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಅಪಲ್‌ ಕಂಪೆನಿ ಬಿಡುಗಡೆ ಮಾಡಲಿರುವ ಆಪ್ಡೆಟ್‌ ವರ್ಷನ್‌ ಮ್ಯಾಕ್‌ಬುಕ್ ಪ್ರೊ 13 10th intel gen ಐಸ್ ಲೇಕ್ ಪ್ರೊಸೆಸರ್‌ ಹೊಂದಿದೆ ಎನ್ನಲಾಗ್ತಿದೆ. ಅಲ್ಲದೆ ಇದು 2019ರಲ್ಲಿ ಬಿಡುಗಡೆಯಾಗಿದ್ದ ಮ್ಯಾಕ್‌ಬುಕ್ ಪ್ರೊ 8 th intel gen ಕಾಫಿ ಲೇಕ್ ಪ್ರೊಸೆಸರ್ನ ಆಪ್ಡೇಟ್‌ ಆವೃತ್ತಿಯಾಗಿದೆ. ಸದ್ಯ ಇದರಲ್ಲಿ ಆಪಲ್ ಹೊಸ ಪೀಳಿಗೆಯ ಪ್ರೊಸೆಸರ್ ಅನ್ನು ಅಳವಡಿಸುತ್ತಿದೆ ಎಂಬ ಮಾಹಿತಿ ಲೀಕ್‌ ಆಗಿದ್ದು, ಸಿಪಿಯು ಕೋರ್ ಕೌಂಟ್‌ ಮಾತ್ರ ಒಂದೇ ಆಗಿರಲಿದೆ.

ಮ್ಯಾಕ್‌ಬುಕ್ ಪ್ರೊ 13 ವಿಶೇಷತೆ

ಮ್ಯಾಕ್‌ಬುಕ್ ಪ್ರೊ 13 ವಿಶೇಷತೆ

ಇನ್ನು ಈ ಮ್ಯಾಕ್‌ಬುಕ್‌ ಪ್ರೋ 10th gen core i7-1068ng7 ಪ್ರೊಸೆಸರ್ ಅಳವಡಿಸಲಾಗುವುದು ಎಂದು ಹೇಳಲಾಗಿದೆ. ಇದು ಸರಿಸುಮಾರು 29% ಗ್ರಾಫಿಕ್ಸ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗ್ತಿದೆ. ಅಲ್ಲದೆ ಈ ಮ್ಯಾಕ್‌ಬುಕ್‌ ಪ್ರೊ ನಾಲ್ಕು ಕೋರ್ ಹೊಂದಿದ್ದು, 2.3GHz ಮತ್ತು 4.1GHz ಫ್ರಿಕ್ವೇನ್ಸಿ ವೇಗವನ್ನು ಹೊಂದಿದೆ. ಅಲ್ಲದೆ ಚಾರ್ಜಿಂಗ್‌ನಲ್ಲಿ 28Wಅನ್ನು ಬೆಂಬಲಸಿಲಿದೆ. ಇನ್ನು i7-1068NG7 ಸಹ ಐರಿಸ್ ಪ್ಲಸ್ ಗ್ರಾಫಿಕ್ಸ್ ಅನ್ನು ಅವಲಂಬಿಸಿದ್ದು, ಇಂಟೆಲ್‌ನ UHD ಆವೃತ್ತಿಯ ಜಿಪಿಯುಗಳ ಮೇಲೆ ಪ್ರೀಕ್ವೆನ್ಸಿಯನ್ನು ನೀಡುತ್ತದೆ.

ಇದಲ್ಲದೆ

ಇದಲ್ಲದೆ ಈ ಮ್ಯಾಕ್‌ಬುಕ್‌ ಪ್ರೊ 32GB RAM ಮತ್ತು 2TB SSD ಸಂಗ್ರಹ ಸಾಮರ್ಥ್ಯವನ್ನ ಹೊಂದಿರಲಿದೆ. ಎಂದು ಹೇಳಲಾಗ್ತಿದ್ದು, 2020 ರ ಮೊದಲ ತ್ರೈ ಮಾಸಿಕ ಅವಧಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು ಇದು ಯಾವ ಬೆಲೆಯಲ್ಲಿ ಲಭ್ಯವಾಗಲಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇನ್ನು ಲಭ್ಯವಾಗಿಲ್ಲ.

Most Read Articles
Best Mobiles in India

English summary
Apple is rumoured to launch a refreshed MacBook Pro model in the first half of 2020, alongside a new iPhone and an upgraded iPad Pro.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more