Just In
Don't Miss
- News
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
- Movies
'ಸ್ಮೋಕಿಂಗ್ ಕಾಳಿ' ಪೋಸ್ಟರ್ ತೆಗೆದುಹಾಕಲು ಕೆನಡಾದ ಭಾರತೀಯ ಹೈಕಮಿಷನ್ ಕೋರಿಕೆ!
- Finance
ಎಲ್ಐಸಿ ಷೇರು ಖರೀದಿಸಲು ಮೋತಿಲಾಲ್ ಓಸ್ವಾಲ್ ಸಲಹೆ
- Sports
ಆತನನ್ನು ಹೊರಗಿಟ್ಟ ಕಾರಣಕ್ಕೆ ಭಾರತ ಬೆಲೆ ತೆರಬೇಕಾಗಿದೆ: ದ್ರಾವಿಡ್ ನಿರ್ಧಾರದ ಬಗ್ಗೆ ಕನೆರಿಯಾ ಕಿಡಿ
- Automobiles
ಬೈಕ್ ನೀಡಿದ್ದ ಮೊದಲ ದಿನವೇ ಕಣ್ಮರೆಯಾಗಿದ್ದ ಧೋನಿ: ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಶ್ರೀನಿವಾಸನ್
- Lifestyle
ಮಾನ್ಸೂನ್ ಸಮಯದಲ್ಲಿ ಜೀರ್ಣಕ್ರಿಯೆ ಸುಧಾರಿಸಲು ಇಂಥಾ ಆಹಾರಗಳಿಂದ ದೂರವಿರಿ
- Education
AIFD Recruitment 2022 : 5 ಪ್ಯಾಧ್ಯಾಪಕ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಆನ್ಲೈನ್ನಲ್ಲಿ ಹಣ ಪಾವತಿ ಮಾಡುವ ಮುನ್ನ ಈ ಸ್ಟೋರಿ ಓದಿರಿ!
ಪ್ರಸ್ತುತ ದಿನಗಳಲ್ಲಿ ಯುಪಿಐ ಆಧಾರಿತ ಪಾವತಿ ವ್ಯವಸ್ಥೆ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಇದರಿಂದ ಸುಲಭವಾಗಿ ಹಣ ವಾರ್ಗವಣೆ ಮಾಡಬಹುದಾಗಿರುವುದರಿಂದ ಎಲ್ಲಾ ಕಡೆಯು ಯುಪಿಐ ಪಾವತಿ ಅಪ್ಲಿಕೇಶನ್ಗಳು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇನ್ನು UPI ಪಾವತಿ ಸುಲಭ ಮತ್ತು ಪರಿಣಾಮಕಾರಿ ಆಗಿರುವುದರಿಂದ ಹೆಚ್ಚಿನ ಜನರು ಯುಪಿಐ ಪಾವತಿಗೆ ಆಧ್ಯತೆ ನೀಡುತ್ತಿದ್ದಾರೆ. ಆದರೆ ಯುಪಿಐ ಪಾವತಿ ಬಳಕೆ ಮಾಡುವಾಗಲೂ ವಂಚನೆ ಪ್ರಕರಣಗಳ ಸಂಖ್ಯೆ ಇತ್ತೀಚಿಗೆ ಹೆಚ್ಚಾಗುತ್ತಿದೆ.

ಹೌದು, UPI ಪಾವತಿ ಪ್ಲಾಟ್ಫಾರ್ಮ್ಗಳನ್ನು ಬಳಸುವ ಬಳಕೆದಾರರು ಕೂಡ ಇತ್ತೀಚಿನ ದಿನಗಳಲ್ಲಿ ಅನೇಕ ವಂಚನೆ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅಂತಹ ಸನ್ನಿವೇಶಗಳಲ್ಲಿ ಆನ್ಲೈನ್ ಪಾವತಿ ವ್ಯವಸ್ಥೆ ಕೆಲವರಿಗೆ ಸಾಕಷ್ಟು ನಷ್ಟವನ್ನು ಉಂಟುಮಾಡಿರುವುದು ವರದಿಯಾಗಿದೆ. ಹಾಗಾದ್ರೆ ಯುಪಿಐ ಪಾವತಿ ವ್ಯವಸ್ಥೆಯನ್ನು ಬಳಸುವಾಗ ಮೋಸ ಹೋಗದಿರಲು ನೀವು ಗಮನಿಸಲೇಬೇಕಾದ ಕ್ರಮಗಳನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

UPI ಪಾವತಿ ವ್ಯವಸ್ಥೆಯಲ್ಲಿ ನೀವು ಗಮನಿಸಲೇಬೇಕಾದ ಅಂಶಗಳು
* ಅಪರಿಚಿತ ಸಂಖ್ಯೆಗಳ ಬಗ್ಗೆ ಎಚ್ಚರವಿರಲಿ
ಯುಪಿಐ ಪಾವತಿ ಅಪ್ಲಿಕೇಶನ್ಗಳನ್ನು ಬಳಸುವಾಗ ನಿಮ್ಮ ಪ್ಲಾಟ್ಫಾರ್ಮ್ನಲ್ಲಿ ನಿಮಗೆ ಪರಿಚಯವಿಲ್ಲದ ಸಂಖ್ಯೆಯನ್ನು ಕಂಡರೆ ಯಾವುದೇ ರೀತಿಯಲ್ಲೂ ಕಮ್ಯೂನಿಕೇಶನ್ ನಡೆಸದಿರುವುದು ಉತ್ತಮ. ಅದರಲ್ಲೂ ಒಪನ್ ವೆಬ್ ಮೂಲಗಳಲ್ಲಿ ಶೇರ್ ಮಾಡಿರುವ ಫೋನ್ ಸಂಖ್ಯೆಗಳ ಬಗ್ಗೆ ನೀವು ವಿಶೇಷವಾಗಿ ಜಾಗರೂಕರಾಗಿರಬೇಕು. ಇದರಿಂದ ನೀವು ಮೋಸ ಹೋಗುವುದನ್ನು ತಪ್ಪಿಸಬಹುದು.

* ಬೇರೆಯವರಿಗೆ ನಿಮ್ಮ ಯುಪಿಐ ಅಥವಾ ಬ್ಯಾಂಕ್ ಪಿನ್ ನಂಬರ್ ನೀಡಬೇಡಿ
ಇತ್ತೀಚಿಗೆ ಅತಿ ಹೆಚ್ಚು ಕಂಡುವ ಬರುವ ವಂಚನೆಗಳಲ್ಲಿ ಇದು ಒಂದಾಗಿದೆ. ಬ್ಯಾಂಕ್ ಸಿಬ್ಬಂದಿಯ ಹೆಸರಿನಲ್ಲಿ ಕರೆಮಾಡಿ ನಿಮ್ಮ ಫೋನ್ ನಂಬರ್, ಬ್ಯಾಂಕ್ ಎಟಿಎಂ ಪಿನ್ ನಂಬರ್, ಇತರೆ ಅಗತ್ಯ ಸಂಖ್ಯೆಗಳನ್ನು ಪಡೆದು ವಂಚಿಸುವವರು ಹೆಚ್ಚಿದ್ದಾರೆ. ಆದರಿಂದ ನೀವು ಯಾರೊಂದಿಗೂ ನಿಮ್ಮ ಯುಪಿಐ ಪಿನ್ ನಂಬರ್ ಅನ್ನು ಶೇರ್ ಮಾಡಿಕೊಳ್ಳಬೇಡಿ.

* ಯಾದೃಚ್ಛಿಕ ಪಾವತಿ ವಿನಂತಿಗಳು
ಹೆಚ್ಚಿನ UPI ಅಪ್ಲಿಕೇಶನ್ಗಳು ಕೆಲವು UPI ಐಡಿಗಳಿಂದ ಮನಿ ರಿಕ್ವೆಸ್ಟ್ ಅನ್ನು ಟ್ರ್ಯಾಕ್ ಮಾಡುವ ಸ್ಪ್ಯಾಮ್ ಫಿಲ್ಟರ್ ಅನ್ನು ಹೊಂದಿವೆ. ನೀವು ಅಂತಹ ಗುರುತನ್ನು ಕಂಡರೆ ನಿಮಗೆ ಎಚ್ಚರಿಕೆ ನೀಡಲಾಗುತ್ತದೆ. ಇಂತಹ ಸಮಯದಲ್ಲಿ ನಿಮಗೆ ಮನಿ ರಿಕ್ವೆಸ್ಟ್ ಕಳುಹಿಸಿರುವವರು ನಿಮಗೆ 100% ತಿಳಿದಿರುವವರಾಗಿದ್ದಾಋಎ ಮಾತ್ರ ವ್ಯವಹಾರ ಮುಂದುವರೆಸಿರಿ. ಇಲ್ಲದಿದ್ದರೆ ಅಂತಹ ಮನಿ ರಿಕ್ವೆಸ್ಟ್ಗಳನ್ನು 'ಡಿಕ್ಲೈನ್' ಮಾಡಿ.

* ನಕಲಿ UPI ಅಪ್ಲಿಕೇಶನ್ಗಳು
ಇಂದಿನ ದಿನಗಳಲ್ಲಿ ಯುಪಿಐ ಪಾವತಿ ಪ್ಲಾಟ್ಫಾರ್ಮ್ಗಳ ಹೆಸರಿನಲ್ಲಿ ನಕಲಿ ಯುಪಿಐ ಪಾವತಿ ಅಪ್ಲಿಕೇಶನ್ಗಳು ಕೂಡ ಲಗ್ಗೆ ಇಟ್ಟಿವೆ. ಇಂತಹ ನಕಲಿ UPI ಅಪ್ಲಿಕೇಶನ್ಗಳು ನಿಮ್ಮ ವಿವರಗಳನ್ನು ಪಾವತಿ ಮಾಡುವ ಅಥವಾ UPI ಮೂಲಕ ಸ್ವೀಕರಿಸುವ ನೆಪದಲ್ಲಿ ನಿಮ್ಮ ಡೇಟಾ ಕದಿಯುವ ಸಾಧ್ಯತೆ ಇದೆ. ಅಲ್ಲದೆ ಇಂತಹ ನಕಲಿ ಅಪ್ಲಿಕೇಶನ್ಗಳನ್ನು ನಿಮ್ಮ ಬ್ಯಾಂಕ್ ಅಪ್ಲಿಕೇಶನ್ ಮಾದರಿಯಲ್ಲಿಯೇ ವಿನ್ಯಾಸಗೊಳಿಸಲಾಗಿದೆ. ನೀವು ಆಕಸ್ಮಿಕವಾಗಿ ಈ ನಕಲಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿದರೆ ನಿಮ್ಮ ಖಾತೆಯಿಂದ ಹಣವನ್ನು ಕದಿಯಲು ಅನುವು ಮಾಡಿಕೊಡುತ್ತದೆ. ಆದರಿಂದ ಯುಪಿಐ ಅಪ್ಲಿಕೇಶನ್ ಬಳಸುವಾಗ ಎಚ್ಚರವಿರಲಿ.

ಯುಪಿಐ ಪಾವತಿ ಅಪ್ಲಿಕೇಶನ್ ಬಳಸುವ ಈ ಅಂಶಗಳ ಬಗ್ಗೆ ತಿಳಿದುಕೊಳ್ಳಬೇಕು
* ಅಪರಿಚಿತರಿಗೆ ನಿಮ್ಮ ಪಿನ್ ನಂಬರ್ ನೀಡಬಾರದು
* ಅಪರಿಚಿತ ಮೂಲಗಳಿಂದ ಬರುವ ಇಮೇಲ್ಗಳು ಅಥವಾ ಲಿಂಕ್ಗಳನ್ನು ಎಂದಿಗೂ ತೆರೆಯಬೇಡಿ.
* ನಿಮ್ಮ ಬ್ಯಾಂಕ್ನೊಂದಿಗೆ ನಿಮ್ಮ ವಿವರಗಳನ್ನು ಅಪ್ಡೇಟ್ ಮಾಡಿರಿ.
* ನಿಮಗೆ ಸುರಕ್ಷಿತ ಎನಿಸುವ ವೈಫೈ ಸಂಪರ್ಕಗಳನ್ನು ಮಾತ್ರ ಬಳಸಿ.
* ನಿಮ್ಮ ಹಣಕಾಸಿನ ವಹಿವಾಟುಗಳು ಮತ್ತು ಬ್ಯಾಂಕ್ ಖಾತೆಗಳನ್ನು ಆಗಾಗ ಟ್ರ್ಯಾಕ್ ಮಾಡಿ ಮತ್ತು ನಿಮ್ಮ ಖಾತೆಯಲ್ಲಿ ಅನುಮಾನಾಸ್ಪದ ನಡವಳಿಕೆಯನ್ನು ಗಮನಿಸಿ.
* ನಿಮಗೆ ನಿಮ್ಮ ಬ್ಯಾಂಕ್ ಅಕೌಂಟ್ನಲ್ಲಿ ಏನಾದರೂ ದೋಷ ಕಂಡುಬಂದರೆ, ತಕ್ಷಣವೇ ನಿಮ್ಮ ಬ್ಯಾಂಕ್ ಸಿಬ್ಬಂದಿಗೆ ತಿಳಿಸಿರಿ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086