Just In
- 5 hrs ago
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- 6 hrs ago
ಡಿಜಿಟಲ್ ಇಂಡಿಯಾಗಾಗಿ ನಾಲ್ಕು ಹೊಸ ಯೋಜನೆಗಳನ್ನು ಪರಿಚಯಿಸಿದ ಪ್ರಧಾನಿ ಮೋದಿ!
- 8 hrs ago
ಭಾರತದಲ್ಲಿ ಬಹುನಿರೀಕ್ಷಿತ ಐಫೋನ್ 14 ಪ್ರೊ ಬೆಲೆ ಎಷ್ಟಿರಬಹುದು?..ಫೀಚರ್ಸ್ ಏನು?
- 10 hrs ago
ಸಾರ್ವಜನಿಕರೇ ನಿಮ್ಮ ಮನೆ ಮೇಲೆ ಮೊಬೈಲ್ ಟವರ್ ಹಾಕಿಸುವ ಮುನ್ನ ಎಚ್ಚರ?
Don't Miss
- News
ಯುಎಪಿಎ ಅಡಿ ಯಾವುದೇ ವಕ್ತಿಯನ್ನು ವಿಚಾರಣೆಗೊಳಪಡಿಸಬಹುದು-ಹೈಕೋರ್ಟ್ ಆದೇಶ
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Sports
ICC Womens ODI Ranking: ಅಗ್ರ 10ರೊಳಗೆ ಸ್ಮೃತಿ ಮಂಧಾನ, 11ನೇ ಸ್ಥಾನದಲ್ಲಿ ರಾಜೇಶ್ವರಿ
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Automobiles
ದೇಶದ ಮೊದಲ 150kWh ಡಿಸಿ ಇವಿ ಫಾಸ್ಟ್ ಚಾರ್ಜರ್ ಸ್ಥಾಪಿಸಿದ ಕಿಯಾ ಇಂಡಿಯಾ
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
'ವ್ಯಾಲೆಂಟೆನ್ಸ್ ಡೇ'ಗೆ ಸದ್ಯ ಇವೇ ಬೆಸ್ಟ್ ಒಲವಿನ ಉಡುಗೊರೆ ಆಯ್ಕೆಗಳು!
ಪ್ರೇಮಿಗಳ ದಿನ (ವ್ಯಾಲೆಂಟೆನ್ಸ್ ಡೇ) ಫೆಬ್ರುವರಿ 14ಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಪ್ರೇಮಿಗಳಲ್ಲಿ ಈಗಾಗಲೇ ಹೃದಯ ಬಡಿತ ಹೆಚ್ಚಾಗುತ್ತಿದೆ. ಪ್ರತಿ ಪ್ರೇಮಿಯ ಮನಸ್ಸು ತನ್ನ ಪ್ರೀಯತಮೆ/ಪ್ರೀಯತಮನಿಗೆ ಸದಾ ನೆನಪು ಉಳಿಯುವ ಒಂದೊಳ್ಳೆಯ ಉಡುಗೊರೆ ಕೊಡಲು ಕಾತರದಿಂದ ಮಿಡಿಯುತ್ತಿರುತ್ತದೆ. ಆದರೆ ಈ ಬಾರಿ ಭಿನ್ನವಾಗಿ ಯಾವ ಗಿಫ್ಟ್ ಕೊಡಲಿ ಎನ್ನುವ ಆಲೋಚನೆಗಳು ಸುಳಿದಾಡುತ್ತಿರುತ್ತವೆ.

ಹೌದು, ಪ್ರೇಮಿಗಳ ಪಾಲಿಗೆ ವ್ಯಾಲೆಂಟೆನ್ಸ್ ಡೇ ಅನ್ನೊದು ವಿಶೇಷ ದಿನವಾಗಿದೆ. ಈ ದಿನದಂದು ಪ್ರೇಮಿಗಳು ಒಲವಿನ ಉಡುಗೊರೆ ನೀಡುವ ಮೂಲಕ ಅವರ ಪ್ರೀತಿಯನ್ನು ವ್ಯಕ್ತಪಡಿಸಲು ಸಿದ್ಧರಾಗಿರುತ್ತಾರೆ. ಹೀಗಾಗಿ 'ವ್ಯಾಲೆಂಟೆನ್ಸ್ ಡೇ' ದಿನ ಪ್ರೇಮಿಗಳು ನೀಡುವ ಉಡುಗೊರೆ ಮುಖ್ಯ ಪಾತ್ರವಹಿಸುತ್ತದೆ. ಅದಕ್ಕಾಗಿ ಪ್ರತಿ ಪ್ರೇಮಿಯು ವಿಶೇಷವಾದ ಉಡುಗೊರೆ ನೀಡು ತಮ್ಮ ಪ್ರೀಯತಮ/ಪ್ರೀಯತಮೆಯನ್ನು ಖುಷಿಪಡಿಸಲು ಉತ್ಸುಕರಾಗಿರುತ್ತಾರೆ. ಹೀಗೆ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಭಿನ್ನ ಉಡುಗೊರೆ ನೀಡಲು ಯೋಚಿಸುತ್ತಿದ್ದರೆ, ಇಲ್ಲಿವೆ ನೋಡಿ ಗ್ಯಾಡ್ಜೆಟ್ ಉಡುಗೊರೆಯ ಐಡಿಯಾಗಳು.

ಸ್ಮಾರ್ಟ್ವಾಚ್ ಉಡುಗೊರೆ
ವ್ಯಾಲೆಂಟೆನ್ಸ್ ಡೇ ದಿನದಂದು ನೀವು ನಿಮ್ಮ ಪ್ರೀತಿ ಪಾತ್ರರಿಗೆ ಸ್ಮಾರ್ಟ್ವಾಚ್ ಒಂದನ್ನು ಉಡುಗೊರೆಯಾಗಿ ನೀಡಬಹುದು. ಪ್ರಸ್ತುತ ಸ್ಮಾರ್ಟ್ವಾಚ್ಗಳಲ್ಲಿ ಹಲವು ಆಯ್ಕೆಗಳಿದ್ದು, ಅಗ್ಗದ ಬೆಲೆಯಿಂದ ದುಬಾರಿ ಬೆಲೆಯವರೆಗೂ ಸ್ಮಾರ್ಟ್ವಾಚ್ ಸಿಗುತ್ತವೆ. ಬೆಲೆಯಲ್ಲಿ ಭಿನ್ನತೆ ಇರುವಂತೆ ಸ್ಮಾರ್ಟ್ವಾಚ್ಗಳ ಫೀಚರ್ಸ್ಗಳಲ್ಲಿಯೂ ಭಿನ್ನತೆಗಳಿವೆ. ಫಿಟ್ಬಿಟ್ ವರ್ಸಾ 2 ಸ್ಮಾರ್ಟ್ವಾಚ್, ಆಪಲ್ ವಾಚ್ ಸೀರಿಸ್ 3 ಉತ್ತಮವಾಗಿವೆ.

ಆಪಲ್ ಇಯರ್ಪೊಡ್ಸ್(Apple AirPods)
ಆಪಲ್ ಸಂಸ್ಥೆಗಳ ಉತ್ಪನ್ನಗಳಿಗೆ ಬಹುಶ ಎಲ್ಲರೂ ಫಿದಾ ಆಗುತ್ತಾರೆ. ಹೀಗಾಗಿ ಆಪಲ್ ಇಯರ್ಪೊಡ್ಸ್ ಸಹ ಒಂದು ಬೆಸ್ಟ್ ಗ್ಯಾಡ್ಜಟ್ ಉಡುಗೊರೆ ಆಗಿದೆ. ಈ ಇಯರ್ಪೊಡ್ಸ್ ಡಿವೈಸ್ ಸಿರಿ ವಾಯಿಸ್ ಅಸಿಸ್ಟಂಟ್ ಸೌಲಭ್ಯವನ್ನು ಒಳಗೊಂಡಿದ್ದು, ಅತ್ಯುತ್ತಮ ಬ್ಯಾಟರಿ ಬ್ಯಾಕ್ಅಪ್ ಸಹ ಪಡೆದಿದೆ. ವಾಯರ್ಲೆಸ್ ಚಾರ್ಜಿಂಗ್ ಕೇಸ್ ಆಯ್ಕೆಯು ಲಭ್ಯವಿದೆ. ಆಕರ್ಷಕ ಡಿಸೈನ್ ಸಹ ಹೊಂದಿದೆ. ಈ ಡಿವೈಸ್ ಬೆಲೆಯು 14,900ರೂ. ಆಗಿದೆ.

ಫಿಟ್ನೆಸ್ ಬ್ಯಾಂಡ್
ಇತ್ತೀಚಿಗೆ ಫಿಟ್ನೆಸ್ ಸ್ಮಾರ್ಟ್ಬ್ಯಾಂಡ್ ಡಿವೈಸ್ಗಳು ಹೆಚ್ಚಿನ ಬಳಕೆದಾರರನ್ನು ಆಕರ್ಷಿಸುತ್ತಿವೆ. ನಿಮ್ಮ ಪ್ರೀತಿ ಪಾತ್ರರಲ್ಲಿ ಸ್ಮಾರ್ಟ್ ಫಿಟ್ನೆಸ್ ಬ್ಯಾಂಡ್ ಇಲ್ಲದಿದ್ದರೆ ವ್ಯಾಲೆಂಟೆನ್ಸ್ ಡೇ ಗೆ ಉಡುಗೊರೆಯಾಗಿ ಒಂದು ಅತ್ಯುತ್ತಮ ಬ್ಯಾಂಡ್ ನೀಡಿ. ಅಗ್ಗದ ಪ್ರೈಸ್ಟ್ಯಾಗ್ನಿಂದ ಕಾಸ್ಟಿ ಬೆಲೆಯ ವರೆಗೂ ಸದ್ಯ ಮಾರುಕಟ್ಟೆಯಲ್ಲಿ ತರಹೇವಾರಿ ಸ್ಮಾರ್ಟ್ಬ್ಯಾಂಡ್ಗಳು ಲಭ್ಯ ಇವೆ. ಶಿಯೋಮಿ ಮಿ ಬ್ಯಾಂಡ್ 3, ಹಾನರ್ ಬ್ಯಾಂಡ್ 5, ಫಿಟ್ಬಿಟ್ ಚಾರ್ಜ್, ಗ್ಯಾಲಕ್ಸಿ e ಫಿಟ್, ಉತ್ತಮ ಆಯ್ಕೆಗಳಾಗಿವೆ.

ವಾಯರ್ಲೆಸ್ ಹೆಡ್ಫೋನ್
ಏಕಾಂತದಲ್ಲಿದ್ದಾಗ, ಜರ್ನಿ ಸಮಯದಲ್ಲಿ ಮ್ಯೂಸಿಕ್ ಕೇಳುವುದರಿಂದ ಮನಸಿಗೆ ಹಿತವೆನಿಸುತ್ತದೆ. ಹೀಗಾಗಿ ಬಹುತೇಕರು ಜೊತೆಗೊಂದು ಹೆಡ್ಫೋನ್ ಇರಬೇಕು ಎಂದು ಬಯಸುತ್ತಾರೆ. ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಒಂದೊಳ್ಳೆಯ ವಾಯರ್ಲೆಸ್ ಹೆಡ್ಫೋನ್ ಅನ್ನು ಉಡುಗೊರೆಯಾಗಿ ನೀಡಿರಿ. ಸಾಕಷ್ಟು ಹೆಡ್ಫೋನ್ ಆಯ್ಕೆಗಳು ಲಭ್ಯ ಇವೆ. ಅವುಗಳಲ್ಲಿ ಸೋನಿ, ಜೆಬಿಎಲ್, ಬೋಟ್, ಶಿಯೋಮಿ, ರಿಯಲ್ ಮಿ, ಒನ್ಪ್ಲಸ್, ಸಂಸ್ಥೆಗಳ ಹೆಡ್ಫೋನ್ ಆಕರ್ಷಕ ಅನಿಸಲಿವೆ.

ಪೆನ್ಡ್ರೈವ್ ಉಡುಗೊರೆ
ಪೆನ್ಡ್ರೈವ್ ನೋಡಲು ಅತೀ ಚಿಕ್ಕದಾಗಿದ್ದರು ಅತ್ಯಂತ ಮುಖ್ಯವಾದ ದತ್ತಾಂಶಗಳನ್ನು ತನ್ನಲ್ಲಿ ಭದ್ರವಾಗಿ ಇಟ್ಟುಕೊಳ್ಳುತ್ತದೆ. ಫೋಟೋಗಳನ್ನು, ವಿಡಿಯೋಗಳನ್ನು, ನೋಟ್ಸ್, ಆಫೀಸ್ ಫೈಲ್ಸ್ ಹೀಗೆ ಹಲವು ದತ್ತಾಂಶಗಳನ್ನು ಇರಿಸಿಕೊಳ್ಳಲು ಇದು ನಿಮ್ಮ ಪ್ರೀತಿ ಪಾತ್ರರಿಗೆ ನೆರವಾಗುತ್ತದೆ. ಇದರಲ್ಲಿ 4GB, 8GB, 16GB, 32GB ಇನ್ನೂ ಹೆಚ್ಚಿನ ಸಂಗ್ರಹ ಸಾಮರ್ಥ್ಯದ ಪೆನ್ಡ್ರೈವ್ಗಳು ಸಿಗುತ್ತವೆ. ಮತ್ತು ವಿವಿಧ ಡಿಸೈನ್ಗಳಲ್ಲಿಯೂ ಲಭ್ಯ ಇವೆ.

ಪವರ್ಬ್ಯಾಂಕ್ ಗಿಫ್ಟ್
ನಿಮ್ಮ ಪ್ರೀತಿ ಪಾತ್ರರ ಬಳಿ ಈಗಾಗಲೇ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ, ಆದರೆ ಪವರ್ಬ್ಯಾಂಕ್ ಇಲ್ಲದಿದ್ದರೇ ಒಂದು ಉತ್ತಮ ಪವರ್ ಬ್ಯಾಂಕ್ ಉಡುಗೊರೆ ನೀಡಿರಿ. ಕೆಲವೊಂದು ಸಂದರ್ಭಗಳಲ್ಲಿ ಅವರ ಸ್ಮಾರ್ಟ್ಫೋನ್ ಚಾರ್ಜ್ ಖಾಲಿ ಆದಾಗ ನೀವು ಕೊಟ್ಟ ಪವರ್ಬ್ಯಾಂಕ್ ಅವರಿಗೆ ನೆರೆವಾಗಬಹುದು. ಶಿಯೋಮಿ, ರಿಯಲ್ ಮಿ, ಲೆನೊವೊ, ಸಿಸ್ಕಾ, ಸಂಸ್ಥೆಗಳ ಪವರ್ಬ್ಯಾಂಕ್ ಗಳು ಬಜೆಟ್ ಬೆಲೆಯಲ್ಲಿ ಸಿಗುತ್ತವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086