Just In
Don't Miss
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- Movies
ಗುಬ್ಬಿ ವೀರಣ್ಣ ಪುತ್ರಿ, ಹಿರಿಯ ನಟಿ ಹೇಮಲತಾ ನಿಧನ
- News
ISWA: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯರೊಂದಿಗೆ ಸಚಿವ ಪ್ರಲ್ಹಾದ್ ಜೋಶಿ ನಿಯೋಗ ಭೇಟಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Lifestyle
Weekly Horoscope: ಜುಲೈ 3ರಿಂದ ಜುಲೈ 9ರ ವಾರ ಭವಿಷ್ಯ: ಮೇಷ, ಮಿಥುನ, ಮಕರ, ಕುಂಭ ರಾಶಿಯ ವ್ಯಾಪಾರಸ್ಥರು ಆರ್ಥಿಕ ಲಾಭ ಪಡೆಯಬಹುದು
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
ವಿ ಟೆಲಿಕಾಂನಿಂದ 7,948ಕ್ಕೂ ಹೆಚ್ಚು ಸಿಮ್ ಕಾರ್ಡ್ ಬ್ಯಾನ್! ಕಾರಣ ಏನು?
ಮಧ್ಯಪ್ರದೇಶದಲ್ಲಿ ನಕಲಿ ದಾಖಲಿ ನೀಡಿ ಸಿಮ್ ಕಾರ್ಡ್ ಖರೀದಿಸಿದವರಿಗೆ ಬಿಗ್ ಶಾಕ್ ನೀಡಲಾಗಿದೆ. ಮಧ್ಯಪ್ರದೇಶದ ಸೈಬರ್ ಪೊಲೀಸರು ನೀಡಿದ ಆದೇಶದ ಮೇಲೆ ವಿ ಟೆಲಿಕಾಂ 7,948ಕ್ಕೂ ಹೆಚ್ಚು ಸಿಮ್ ಕಾರ್ಡ್ಗಳನ್ನು ನಿರ್ಬಂಧಿಸಿದೆ ಎಂದು ವರದಿಯಾಗಿದೆ. ನಕಲಿ ದಾಖಲೆ ನೀಡಿ ಸಿಮ್ ಖರೀದಿಸುವುದು, ನಂತರ ಅವುಗಳನ್ನು ಅಪರಾಧ ಪ್ರಕರಣದಲ್ಲಿ ಬಳಸುವುದು ನಡೆಯುತ್ತಲೇ ಬಂದಿದೆ. ಇಂತಹ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕುವುದಕ್ಕಾಗಿ ಮಧ್ಯಪ್ರದೇಶದ ಸೈಬರ್ ಕ್ರೈಂ ಪೊಲೀಸರು ಹೊಸ ಹೆಜ್ಜೆ ಇಟ್ಟಿದ್ದಾರೆ.

ಹೌದು, ಮಧ್ಯಪ್ರದೇಶದ ಪೊಲೀಸರು ನಕಲಿ ದಾಖಲಿ ನೀಡಿ ಖರೀದಿಸಿದ ಸಿಮ್ ಕಾರ್ಡ್ಗಳನ್ನು ಬ್ಯಾನ್ ಮಾಡುವಂತೆ ಎಲ್ಲಾ ಟೆಲಿಕಾಂಗಳಿಗೆ ಸೂಚನೆ ನೀಡಿದೆ. ಅದರಂತೆ ವಿ ಟೆಲಿಕಾಂ ಒಂದೇ 7,948ಕ್ಕೂ ಹೆಚ್ಚಿನ ಸಿಮ್ ಕಾರ್ಡ್ಗಳನ್ನು ಬ್ಯಾನ್ ಮಾಡಿದೆ. ವಿ ಟೆಲಿಕಾಂ ಬೇರೆ ವ್ಯಕ್ತಿಗಳು ನೀಡಿದ ದಾಖಲೆಗಳು ಆಧರಿಸಿ ಈ ರೀತಿಯ ಸಿಮ್ಕಾರ್ಡ್ಗಳನ್ನು ನೀಡಿದೆ. ಹಾಗಾದ್ರೆ ಮಧ್ಯಪ್ರದೇಶದಲ್ಲಿ ವಿ ಟೆಲಿಕಾಂ ಇಷ್ಟೊಂದು ಸಿಮ್ ಕಾರ್ಡ್ಗಳನ್ನು ಬ್ಯಾನ್ ಮಾಡುವುದಕ್ಕೆ ಅಸಲಿ ಕಾರಣ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ನು ಮಧ್ಯಪ್ರದೇಶದ ಪೊಲೀಸರು ನೀಡಿದ ವರದಿ ಪ್ರಕಾರ ಅಪರಾಧದಲ್ಲಿ ಭಾಗಿಯಾದವರಿಗೆ ಸಿಮ್ ಕಾರ್ಡ್ ನೀಡುವಲ್ಲಿ ಎಂಟು ಜನರು ಭಾಗಿಯಾಗಿರುವುದು ಕಂಡುಬಂದಿದೆ. ಇನ್ನು ಈಗಾಗಲೇ 2020ರಲ್ಲಿ ಜಾಹೀರಾತಿನ ಮೂಲಕ ಕಾರು ಖರೀದಿಸುವ ಆಮಿಷದಲ್ಲಿ ವ್ಯಕ್ತಿಯೊಬ್ಬನಿಗೆ 1.75 ಲಕ್ಷ ರೂ.ಗೆ ವಂಚಿಸಲಾಗಿದೆ. ಈ ಕೇಸ್ನ ತನಿಖೆಯನ್ನು ಮಧ್ಯಪ್ರದೇಶದ ಸೈಬರ್ ಸೆಲ್ನ ಗ್ವಾಲಿಯರ್ ಯೂನಿಟ್ ಕೈಗೆತ್ತಿಕೊಂಡಿತ್ತು. ಈ ತನಿಖೆಯಲ್ಲಿ ವಂಚಕರ ಸಂಖ್ಯೆಯನ್ನು ಬೇರೆಯವರ ಹೆಸರಿನಲ್ಲಿ ನೀಡಿರುವುದು ಕಂಡುಬಂದಿದೆ.

ಈ ಅಪರಾಧದಲ್ಲಿ ಭಾಗಿಯಾದ ಎಂಟು ಜನರು ವಂಚಕನಿಗೆ ಸಿಮ್ ಕಾರ್ಡ್ ಪಡೆಯಲು ಸಹಾಯ ಮಾಡಿದ್ದಾರೆ ಎಂದು ನಂತರ ತಿಳಿದುಬಂದಿದೆ. ತನಿಖೆಯ ನಂತರ, ಸೈಬರ್ ಘಟಕವು ಈ ಸಂಖ್ಯೆಗಳ ಬಳಕೆದಾರರನ್ನು ಪರಿಶೀಲಿಸಲು ವೊಡಾಫೋನ್-ಐಡಿಯಾ, ಏರ್ಟೆಲ್ ಮತ್ತು ಬಿಎಸ್ಎನ್ಎಲ್ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳಿಗೆ ನೋಟಿಸ್ಗಳನ್ನು ನೀಡಿತು. ತನಿಖೆಯ ಪರಿಣಾಮವಾಗಿ ವೊಡಾಫೋನ್-ಐಡಿಯಾ 7,948 ಸಿಮ್ ಕಾರ್ಡ್ಗಳನ್ನು ನಿರ್ಬಂಧಿಸಿದೆ. ಈ ರೀತಿ ಹಲವಾರು ಸಿಮ್ ಕಾರ್ಡ್ಗಳನ್ನು ಬ್ಲಾಕ್ ಮಾಡಿರುವುದು ದೇಶದಲ್ಲಿ ಇದೇ ಮೊದಲು ಎಂದು ಮಧ್ಯಪ್ರದೇಶದ ಸೈಬರ್ ಪೊಲೀಸರು ಹೇಳಿದ್ದಾರೆ.

ಇನ್ನು ಈ ರೀತಿಯ ಸಿಮ್ ಕಾರ್ಡ್ಗಳನ್ನು ನಿರ್ಬಂಧಿಸಲು ಇತರ ಕಂಪನಿಗಳು ಸಹ ಸಂಖ್ಯೆಗಳನ್ನು ಮರು ಪರಿಶೀಲಿಸುತ್ತಿವೆ. ಏಕೆಂದರೆ ವಂಚಕರು ವಂಚನೆ ಮಾಡುವುದಕ್ಕಾಗಿಯೇ 20ಕ್ಕೂ ವಿವಿಧ ಸಂಖ್ಯೆಗಳನ್ನು ಬಳಸುತ್ತಿದ್ದರು ಎಂದು ಸೈಬರ್ ಪೊಲೀಸರು ಪತ್ತೆ ಮಾಡಿದ್ದಾರೆ. ಹೆಚ್ಚುವರಿಯಾಗಿ, ಒಂದು ವರ್ಷದಿಂದ ನಕಲಿ ಸಿಮ್ ಕಾರ್ಡ್ಗಳನ್ನು ನೀಡುವಲ್ಲಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಇದಕ್ಕಾಗಿಯೇ ವಂಚಕರಿಂದ ಮೋಸಹೋಗದಂತೆ ಅಮಾಯಕರನ್ನು ರಕ್ಷಿಸಲು ಟೆಲಿಕಾಂ ಕಂಪನಿಯು ಹಲವಾರು ಸಂಖ್ಯೆಗಳನ್ನು ನಿರ್ಬಂಧಿಸಿರುವುದು ದೇಶದಲ್ಲಿ ಇದೇ ಮೊದಲು ಎಂದು ಹೇಳಲಾಗ್ತಿದೆ.

ಇದಲ್ಲದೆ ವಿ ಟೆಲಿಕಾಂ ಇತ್ತೀಚಿಗೆ ಭಾರತದಲ್ಲಿ ಹೊಸದಾಗಿ ವಿ ಗೇಮ್ಸ್ ಸೇವೆಯನ್ನು ಪ್ರಾರಂಭಿಸಿದೆ. ಈ ಸೇವೆಯ ಮೂಲಕ ವಿ ಟೆಲಿಕಾಂ ಬಳಕೆದಾರರು ವಿ ಅಪ್ಲಿಕೇಶನ್ನಲ್ಲಿ 1,200 ಮೊಬೈಲ್ ಗೇಮ್ಗಳಿಗೆ ಪ್ರವೇಶವನ್ನು ನೀಡುತ್ತದೆ. ಇನ್ನು ಈ ಹೊಸ ಸೇವೆಯು ವಿ ಅಪ್ಲಿಕೇಶನ್ನಲ್ಲಿನ ಗೇಮ್ಸ್ ಟ್ಯಾಬ್ ಮೂಲಕ ಲಭ್ಯವಿರುತ್ತದೆ. ಇದರಲ್ಲಿ ಆಕ್ಷನ್, ಸಾಹಸ, ಆರ್ಕೇಡ್, ಕ್ಯಾಶುಯಲ್, ಶಿಕ್ಷಣ, ವಿನೋದ, ಒಗಟು, ರೇಸಿಂಗ್, ಕ್ರೀಡೆಗಳು ಮತ್ತು ತಂತ್ರಗಳನ್ನು ಒಳಗೊಂಡಿರುವ 10 ಜನಪ್ರಿಯ ಪ್ರಕಾರಗಳು ಲಭ್ಯವಿರುತ್ತದೆ. ಇದು ಆಂಡ್ರಾಯ್ಡ್ ಮತ್ತು HTML5-ಆಧಾರಿತ ಮೊಬೈಲ್ ಗೇಮ್ಗಳ ತಲ್ಲೀನಗೊಳಿಸುವ ಗೇಮಿಂಗ್ ಅನುಭವವನ್ನು ನೀಡಲಿದೆ. ವಿ ಗೇಮ್ಸ್ ಸೇವೆ ಆರಂಭದಲ್ಲಿ ಕ್ಯಾಶುಯಲ್ ಗೇಮಿಂಗ್ ವಿಷಯವನ್ನು ಹೊಂದಿರುತ್ತದೆ. ಜೊತೆಗೆ ಭವಿಷ್ಯದಲ್ಲಿ ಕ್ರಮೇಣವಾಗಿ ಸಾಮಾಜಿಕ ಗೇಮಿಂಗ್ ಮತ್ತು ಇಸ್ಪೋರ್ಟ್ಸ್ ಈವೆಂಟ್ಗಳನ್ನು ಹೋಸ್ಟ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ ಎನ್ನಲಾಗ್ತಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086